Anti Corruption Day; ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ; ಭ್ರಷ್ಟಾಚಾರಿಗಳ ನಿಗ್ರಹಕ್ಕೆ ನೀವೂ ಕೈ ಜೋಡಿಸಿ
Anti Corruption Day: ಹೆಮ್ಮರವಾಗಿ ಬೆಳೆದಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 31 ಅಕ್ಟೋಬರ್ 2003 ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನು ಆಚರಿಸಲು ಅಂಗೀಕಾರ ನೀಡಿತು.
Anti Corruption Day: ದೇಶ ಎದುರಿಸುತ್ತಿರುವ ಗಂಭೀರ ಪ್ರಕರಣಗಳಲ್ಲಿ ಭ್ರಷ್ಟಾಚಾರ ಕೂಡಾ ಒಂದು. ಏನೇ ಕಾನೂನು ತಂದರೂ ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ, ಲೋಕಾಯುಕ್ತದಂಥ ಸಂಸ್ಥೆ ಇದ್ದರೂ ಭ್ರಷ್ಟಾಚಾರ ಎಗ್ಗಿಲ್ಲದೆ ಸಾಗುತ್ತಿದೆ. ಭ್ರಷ್ಟಾಚಾರದಿಂದ ದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿಯುತ್ತದೆ. ಸಾಮಾಜಿಕ, ಆರ್ಥಿಕವಾಗಿ ದುರ್ಬಲಗೊಳ್ಳುತ್ತದೆ.
ರಾಜಕೀಯ, ಸರ್ಕಾರಿ ಅಧಿಕಾರಿಗಳು, ಆಸ್ಪತ್ರೆ ಹೀಗೆ ಎಲ್ಲೆಂದರಲ್ಲಿ ಭ್ರಷ್ಟಾಚಾರ ಸಾಗುತ್ತಿದೆ. ಇದರಿಂದ ಸಮಾಜದಲ್ಲಿ ಒಂದು ವರ್ಗ ಹಣ, ಆಸ್ತಿ ಮಾಡಿ ಮುಂದುವರೆಯುತ್ತಿದ್ದಾರೆ. ಭ್ರಷ್ಟಾಚಾರ ಆಪಾದನೆ ಹೊತ್ತು ಶಿಕ್ಷೆಅನುಭವಿಸಿದರೂ ಕೆಲವರು ಮತ್ತೆ ಅದೇ ಕೆಲಸದಲ್ಲಿ ಮುಂದುವರೆಯುತ್ತಿದ್ದಾರೆ. ರಾಜ್ಯದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ ಕೆಲವೇ ಕೆಲವು ಮಾತ್ರ ವಿಚಾರಣೆ ಮುಗಿಸಿವೆ, ಉಳಿದವು ಇನ್ನೂ ಬಾಕಿ ಇವೆ. ಭಾರತದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಹೊಂದಿರುವ ಟಾಪ್ 5 ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಇದೆ. ಆದ್ದರಿಂದ ಭಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ.
ಭಷ್ಟಾಚಾರ ವಿರೋಧಿ ದಿನದ ಇತಿಹಾಸ
ಭ್ರಷ್ಟಾಚಾರ ಅನ್ನೋದು ಕರ್ನಾಟಕ , ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ದೇಶಗಳು ಎದುರಿಸುತ್ತಿರುವ ಸಮಸ್ಯೆ ಆಗಿದೆ. ಇದೇ ಕಾರಣಕ್ಕೆ ಅದೆಷ್ಟೋ ರಾಷ್ಟ್ರಗಳು ಇನ್ನೂ ಆರ್ಥಿಕವಾಗಿ ಹಿಂದುಳಿದಿವೆ. ಹೆಮ್ಮರವಾಗಿ ಬೆಳೆದಿರುವ ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ, ಭ್ರಷ್ಟಾಚಾರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 31 ಅಕ್ಟೋಬರ್ 2003 ರಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ದಿನವನ್ನು ಆಚರಿಸಲು ಅಂಗೀಕಾರ ನೀಡಿತು. ಅದೇ ವರ್ಷ ಡಿಸೆಂಬರ್ 9 ರಂದು ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಇದುವರೆಗೂ ಪ್ರತಿ ವರ್ಷ ಡಿಸೆಂಬರ್ 9 ರಂದು ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸುತ್ತಾ ಬರಲಾಗಿದೆ.
ಭಷ್ಟಾಚಾರ ವಿರೋಧಿ ದಿನದ ಮಹತ್ವ
ಭಷ್ಟಾಚಾರದ ವಿರುದ್ಧ ಹೋರಾಡುವುದು ಪ್ರತಿ ಜನ ಸಾಮಾನ್ಯರ ಕರ್ತವ್ಯವಾಗಿದೆ. ಕೆಲಸ ಸುಲಭವಾಗಿ ಆಗಲೆಂದು ಕೇಳಿದಷ್ಟು ಹಣ ನೀಡುವುದು, ದೂರು ಕೊಡಲು ಹಿಂದೇಟು ಹಾಕುವುದು ಹೆಚ್ಚಾಗಿದೆ. ಇದೇ ಕಾರಣಕ್ಕೆ ಭ್ರಷ್ಟಾಚಾರಿಗಳು ಯಾವುದೇ ಭಯವಿಲ್ಲದೆ ಲಂಚ ಪಡೆಯುತ್ತಿದ್ದಾರೆ. ಆದ್ದರಿಂದ ಎಲ್ಲೇ ಭ್ರಷ್ಟಾಚಾರ ಕಂಡು ಬಂದರೂ ಅದನ್ನು ಸಂಬಂಧಿಸಿದವರ ಗಮನಕ್ಕೆ ತರುವುದು ಮುಖ್ಯ. ನಿಮಗೆ ಯಾರೇ ಲಂಚಕ್ಕೆ ಬೇಡಿಕೆ ಇಟ್ಟರೂ ಧೈರ್ಯದಿಂದ ದೂರು ನೀಡಿ. ಲಂಚ ಪಡೆಯುವುದು ಎಷ್ಟು ಅಪರಾಧವೋ , ಕೊಡುವುದು ಕೂಡಾ ಅಷ್ಟೇ ಅಪರಾಧ. ಆದ್ದರಿಂದ ಎಲ್ಲಿಯಾದರೂ ಲಂಚ ಪಡೆಯುವುದು, ನೀಡುವುದು ನಿಮ್ಮ ಗಮನಕ್ಕೆ ಬಂದರೆ ದೂರು ನೀಡಲು ಹಿಂಜರಿಯಬೇಡಿ. ನೀವು ಇತರರಿಗೂ ಮಾದರಿಯಾಗಿ. ನಿಮ್ಮೊಬ್ಬರ ಕೆಲಸ ಇತರರಿಗೂ ಸ್ಫೂರ್ತಿಯಾಗಬಹುದು.
ವಿಭಾಗ