ರಾತ್ರಿ ಹೊತ್ತಿನಲ್ಲೇ ಜಿರಳೆಗಳು ರಾಜ್ಯಭಾರ ಮಾಡಲು ಕಾರಣವೇನು; ಮನೆಯಲ್ಲಿ ಒಂದೇ ಒಂದು ಜಿರಳೆ ಇರದಂತೆ ಮಾಡಲು ಇಲ್ಲಿದೆ ಸೂಪರ್ ಐಡಿಯಾ
ರಾತ್ರಿಯಾದ್ರೆ ಸಾಕು ಮನೆ ತುಂಬಾ ಜಿರಳೆಗಳು ಓಡಾಡುತ್ತವೆ. ಹಗಲಿನ ಹೊತ್ತು ಒಂದೇ ಒಂದು ಜಿರಳೆ ಕೂಡ ಕಾಣೊಲ್ಲ. ಹಾಗಾದ್ರೆ ಇವಕ್ಕೆ ಹಗಲಿನ ಹೊತ್ತು ಕಣ್ಣು ಕಾಣೋಲ್ವಾ, ರಾತ್ರಿ ಹೊತ್ತಿನಲ್ಲೇ ರಾಜ್ಯಭಾರ ಮಾಡಲು ಕಾರಣವೇನು, ಮನೆಯಲ್ಲಿ ಒಂದೇ ಒಂದು ಜಿರಳೆ ಇಲ್ಲದಂತೆ ಮಾಡಲು ಏನು ಮಾಡಬೇಕು ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮನೆಯಲ್ಲಿ ಒಂದು ಜಿರಳೆ ಆದ್ರೆ ಸಾಕು, ಮನೆ ತುಂಬಾ ಜಿರಳೆಯ ಸಾಮ್ರಾಜ್ಯವಾಗಿ ಬಿಡುತ್ತದೆ. ಎಲ್ಲಿ ನೋಡಿದ್ರೂ ಜಿರಳೆಗಳ ಮೊಟ್ಟೆ, ಮರಿ ಕಾಣಿಸುತ್ತದೆ. ಆದರೆ ಸಾಮಾನ್ಯವಾಗಿ ರಾತ್ರಿ ಹೊತ್ತಿನಲ್ಲೇ ಜಿರಳೆಗಳು ಹೆಚ್ಚು ಕಾಣಿಸುತ್ತವೆ. ಹಗಲಿನ ವೇಳೆ ಒಂದೇ ಒಂದು ಕಾಣಿಸದೇ ಇದ್ದರೂ ರಾತ್ರಿ ಮಾತ್ರ ಮನೆ ತುಂಬಾ ಓಡಾಡುತ್ತವೆ. ಹಾಗಾದರೆ ಈ ರೀತಿ ರಾತ್ರಿ ಹೊತ್ತಿನಲ್ಲೇ ಜಿರಳೆಗಳು ಹರಿದಾಡುಲು ಕಾರಣವೇನು, ಹಗಲಿನಲ್ಲಿ ಅವು ಎಲ್ಲಿರುತ್ತವೆ ಎಂಬ ಪ್ರಶ್ನೆ ನಿಮ್ಮಲ್ಲೂ ಇದ್ರೆ ಇಲ್ಲಿದೆ ಉತ್ತರ.
ರಾತ್ರಿ ಹೊತ್ತಿನಲ್ಲಿ ಜಿರಳೆಗಳು ಹೆಚ್ಚಲು ಕಾರಣ?
ಕತ್ತಲೆಗೆ ಆದ್ಯತೆ: ಜಿರಳೆಗಳು ಅಂತರ್ಗತವಾಗಿ ಫೋಟೊಫೋಬಿಕ್ ಆಗಿರುತ್ತವೆ. ಅಂದರೆ ಅವು ಬೆಳಕಿನಲ್ಲಿ ಓಡಾಡುವುದನ್ನು ತಪ್ಪಿಸುತ್ತವೆ. ವುಗಳ ಸೂಕ್ಷ್ಮ ಆಂಟೆನಾಗಳು ಬೆಳಕಿನಲ್ಲಿನ ಬದಲಾವಣೆಗಳನ್ನು ಪತ್ತೆ ಮಾಡುತ್ತದೆ ಹಾಗೂ ಇದು ಅಪಾಯ ಎಂಬುದನ್ನು ಸೂಚಿಸುತ್ತದೆ. ಆ ಕಾರಣಕ್ಕೆ ಅವು ಕತ್ತಲೆ ಅಥವಾ ಸುರಕ್ಷಿತವಾದ ಯಾರೂ ಕಾರಣ ಪ್ರದೇಶದಲ್ಲಿ ಅಡಗುತ್ತವೆ.
ಬದುಕುಳಿಯುವ ಪ್ರವೃತ್ತಿ: ಜಿರಳೆಗಳು ಬದುಕುಳಿಯುವ ಕಾರ್ಯವಿಧಾನವಾಗಿ ರಾತ್ರಿಯಲ್ಲಿ ವಿಕಸನಗೊಂಡಿವೆ. ಹಲ್ಲಿಗಳು ಮತ್ತು ಪಕ್ಷಿಗಳಂತಹ ಪರಭಕ್ಷಕಗಳು ಹಗಲಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಅವುಗಳಿಂದ ತಪ್ಪಿಸಿಕೊಳ್ಳಲು ಜಿರಳೆಗಳು ರಾತ್ರಿ ವೇಳೆ ಸಕ್ರಿಯವಾಗಿರುತ್ತವೆ.
ತಂಪಾದ ವಾತವರಣ: ಜಿರಳೆಗಳು ಆರಾಮದಾಯಕವಾದ ತಾಪಮಾನದಲ್ಲಿ ಅಭಿವೃದ್ಧಿ ಹೊಂದುತ್ತವೆ ಮತ್ತು ದಿನದ ಉಷ್ಣತೆಗೆ ಹೋಲಿಸಿದರೆ ತಂಪಾದ ರಾತ್ರಿಯ ತಾಪಮಾನವನ್ನು ಹೆಚ್ಚು ಸಹಿಸಿಕೊಳ್ಳಬಲ್ಲವು.
ಉಳಿದ ಆಹಾರ ಹುಡುಕಲು: ಸಾಮಾನ್ಯ ರಾತ್ರಿ ವೇಳೆಗೆ ಮನೆಯಲ್ಲಿ ಅಳಿದುಳಿದ ವಸ್ತುಗಳೆನ್ನೆಲ್ಲಾ ಕಸದ ಬುಟ್ಟಿಗೆ ಹಾಕುತ್ತೇವೆ. ಹಾಗಾಗಿ ಈ ಆಹಾರಗಳನ್ನು ಹುಡುಕಲು ಜಿರಳೆಗಳು ರಾತ್ರಿ ಹೊತ್ತು ಪ್ರವೇಶ ಮಾಡುತ್ತವೆ. ಇದಕ್ಕಾಗಿ ರಾತ್ರಿ ಹೊತ್ತು ಉತ್ತಮ ಎಂಬುದು ಅವುಗಳ ಅಭಿಪ್ರಾಯ.
ಸಂತಾನೋತ್ಪತ್ತಿ ಮತ್ತು ಸಂಯೋಗ: ರಾತ್ರಿಯ ಸಮಯವು ಜಿರಳೆಗಳು ಸಂತಾನೋತ್ಪತ್ತಿ ಮಾಡಲು ಮತ್ತು ಸಂಯೋಗ ಮಾಡಲು ಪರಿಪೂರ್ಣ ಪರಿಸ್ಥಿತಿಗಳನ್ನು ಒದಗಿಸುತ್ತದೆ. ಜಿರಳೆಗಳಿಂದ ಬಿಡುಗಡೆಯಾಗುವ ಫೆರೋಮೋನ್‌ಗಳು ಕತ್ತಲೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದು, ಅವುಗಳ ಯಶಸ್ವಿ ಸಂತಾನೋತ್ಪತ್ತಿಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ ಎಂದು ವಿಜ್ಞಾನ ಹೇಳುತ್ತದೆ.
ಜಿರಳೆಗಳು ಬಾರದಂತೆ ತಡೆಯಲು ಟಿಪ್ಸ್
ನಿಯಮಿತ ಕೀಟ ನಿಯಂತ್ರಕಗಳ ಬಳಕೆ: ಮನೆಯಲ್ಲಿ ಜಿರಳೆ ಕಂಡ ತಕ್ಷಣ ಕೀಟ ನಿಯಂತ್ರಕಗಳನ್ನು ಬಳಸಬೇಕು, ನಿಮ್ಮಿಂದ ಎಲ್ಲವನ್ನೂ ಸ್ವಚ್ಛಮಾಡಲು ಸಾಧ್ಯವಿಲ್ಲ ಎಂದಾದರೆ ಹೊರಗಡೆಯಿಂದ ಕೀಟ ನಿಯಂತ್ರಕ ಸಿಂಪಡಿಸುವವರನ್ನು ಕರೆಸಬೇಕು. ಒಂದೆರಡು ಬಾರಿ ಹೀಗೆ ಮಾಡುವುದರಿಂದ ಮನೆಯಲ್ಲಿ ಜಿರಳೆಗಳೇ ಇಲ್ಲದಂತಾಗುತ್ತವೆ.
ಶುಚಿತ್ವ ಕಾಪಾಡಿಕೊಳ್ಳುವುದು: ಜಿರಳೆಗಳು ಕೊಳಕು ಹಾಗೂ ಅಸ್ತವ್ಯಸ್ತವಾಗಿರುವ ಜಾಗದಲ್ಲಿ ಹೆಚ್ಚು ಅಡಗಿಕೊಳ್ಳುತ್ತವೆ. ಹಾಗಾಗಿ ಮನೆಯ ಮೂಲೆ ಮೂಲೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅಡಗುತಾಣವನ್ನು, ಆಹಾರ ಮೂಲಗಳನ್ನು ಶುಚಿಗೊಳಿಸಬೇಕು. ಇದರಿಂದ ಜಿರಳೆಗಳು ಬರುವುದಿಲ್ಲ.
ಕಸ ವಿಂಗಡನೆ: ಜಿರಳೆಗಳು ಬರದಂತೆ ತಡೆಯಲು ಕಸವನ್ನು ವಿಂಗಡನೆ ಮಾಡುವುದು ಬಹಳ ಮುಖ್ಯವಾಗಿತ್ತದೆ. ಹಸಿ ಕಸವನ್ನು ಪ್ರತಿದಿನ ಸ್ವಚ್ಛ ಮಾಡಬೇಕು, ಇಲ್ಲದೇ ಹೋದರೆ ಇದರ ವಾಸನೆಗೆ ಜಿರಳೆಗಳು ಆಕರ್ಷಿತವಾಗುತ್ತವೆ.
ಜಿರಳೆ ಬಲೆ: ಮಾರುಕಟ್ಟೆಯಲ್ಲಿ ಜಿರಳೆ ಬಲೆ ಸಿಗುತ್ತದೆ. ಅದನ್ನು ತಂದು ಬಳಸುವುದು ಕೂಡ ಪರಿಣಾಮಕಾರಿ, ಜಿರಳೆಗಳು ಈ ಬಲೆಗೆ ಸುಲಭವಾಗಿ ಬೀಳುತ್ತವೆ, ಅಲ್ಲದೇ ಪುನಃ ಬರಲು ಹೆದರುತ್ತವೆ.
ಆಹಾರವನ್ನು ಭದ್ರವಾಗಿಡುವುದು: ಆಹಾರದ ಮೂಲಗಳನ್ನು ಜಿರಳೆಗಳು ಹುಡುಕಿ ಬರುವ ಕಾರಣ ಆಹಾರವನ್ನು ಭದ್ರವಾಗಿಡುವುದು ಮುಖ್ಯವಾಗುತ್ತದೆ. ಗಾಳಿಯಾಡದಂತೆ ಡಬ್ಬಿಗಳಲ್ಲಿ ಚೀಲಗಳಲ್ಲಿ ತುಂಬಿಸಿ ಇಡಿ. ಇದರಿಂದ ಜಿರಳೆ ಬರುವುದು ಕಡಿಮೆಯಾಗುತ್ತದೆ.
ವಿಭಾಗ