Healthy Food: ಎಷ್ಟೇ ತಿಂದರೂ ತೂಕ ಹೆಚ್ಚಾಗದ ಆಹಾರಗಳಿವು, ಯಾವುದೇ ಭಯವಿಲ್ಲದೆ ಹೊಟ್ಟೆ ತುಂಬಾ ತಿನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  Healthy Food: ಎಷ್ಟೇ ತಿಂದರೂ ತೂಕ ಹೆಚ್ಚಾಗದ ಆಹಾರಗಳಿವು, ಯಾವುದೇ ಭಯವಿಲ್ಲದೆ ಹೊಟ್ಟೆ ತುಂಬಾ ತಿನ್ನಿ

Healthy Food: ಎಷ್ಟೇ ತಿಂದರೂ ತೂಕ ಹೆಚ್ಚಾಗದ ಆಹಾರಗಳಿವು, ಯಾವುದೇ ಭಯವಿಲ್ಲದೆ ಹೊಟ್ಟೆ ತುಂಬಾ ತಿನ್ನಿ

ಮೊಸರು, ಓಟ್ಸ್‌, ಕಡಲೆ, ಹಣ್ಣುಗಳು ಹೀಗೆ ಹಲವು ಆಹಾರಗಳನ್ನು ತಿಂದರೆ ತೂಕ ಹೆಚ್ಚುವುದಿಲ್ಲ. ಇದು ಆರೋಗ್ಯ ಮತ್ತು ನಿಮ್ಮ ದೇಹವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

<p>ಸಾಂದರ್ಭಿಕ ಚಿತ್ರ</p>
ಸಾಂದರ್ಭಿಕ ಚಿತ್ರ (freepik)

ಆಹಾರದ ವಿಚಾರದಲ್ಲಿ ಹಲವರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಸ್ತ್ರೀಯರು. ಸ್ವಲ್ಪ ಜಾಸ್ತಿ ತಿಂದರೆ, ಎಲ್ಲಿ ದಪ್ಪ ಆಗಿಬಿಡುತ್ತೇನೋ ಎಂಬ ಭಯ ಅವರಲ್ಲಿರುತ್ತದೆ. ಹೀಗಾಗಿ ಏನೇ ತಿಂದರೂ ಕಡಿಮೆ ಪ್ರಮಾಣದಲ್ಲಿ ತಿನ್ನುತ್ತಾರೆ. ಹೊಟ್ಟೆಗೆ ಮತ್ತು ಬಾಯಿಗೆ ಮತ್ತಷ್ಟು ಆಹಾರದ ಅಗತ್ಯವಿದ್ದರೂ, ದಪ್ಪ ಆಗುವ ಭಯದಲ್ಲಿ ಅರ್ಧಕ್ಕೆ ಊಟ ನಿಲ್ಲಿಸುತ್ತಾರೆ. ಅಂಥವರಿಗಾಗಿ ಈ ಸ್ಟೋರಿ.

ಕೆಲವರಿಗೆ ತೂಕ ಹೆಚ್ಚಾಗದಂತೆ ಯಾವ ರೀತಿಯ ಆಹಾರ ಸೇವಿಸಬೇಕು ಎಂಬ ಬಗ್ಗೆ ತಿಳಿದಿರುವುದಿಲ್ಲ. ಹೆಚ್ಚುವರಿ ಕ್ಯಾಲರಿ ಇರದ ಆಹಾರ ಸೇವಿಸುವುದರಿಂದ ತೂಕ ಹೆಚ್ಚಾಗುವುದನ್ನು ತಡೆಯಬಹುದು. ಕೆಲವು ಬಗೆಯ ಆಹಾರಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವುದನ್ನು ತಡೆಯುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕೂಡಾ ನಿಯಂತ್ರಣದಲ್ಲಿಡಬಹುದು. ಅವು ಯಾವುವು ಎಂಬುದನ್ನು ಇಲ್ಲಿ ಓದಿ.

ಹಣ್ಣುಗಳು

ಕಾಲಕ್ಕೆ ತಕ್ಕಂತೆ ಬೆಳೆಯಲಾಗುವ ಹಣ್ಣುಗಳನ್ನು ಎಷ್ಟು ತಿಂದರೂ ತೂಕ ಹೆಚ್ಚಾಗುವುದಿಲ್ಲ. ಅವು ದೇಹಕ್ಕೆ ಚೈತನ್ಯವನ್ನು ತುಂಬುತ್ತವೆ. ದೇಹಕ್ಕೆ ಬೇಕಾದ ಪೋಷಣೆಯನ್ನೂ ನೀಡುತ್ತವೆ. ಹೀಗಾಗಿ ಹಣ್ಣುಗಳನ್ನು ತಿಂದರೆ ಅನಗತ್ಯವಾಗಿ ತೂಕ ಹೆಚ್ಚುವುದಿಲ್ಲ. ಆರೋಗ್ಯಕರ ತೂಕವನ್ನು ನೀವು ಕಾಪಾಡಿಕೊಳ್ಳಬಹುದು.

ಮೊಸರು

ಮೊಸರು ಕಡಿಮೆ ಕ್ಯಾಲರಿ ಹೊಂದಿದೆ. ಅದರಲ್ಲೂ ಕೆನೆ ತೆಗೆದ ಹಾಲಿನಿಂದ ತಯಾರಿಸಿದ ಮೊಸರನ್ನು ತಿನ್ನುವುದು ತುಂಬಾ ಒಳ್ಳೆಯದು. ಇದಕ್ಕೆ ಹೆಚ್ಚುವರಿ ಸುವಾಸನೆ ಮತ್ತು ರುಚಿ ಬೇಕಾದರೆ, ಹಣ್ಣುಗಳನ್ನು ಕೂಡಾ ಸೇರಿಸಬಹುದು. ಹಣ್ಣುಗಳನ್ನು ಪೇಸ್ಟ್‌ ಮಾಡಿ ಲಸ್ಸಿ ರೀತಿಯಲ್ಲೂ ಸೇವಿಸಬಹುದು. ಇದನ್ನು ತಿಂದರೆ ತೂಕ ಹೆಚ್ಚುವುದಿಲ್ಲ.

ಓಟ್ಸ್

ಓಟ್ಸ್ ಆರೋಗ್ಯಕರ ಆಹಾರ. ಇದು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ. ಇದನ್ನು ಸ್ವಲ್ಪ ಹಾಲು ಮತ್ತು ಹಣ್ಣುಗಳೊಂದಿಗೆ ತಿನ್ನುವುದು ತುಂಬಾ ಆರೋಗ್ಯಕರ. ಹೀಗೆ ಮಾಡುವುದರಿಂದ ಹೊಟ್ಟೆ ತುಂಬಿದ್ದರೂ ಸಹ ತೂಕ ಹೆಚ್ಚಾಗುವುದಿಲ್ಲ.

ಕಡಲೆ

ಉತ್ತರ ಕರ್ನಾಟಕ ಭಾಗದಲ್ಲಿ ಕಡಲೆಯನ್ನು ಹೆಚ್ಚಾಗಿ ಬಳಸುತ್ತಾರೆ. ಕಡಲೆಯಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಅವು ರುಚಿಕರವೂ ಹೌದು. ಅದನ್ನು ನೆನೆಸಿ ಎಣ್ಣೆಯಲ್ಲಿ ಕರಿದು ಉಪ್ಪು ಮತ್ತು ಕಾಳುಮೆಣಸಿನ ಪುಡಿ ಹಾಕಿ ಬೇಯಿಸಿ ತಿಂದರೆ ರುಚಿಯೇ ಬೇರೆ. ಹಸಿವಾದಾಗ ಇದನ್ನು ತಿನ್ನುವುದರಿಂದ ಶಕ್ತಿಯೂ ಸಿಗುತ್ತದೆ.

ಪಾಪ್ ಕಾರ್ನ್

ಪಾಪ್ ಕಾರ್ನ್ ಜಂಕ್ ಫುಡ್ ಅಲ್ಲ. ಆದ್ದರಿಂದ ಮಕ್ಕಳು ಮಾತ್ರವಲ್ಲದೆ ವಯಸ್ಕರು ಕೂಡಾ ಇದನ್ನು ತಿನ್ನಬಹುದು. ಇದು ಕಡಿಮೆ ಕ್ಯಾಲರಿಗಳನ್ನು ಹೊಂದಿರುವ ಕಾರಣ ತೂಕ ಹೆಚ್ಚಿಸುವುದಿಲ್ಲ. ಇದು ಗ್ಲುಟನ್ ಮುಕ್ತ ತಿಂಡಿ. ಮನೆಯಲ್ಲಿ ತಯಾರಿಸಿದ ಪಾಪ್‌ಕಾರ್ನ್ ಇನ್ನೂ ರುಚಿಕರವಾಗಿರುತ್ತದೆ.

ಪೀನಟ್‌ ಬಟರ್‌

ಇದು ಕೂಡಾ ಪ್ರೋಟೀನ್‌ಗಳಿಂದ ತುಂಬಿರುತ್ತದೆ. ಇದು ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದಲೇ ಮಕ್ಕಳಿಗೆ ನೀಡುವ ಆಹಾರವನ್ನು ದೊಡ್ಡವರು ಕೂಡಾ ತಿನ್ನಬೇಕು. ಇದನ್ನು ತಿನ್ನುವುದರಿಂದ ತೂಕ ಹೆಚ್ಚಾಗುವುದಿಲ್ಲ.

ಬೀಜಗಳು (nuts)

ಬೀಜಗಳು ಆರೋಗ್ಯಕರ ಕೊಬ್ಬುಗಳು ಮತ್ತು ಪ್ರೋಟೀನ್‌ಗಳಿಂದ ತುಂಬಿವೆ. ಆದ್ದರಿಂದ ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಪ್ರಯೋಜನಗಳು ಇವೆ. ವಾಲ್‌ನಟ್ಸ್, ಬಾದಾಮಿ, ಕಡಲೆಕಾಯಿ ಮತ್ತು ಪಿಸ್ತಾಗಳನ್ನು ದಿನಕ್ಕೆ ಎರಡು ಬಾರಿ ತಿನ್ನುವುದು ದೇಹಕ್ಕೆ ತುಂಬಾ ಒಳ್ಳೆಯದು.

ಆವಕಾಡೊ

ನಾಮ್ಮಲ್ಲಿ ಆವಕಾಡೊ ಹಣ್ಣುಗಳನ್ನು ಬೆಳೆಯುವುದಿಲ್ಲ. ಅವುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಎಲ್ಲಾ ಕಡೆಗಳಲ್ಲಿ ಇವು ಲಭ್ಯವಿರುವುದಿಲ್ಲ. ಸೂಪರ್‌ ಮಾರ್ಕೆಟ್‌ಗಳಲ್ಲಿ ಸಿಗುತ್ತವೆ. ಇದು ವಿಶೇಷ ರುಚಿಯನ್ನು ಹೊಂದಿಲ್ಲದಿದ್ದರೂ, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆವಕಾಡೊ ತುಂಡುಗಳನ್ನು, ಈರುಳ್ಳಿ ಮತ್ತು ಟೊಮೆಟೊಗಳೊಂದಿಗೆ ನಿಂಬೆ ರಸ ಬೆರೆಸಿ ತಿನ್ನುವುದು ಒಳ್ಳೆಯದು.

Whats_app_banner