Self Love: ಇಷ್ಟು ದಿನ ಬರಿ ಕೂಡಿಟ್ಟಿದ್ದೇ ಆಯ್ತು, ಇನ್ನಾದ್ರೂ ನಂಗಂತ ಒಂದಿಷ್ಟು ಖರ್ಚು ಮಾಡ್ಕೋಬೇಕು ಅನಿಸ್ತಿದ್ಯಾ? ನಿಮಗಾಗಿ ಈ ಟಿಪ್ಸ್
ನೀವು ದುಡಿಯುವುದು ಎಷ್ಟು ಮುಖ್ಯವೋ ದುಡಿದ ಹಣವನ್ನು ಅನುಭವಿಸುವುದು ಕೂಡ ತುಂಬಾ ಮುಖ್ಯ. ನೀವು ನಿಮಗಾಗಿ ದುಡಿದ ಹಣವನ್ನು ಖರ್ಚು ಮಾಡಲು ಹಿಂದೇಟು ಹಾಕಿ ನಂತರದ ದಿನದಲ್ಲಿ ನಾನು ಕಷ್ಟಪಟ್ಟದ್ದೊಂದೇ ಆಯ್ತು ಏನೂ ಅನುಭವಿಸಲಿಲ್ಲ ಎಂದು ಅನಿಸಬಾರದು.
ಎಷ್ಟೋ ಜನ ತುಂಬಾ ಜವಾಬ್ಧಾರಿ ಹೊಂದಿರುತ್ತಾರೆ. ಮನೆಯ ಖರ್ಚುಗಳನ್ನು ಅಥವಾ ಕುಟುಂಬದಲ್ಲಿ ಯಾರಿಗೆ ಏನೇ ಬೇಕಾದರೂ ಇವರೇ ತಂದುಕೊಡುತ್ತಾರೆ. ಪ್ರತಿದಿನವೂ ದುಡಿದ ಹಣವನ್ನು ಕೂಡಿಡುತ್ತಲೇ ಬದುಕುವವರು ಹಲವರಿದ್ದಾರೆ. ನೀವು ದುಡಿಯುವುದು ಎಷ್ಟು ಮುಖ್ಯವೋ ದುಡಿದ ಹಣವನ್ನು ಅನುಭವಿಸುವುದು ಕೂಡ ತುಂಬಾ ಮುಖ್ಯ. ನೀವು ನಿಮಗಾಗಿ ದುಡಿದ ಹಣವನ್ನು ಖರ್ಚು ಮಾಡಲು ಹಿಂದೇಟು ಹಾಕಿ ನಂತರದ ದಿನದಲ್ಲಿ ನಾನು ಕಷ್ಟಪಟ್ಟದ್ದೊಂದೇ ಆಯ್ತು ಏನೂ ಅನುಭವಿಸಲಿಲ್ಲ ಎಂದು ಅನಿಸಬಾರದು.
ಹಾಗಾಗಿ ನೀವು ನಿಮಗೆ ಹಣವ್ಯಯ ಮಾಡಿಕೊಳ್ಳಬೇಕು ಮತ್ತು ಅದು ನಿಮ್ಮ ಉಪಯೋಗಕ್ಕೆ ಬರುವಂತಾಗಬೇಕು ಎಂಬ ಕೆಲವು ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ. ನಿಮಗೆ ಇದರಲ್ಲಿ ಯಾವುದಕ್ಕಾದರೂ ಹಣ ಖರ್ಷು ಮಾಡಬೇಕು ಎಂದೆನಿಸಿದರೆ ಖರ್ಚು ಮಾಡಬಹುದು.
ಶಾಪಿಂಗ್ ಮಾಡಿ: ನಿಮಗೆ ಇಷ್ಟ ಬಂದ ವಸ್ತುಗಳನ್ನು ಖರೀದಿ ಮಾಡಿ. ತಿಂಗಳಲ್ಲಿ ಇಂತಿಷ್ಟು ಹಣವನ್ನು ನನ್ನ ಉಪಯೋಗಕ್ಕಾಗಿ ನಾನು ಖರ್ಚು ಮಾಡುತ್ತೇನೆ ಎಂದು ನಿರ್ಧಾರ ಮಾಡಿಕೊಳ್ಳಿ. ಒಂದು ಅಂದವಾದ ಉಡುಪು ಅಥವಾ ನಿಮ್ಮಿಷ್ಟದ ಆಭರಣವನ್ನು ಖರೀದಿ ಮಾಡಿ. ಇದು ನಿಮಗೆ ನೀವು ಮಾಡಿಕೊಳ್ಳುವ ಖರ್ಚಾಗಿರುತ್ತದೆ. ಹೊಸ ಬಟ್ಟೆ ಖರೀದಿ ಮಾಡಿ ಅದನ್ನು ತೊಟ್ಟುಕೊಂಡರೆ ನಿಮಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಾನು ಏನೋ ಮಾಡುತ್ತಾ ಇದ್ದೇನೆ ಎಂಬ ಭಾವನೆ ನಿಮಗೆ ಬಂದರೇ ಅಷ್ಟೇ ಸಾಕು.
ನಿಮ್ಮಿಷ್ಟದ ದಿನ: ನೀವು ನಿಮಗಾಗಿ ಸ್ಪಾ ಮಾಡಿಸಿಕೊಳ್ಳಿ. ಒಳ್ಳೆ ಕೇರ್ ತೆಗೆದುಕೊಳ್ಳಿ. ಹೇರ್ ಕೇರ್ ಮಾಡಿಸಿಕೊಳ್ಳಿ. ನಿಮ್ಮ ಅಂಗಾಂಗಳ ಬಗ್ಗೆ ಕಾಳಜಿವಹಿಸಿ. ನಿಮಗೆ ಇಷ್ಟ ಬಂದ ಕೆಲಸಗಳನ್ನು ಅಂದು ಮಾಡಿ. ಏನೇ ಸಮಸ್ಯೆ ಆದರೂ ಅದನ್ನು ಎದುರಿಸಿ ನಿಲ್ಲುತ್ತೇನೆ ಎಂಬ ಭರವಸೆ ಮೂಡುವಂತ ಕೆಲಸಗಳನ್ನು ಮಾಡಿ.
ಸಿನಿಮಾ ನೋಡಿ: ನೀವು ಮಾಲ್‌ಗಳಲ್ಲಿ ಸಿನಿಮಾ ನೋಡಬೇಕು ಎಂದು ಆಸೆ ಹೊಂದಿದ್ದರೂ ಆ ಹಣ ಇನ್ನೇನಾದರು ಪ್ರಯೋಜನಕ್ಕೆ ಬರುತ್ತೆ ಅಂತ ಕೂಡಿಡಬೇಡಿ. ಆಗಿನ ಖುಷಿಯನ್ನು ಅನುಭವಿಸುವುದು ಮುಖ್ಯ. ಜೀವನದಲ್ಲಿ ಸಮಸ್ಯೆಗಳು ನೂರಾರು ಬರುತ್ತಲೇ ಇರುತ್ತದೆ.
ನಾವು ನಮ್ಮನ್ನು ಪ್ರೀತಿಸಿದಾಗ ನಾವು ನಮ್ಮ ಅಗತ್ಯಗಳಿಗೆ ಆದ್ಯತೆ ನೀಡುತ್ತೇವೆ, ನಮ್ಮ ತಪ್ಪುಗಳ ಬಗ್ಗೆ ನಮಗೆ ಅರಿವಾಗುತ್ತದೆ. ನಮ್ಮನ್ನು ನಾವು ಎಲ್ಲಿ ಬದಲಾಯಿಸಿಕೊಳ್ಳಬೇಕು ಎಂಬುದನ್ನು ನಾವೇ ಕಲಿಯುತ್ತೇವೆ. ಈ ರೀತಿ ಪ್ರಯೋಗ ಮಾಡಿ ನೋಡಿದಾಗಲೇ ನಮಗೆ ಯಾವ ರೀತಿ ಖರ್ಚು ಮಾಡಬೇಕು? ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂದು ತಿಳಿಯುತ್ತದೆ.