ಲಾವಾ ಅಗ್ನಿ 3 ವರ್ಸಸ್ ಮೋಟೊರೊಲಾ ಎಡ್ಜ್ 50 ಫ್ಯೂಷನ್: ಮಧ್ಯಮ ದರದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ?
ಲಾವಾ ಅಗ್ನಿ 3 ವರ್ಸಸ್ ಮೋಟೊರೊಲಾ ಎಡ್ಜ್ 50 ಫ್ಯೂಷನ್: ಈ ಎರಡು ಮಧ್ಯಮ ದರದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸಬೇಕೆಂದು ಗೊಂದಲವಿದೆಯೇ? ಇವೆರಡರ ಹೋಲಿಕೆ ಮತ್ತು ಹೆಚ್ಚಿನ ವಿವರ ಇಲ್ಲಿದೆ.

ಲಾವಾ ಅಗ್ನಿ 3 ವರ್ಸಸ್ ಮೋಟೊರೊಲಾ ಎಡ್ಜ್ 50 ಫ್ಯೂಷನ್: ಭಾರತದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಲಾವಾ ಇತ್ತೀಚೆಗೆ ಅಗ್ನಿ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇದರ ಡ್ಯೂಯೆಲ್ ಡಿಸ್‌ಪ್ಲೇ ಟೆಕ್ನಾಲಜಿಯಿದ ಹೆಚ್ಚು ಜನಪ್ರಿಯತೆ ಪಡೆಯಿತು. ಇಷ್ಟು ಮಾತ್ರವಲ್ಲದೆ ಆಪಲ್ ಐಫೋನ್ ರೀತಿಯ ಆಕ್ಷನ್ ಬಟನ್ ಕೂಡ ಇದರಲ್ಲಿತ್ತು. ಇದರ ಪವರ್‌ಫುಲ್ ಪ್ರೊಸೆಸರ್ ಕೂಡ ಎಲ್ಲರ ಗಮನ ಸೆಳೆದಿತ್ತು. ಇದೇ ಸಮಯದಲ್ಲಿ ಇದಕ್ಕೆ ಮಾರುಕಟ್ಟೆಯಲ್ಲಿ ಸರಿಸಾಟಿಯಾಗಬಹುದಾದ ಇನ್ನೊಂದು ಸ್ಮಾರ್ಟ್‌ಫೋನ್ ಮೊಟೊರೊಲಾ ಎಡ್ಜ್ 50 ಫ್ಯೂಷನ್. ಇದರ ವಿಶೇಷ ಲುಕ್ ಮತ್ತು ಪರ್ಫಾಮೆನ್ಸ್‌ನಿಂದ ಜನಪ್ರಿಯತೆ ಪಡೆಯುತ್ತಿದೆ. ಇವೆರಡು ಮಿಡ್ ರೇಂಜ್ ಸ್ಮಾರ್ಟ್‌ಫೋನ್‌ಗಳು. ಅಂದರೆ, ಬಜೆಟ್ ಮತ್ತು ದುಬಾರಿ ದರಗಳ ಸ್ಮಾರ್ಟ್‌ಫೋನ್‌ಗಳ ನಡುವೆ ಇವು ಬರುತ್ತವ. ಇವೆರಡರ ವ್ಯತ್ಯಾಸ ತಿಳಿಯೋಣ.
ಲಾವಾ ಅಗ್ನಿ 3 ವರ್ಸಸ್ ಮೋಟೊರೊಲಾ ಎಡ್ಜ್ 50 ಫ್ಯೂಷನ್
ವಿನ್ಯಾಸ ಮತ್ತು ಡಿಸ್‌ಪ್ಲೇ ಹೋಲಿಕೆ
ಲಾವಾ ಅಗ್ನಿ 3ಯು ವಿಶಿಷ್ಟ ವಿನ್ಯಾಸ ಹೊಂದಿದೆ. ಟ್ರಿಪಲ್ ಕ್ಯಾಮೆರಾ ಸೆಟಪ್ ಜೊತೆಗೆ 1.74-ಇಂಚಿನ ಸೆಕೆಂಡರಿ ಡಿಸ್‌ಪ್ಲೇ ಜೊತೆಗೆ ಹಲವಾರು ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇದು ನೀರು ಮತ್ತು ಧೂಳಿನ ರಕ್ಷಣೆಗಾಗಿ IP64 ರೇಟಿಂಗ್ ಪಡೆದುಕೊಂಡಿದೆ. ಮತ್ತೊಂದೆಡೆ ಮೊಟೊರೊಲಾ ಎಡ್ಜ್ 50 ಫ್ಯೂಷನ್‌ನಲ್ಲಿ ಸಿಲಿಕಾನ್ ಲೆದರ್ ಬ್ಯಾಕ್ ಇದೆ. ಇದು IP68 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದರಿಂದ ಲಾವಾಕ್ಕಿಂತ ಹೆಚ್ಚಿನ ಬಾಳ್ವಿಕೆ ಮೊಟೊರೊಲಾ ಎಡ್ಜ್‌ನಲ್ಲಿ ನಿರೀಕ್ಷಿಸಬಹುದು.
ಲಾವಾ ಅಗ್ನಿ 3 ಸ್ಮಾರ್ಟ್‌ಫೋನ್ 6.78-ಇಂಚಿನ 1.2ಕೆ ಅಮೊಲೆಡ್ ಡಿಸ್‌ಪ್ಲೇ ಜೊತೆಗೆ 120 ಹಟ್ಸ್ ರಿಫ್ರೆಶ್ ರೇಟ್ ಮತ್ತು 1.74-ಇಂಚಿನ ಸೆಕೆಂಡರಿ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 6.7-ಇಂಚಿನ ಎಫ್‌ಎಚ್‌ಡಿ+ ಅಮೊಲೆಡ್ ಡಿಸ್‌ಪ್ಲೇ ಜತೆಗೆ 144Hz ರಿಫ್ರೆಶ್ ದರವನ್ನು ಹೊಂದಿದೆ.
ಕ್ಯಾಮೆರಾ ಹೇಗಿದೆ?
ಲಾವಾ ಅಗ್ನಿ 3 ಟ್ರಿಪಲ್-ಕ್ಯಾಮೆರಾ ಸೆಟಪ್ ಹೊಂದಿದೆ, ಇದು ಒಐಎಸ್ ಜತೆಗೆ 50 ಮೆಗಾ ಫಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಫಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 8 ಮೆಗಾ ಫಿಕ್ಸೆಲ್ ಟೆಲಿಫೋಟೋ ಸೆನ್ಸಾರ್ ಹೊಂದಿದೆ.
ಮೊಟೊರೊಲಾ ಎಡ್ಜ್ 50 ಫ್ಯೂಷನ್ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಒಐಎಸ್ ಜತೆಗೆ 50 ಮೆಗಾ ಫಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಮತ್ತು 13 ಮೆಗಾ ಫಿಕ್ಸೆಲ್‌ನ ಅಲ್ಟ್ರಾವೈಡ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ ಲಾವಾ 16 ಮೆಗಾ ಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 32 ಮೆಗಾಫಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಪರ್ಫಾಮೆನ್ಸ್ ಮತ್ತು ಬ್ಯಾಟರಿ ಹೋಲಿಕೆ
ಲಾವಾ ಅಗ್ನಿ 3ಯು ಮೀಡಿಯಾ ಟೆಕ್ ಡೈಮೆನ್ಸಿಟಿ 7300ಎಕ್ಸ್ ಚಿಪ್ ಹೊಂದಿದೆ. 8 ಜಿಬಿ ರಾಮ್ ಮತ್ತು 256 ಜಿಬಿ ಸ್ಟೋರೇಜ್ ಹೊಂದಿದೆ. ಮೊಟೊರೊಲಾ ಎಡ್ಜ್ 50 ಫ್ಯೂಷನ್‌ನಲ್ಲಿ 12 ಜಿಬಿ ರಾಮ್ ಮತ್ತು ಕ್ವಾಲ್‌ಕಂ ಸ್ನ್ಯಾಪ್‌ಡ್ರಾಗನ್ 7 ಎಸ್ ಜೆನ್ 2 ಪ್ರೊಸೆಸರ್ ಇದೆ.
ಬ್ಯಾಟರಿ ಲೈಫ್ ವಿಷಯದಲ್ಲಿ ಇವೆರಡು ಸ್ಮಾರ್ಟ್‌ಫೋನ್‌ಗಳು ಒಂದೇ ರೀತಿ ಇವೆ. ಇವೆರಡು 5 ಸಾವಿರ ಎಂಎಎಚ್ ಬ್ಯಾಟರಿ ಹೊಂದಿವೆ. ಮೊಟೊರೊಲಾ 68 ವ್ಯಾಟ್‌ನ ಫಾಸ್ಟ್ ಚಾರ್ಜಿಂಗ್ ಮತ್ತು ಲಾವಾವು 66W ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.
ದರ ವ್ಯತ್ಯಾಸ
ಲಾವಾ ಅಗ್ನಿ 3ಯ 8 ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್‌ನ ಆರಂಭಿಕ ದರ 20998 ರೂಪಾಯಿ ಇದೆ. ಇದೇ ರೀತಿಯ ಸ್ಟೋರೇಜ್ ಹೊಂದಿರುವ ಮೊಟೊರೊಲಾ ಎಡ್ಜ್ 50 ಫ್ಯೂಷನ್ ಆರಂಭಿಕ ದರ 21999 ರೂಪಾಯಿ ಇದೆ.