ಗೂಗಲ್‌ ಫಿಕ್ಸೆಲ್‌ ಸೆಕ್ಯುರಿಟಿ ಅಲರ್ಟ್‌, ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ ಹೊಂದಿದ್ರೆ ಹ್ಯಾಕ್‌, ಡೇಟಾ ಲಾಸ್‌ ಆಗೋದನ್ನು ತಪ್ಪಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಗೂಗಲ್‌ ಫಿಕ್ಸೆಲ್‌ ಸೆಕ್ಯುರಿಟಿ ಅಲರ್ಟ್‌, ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ ಹೊಂದಿದ್ರೆ ಹ್ಯಾಕ್‌, ಡೇಟಾ ಲಾಸ್‌ ಆಗೋದನ್ನು ತಪ್ಪಿಸಿ

ಗೂಗಲ್‌ ಫಿಕ್ಸೆಲ್‌ ಸೆಕ್ಯುರಿಟಿ ಅಲರ್ಟ್‌, ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ ಹೊಂದಿದ್ರೆ ಹ್ಯಾಕ್‌, ಡೇಟಾ ಲಾಸ್‌ ಆಗೋದನ್ನು ತಪ್ಪಿಸಿ

ನೀವು ಗೂಗಲ್‌ ಫಿಕ್ಸೆಲ್‌ ಬಳಕೆದಾರರಾಗಿದ್ದರೆ ತಕ್ಷಣ ಸೆಪ್ಟೆಂಬರ್‌ 2024ರ ಆಂಡ್ರಾಯ್ಡ್‌ ಅಪ್‌ಡೇಟ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಮೊಬೈಲ್‌ ಅಪ್‌ಡೇಟ್‌ ಮಾಡಿಕೊಳ್ಳಿ. ಈ ಮೂಲಕ ಸಂಭಾವ್ಯ ಭದ್ರತಾ ಅಪಾಯಗಳನ್ನು ತಪ್ಪಿಸಿಕೊಳ್ಳಬಹುದು.

ಗೂಗಲ್‌ ಫಿಕ್ಸೆಲ್‌ ಸಾಫ್ಟ್‌ವೇರ್‌ ಅಪ್‌ಡೇಟ್‌
ಗೂಗಲ್‌ ಫಿಕ್ಸೆಲ್‌ ಸಾಫ್ಟ್‌ವೇರ್‌ ಅಪ್‌ಡೇಟ್‌ (Aishwarya Panda/HT Tech)

ಬೆಂಗಳೂರು: ಗೂಗಲ್‌ ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳುವ ಸಮಯ ಬಂದಿದೆ. ಈ ಮೂಲಕ ಸಂಭಾವ್ಯ ಹ್ಯಾಕ್‌ಗಳನ್ನು ಮತ್ತು ವೈಯಕ್ತಿಕ ಡೇಟಾ ನಷ್ಟದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಇದಕ್ಕಾಗಿ ನೀವು ಗೂಗಲ್‌ ಬಿಡುಗಡೆ ಮಾಡಿರುವ ಇತ್ತೀಚಿನ ಸಾಫ್ಟ್‌ವೇರ್‌ ಫಿಕ್ಸ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕಿದೆ. ಗೂಗಲ್‌ ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ನಲ್ಲಿ 2017ರಿಂದ ಕೆಲವು ಭದ್ರತಾ ದೋಷಗಳು ಇವೆ. ಸಿಸ್ಟಂ ಅಪ್ಲಿಕೇಷನ್‌ ರೂಪದಲ್ಲಿರುವ ಈ ದೋಷಗಳಿಂದ ಪಾರಾಗಲು ನೀವು ಇದೀಗ ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳಬಹುದು.

ಸಾಫ್ಟ್‌ವೇರ್‌ ಅಪ್‌ಡೇಟ್‌ ಮಾಡಿಕೊಳ್ಳಿ

ಆಂಡ್ರಾಯ್ಡ್‌ 14 ಸೆಪ್ಟೆಂಬರ್‌ 2024 ಅಪ್‌ಡೇಟ್‌ ರಿಲೀಸ್‌ ಮಾಡಿರುವುದಾಗಿ ಗೂಗಲ್‌ ತಿಳಿಸಿದೆ. ಗೂಗಲ್‌ ಫಿಕ್ಸೆಲ್‌ ಫೋನ್‌ಗಳಲ್ಲಿರುವ ತೊಂದರೆ ಬಗೆಹರಿಸಲು ಈ ಅಪ್‌ಡೇಟ್‌ ಸಹಕಾರಿಯಾಗಲಿದೆ. ಈ ಮೂಲಕ ಸಂಭಾವ್ಯ ಹ್ಯಾಕಿಂಗ್‌ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಮಾತ್ರವಲ್ಲದೆ ಭದ್ರತಾ ದೋಷಗಳಿಂದ ಡೇಟಾ ಕಳೆದುಕೊಳ್ಳುವ ಅಪಾಯದಿಂದಲೂ ಪಾರಾಗಬಹುದು. ಸೆಪ್ಟೆಂಬರ್‌ 2024ರ ಅಪ್‌ಡೇಟ್‌ನಲ್ಲಿ ಗೂಗಲ್‌ ಇನ್ನೂ ಹಲವು ಅಪ್‌ಗ್ರೇಡ್‌ಗಳನ್ನು, ಭದ್ರತಾ ಸೌಕರ್ಯಗಳನ್ನು ಒದಗಿಸಿದೆ.

ಗಮನಿಸಿ, ಈ ಅಪ್‌ಡೇಟ್‌ಗೆ ಸೂಕ್ತವಾಗುವ ಸಾಧನಗಳಿಗೆ ಮಾತ್ರ ನೂತನ ರಿಲೀಸ್‌ ಅನ್ನು ಇನ್‌ಸ್ಟಾಲ್‌ ಮಾಡಿ. ಯಾವೆಲ್ಲ ಸಾಧನಗಳಿಗೆ ಈ ಅಪ್‌ಡೇಟ್‌ ಹೊಂದಾಣಿಕೆಯಾಗುತ್ತದೆ ಎಂದು ತಿಳಿದುಕೊಳ್ಳೋಣ. ಗೂಗಲ್‌ ಕಂಪನಿಯು ಎಲ್ಲಾ ಡಿವೈಸ್‌ಗಳಿಗೂ ಹಂತಹಂತವಾಗಿ ಈ ಸಾಫ್ಟ್‌ವೇರ್‌ ಅಪ್‌ಡೇಟ್‌ ರಿಲೀಸ್‌ ಮಾಡಲಿದೆ. ನಿಮ್ಮ ಫಿಕ್ಸೆಲ್‌ ಫೋನ್‌ನಲ್ಲಿಅಪ್‌ಡೇಟ್‌ ಇರುವುದೇ ಎಂದು ತಿಳಿಯಲು ಸೆಟ್ಟಿಂಗ್ಸ್‌> ಸಿಸ್ಟಮ್‌> ಸಾಫ್ಟ್‌ವೇರ್‌ ಅಪ್‌ಡೇಟ್‌ಗೆ ಹೋಗಿ.

ಯಾವೆಲ್ಲ ಫಿಕ್ಸೆಲ್‌ ಫೋನ್‌ಗಳಿಗೆ ಅಪ್‌ಡೇಟ್‌ ಮಾಡಿಕೊಳ್ಳಬಹುದು?

ಪಿಕ್ಸೆಲ್ 6

ಪಿಕ್ಸೆಲ್ 6 ಪ್ರೊ

ಪಿಕ್ಸೆಲ್ 6ಎ

ಪಿಕ್ಸೆಲ್ 7

ಪಿಕ್ಸೆಲ್ 7 ಪ್ರೊ

ಪಿಕ್ಸೆಲ್ 7a

ಪಿಕ್ಸೆಲ್ ಟ್ಯಾಬ್ಲೆಟ್

ಪಿಕ್ಸೆಲ್ ಫೋಲ್ಡ್

ಪಿಕ್ಸೆಲ್ 8

ಪಿಕ್ಸೆಲ್ 8 ಪ್ರೊ

ಪಿಕ್ಸೆಲ್ 8ಎ

ಪಿಕ್ಸೆಲ್ 9

ಪಿಕ್ಸೆಲ್ 9 ಪ್ರೊ

ಪಿಕ್ಸೆಲ್ 9 ಪ್ರೊ ಎಕ್ಸ್‌ಎಲ್‌

ಪಿಕ್ಸೆಲ್ 9 ಪ್ರೊ ಫೋಲ್ಡ್

ಪಿಕ್ಸೆಲ್ 6

ಗೂಗಲ್‌ ಫಿಕ್ಸೆಲ್‌ ಬಗ್ಗೆ

ಗೂಗಲ್‌ ಫಿಕ್ಸೆಲ್‌ ಎನ್ನುವುದು ಗೂಗಲ್‌ ಕಂಪನಿಯ ಸ್ಮಾರ್ಟ್‌ಫೋನ್‌. ಇತ್ತೀಚಿನ ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳು ಅಡ್ವಾನ್ಸಡ್‌ ಎಐ ಫೀಚರ್‌ಗಳನ್ನು ಹೊಂದಿದೆ. ಇದರಿಂದ ಸುಂದರವಾದ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ತಯಾರಿಸಿಕೊಳ್ಳಬಹುದು. ಫಿಕ್ಸೆಲ್‌ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಕೂಡ ಸಾಕಷ್ಟು ಬಳಕೆದಾರರಿಗೆ ಇಷ್ಟವಾಗಿದೆ. ಗೂಗಲ್‌ ಕಂಪನಿಯ ಪ್ರಾಡಕ್ಟ್‌ಗಳನ್ನು ಬಳಸುವವರಿಗೆ ಇದು ಸೂಕ್ತವಾಗಿದೆ. ಫಿಕ್ಸೆಲ್‌ 9 ಪ್ರೊ ಫೋಲ್ಡ್‌, ಫಿಕ್ಸೆಲ್‌ 9 ಪ್ರೊ, ಫಿಕ್ಸೆಲ್‌ 9 ಸೇರಿದಂತೆ ಹಲವು ಫಿಕ್ಸೆಲ್‌ ಫೋನ್‌ಗಳು ಜನಪ್ರಿಯತೆ ಪಡೆದಿವೆ.

Whats_app_banner