ಕನ್ನಡ ಸುದ್ದಿ  /  ಜೀವನಶೈಲಿ  /  ಐಆರ್‌ಸಿಟಿಸಿ ಟೂರ್ ಪ್ಯಾಕೇಜ್; ಬೆಂಗಳೂರನಿಂದ ಅಂಡಮಾನ್ ಪ್ರವಾಸ, ದಿನಾಂಕ, ಟಿಕೆಟ್ ದರ, ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್; ಬೆಂಗಳೂರನಿಂದ ಅಂಡಮಾನ್ ಪ್ರವಾಸ, ದಿನಾಂಕ, ಟಿಕೆಟ್ ದರ, ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ

ಐಆರ್‌ಸಿಟಿಸಿ ಬೆಂಗಳೂರಿನಿಂದ ಅಂಡಮಾನ್‌ಗೆ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ರವಾಸ ಯಾವಾಗ ಆರಂಭವಾಗುತ್ತೆ, ಪ್ಯಾಕೇಜ್ ಮೊತ್ತ ಎಷ್ಟು, ಯಾವ ಪ್ರವಾಸಿ ತಾಣಗಳನ್ನು ನೋಡಬಹುದು ಎಂಬುದರ ಸಂಪೂರ್ಣ ಮಾಹಿತಿ ತಿಳಿಯೋಣ.

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್; ಬೆಂಗಳೂರನಿಂದ ಅಂಡಮಾನ್ ಪ್ರವಾಸ, ದಿನಾಂಕ, ಟಿಕೆಟ್ ದರ, ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ
ಐಆರ್‌ಸಿಟಿಸಿ ಟೂರ್ ಪ್ಯಾಕೇಜ್; ಬೆಂಗಳೂರನಿಂದ ಅಂಡಮಾನ್ ಪ್ರವಾಸ, ದಿನಾಂಕ, ಟಿಕೆಟ್ ದರ, ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ

ಜಗತ್ತಿನ ಅತಿ ಸುಂದರ ಕಡಲ ತೀರಗಳಲ್ಲಿ ಒಂದಾಗಿರುವ ಅಂಡಮಾನ್ ಬಂಗಾಳ ಕೊಲ್ಲಿಯಲ್ಲಿರುವ ಹಿಂದೂ ಮಹಾಸಾಗರದ ದ್ವೀಪಸಮೂಹದ ದ್ವೀಪಗಳ ಗುಂಪು ಅಂತಲೇ ಕರೆಯಲಾಗುತ್ತೆ. ಭಾರತೀಯ ಪರ್ಯಾಯ ದ್ವೀಪ ಮತ್ತು ಉತ್ತಮ ಮತ್ತು ಪೂರ್ವಕ್ಕೆ ಬರ್ಮಾ ನಡುವೆ ಬರುವ ಅಂಡಮಾನ್‌ಗೆ ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಲ್ಲಿನ ಸುಂದರವಾದ ಕಡಲ ತೀರಗಳ ಜೊತೆಗೆ ನೈಸರ್ಗಿಕ ಸಸ್ಯವರ್ಗದ ಉಷ್ಣವಲಯದ ಅರಣ್ಯವಾಗಿದ್ದು, ಕರಾವಳಿಯಲ್ಲಿ ಮ್ಯಾಂಗ್ರೋವ್‌ಗಳನ್ನು ಹೊಂದಿದೆ. ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ - ಐಆರ್‌ಸಿಟಿಸಿ ಬೆಂಗಳೂರಿನಿಂದ ಅಂಡಮಾನ್‌ಗೆ ಟೂರ್ ಪ್ಯಾಕೇಜ್ (IRCTC Bangalore Andaman Tour Package) ಘೋಷಣೆ ಮಾಡಿದೆ. ಈ ಟೂರ್ ಯಾವಾಗ ಆರಂಭವಾಗುತ್ತೆ, ಪ್ರತಿ ಪ್ರಯಾಣಿಕರಿಗೆ ಎಷ್ಟು ಖರ್ಚಾಗುತ್ತೆ, ಏನೆಲ್ಲಾ ಪ್ರವಾಸಿ ತಾಣಗಳನ್ನು ನೋಡಬಹುದು, ಉಳಿದುಕೊಳ್ಳುವ ಹೋಟೆಲ್ ಸೇರಿದಂತೆ ಟೂರ್ ಪ್ಯಾಕೇಜ್‌ನ ಪ್ರಮುಖ ಮಾಹಿತಿಯ ವಿವರ ಇಲ್ಲಿದೆ.

ಬೆಂಗಳೂರು ಅಂಡಮಾನ್ ಟೂರ್ ಪ್ಯಾಕೇಜ್ ವಿವರ

ಪ್ಯಾಕೇಜ್ ಹೆಸರು: ಟ್ರೋಪಿಕಲ್ ವಂಡರ್ಸ್ ಆಫ್ ಅಂಡಮಾನ್ (ಎಸ್‌ಬಿಎಂ07)

ಭೇಟಿ ನೀಡುವ ತಾಣಗಳು: ಪೋರ್ಟ್‌ ಬ್ಲೇರ್ - ರಾಸ್ ದ್ವೀಪ- ನಾರ್ತ್ ಬೇ ಐಲ್ಯಾಂಡ್ - ಹ್ಯಾವ್ಲಾಕ್ - ನೀಲ್ ದ್ವೀಪ

ಟ್ರೆಂಡಿಂಗ್​ ಸುದ್ದಿ

ಪ್ರಯಾಣದ ಮೋಡ್: ವಿಮಾನ

ಹೊರಡುವ ಸಮಯ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10.50 ಗಂಟೆಗೆ ವಿಸ್ತಾರಾ ಏರ್‌ಲೈನ್ ವಿಮಾನ

ಪ್ರವಾಸದ ದಿನಾಂಕ: 06N/07D - 24/09/2024

ಪೋರ್ಟ್ ಬ್ಲೇರ್‌ನಲ್ಲಿರುವ ಹೋಟೆಲ್: ಹೋಟೆಲ್ ಟಿಎಸ್‌ಜಿ ಗ್ರ್ಯಾಂಡ್ ಅಥವಾ ಇದೇ ರೀತಿಯ ಹೋಟೆಲ್

ಹ್ಯಾವ್‌ಲಾಕ್‌ನಲ್ಲಿರುವ ಹೋಟೆಲ್: ಹೋಟೆಲ್ ಟಿಎಸ್‌ಬಿ ಬ್ಲೂ ಅಥವಾ ಇದೇ ಮಾದರಿಯ ಹೋಟೆಲ್

ನೀಲ್‌ನಲ್ಲಿ ಹೋಟೆಲ್: ಹೋಟೆಲ್ ಟಿಎಸ್‌ಜಿ ಔರಾ ಅಥವಾ ಇದೇ ಮಾದರಿಯ ಹೋಟೆಲ್

ವಿಮಾನದ ವಿವರಗಳು

ದಿನಾಂಕ: 24-09-2024

ಹೊರಡುವುದು: ಬೆಂಗಳೂರು-ಪೋರ್ಟ್‌ ಬ್ಲೇರ್

ವಿಮಾನ: ಯುಕೆ-509

ವಿಮಾನ ಸಮಯ: ಬೆಳಗ್ಗೆ 10.50 ರಿಂದ ಮಧ್ಯಾಹ್ನ 1.10 ಗಂಟೆ

ವಾಪಸ್ ಬರುವ ವಿವರಗಳು

ದಿನಾಂಕ: 29-09-2024

ವಲಯ: ಪೋರ್ಟ್ ಬ್ಲೇರ್ ನಿಂದ ಬೆಂಗಳೂರು

ವಿಮಾನ ಸಂಖ್ಯೆ: ಯುಕೆ-508

ವಿಮಾನ ಸಮಯ: ಮಧ್ಯಾಹ್ನ 1.45 -ಸಂಜೆ 4.15

ಗಮನಿಸಿ: ವಿಮಾನಯಾನದ ಕಾರ್ಯಾಚರಣೆಯ ಕಾರ್ಯಸಾಧ್ಯತೆಯ ಪ್ರಕಾರ, ವಿಮಾನ ಸಮಯ ಅಥವಾ ವೇಲಾಪಟ್ಟಿ ಬದಲಾವಣೆಗೆ ಒಳಪಟ್ಟಿರುತ್ತದೆ

ಬೆಂಗಳೂರು-ಅಂಡಮಾನ್ ಟೂರ್ ಪ್ಯಾಕೇಜ್‌ನಲ್ಲಿ ಪ್ರತಿ ವ್ಯಕ್ತಿಗೆ ಎಷ್ಟು ಖರ್ಜಾಗುತ್ತೆ

ಒಬ್ಬರಿಗೆ 59,500 ರೂಪಾಯಿ ಆಗುತ್ತೆ, ಇಬ್ಬರಿಗೆ ತಲಾ 44,450 ರೂಪಾಯಿ, ಮೂವರಿಗೆ ತಲಾ 43,950 ರೂಪಾಯಿ, ಹಾಸಿಗೆ ಹೊಂದಿರುವ ಮಗು (5-11 ವರ್ಷ) 38,650 ರೂಪಾಯಿ, ಹಾಸಿಗೆ ಇಲ್ಲದ ಮಗು (5-11 ವರ್ಷ) 34,750 ರೂಪಾಯಿ, ಹಾಸಿಗೆ ಇಲ್ಲದ ಮಗು (2-4 ವರ್ಷ) 29,450 ರೂಪಾಯಿ) ಹೆಚ್ಚಿನ ಮಾಹಿತಿಗಾಗಿ ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ irctctourism.com ಗೆ ಭೇಟಿ ನೀಡಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)