Baby Girl Names: ಹೆಣ್ಣುಮಗುವಿಗೆ ಇಡಬಹುದಾದ ಗಣೇಶನ ಹೆಸರುಗಳಿವು: ಸಖತ್ ಹೆಸ್ರು ಅಂತಾರೆ ಎಲ್ರೂ-lord ganesha names for indian baby girls very trendy and parents like these names rmy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Baby Girl Names: ಹೆಣ್ಣುಮಗುವಿಗೆ ಇಡಬಹುದಾದ ಗಣೇಶನ ಹೆಸರುಗಳಿವು: ಸಖತ್ ಹೆಸ್ರು ಅಂತಾರೆ ಎಲ್ರೂ

Baby Girl Names: ಹೆಣ್ಣುಮಗುವಿಗೆ ಇಡಬಹುದಾದ ಗಣೇಶನ ಹೆಸರುಗಳಿವು: ಸಖತ್ ಹೆಸ್ರು ಅಂತಾರೆ ಎಲ್ರೂ

Baby Girl Names: ಗಣೇಶ ಚತುರ್ಥಿಯ 10 ದಿನಗಳ ಸಮಯದಲ್ಲಿ ನಿಮ್ಮ ಮನೆಯಲ್ಲಿ ಮಗಳು ಜನಿಸಿದ್ರೆ ಗಣಪತಿಗೆ ಸಂಬಂಧಿಸಿದ ಈ ಹೊಸ ಹಾಗೂ ವಿಶಿಷ್ಟ ಹೆಸರುಗಳನ್ನು ನಿಮ್ಮ ಪುತ್ರಿಗೆ ಇಡಬಹುದು. ಇವುಗಳ ಅರ್ಥವೂ ಬಹಳ ವಿಶೇಷವಾಗಿದೆ.

Baby Girl Names: ಭಗವಾನ್ ಗಣಪತಿಗೆ ಸಂಬಂಧಿಸಿದ ಈ ವಿಶಿಷ್ಟ ಹೆಸರುಗಳನ್ನು ನಿಮ್ಮ ಮುದ್ದಾದ ಹೆಣ್ಣು ಮಗುವಿಗೆ ಇಡಬಹುದು.
Baby Girl Names: ಭಗವಾನ್ ಗಣಪತಿಗೆ ಸಂಬಂಧಿಸಿದ ಈ ವಿಶಿಷ್ಟ ಹೆಸರುಗಳನ್ನು ನಿಮ್ಮ ಮುದ್ದಾದ ಹೆಣ್ಣು ಮಗುವಿಗೆ ಇಡಬಹುದು. (shutterstock)

Baby Girl Names: ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮನೆಯಲ್ಲಿ ಪುಟ್ಟ ರಾಜಕುಮಾರಿ ಅಂದರೆ ಮಗಳು ಜನಿಸಿದರೆ ಪೋಷಕರಿಗೆ ಹಬ್ಬದ ಜೊತೆಗೆ ಮಗಳನ್ನು ಸ್ವಾಗತಿಸಿದ ಡಬಲ್ ಖುಷಿ ಇರುತ್ತೆ. ಇದೇ ಸಂತೋಷದ ಸಮಯದಲ್ಲಿ ಪುತ್ರಿಗೆ ಒಂದೊಳ್ಳೆಯ ಹೆಸರು ಇಡಬೇಕೆಂಬ ಆಸೆ ಇರುತ್ತದೆ. ಗಣೇಶ ಚತುರ್ಥಿಯ ಸಮಯದಲ್ಲಿ ಹುಟ್ಟಿದ ಪರಿಣಾಮ ವಿಘ್ನನಿವಾರಕನಿಗೆ ಸಂಬಂಧಿಸಿದ ಹೆಸರುಗಳನ್ನೇ ಇಡಲು ಪ್ಲಾನ್ ಮಾಡುತ್ತಾರೆ. ಇಲ್ಲಿನ ಒಂದಷ್ಟು ಟ್ರೆಂಡಿ ಹೆಸರುಗಳನ್ನು ನಿಮಗಾಗಿ ನೀಡಲಾಗಿದೆ. ಪ್ರತಿಯೊಂದು ಹೆಸರಿನ ಅರ್ಥವು ನಿಮ್ಮ ಮಗಳಿಗೆ ಅರ್ಥಪೂರ್ಣ ಮತ್ತು ತುಂಬಾ ವಿಶೇಷವಾಗಿದೆ, ಏಕೆಂದರೆ ಪ್ರತಿಯೊಂದು ಹೆಸರು ಖಂಡಿತವಾಗಿಯೂ ಗಣಪತಿಯೊಂದಿಗೆ ಸ್ವಲ್ಪ ಸಂಬಂಧವನ್ನು ಹೊಂದಿವೆ. ಆದ್ದರಿಂದ ಮನೆಯಲ್ಲಿ ಜನಿಸಿದ ರಾಜಕುಮಾರಿಗೆ ಈ ಹೆಸರುಗಳಲ್ಲಿ ಒಂದನ್ನು ಆರಿಸಿ.

ಅರ್ವಿಕಾ

ಅರ್ವಿಕಾ ಎಂಬ ಹೆಸರಿನ ಅರ್ಥ ಸಾರ್ವತ್ರಿಕ ಅಥವಾ ಶಾಶ್ವತ ಎಂಬ ಅರ್ಥವನ್ನು ಕೊಡುತ್ತದೆ.

ಶುಭಾಯಿ

ಶುಭಾಯಿ ಗಣಪತಿ ದೇವರಿಗೆ ಸಂಬಂಧಿಯಾಗಿದ್ದಾಳೆ. ಇದರ ಅರ್ಥವು ತುಂಬಾ ಮಂಗಳಕರವಾಗಿದೆ. ಗಣಪತಿಯ ಮಗನ ಹೆಸರನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಗಾಂವಿ

ಗಾಂವಿ ಎಂಬುದು ಗಣೇಶನಿಗೆ ಸಂಬಂಧಿಸಿದ ಹೆಸರು.

ಕೃತಿನಿ

ಕೃತಿನಿ ಎಂದರೆ ಕುಶಲ ಎಂದರ್ಥ. ಸಾಮರ್ಥ್ಯವಿರುವ ಹುಡುಗಿ. ಈ ಹೆಸರು ಗಣೇಶನೊಂದಿಗೆ ಸಂಪರ್ಕ ಹೊಂದಿದೆ.

ಚಿನ್ಮಯಿ

ಚಿನ್ಮಯ್ ಎಂಬುದು ಗಣೇಶನ ಹೆಸರು. ನಿಮ್ಮ ಮಗಳಿಗೆ ಚಿನ್ಮಯಿ ಎಂಬ ಹೆಸರನ್ನು ನೀವು ನೀಡಬಹುದು. ಇದರರ್ಥ ಆನಂದ.

ಸಿದ್ಧಿತಾ

ಸಿದ್ಧಿತಾ ಎಂದರೆ ಯಶಸ್ಸು. ಈ ಹೆಸರು ಗಣೇಶನ ಇಬ್ಬರು ಹೆಂಡತಿಯರಾದ ರಿದ್ಧಿ ಮತ್ತು ಸಿದ್ಧಿಗೆ ಸಂಬಂಧಿಸಿದೆ. ಗಣೇಶನಿಗೆ ಸಂಬಂಧಿಸಿದ ಟ್ರೆಂಡಿ ಹೆಸರುಗಳಲ್ಲಿ ಇದು ಕೂಡ ಒಂದು.

ಇಹಿಕಾ

ಇಹಿಕಾ ಎಂದರೆ ಬಲಶಾಲಿ ಎಂದರ್ಥ. ಈ ಹೆಸರು ಕೂಡ ಗಣೇಶನಿಗೆ ಸಂಬಂಧಿಸಿದ್ದಾಗಿದೆ.

ನಿರ್ವಿಘ್ನ

ವಿಘ್ನಹರ್ತ ಶ್ರೀ ಗಣೇಶನ ಹೆಸರಿನ ಮುಂದೆ ಬರುತ್ತೆ.

ವಿದಾಮಿ

ಮಗಳಿಗೆ ಗಣೇಶನ ಈ ಹೆಸರನ್ನು ಇಡಬಹುದು.

ರಿದ್ಧಿತಾ

ಸಿದ್ಧಿಯಂತೆ ರಿದ್ಧಿತಾ ಹೆಸರನ್ನು ಮಗಳಿಗೆ ಇಡಬಹುದು. ಇದು ಬಹಳ ವಿಶಿಷ್ಟವಾದ ಹೆಸರು. ಭಗವಾನ್ ಗಣೇಶನ ಹೆಸರಿನಿಂದ ಪ್ರೇರಿತವಾಗಿದೆ.

ಅವ್ನಿಶಾ

ಅವನಿಶಾ ಎಂಬುದು ಭಗವಾನ್ ಶಂಕರನ ಹೆಸರು, ಅದರಿಂದ ಅವ್ನಿಶಾ ಎಂಬ ಹೆಸರು ಸ್ಫೂರ್ತಿ ಪಡೆದಿದೆ. ಈ ಹೆಸರು ಭೂಮಿ ಮತ್ತು ಗಣೇಶನಿಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗಿದೆ.

mysore-dasara_Entry_Point