Kitchen Tips: ಕೇವಲ ಜ್ಯೂಸ್ ಮಾಡಲು ಮಾತ್ರವಲ್ಲ, ಹ್ಯಾಂಡ್ ಬ್ಲೆಂಡರ್‌ ಈ ರೀತಿಯಲ್ಲೂ ಬಳಸಬಹುದು; ಕಿಚನ್‌ ಟಿಪ್ಸ್‌-kitchen tips how to use hand blender for grind food items hand blender can be used as mixer rsa ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Kitchen Tips: ಕೇವಲ ಜ್ಯೂಸ್ ಮಾಡಲು ಮಾತ್ರವಲ್ಲ, ಹ್ಯಾಂಡ್ ಬ್ಲೆಂಡರ್‌ ಈ ರೀತಿಯಲ್ಲೂ ಬಳಸಬಹುದು; ಕಿಚನ್‌ ಟಿಪ್ಸ್‌

Kitchen Tips: ಕೇವಲ ಜ್ಯೂಸ್ ಮಾಡಲು ಮಾತ್ರವಲ್ಲ, ಹ್ಯಾಂಡ್ ಬ್ಲೆಂಡರ್‌ ಈ ರೀತಿಯಲ್ಲೂ ಬಳಸಬಹುದು; ಕಿಚನ್‌ ಟಿಪ್ಸ್‌

Kitchen Tips: ಅಡುಗೆ ಮನೆಯಲ್ಲಿ ಹ್ಯಾಂಡ್ ಬ್ಲೆಂಡರ್‌ಗಳ ಬಳಕೆ ಕಡಿಮೆ ಎಂದು ಅದನ್ನು ಮೂಲೆಯಲ್ಲಿ ಇಡುವವರೇ ಜಾಸ್ತಿ. ಆದರೆ ಅವುಗಳಿಂದ ಎಷ್ಟೆಲ್ಲಾ ಪ್ರಯೋಜನವಿದೆ ಎಂದು ಒಮ್ಮೆ ತಿಳಿದರೆ ನೀವೆಂದೂ ಹ್ಯಾಂಡ್ ಬ್ಲೆಂಡರ್‌ಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡುವುದಿಲ್ಲ.

ಅಡುಗೆ ಮನೆ ಟಿಪ್ಸ್‌
ಅಡುಗೆ ಮನೆ ಟಿಪ್ಸ್‌ (PC: Aruna Vijay)

Kitchen Tips: ಮೊದಲೆಲ್ಲಾ ಅಡುಗೆ ಮಾಡುವುದು ಎಂದರೆ ಸಾಕಷ್ಟು ಶ್ರಮದ ಅಗತ್ಯವಿರುತಿತ್ತು. ಆದರೆ ಈಗ ಆ ರೀತಿ ಅಲ್ಲ. ಕಾಲ ಬದಲಾಗಿದೆ. ಅಡುಗೆ ಮನೆಯ ಕೆಲಸಗಳನ್ನು ಸರಾಗಗೊಳಿಸುವಂತಹ ಸಾಕಷ್ಟು ಯಂತ್ರಗಳು ಮಾರುಕಟ್ಟೆಯಲ್ಲಿದೆ. ಮಿಕ್ಸಿ, ಗ್ರೈಂಡರ್, ಗ್ಯಾಸ್ಟ್ ಸ್ಟೌ ಇದೆಲ್ಲ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಇದೆ.

ಇದರ ಜೊತೆಯಲ್ಲಿ ಈಗೀಗ ಹ್ಯಾಂಡ್ ಬ್ಲೆಂಡರ್‌ಗಳನ್ನು ಬಳಕೆ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಈ ಹ್ಯಾಂಡ್ ಬ್ಲೆಂಡರ್‌ಳನ್ನು ಸಾಮಾನ್ಯವಾಗಿ ಸ್ಮೂದಿ ತಯಾರಿಸಲು ಬಳಕೆ ಮಾಡಲಾಗುತ್ತದೆ. ಆದರೆ ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋ ಖ್ಯಾತಿಯ ಅರುಣಾ ವಿಜಯ್ ಎಂಬವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹ್ಯಾಂಡ್ ಬ್ಲೆಂಡರನ್ನು ಇನ್ನೂ ಯಾವ್ಯಾವ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಶೆಫ್ ಅರುಣಾ ವಿಜಯ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ವಲ್ಪ ಪ್ರಮಾಣದ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಲು ಆಗುವುದಿಲ್ಲ. ಇವುಗಳನ್ನು ಹ್ಯಾಂಡ್ ಬ್ಲೆಂಡರ್‌ನಲ್ಲಿ ಹೇಗೆ ರುಬ್ಬಬಹುದು ಎಂಬುದನ್ನು ಅರುಣಾ ವಿಜಯ್ ತಿಳಿಸಿಕೊಟ್ಟಿದ್ದಾರೆ.

ಮಿಕ್ಸಿಯಂತೆ ಬಳಕೆಯಾಗುವ ಹ್ಯಾಂಡ್‌ ಬ್ಲೆಂಡರ್‌

ಮೊದಲು ಕೊತ್ತಂಬರಿ ಹಾಗೂ ಜೀರಿಗೆಯನ್ನು ಹ್ಲಾಂಡ್ ಬ್ಲೆಂಡರ್‌ನಲ್ಲಿ ಇಡುತ್ತಾರೆ. ಬಳಿಕ ಇದಕ್ಕೆ, ಮಿಶ್ರಣ ಸುತ್ತಲೂ ಹಾರದಂತೆ ತಡೆಯಲು ಒಂದು ಪ್ಲಾಸ್ಟಿಕ್‌ ಮುಚ್ಚಿ ಸ್ವಿಚ್ ಆನ್ ಮಾಡುತ್ತಾರೆ. ಅದೇ ರೀತಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಕೂಡಾ ಕ್ಷಣಾರ್ಧದಲ್ಲಿ ತಯಾರಾಗುತ್ತದೆ. ಈ ರೀತಿ ಸುಲಭ ತಂತ್ರಗಳ ಮೂಲಕ ಅಡುಗೆ ಮನೆಯ ಕೆಲಸಗಳನ್ನು ಇನ್ನಷ್ಟು ಸರಳ ಮಾಡಿಕೊಳ್ಳಬಹುದಾಗಿದೆ.

ಹ್ಯಾಂಡ್ ಬ್ಲೆಂಡರ್‌ಗಳು ಎಲ್ಲರ ಮನೆಯಲ್ಲಿ ಇದ್ದರೂ ಸಹ ಅನೇಕರಿಗೆ ಇದರಲ್ಲಿ ಹೆಚ್ಚು ಪ್ರಯೋಜನ ಕಾಣುವುದಿಲ್ಲ. ಆದರೆ ನೀವು ಈ ರೀತಿ ಬಳಕೆ ಮಾಡುವುದರ ಮೂಲಕ ಹ್ಯಾಂಡ್ ಬ್ಲೆಂಡರ್‌ನಿಂದ ಹೆಚ್ಚು ಪ್ರಯೋಜನ ಪಡೆಯಬಹುದಾಗಿದೆ. ಹ್ಯಾಂಡ್ ಬ್ಲೆಂಡರ್‌ಗಳಿಂದ ನೀವು ಮೊಸರನ್ನು ಕಡೆದು ಮಜ್ಜಿಗೆ ಕೂಡಾ ಮಾಡಬಹುದಾಗಿದೆ. ಹೀಗಾಗಿ ಬೇಸಿಗೆ ಕಾಲದಲ್ಲಿ ಮಸಾಲಾ ಮಜ್ಜಿಗೆ ತಯಾರಿಸಲು ಕೂಡಾ ಇದು ಸಹಾಯಕ್ಕೆ ಬರುತ್ತದೆ.

ಟೊಮೆಟೋ ಸಾಸ್‌ ಕೂಡಾ ತಯಾರಿಸಬಹುದು

ನೀವು ಹ್ಯಾಂಡ್ ಬ್ಲೆಂಡರ್‌ಗಳ ಸಹಾಯದಿಂದ ಮನೆಯಲ್ಲೇ ಟೊಮೆಟೊ ಸಾಸನ್ನೂ ತಯಾರಿಸಬಹುದಾಗಿದೆ. ಇದಕ್ಕಾಗಿ ನೀವು ಮೊದಲನೆಯದಾಗಿ ಬೆಳ್ಳುಳ್ಳಿ, ಟೊಮೆಟೋ ಹಾಗೂ ಲವಂಗವನ್ನು ಕುದಿಸಬೇಕು. ಇದಾದ ಬಳಿಕ ಫೋರ್ಕ್‌ ಸಹಾಯದಿಂದ ಟೊಮೆಟೋವನ್ನು ಹಿಂಡಿಕೊಳ್ಳಬೇಕು. ಬಳಿಕ ಹ್ಯಾಂಡ್‌ ಬ್ಲೆಂಡರ್‌ ಸಹಾಯದಿಂದ ಪ್ಯೂರಿ ತಯಾರಿಸಿದ್ರೆ ನಿಮ್ಮ ಟೊಮಾಟೋ ಸಾಸ್ ರೆಡಿಯಾದಂತೆ..!

ಆಮ್ಲೆಟ್‌ ತಯಾರಿಸುವ ಮುನ್ನ ಮೊಟ್ಟೆಯನ್ನು ಬೀಟ್ ಮಾಡಲು ಕೂಡ ನೀವು ಹ್ಯಾಂಡ್ ಬ್ಲೆಂಡರ್‌ಗಳನ್ನು ಬಳಕೆ ಮಾಡಬಹುದಾಗಿದೆ. ಇದಾದ ಬಳಿಕ ನೀವು ರುಚಿಯಾದ ಆಮ್ಲೆಟ್ ತಯಾರಿಸಿಕೊಳ್ಳಬಹುದಾಗಿದೆ. ಕೇಕ್‌ನಲ್ಲಿ ಬಳಕೆಯಾಗುವ ವಿಪ್ಪಿಂಗ್ ಕ್ರೀಮ್‌ಳನ್ನು ತಯಾರಿಸಲು ಕೂಡಾ ಹ್ಯಾಂಡ್ ಬ್ಲೆಂಡರ್‌ಗಳು ಸಹಾಯಕ್ಕೆ ಬರಲಿದೆ.

mysore-dasara_Entry_Point