ಕನ್ನಡ ಸುದ್ದಿ  /  ಜೀವನಶೈಲಿ  /  Money Saving Tips: ನೀವು ಕಾಲೇಜ್‌ ಸ್ಟೂಡೆಂಟ್‌ ಆಗಿದ್ದು, ಹಣ ಉಳಿತಾಯದ ಬಗ್ಗೆ ಯೋಚಿಸ್ತಿದ್ರೆ ನಿಮಗಾಗಿ ಇಲ್ಲಿದೆ 7 ಟಿಪ್ಸ್‌

Money Saving Tips: ನೀವು ಕಾಲೇಜ್‌ ಸ್ಟೂಡೆಂಟ್‌ ಆಗಿದ್ದು, ಹಣ ಉಳಿತಾಯದ ಬಗ್ಗೆ ಯೋಚಿಸ್ತಿದ್ರೆ ನಿಮಗಾಗಿ ಇಲ್ಲಿದೆ 7 ಟಿಪ್ಸ್‌

ಕಾಲೇಜು ವಿದ್ಯಾರ್ಥಿಗಳಿಗೆ ಹಣ ಉಳಿತಾಯ ಮಾಡಬೇಕು ಎಂಬ ಆಸೆ ಇರುವುದು ಸಹಜ. ತಾವು ಉಳಿಸಿದ ಹಣವು ತಮ್ಮ ಭವಿಷ್ಯಕ್ಕೆ ನೆರವಾಗಬಹುದು ಎಂದು ಯೋಚಿಸುವವರು ಹಲವರು. ಆದರೆ ಹಣ ಉಳಿಸುವುದು ಹೇಗೆ ಎಂಬುದು ಮಾತ್ರ ತಿಳಿದಿರುವುದಿಲ್ಲ. ಅಂತಹವರಿಗಾಗಿ ಇಲ್ಲಿದೆ ಒಂದಿಷ್ಟು ಟಿಪ್ಸ್‌

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಕಾಲೇಜಿನಲ್ಲಿ ಓದುವಾಗಲೇ ಹಣ ಉಳಿತಾಯ ಬಗ್ಗೆ ಗಮನ ಹರಿಸಿದರೆ ಭವಿಷ್ಯಕ್ಕೆ ಉತ್ತಮ. ಬಜೆಟ್‌ ನಿರ್ವಹಣೆ ಎನ್ನುವುದು ಪ್ರತಿಯೊಬ್ಬರ ಬದುಕಿನ ನಿರ್ಣಾಯಕ ಹಣಕಾಸಿನ ಕೌಶಲವಾಗಿದೆ. ವಿಶೇಷವಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸೀಮಿತ ಆದಾಯದ ಮೂಲಗಳೊಂದಿಗೆ ಹಣಕಾಸು ನಿರ್ವಹಣೆ ಕಲಿಯುವುದು ಅವಶ್ಯವಾಗುತ್ತದೆ. ಕಾಲೇಜಿನ ದಿನಗಳಲ್ಲೇ ಹಣಕಾಸಿನ ಬಗ್ಗೆ ಗಮನ ಹರಿಸಿ ಲೆಕ್ಕಾಚಾರ ಕಲಿಯುವುದರಿಂದ ಹಲವು ರೀತಿಯ ಪ್ರಯೋಜನಗಳಾಗುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ಕಾಲೇಜು ವಿದ್ಯಾರ್ಥಿಗಳು ಹಣಕಾಸು ನಿರ್ವಹಣೆ ಮಾಡುವುದು ಹೇಗೆ ಇಲ್ಲಿದೆ ವಿವರ.

ಟ್ರೆಂಡಿಂಗ್​ ಸುದ್ದಿ

ಬಜೆಟ್‌ ಟ್ರ್ಯಾಕಿಂಗ್‌ ಅಪ್‌ ಅಥವಾ ಸ್ಪ್ರೆಡ್‌ಶೀಟ್‌ ಬಳಸಿ

ನಿಮ್ಮ ಇನ್‌ಕಮ್‌ ಹಾಗೂ ಖರ್ಚುಗಳನ್ನು ಟ್ರ್ಯಾಕ್‌ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಅವಶ್ಯ. ಇದು ಹಣಕಾಸಿನ ಉಳಿತಾಯದ ಮೊದಲ ಹೆಜ್ಜೆ. ಹೀಗೆ ಮಾಡುವುದರಿಂದ ನಿಮ್ಮ ಬಳಿ ಎಕ್ಸ್ಟ್ರಾ ಏನು ಖರ್ಚಾಯಿತು ಎಂಬುದು ನಿಮಗೆ ಅರಿವಾಗುತ್ತದೆ. ಅಲ್ಲದೆ ಮುಂದಿನ ತಿಂಗಳು ಖರ್ಚಿನ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತದೆ. ಅಲ್ಲದೆ ಹಣವನ್ನು ಉತ್ತಮವಾಗಿ ನಿಯೋಜಿಸುವುದು ಹೇಗೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆಸೆಗಳಿಗಿಂತ ಅಗತ್ಯಗಳ ಮೇಲೆ ಹೆಚ್ಚು ಗಮನ ಹರಿಸಿ. ನಿಮ್ಮ ಖರ್ಚು ವೆಚ್ಚದ ಮೇಲೆ ನಿಗಾ ಹರಿಸಲು ಟ್ರ್ಯಾಕಿಂಗ್‌ ಅಪ್‌ ಅಥವಾ ಸ್ಪ್ರೆಡ್‌ ಶೀಟ್‌ ಬಳಸಿ.

ಬಳಸಿದ ಅಥವಾ ಬಾಡಿಗೆ ರೂಪದಲ್ಲಿ ಸಿಗುವ ಪಠ್ಯಪುಸ್ತಕ

ಶಿಕ್ಷಣ ಎಂದ ಮೇಲೆ ಪಠ್ಯಪುಸ್ತಕ ಇರಲೇಬೇಕು. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಹೊಸ ಪುಸ್ತಕ ಕೊಳ್ಳುವ ಬದಲು ನಿನ್ನ ಸೀನಿಯರ್‌ಗಳು ಅಥವಾ ಮಳಿಗೆಗಳಲ್ಲಿ ಬಾಡಿಗೆಗೆ ಸಿಗುವ ಪಠ್ಯಪುಸ್ತಕಗಳನ್ನು ಬಳಸಿ. ಇದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತದೆ. ನಿಮ್ಮ ಕಾಲೇಜು ದಿನಗಳು ಮುಗಿದ ಮೇಲೆ ನೀವು ಖರೀದಿಸಿದ ಅರ್ಧ ದರಕ್ಕೆ ಪುಸ್ತಕಗಳನ್ನ ಮಾರಾಟ ಮಾಡಬಹುದು.

ಹೊರಗಡೆ ತಿನ್ನುವುದಕ್ಕೆ ಕಡಿವಾಣ ಹಾಕಿ

ಕಾಲೇಜು ಜೀವನದಲ್ಲಿ ಹಲವರು ಹಾಸ್ಟೆಲ್‌ನಲ್ಲಿರುತ್ತಾರೆ. ಹಾಸ್ಟೆಲ್‌ ಫುಡ್‌ ಹಿಡಿಸದ ಕಾರಣಕ್ಕೆ ಹೊರಗಡೆ ತಿನ್ನುವುದು ಸಹಜ. ಇದರಿಂದ ಸಾಕಷ್ಟು ಹಣ ಖರ್ಚಾಗುತ್ತದೆ. ಅಪರೂಪಕ್ಕೊಮ್ಮೆ ಹೊರಗಡೆ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಸಾಧ್ಯವಾದರೇ ಹಾಸ್ಟೆಲ್‌ನಲ್ಲಿ ಅವಕಾಶ ಇದ್ದರೆ ಸಣ್ಣ ಸ್ಟವ್‌ ಇರಿಸಿಕೊಂಡು ನೀವೇ ಅಡುಗೆ ಮಾಡಿ ಊಟ ಮಾಡಬಹುದು.

ಶಾಲಾ ಆವರಣಲದಲ್ಲಿ ಏನಾದ್ರೂ ಕೆಲಸ ಮಾಡಿ

ಖರ್ಚು ಕಡಿಮೆ ಮಾಡುವ ಜೊತೆ ಜೊತೆಗೆ ಸಣ್ಣ ಪುಟ್ಟ ದುಡಿಯುವ ಮಾರ್ಗವನ್ನು ಕಂಡುಕೊಳ್ಳುವುದೂ ಮುಖ್ಯವಾಗುತ್ತದೆ. ಕಾಲೇಜು ಅಥವಾ ಹಾಸ್ಟೆಲ್‌ ಸುತ್ತಮುತ್ತ ನಿಮಗೆ ಫ್ರಿ ಇರುವ ಹೊತ್ತಿನಲ್ಲಿ ಸಣ್ಣ ಕೆಲಸಕ್ಕೆ ಸೇರಿ. ಇದರಿಂದ ಬಂದ ಹಣವನ್ನು ನೀವು ಸೇಫ್‌ ಆಗಿ ಎತ್ತಿಟ್ಟುಕೊಂಡು ಉಳಿತಾಯ ಮಾಡಬಹುದು.

ವಿದ್ಯಾರ್ಥಿಗಳಿಗಾಗಿ ಇರುವ ರಿಯಾಯಿತಿ ಬಳಸಿಕೊಳ್ಳಿ

ವಿದ್ಯಾರ್ಥಿಗಳಿಗೆ ಬಸ್‌, ಹೋಟೆಲ್‌, ಪುಸ್ತಕದ ಮಳಿಗೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ರಿಯಾಯಿತಿಗಳಿರುವುದು ಸಹಜ. ಅಂತಹವುಗಳ ಸದುಪಯೋಗ ಪಡಿಸಿಕೊಳ್ಳಿ. ಇದರಿಂದ ಹಣ ಉಳಿತಾಯ ಮಾಡಬಹುದು.

ರೂಮ್‌ಮೇಟ್‌ ಜೊತೆ ಖರ್ಚು ಹಂಚಿಕೊಳ್ಳಿ

ರೆಂಟ್‌ ರೂಮ್‌ ಶೇರ್‌ ಮಾಡಿದರಷ್ಟೇ ಹಣವನ್ನು ಸಮ ಭಾಗ ಮಾಡಿಕೊಳ್ಳಬೇಕು ಎಂದೇನಿಲ್ಲ. ಪ್ರತಿ ಖರ್ಚಿನಲ್ಲೂ ನಿಮ್ಮ ಸ್ನೇಹಿತರ ಜೊತೆ ಸಮಭಾಗ ಮಾಡಿಕೊಳ್ಳಿ. ಇದು ನಿಮ್ಮಿಬ್ಬರಿಗೂ ಹಣ ಉಳಿಸುವ ಮಾರ್ಗವಾಗಿದೆ.

ವಿಭಾಗ