ಡಾರ್ಕ್‌ ಚಾಕೊಲೇಟ್‌ನಿಂದ ಕಿತ್ತಳೆಹಣ್ಣಿನವರೆಗೆ, ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿರಲು ಸಹಕರಿಸುವ ಆಹಾರ ಪದಾರ್ಥಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ಡಾರ್ಕ್‌ ಚಾಕೊಲೇಟ್‌ನಿಂದ ಕಿತ್ತಳೆಹಣ್ಣಿನವರೆಗೆ, ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿರಲು ಸಹಕರಿಸುವ ಆಹಾರ ಪದಾರ್ಥಗಳಿವು

ಡಾರ್ಕ್‌ ಚಾಕೊಲೇಟ್‌ನಿಂದ ಕಿತ್ತಳೆಹಣ್ಣಿನವರೆಗೆ, ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿರಲು ಸಹಕರಿಸುವ ಆಹಾರ ಪದಾರ್ಥಗಳಿವು

ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಜಂಜಾಟಗಳಲ್ಲಿ ಅನೇಕರು ತಮ್ಮ ಮಾನಸಿಕ ಆರೋಗ್ಯದ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿ ಪಟ್ಟಿ ಮಾಡಲಾದ ಕೆಲವು ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.

ಈ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.
ಈ ಆಹಾರ ಪದಾರ್ಥಗಳ ಸೇವನೆಯಿಂದ ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಿದೆ.

ಜೀವನ ಸಾಗಬೇಕು ಎಂದರೆ ಆರ್ಥಿಕ ಮೂಲವೊಂದು ಬೇಕೇ ಬೇಕು. ಇದಕ್ಕಾಗಿ ದುಡಿಯಲೇಬೇಕು. ಈ ಓಡುತ್ತಿರುವ ಜಗತ್ತಿನಲ್ಲಿ ವೈಯಕ್ತಿಕ ಹಾಗೂ ವೃತ್ತಿ ಜೀವನ ಇವರೆಡರ ನಡುವೆ ಸಮತೋಲನ ಸಾಧಿಸುವುದು ಹೇಗೆ ಎನ್ನುವುದೇ ಅನೇಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇವೆರಡನ್ನು ಸಮತೋಲನ ಮಾಡುವಷ್ಟರಲ್ಲಿ ಅನೇಕರು ತಮ್ಮ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಾನಸಿಕ ಆರೋಗ್ಯವು ನಮ್ಮಿಂದ ಕಡೆಗಣನೆಗೊಳ್ಳುತ್ತಿದೆ ಎಂಬುದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಆದರೆ ಆತಂಕ, ಒತ್ತಡ ಹಾಗೂ ನಿರಂತರ ದುಃಖವು ಭವಿಷ್ಯದಲ್ಲಿ ಖಿನ್ನತೆಯಂತಹ ಸಮಸ್ಯೆಗಳನ್ನು ತಂದೊಡ್ಡಬಹುದು. ಇದಾದ ಬಳಿಕ ಆಸ್ಪತ್ರೆ ಬಾಗಿಲಿಗೆ ಅಲೆದಾಟ ತಪ್ಪಿದ್ದಲ್ಲ. ಆದರೆ ನೀವು ಈ ಕೆಳಗಿನ ಆಹಾರಗಳನ್ನು ಸೇವಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಿದೆ. ಹಾಗಾದರೆ ಆ ಆಹಾರಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ:

ಸಾಲ್ಮನ್ ಮೀನು: ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಮೀನುಗಳು ಅಗ್ರಗಣ್ಯ ಸ್ಥಾನಗಳಲ್ಲೇ ಬರುತ್ತವೆ. ಅವುಗಳಲ್ಲಿ ಸಾಲ್ಮನ್ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಅಗಾಧ ಪ್ರಮಾಣದಲ್ಲಿದೆ. ಇವುಗಳು ಖಿನ್ನತೆ ಸೇರಿದಂತೆ ಅನೇಕ ಮಾನಸಿಕ ಆರೋಗ್ಯಗಳನ್ನು ಸುಧಾರಿಸುವ ಸಾಮರ್ಥ್ಯ ಹೊಂದಿರುತ್ತದೆ. ಸಾಲ್ಮನ್ ಮೀನುಗಳು ಮನುಷ್ಯನ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಕಿತ್ತಳೆ ಹಣ್ಣು: ವಿಟಮಿನ್ ಸಿ ಅಗಾಧ ಪ್ರಮಾಣದಲ್ಲಿ ಹೊಂದಿರುವ ಕಿತ್ತಳೆ ಹಣ್ಣು ತತ್ ಕ್ಷಣದಲ್ಲಿ ನಿಮ್ಮ ಮಾನಸಿಕತೆಯನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿರುತ್ತವೆ. ಇವುಗಳು ಆಂಟಿ ಆಕ್ಸಿಡಂಟ್ ಗುಣಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುತ್ತವೆ. ಇವುಗಳಲ್ಲಿ ಇರುವ ಪೋಲೇಟ್ ಹಾಗೂ ವಿಟಮಿನ್ ಬಿ ಅಂಶವು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ಬೆರ್ರಿ ಜಾತಿಯ ಹಣ್ಣುಗಳು: ಸ್ಟ್ರಾಬೆರ್ರಿ, ಬ್ಲೂಬೆರ್ರಿ, ರಸ್ಬೆರ್ರಿ ಸೇರಿದಂತೆ ಬೆರ್ರಿ ಜಾತಿಗೆ ಸೇರಿದ ಹಣ್ಣುಗಳು ಆಂಟಿ ಆಕ್ಸಿಡಂಟ್ ಗುಣಗಳನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುತ್ತವೆ. ಇವುಗಳು ನಿಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಕಾರ್ಯವನ್ನು ಮಾಡುತ್ತವೆ. ಇವುಗಳನ್ನು ನೀವು ಸ್ನ್ಯಾಕ್ಗಳ ರೂಪದಲ್ಲಿ ಅಥವಾ ಬೆಳಗ್ಗೆ ಉಪಹಾರದ ಜೊತೆಯಲ್ಲಿ ಸೇವನೆ ಮಾಡಬಹುದು.

ಸಿಹಿಗೆಣಸು: ಸಿಹಿ ಗೆಣಸಿನಲ್ಲಿ ವಿಟಮಿನ್ ಬಿ 6 ಅಗಾಧ ಪ್ರಮಾಣದಲ್ಲಿದೆ. ಇವುಗಳು ಡೊಪಮೈನ್ಗಳು ಹೆಚ್ಚೆಚ್ಚು ಉತ್ಪತ್ತಿಗೊಳ್ಳಲು ಸಹಾಯ ಮಾಡುತ್ತವೆ. ಇವುಗಳು ನಿಮ್ಮಲ್ಲಿ ಖಿನ್ನತೆ ಹಾಗೂ ಮೂಡ್ ಸ್ವಿಂಗ್‍ಗಳನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿರುತ್ತವೆ.

ಡಾರ್ಕ್ ಚಾಕಲೇಟ್‍ಗಳು: ಅತಿಯಾದ ಕೋಕೋ ಅಂಶವನ್ನು ಹೊಂದಿರುವ ಕಾರಣ ಡಾರ್ಕ್ ಚಾಕಲೇಟ್‍ಗಳನ್ನು ಆರೋಗ್ಯಕರ ಎಂದು ಪರಿಗಣಿಸಬಹುದಾಗಿದೆ. ಇವುಗಳಲ್ಲಿಯೂ ಆಂಟಿಆಕ್ಸಿಡಂಟ್ ಅಗಾಧ ಪ್ರಮಾಣದಲ್ಲಿ ಇರುತ್ತದೆ. ಇವುಗಳು ಸಹ ನಿಮ್ಮ ಮೂಡ್ ಬೂಸ್ಟರ್ ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಆದರೆ ಇವುಗಳ ಅತಿಯಾದ ಸೇವನೆ ಕೂಡ ಒಳ್ಳೆಯದಲ್ಲ.

Whats_app_banner