Monsoon Trekking: ಮಳೆಗಾಲದಲ್ಲಿ ಟ್ರೆಕ್ಕಿಂಗ್ ಮಾಡಲು ಈ ತಾಣಗಳು ಹೇಳಿ ಮಾಡಿಸಿದಂತಿವೆ; ಇಲ್ಲಿಗೆ ಭೇಟಿ ಕೊಟ್ಚು ಮರೆಯಲಾಗದ ಅನುಭವ ಪಡೆಯಿರಿ
ಮಳೆಗಾಲದಲ್ಲಿ ಮಾತ್ರ ಟ್ರೆಕ್ಕಿಂಗ್ ಮಾಡಲು ನಮ್ಮ ದೇಶದಲ್ಲಿ ಅತ್ಯುತ್ತಮ ತಾಣಗಳಿವೆ. ಮುಂಗಾರು ಆರಂಭವಾಗಿರುವುದರಿಂದ ಈ ಸೀಸನ್‌ನಲ್ಲಿ ಈ ಸ್ಥಳಗಳಲ್ಲಿ ನೀವು ಟ್ರೆಕ್ಕಿಂಗ್ ಮಾಡಿದ್ರೆ ಉತ್ತಮ ಅನುಭವ ಸಿಗುತ್ತದೆ. ಆ ತಾಣಗಳ ಮಾಹಿತಿ ಇಲ್ಲಿದೆ.
ಬೆಂಗಳೂರು: ಚಾರಣ (Trekking) ಮಾಡುವುದೆಂದರೆ ಕೆಲವರಿಗೆ ತುಂಬಾ ಕ್ರೇಜ್. ವರ್ಷದ ಹಲವು ದಿನಗಳ ಕಾಲ ಟ್ರೆಕ್ಕಿಂಗ್‌ನಲ್ಲಿ ಕಳೆಯುತ್ತಾರೆ. ಇಂತಹವರಿಗಾಗಿ ಮಳೆಗಾಲದಲ್ಲಿ (Monsoon) ಭೇಟಿ ನೀಡಬಹುದಾದ ಬೆಸ್ಟ್ ತಾಣಗಳ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಟ್ರೆಕ್ಕಿಂಗ್ ಮೂಲಕ ಪ್ರಕೃತಿಯ ಸೊಬಗನ್ನು ಸವಿಯಲೆಂದೇ ಇಂತಿಷ್ಟು ದಿನಗಳನ್ನು ಮುಡುಪಾಗಿಟ್ಟು ಮಂದಿ ಅದ್ಭುತವಾದ ಅನುಭವವನ್ನು ಪಡೆಯುತ್ತಾರೆ. ನೀವೇನಾದರೂ ಈ ಮುಂಗಾರಿನಲ್ಲಿ ಚಾರಣಕ್ಕೆ ಹೊರಡುವ ಪ್ಲಾನ್ ಮಾಡಿದ್ದರೆ ಈ ತಾಣಗಳಲ್ಲಿ ಭೇಟಿ ಕೊಟ್ಟು ನೋಡಿ. ಜಿನುಗುವ ಹನಿಗಳು, ಬಿರುಗಾಳಿಯ ಶಬ್ದ, ಹಸಿರಿನಿಂದ ಕೂಡಿರುವ ಬೆಟ್ಟಗಳ ಸೊಬಗು ನಿಮ್ಮನ್ನು ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಭಾರತದಲ್ಲಿನ ಐದು ಸುಂದರವಾದ ಟ್ರೆಕ್ಕಿಂಗ್ ತಾಣಗಳ ಬಗ್ಗೆ ಇಲ್ಲಿದೆ ಮಾಹಿತಿ.
ಉತ್ತರಾಖಂಡ್‌ನ ರೂಪ್‌ಕುಂಡ್: ರೂಪ್‌ಕುಂಡ್ ಟ್ರೆಕ್ಕಿಂಗ್ ಭಾರತದ ಅತ್ಯಂತ ಜನಪ್ರಿಯ ಟ್ರೆಕ್ಕಿಂಗ್ ತಾಣಗಳಲ್ಲಿ ಒಂದಾಗಿದ್ದು, ಇದು ಉತ್ತರಾಖಂಡ್‌ನ ಗರ್ವಾಲ ಹಿಮಾಲಯ ಪ್ರದೇಶದಲ್ಲಿದೆ. ದಟ್ಟವಾದ ಕಾಡುಗಳು, ಆಲ್ಪೈನ್ ಹುಲ್ಲುಗಾವಲುಗಳು ಹಾಗೂ ಗ್ಲೇಶಿಯಲ್ ಕಣಿವೆಗಳ ಮೂಲಕ ಸ್ಥಳಕ್ಕೆ ತಲುಪಬೇಕು.
ತ್ರಿಶೂಲ್, ನಂದಾ ಘುಂಟಿಯ ಸುಂದರವಾದ ಹಿಮಾಲಯದ ಶಿಖರಗಳಿಂದ ಸುತ್ತುವರೆದಿರುವ ಗ್ಲೇಶಿಯಲ್ ಸರೋವರನ್ನು ತಲುಪಬಹುದು. ಮಳೆಗಾಳದಲ್ಲಿ ಈ ಪ್ರದೇಶ ಹಚ್ಚ ಹರಿಸಿರಿನಿಂದ ಕೂಡಿರುತ್ತದೆ. ಪ್ರಕೃತಿಯನ್ನ ಸವಿಲು ಹಾಗೂ ಸಾಹಸವನ್ನು ಎಂಜಾಯ್ ಮಾಡಲು ಈ ತಾಣ ಹೇಳಿ ಮಾಡಿಸಿದಂತಿದೆ.
ಸಿಕ್ಕಿಂನ ಜೊಂಗ್ರಿ: ವಿಶ್ವದ ಅತಿ ಎತ್ತರದ ಶಿಖರಗಳ ನಡುವೆ ಚಾರಣ ಮಾಡಲು ಬಯಸಿದರೆ ಸಿಕ್ಕಿಂನ ಜೊಂಗ್ರಿ ಬೆಸ್ಟ್ ಅಂತ ಹೇಳಬಹುದು. ಕಾಂಚನಜುಂಗಾ, ಮೌಂಟ್ ಪಾಂಡಿಮ್‌ನಂತಹ ಶಿಖರಗಳು ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಲ್ಲಿ ಹಸಿರು ಹುಲ್ಲುಗಾವಲುಗಳು ಹಾಗೂ ವರ್ಣರಂಜಿತ ರೋಡೋಡೆಂಡ್ರಾನ್ ಕಾಡುಗಳು ಕಣ್ಣುಗಳಿಗೆ ಹೊಸ ಅನುಭವಗಳನ್ನು ನೀಡುತ್ತವೆ. ಮಾನ್ಸೂನ್ ಟೈಮ್‌ನಲ್ಲಿ ಜಲಪಾತಗಳು ಹಾಗೂ ತುಂಬಿ ಹರಿಯುವ ನದಿಗಳು ಖುಷಿಯನ್ನು ದುಪ್ಪಟು ಮಾಡುತ್ತವೆ.
ಹಿಮಾಚಲ ಪ್ರದೇಶದ ಖೀರ್ಗಂಗಾ: ಹಿಮಾಚಲ ಪ್ರದೇಶದ ಪಾರ್ವತಿ ಕಣಿವೆಯಲ್ಲಿರುವ ಖೀರ್ಗಂಗಾ ಟ್ರೆಕ್ಕಿಂಗ್ ದಟ್ಟವಾದ ಕಾಡುಗಳು, ಜಲಪಾತಗಳು, ಹಾಗೂ ಹಿಮದಿಂದ ಆವೃತವಾದ ಪರ್ವತಗಳ ಮೂಲಕ ಸಾಗಬೇಕು. ಟ್ರೆಕ್ ಬರ್ಶೆನಿ ಗ್ರಾಮದಿಂದ ಪ್ರಾರಂಭವಾಗಿ ನಿಮ್ಮನ್ನು ಸುಮಾರು ಮೂರು ಸಾವಿರ ಮೀಟರ್ ಎತ್ತರಕ್ಕೆ ಕರೆದುಕೊಂಡು ಹೋಗುತ್ತದೆ.
ಇಲ್ಲಿ ಖೀರ್ ಗಂಗಾ ಎಂಬ ನೈಸರ್ಗಿಕ ಬಿಸಿನೀರಿನ ಬಗ್ಗೆಗಳನ್ನು ಕಾಣಬಹುದು. ಮಳೆಗಾಲದ ಸಮಯದಲ್ಲಿ ಈ ಪ್ರದೇಶವು ಸ್ವರ್ಗವಾಗಿ ಮಾರ್ಪಡುತ್ತದೆ. ತೊರೆಗಳು ಸಿಹಿ ನೀರಿನಿಂದ ಉಕ್ಕಿ ಹರಿಯುತ್ತವೆ. ಜಲಪಾತಗಳು ಬೋರ್ಗರೆಯುತ್ತವೆ.
ಉತ್ತರಾಖಂಡ್‌ನ ಹರ್ ಕಿ ಡನ್: ಉತ್ತರಾಖಂಡ್‌ನ ಮತ್ತೊಂದು ಟ್ರೆಕ್ಕಿಂಗ್ ಬೆಸ್ಟ್ ಸ್ಪಾಟ್ ಎಂದರೆ ಅದು ಹರ್ ಕಿ ಡನ್ ಟ್ರೆಕ್ಕಿಂಗ್ ತಾಣ. ಈ ಪ್ರದೇಶವು ನೀಡುವ ಕೆಲವು ಅತ್ಯದ್ಭುತ ಭೂದೃಶ್ಯಗಳು ನಿಮ್ಮನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಹಚ್ಚ ಹಸಿರಿನಿಂದ ಕೂಡಿದ ಹುಲ್ಲುಗಾವಲುಗಳಿಂದ ಹಿಡಿದು ಹಿಮದಿಂದ ಆವೃತವಾದ ಶಿಖರಗಳಿವೆ.
ಟ್ರೆಕ್ಕಿಂಗ್ ಇದು ಹೇಳಿ ಮಾಡಿಸಿದ ತಾಣವಾಗಿದ್ದು, ನಿಮಗೆ ಹೊಸ ಅನುಭವ ನೀಡುತ್ತೆ. ಇಲ್ಲಿನ ಮತ್ತೊಂದು ವಿಶೇಷವೆಂದರೆ ಮಳೆಗಾಲದಲ್ಲಿ ಕಾಡು ಹೂಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಜಗತ್ತಿನ ಹಲವು ಬಗೆ. ಪಕ್ಷಿಗಳ ಧ್ವನಿ ಮತ್ತಷ್ಟು ಅದ್ಭುತಕ್ಕೆ ಕಾರಣವಾಗುತ್ತದೆ. ನಿಮ್ಮ ಪ್ರಯಾಣದಲ್ಲಿ ಸ್ವರ್ಗಾರೋಹಿಣಿ ಪರ್ವತದಂಹ ಇತರ ಶಿಖರಗಳ ಮೂಲಕ ಹಾದು ಹೋಗುತ್ತೀರಿ.
ಹಿಮಾಚಲ ಪ್ರದೇಶದ ಹಂಪ್ಟಾ ಪಾಸ್: ಹಂಪ್ಟಾ ಪಾಸ್ ಟ್ರೆಕ್ಕಿಂಗ್ ಹಿಮಾಚಲ ಪ್ರದೇಶದ ಅತ್ಯಂತ ಜನಪ್ರಿಯ ಟ್ರೆಕ್ಕಿಂಗ್‌ಗಳಲ್ಲಿ ಒಂದಾಗಿದ್ದು, ಅದ್ಭುತವಾದ ದೃಶ್ಯಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಮಳೆಗಾಲದಿಂದಾಗಿ ಇಲ್ಲಿ ಕಣಿವೆಗಳು ಫುಲ್ ಹಸಿರುಮಯವಾಗಿರುತ್ತವೆ. ಜೊತೆಗೆ ಹಿಮದಿಂದ ಆವೃತ್ತವಾದ ಮಂಜು ಅಥವಾ ದಟ್ಟವಾದ ಮೋಡಗಳಿಂದ ಬೆಟ್ಟಗಳನ್ನು ಆವರಿಸುತ್ತವೆ. ಇದು ಕೂಡ ವಿಶಿಷ್ಟ ಅನುಭವವನ್ನು ಕೊಡುತ್ತದೆ.
ವಿಭಾಗ