ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ 5 ಸ್ಮಾರ್ಟ್‌ಫೋನ್‌ಗಳು: ಒನ್‌ಪ್ಲಸ್‌, ವಿವೊ, ಲಾವಾ, ಸ್ಯಾಮ್‌ಸಂಗ್‌ ಹೊಸ ಫೋನ್‌ಗಳಿಗೆ ಸುಸ್ವಾಗತ
ಕನ್ನಡ ಸುದ್ದಿ  /  ಜೀವನಶೈಲಿ  /  ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ 5 ಸ್ಮಾರ್ಟ್‌ಫೋನ್‌ಗಳು: ಒನ್‌ಪ್ಲಸ್‌, ವಿವೊ, ಲಾವಾ, ಸ್ಯಾಮ್‌ಸಂಗ್‌ ಹೊಸ ಫೋನ್‌ಗಳಿಗೆ ಸುಸ್ವಾಗತ

ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ 5 ಸ್ಮಾರ್ಟ್‌ಫೋನ್‌ಗಳು: ಒನ್‌ಪ್ಲಸ್‌, ವಿವೊ, ಲಾವಾ, ಸ್ಯಾಮ್‌ಸಂಗ್‌ ಹೊಸ ಫೋನ್‌ಗಳಿಗೆ ಸುಸ್ವಾಗತ

ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳು: ಒನ್‌ಪ್ಲಸ್‌, ವಿವೊ, ಲಾವಾ, ಸ್ಯಾಮ್‌ಸಂಗ್‌ ಸೇರಿದಂತೆ ವಿವಿಧ ಕಂಪನಿಗಳ ಹಲವು ಸ್ಮಾರ್ಟ್‌ಫೋನ್‌ಗಳು ಅಕ್ಟೋಬರ್‌ 2024ರಲ್ಲಿ ಬಿಡುಗಡೆಯಾಗಲಿವೆ. ಬಜೆಟ್‌ ಸ್ಮಾರ್ಟ್‌ಫೋನ್‌ಗಳಿಂದ ಮಧ್ಯಮ ಮತ್ತು ಪ್ರೀಮಿಯಂ ಫೋನ್‌ಗಳು ಲಾಂಚ್‌ ಆಗಲಿವೆ.

ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳು
ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳು

ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳು: ಅಕ್ಟೋಬರ್‌ ತಿಂಗಳ ಆರಂಭದಲ್ಲಿದ್ದೇವೆ. ಈ ಸಂದರ್ಭದಲ್ಲಿ ಹೊಸ ಸ್ಮಾರ್ಟ್‌ಫೋನ್‌ ಯಾವುದು ಬಿಡುಗಡೆಯಾಗಲಿದೆ ಎಂದು ಟೆಕ್‌ ಪ್ರಿಯರು ಕಾಯುತ್ತಿರಬಹುದು. ಈ ಹಬ್ಬದ ಋತುವಿನ ತಿಂಗಳಲ್ಲಿ ಹಲವು ಫೋನ್‌ಗಳು ಲಾಂಚ್‌ ಆಗುತ್ತಿವೆ. ಒನ್‌ಪ್ಲಸ್‌, ವಿವೊ, ಲಾವಾ, ಸ್ಯಾಮ್‌ಸಂಗ್‌ ಸೇರಿದಂತೆ ವಿವಿಧ ಕಂಪನಿಗಳ ಹಲವು ಸ್ಮಾರ್ಟ್‌ಫೋನ್‌ಗಳು ಅಕ್ಟೋಬರ್‌ 2024ರಲ್ಲಿ ಬಿಡುಗಡೆಯಾಗಲಿವೆ. ಇವುಗಳಲ್ಲಿ ಕೆಲವು ಸ್ಮಾರ್ಟ್‌ಫೋನ್‌ಗಳು ಬಜೆಟ್‌ ಫೋನ್‌ ಖರೀದಿಸಲು ಬಯಸುವವರಿಗೆ ಸೂಕ್ತವಾಗಿದೆ.

1. ಒನ್‌ಪ್ಲಸ್‌ 13

ಈ ಅಕ್ಟೋಬರ್‌ನಲ್ಲಿ ಒನ್‌ಪ್ಲಸ್‌ 13 ಚೀನಾದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಸ್ನ್ಯಾಪ್‌ಡ್ರಾಗನ್‌ 8 ಜೆನ್‌ 4 ಪ್ರೊಸೆಸರ್‌ ಇರಲಿದೆ. 6 ಸಾವಿರ ಎಂಎಎಚ್‌ ಬ್ಯಾಟರಿ ಪ್ಯಾಕ್‌ ಇರಲಿದೆ. 100 ವಾಲ್ಟೇಜ್‌ ಫಾಸ್ಟ್‌ ಚಾರ್ಜಿಂಗ್‌ ಇರಲಿದೆ.

2. ಐಕ್ಯು00 13

ವಿವೋ ಕಂಪನಿಯ ಉಪ ಬ್ರ್ಯಾಂಡ್‌ iQOO ಈ ತಿಂಗಳು iQOO 13 ಎಂಬ ಸ್ಮಾರ್ಟ್‌ಫೋನ್‌ ಪರಿಚಯಿಸಲಿದೆ ಎಂದು ವರದಿಗಳು ಹೇಳಿವೆ. ಇದು ಒನ್‌ಪ್ಲಸ್‌ 13ನಂತೆಯೇ ಇದು ಕೂಡ ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್‌ 8 ಜೆನ್‌ 4 ಪ್ರೊಸೆಸರ್‌ ಹೊಂದಿರಲಿದೆ. ಇದು 16 ಜಿಬಿ ರಾಮ್‌ ಮತ್ತು 512 ಜಿಬಿ ಸ್ಟೋರೇಜ್‌ ಹೊಂದಿರಲಿದೆ. ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕ ಖಚಿತವಾಗಿಲ್ಲ.

3. ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಎಸ್‌24 ಎಫ್‌ಇ

ಸ್ಯಾಮ್‌ಸಂಗ್‌ ಕಂಪನಿಯು ಈ ತಿಂಗಳು ಫ್ಯಾನ್‌ ಎಡಿಷನ್‌ ಗ್ಯಾಲಾಕ್ಸಿ ಎಸ್‌24 ಎಫ್‌ಇ ಬಿಡುಗಡೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಈ ಫೋನ್‌ ನಾಳೆ ಅಂದರೆ ಅಕ್ಟೋಬರ್‌ 3ರಂದು ಭಾರತದಲ್ಲಿ ಮಾರಾಟವಾಗಲಿದೆ. ಇದು Samsung Exynos 2400e ಚಿಪ್‌ಸೆಟ್‌ ಹೊಂದಿರಲಿದೆ. 4,700 ಎಂಎಎಚ್‌ ಬ್ಯಾಟರಿ ಹೊಂದಿರಲಿದೆ. 8 ಜಿಬಿ ರಾಮ್‌ ಮತ್ತು 512 ಜಿಬಿ ಸ್ಟೋರೇಜ್‌ ಹೊಂದಿರಲಿದೆ.

4. ಲಾವಾ ಅಗ್ನಿ 3

ಅಕ್ಟೋಬರ್‌ 4ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಲಾವಾ ಸ್ಮಾರ್ಟ್‌ಫೋನ್‌ 6.78 ಇಂಚಿನ ಎಫ್‌ಎಚ್‌ಡಿ ಪ್ಲಸ್‌ ಅಮೊಲೆಡ್‌ ಪ್ಯಾನೆಲ್‌ ಹೊಂದಿರುವ ಸೂಚನೆ ಇದೆ. ವರದಿಗಳ ಪ್ರಕಾರ, ಇದು 120ಎಚ್‌ಝಡ್‌ ರಿಪ್ರೆಶ್‌ ದರ ಹೊಂದಿರಲಿದೆ. ಮೀಡಿಯಾಟೆಕ್‌ ಡೈಮೆನ್ಸಿಟಿ 7300 ಎಸ್‌ಒಸಿ ಹೊಂದಿರಲಿದೆ. ಮೊಟೊರೊಲಾ ಎಡ್ಜ್‌ 50 ನಿಯೋ ಮತ್ತು ನಥಿಂಗ್‌ ಸಿಎಂಎಫ್‌ ಫೋನ್‌ 1ರನಲ್ಲೂ ಇದೆ ಮೀಡಿಯಾಟೆಕ್‌ ಟೆಕ್ನಾಲಜಿ ಇದೆ. ಮೇನ್‌ ಕ್ಯಾಮೆರಾವು 64 ಮೆಗಾ ಫಿಕ್ಸೆಲ್‌ ಇರುವ ನಿರೀಕ್ಷೆಯಿದೆ. ಇದರೊಂದಿಗೆ 8 ಮೆಗಾ ಫಿಕ್ಸೆಲ್‌ನ ಅಲ್ಟ್ರಾವೈಡ್‌ ಮತ್ತು 2ಎಂಪಿ ಡೆಪ್ತ್‌ ಸೆನ್ಸಾರ್‌ ಕೂಡ ಇರಲಿದೆ ಎಂದು ವರದಿಗಳು ತಿಳಿಸಿವೆ.

5. ಇನ್ಫಿನಿಕ್ಸ್‌ ಝೀರೋ ಫ್ಲಿಪ್‌

ಇನ್ಪಿನಿಕ್ಸ್‌ ಝೀರೋ ಫ್ಲಿಪ್‌ ಈಗಾಗಲೇ ಕೆಲವು ದೇಶಗಳಲ್ಲಿ ಬಿಡುಗಡೆಯಾಗಲಿದೆ. ವರದಿಗಳ ಪ್ರಕಾರ ಈ ಸ್ಮಾರ್ಟ್‌ಫೋನ್‌ ಅಕ್ಟೋಬರ್‌ನಲ್ಲಿ ಭಾರತದಲ್ಲೂ ಬಿಡುಗಡೆಯಾಗಲಿದೆ. ಇದು 6.9 ಇಂಚಿನ ಎಲ್‌ಟಿಪಿಒ ಅಮೊಲೆಡ್‌ ಡಿಸ್‌ಪ್ಲೇ ಹೊಂದಿರಲಿದ್ದು, 120 ಎಚ್‌ಝಡ್‌ ರಿಪ್ರೆಶ್‌ ದರ ಹೊಂದಿರಲಿದೆ. ಇದು 3.64 ಇಂಚಿನ ಅಮೊಲೆಡ್‌ ಪ್ಯಾನೆಲ್‌ ಹೊಂದಿರಲಿದ್ದು, 1056 x 1066 ಫಿಕ್ಸೆಲ್‌ ರೆಸಲ್ಯೂಷನ್‌ ಹೊಂದಿರಲಿದೆ. 50 ಮೆಗಾಫಿಕ್ಸೆಲ್‌ನ ಪ್ರೈಮರಿ ಕ್ಯಾಮೆರಾ, 50 ಮೆಗಾ ಫಿಕ್ಸೆಲ್‌ನ ಆಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಇರಲಿದೆ. ಮುಂಭಾಗದಲ್ಲಿ 32 ಮೆಗಾ ಫಿಕ್ಸೆಲ್‌ ಕ್ಯಾಮೆರಾ ಇರಲಿದೆ.

Whats_app_banner