ಏರ್‌ಟೆಲ್ ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್: ಇಂದಿನಿಂದ ಯಾವುದೇ ಸ್ಪ್ಯಾಮ್ ಕರೆ ಬಂದರೆ ಸುಲಭವಾಗಿ ತಿಳಿಯುತ್ತೆ
ಕನ್ನಡ ಸುದ್ದಿ  /  ಜೀವನಶೈಲಿ  /  ಏರ್‌ಟೆಲ್ ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್: ಇಂದಿನಿಂದ ಯಾವುದೇ ಸ್ಪ್ಯಾಮ್ ಕರೆ ಬಂದರೆ ಸುಲಭವಾಗಿ ತಿಳಿಯುತ್ತೆ

ಏರ್‌ಟೆಲ್ ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್: ಇಂದಿನಿಂದ ಯಾವುದೇ ಸ್ಪ್ಯಾಮ್ ಕರೆ ಬಂದರೆ ಸುಲಭವಾಗಿ ತಿಳಿಯುತ್ತೆ

ಇದೀಗ ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಕೃತಕ ಬುದ್ಧಿಮತ್ತೆ(ಎಐ) ಆಧಾರಿತ ಸಾಧನವನ್ನು ತಂದಿದೆ. ಭಾರತದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಸ್ಪ್ಯಾಮ್ ಪತ್ತೆ ಸೇವೆಯನ್ನು ಬುಧವಾರ ಪ್ರಾರಂಭಿಸಲಾಗಿದೆ. ಮತ್ತು ಗುರುವಾರದಿಂದ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. (ಬರಹ:ವಿನಯ್ ಭಟ್)

ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಧನವನ್ನು ತಂದಿದೆ.
ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸಾಧನವನ್ನು ತಂದಿದೆ. (PTI)

ಇತ್ತೀಚಿನ ದಿನಗಳಲ್ಲಿ ಅನೇಕ ಮೊಬೈಲ್ ಬಳಕೆದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳು ಒಂದು. ಪ್ರತಿದಿನ ಹಲವಾರು ಸ್ಪ್ಯಾಮ್ ಕರೆಗಳು ವಿವಿಧ ಹೆಸರುಗಳೊಂದಿಗೆ ಬರುತ್ತಿವೆ. ಅದರಲ್ಲೂ ಸಾಲ, ಆಫರ್​ಗಳ ಹೆಸರಿನಲ್ಲಿ ಜನರನ್ನು ವಂಚಿಸುವ ಹುಸಿ ಕರೆಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯನ್ನು ಪರಿಶೀಲಿಸಲು ಅನೇಕ ಜನರು ಬಳಸುವ ಅಪ್ಲಿಕೇಶನ್ ಟ್ರೂ ಕಾಲರ್ ಆಗಿದೆ. ಹೆಚ್ಚಿನ ಜನರು ಟ್ರೂ ಕಾಲರ್ ಮೂಲಕ ಇನ್ನೊಂದು ಕಡೆಯಿಂದ ಯಾರು ಕರೆ ಮಾಡುತ್ತಿದ್ದಾರೆಂದು ತಿಳಿಯುತ್ತಾರೆ.

ಆದರೆ ಇದೀಗ ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಕೃತಕ ಬುದ್ಧಿಮತ್ತೆ(AI) ಆಧಾರಿತ ಸಾಧನವನ್ನು ತಂದಿದೆ. ಭಾರತದ ಮೊದಲ ಕೃತಕ ಬುದ್ಧಿಮತ್ತೆ ಆಧಾರಿತ ಸ್ಪ್ಯಾಮ್ ಪತ್ತೆ ಸೇವೆಯನ್ನು ಬುಧವಾರ ಪ್ರಾರಂಭಿಸಲಾಗಿದ್ದು,ಗುರುವಾರದಿಂದ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಟ್ರೂಕಾಲರ್‌ಗೆ ಪೈಪೋಟಿ ನೀಡಲು ಏರ್‌ಟೆಲ್ ಈ ಹೊಸ ಸೇವೆಗಳನ್ನು ತಂದಿದೆ ಎಂಬುದು ಸ್ಪಷ್ಟವಾಗಿದೆ.

ಈ ಉಪಕರಣದ ಸಹಾಯದಿಂದ ಗ್ರಾಹಕರಿಗೆ ರಿಯಲ್ ಟೈಮ್​ನಲ್ಲಿಯೇ ಸ್ಪ್ಯಾಮ್ ಕರೆಗಳು ಮತ್ತು ಎಸ್​ಎಮ್​ಎಸ್​ ಬಗ್ಗೆ ಎಚ್ಚರಿಕೆ ಪಡೆಯುತ್ತಾರೆ. ಬಳಕೆದಾರರು ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದೆಯೇ ಎಲ್ಲಾ ಏರ್‌ಟೆಲ್ ಗ್ರಾಹಕರಿಗೆ ಈ ಸೇವೆಯನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಲಾಗುತ್ತದೆ.

ಸ್ಪ್ಯಾಮ್ ಕರೆಗಳಿಂದ ಉಂಟಾಗುವ ವಂಚನೆಯನ್ನು ತಡೆಯಲು ಈ ಉಪಕರಣವನ್ನು ಬಳಸಲಾಗುವುದು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಗೋಪಾಲ್ ವಿಟ್ಟಲ್ ಹೇಳಿದ್ದಾರೆ. ಉಪಕರಣವನ್ನು ಒಂದು ವರ್ಷದವರೆಗೆ ಪರೀಕ್ಷಿಸಲಾಗಿದೆ ಮತ್ತು ಪ್ರತಿದಿನ 100 ಮಿಲಿಯನ್ ಸ್ಪ್ಯಾಮ್ ಕರೆಗಳು ಮತ್ತು 3 ಮಿಲಿಯನ್ ಸ್ಪ್ಯಾಮ್ ಎಸ್ಎಂಎಸ್ ಅನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಹಾಗೆಯೆ ಈಗಾಗಲೇ 2 ಮಿಲಿಯನ್ ಸ್ಪ್ಯಾಮರ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದರು.

ಏರ್​ಟೆಲ್ ತಂದಿರುವ ಈ ಹೊಸ ಟೂಲ್​ನಲ್ಲಿ ಡ್ಯುಯಲ್ ಲೇಯರ್ ಪ್ರೊಟೆಕ್ಷನ್ ನೀಡಲಾಗಿದೆ. ಒಂದು ನೆಟ್‌ವರ್ಕ್ ಲೇಯರ್‌ನಲ್ಲಿದೆ ಮತ್ತು ಇನ್ನೊಂದು ಐಟಿ ಸಿಸ್ಟಮ್ಸ್ ಲೇಯರ್‌ನಲ್ಲಿದೆ. ಪ್ರತಿ ಕರೆ, ಎಸ್​ಎಮ್​ಎಸ್ ಈ ಡ್ಯುಯಲ್ ಲೇಯರ್ಡ್ ಅಲ್ ಶೀಲ್ಡ್ ಮೂಲಕ ಹೋಗುತ್ತದೆ. ಇದು ಪ್ರತಿದಿನ 1.5 ಬಿಲಿಯನ್ ಸಂದೇಶಗಳನ್ನು ಮತ್ತು 2.5 ಬಿಲಿಯನ್ ಕರೆಗಳನ್ನು ಪ್ರಕ್ರಿಯೆಗೊಳಿಸುತ್ತದೆ.

ಎಸ್​ಎಮ್​ಎಸ್ ಮೂಲಕ ಕಳುಹಿಸಲಾದ ದುರುದ್ದೇಶಪೂರಿತ ಲಿಂಕ್‌ಗಳ ಬಗ್ಗೆ ಸಾಫ್ಟ್‌ವೇರ್ ಬಳಕೆದಾರರನ್ನು ಎಚ್ಚರಿಸುತ್ತದೆ. ಇದಕ್ಕಾಗಿ, ಬ್ಲಾಕ್ ಲಿಸ್ಟ್ ಮಾಡಲಾದ URL ಗಳನ್ನು ಪ್ರತಿ ಎಸ್​ಎಮ್​ಎಸ್ ಕೇಂದ್ರೀಕೃತ ಡೇಟಾಬೇಸ್ ಮೂಲಕ ನೈಜ-ಸಮಯದ ಆಧಾರದ ಮೇಲೆ ಸ್ಕ್ಯಾನ್ ಮಾಡಲಾಗುತ್ತದೆ.

Whats_app_banner