ಕನ್ನಡ ಸುದ್ದಿ  /  ಜೀವನಶೈಲಿ  /  ಸೃಷ್ಟಿಗೆ ಸವಾಲೊಡ್ಡುವಂತಿದೆ ನೆಕ್ಸ್ಟ್‌ ಟೋಕನ್‌ ಪ್ರಿಡಿಕ್ಷನ್‌ನ ಲೆಕ್ಕಾಚಾರ; ಇದೊಂಥರಾ ಮಾಯಾಶಕ್ತಿಯೇ ಸರಿ; ವೈಎನ್‌ ಮಧು ಬರಹ

ಸೃಷ್ಟಿಗೆ ಸವಾಲೊಡ್ಡುವಂತಿದೆ ನೆಕ್ಸ್ಟ್‌ ಟೋಕನ್‌ ಪ್ರಿಡಿಕ್ಷನ್‌ನ ಲೆಕ್ಕಾಚಾರ; ಇದೊಂಥರಾ ಮಾಯಾಶಕ್ತಿಯೇ ಸರಿ; ವೈಎನ್‌ ಮಧು ಬರಹ

ನೆಕ್ಸ್ಟ್‌ ಟೋಕನ್‌ ಪ್ರಿಡಿಕ್ಷನ್‌, ಕೇವಲ ನಮ್ಮ ಹಿಂದೆಲ್ಲದರ ನಡೆನುಡಿಗಳನ್ನು ಅವಲೋಕಿಸಿ ಮುಂದಿನ ನಡೆನುಡಿಯನ್ನು ಊಹಿಸುವ ಸರಳ ಸ್ಯಾಟಿಸ್ಟಿಕಲ್‌ ಅಲ್ಗೋರಿತಂ ಅಲ್ಲಾ, ಮನುಷ್ಯನ ಅಂತರಂಗವನ್ನೇ ಹಲಸಿನ ಹಣ್ಣು ಸುಲಿದಂತೆ ತೋಳೆ ಬಿಡಿಸಿದಂತೆ... ಆ‌ ಮೂಲಕ ಹೊಸ ಹಣ್ಣನ್ನೇ ಮರು ಸೃಷ್ಟಿಸುವಷ್ಟು... 'ಹೊಸ ಮನುಷ್ಯನನ್ನು' ಸೃಷ್ಟಿಸುವ ಮಾಯಾಶಕ್ತಿಯೂ ಆಗಬಹುದಾಗಿದೆ!

ವೈಎನ್‌ ಮಧು (ಬಲಚಿತ್ರ)
ವೈಎನ್‌ ಮಧು (ಬಲಚಿತ್ರ)

ಕೆಲವೊಮ್ಮೆ ವಿಜ್ಞಾನ, ತಂತ್ರಜ್ಞಾನಗಳು ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುವುದು ಸುಳ್ಳಲ್ಲ. ತಂತ್ರಜ್ಞಾನದ ಲೆಕ್ಕಾಚಾರಗಳು ಸೃಷ್ಟಿಯ ಇರುವಿನ ಬಗ್ಗೆಯೇ ನಮ್ಮಲ್ಲಿ ಪ್ರಶ್ನೆ ಮೂಡುವಂತೆ ಮಾಡುತ್ತವೆ. ಇದೀಗ ನೆಕ್ಸ್ಟ್‌ ಟೋಕನ್‌ ಪ್ರಿಡಿಕ್ಷನ್‌ ಎನ್ನುವುದು ಹಾಗೆಯೇ ಇದೆ. ಇದರ ಲೆಕ್ಕಾಚಾರವನ್ನು ತಿಳಿದಾಗ ಇದೊಂಥರಾ ಮಾಯಾಶಕ್ತಿ ಎನ್ನಿಸುವುದು ಸುಳ್ಳಲ್ಲ. ಈ ಬಗ್ಗೆ ವೈಎನ್‌ ಮಧು ಅವರು ವಿಸ್ತಾರವಾಗಿ ಬರೆದಿದ್ದಾರೆ. ಅವರ ಅಭಿಪ್ರಾಯವನ್ನು ಅವರ ಬರಹದಲ್ಲೇ ಓದಿ.

ಟ್ರೆಂಡಿಂಗ್​ ಸುದ್ದಿ

ವೈಎನ್‌ ಮಧು ಬರಹ

Next token prediction,

ಭೌತಶಾಸ್ತ್ರದಲ್ಲಿ E=mc2 ಸೂತ್ರಕ್ಕೆ ದೈವಿಕ ಸ್ಥಾನವಿದೆ. ಕಾರಣ ಅನೇಕ. ಆ ಸೂತ್ರ ಸತ್ಯವೂ ಹೌದು, ಸುಳ್ಳೂ(ಊಹಾಪೋಹ) ಹೌದು. ಸೃಷ್ಟಿಗೆ ಯಾರು ಕಾರಣರು ಎಂದು ಉತ್ತರ ಹುಡುಕುತ್ತ ಜೋಳಿಗೆ ಕಟ್ಟಿ ಹೊರಟಾಗ ದಾರಿಯಲ್ಲಿ ಎದುರಾಗುವ ಸಂತ ಈ ಸೂತ್ರ.

ಕಲ್ಪನೆಗೆ ನಿಲುಕದ, ಗಣಿತದ ಮೂಲಕ ತನ್ನ ಇರುವನ್ನು ಒತ್ತುಪಡಿಸುವ ಅಥವಾ ಹೇರುವ ಸೂತ್ರ.

ಎಐ (ಅರ್ಟಿಫಿಶಿಯಲ್ ಇಂಟಲಿಜೆನ್ಸ್) ಬಂದಾಗಿಂದ ಇದೇ ಬಗೆಯ, ತಂತ್ರಜ್ಞಾನಿಗಳನ್ನು ತತ್ವಜ್ಞಾನಿಗಳನ್ನಾಗಿಸುತ್ತಿರುವ ಹೊಸತೊಂದು ಸೂತ್ರ ಹುಟ್ಟಿಕೊಂಡಿದೆ.‌ next token prediction ಎಂದು ಹೆಸರು. ಇದು ಈಗಾಗಲೇ ಬಳಕೆಯಲ್ಲಿದೆ... ಥೇಟ್ e=mc2 ನಂತೆ. ಆದರೆ ಯಾಕಿದೆ ಹೇಗೆ ವರ್ತಿಸುತ್ತಿದೆ ಯಾಕೆ‌ ಹಾಗೆ ವರ್ತಿಸುತ್ತಿದೆ... ಪ್ರಶ್ನೆಗಳು! ಅದರಂತೆ ಇದೂ ಸಹ ಮಾನವನ ಉಗಮದ ಬಗ್ಗೆ ಇಲ್ಲಿತನಕದ ಅವನ ಅಲೋಚನೆಯ, ಪ್ರಗತಿಯ ಡೈನಮಿಕ್ಸ್ ಬಗ್ಗೆ ನಮಗಿದ್ದ ಅರಿವಿಗೆ ಚಾಲೆಂಜ್ ಎಸೆಯುತ್ತಿದೆ.

ಸರಳವಾಗಿ... ನೀವು ಗೂಗಲ್ ಮ್ಯಾಪ್‌ ಬಳಸಿದ್ದರೆ, ಮುಂದೆ ಟ್ರಾಫಿಕ್ ಎಷ್ಟಿದೆಯೆಂದು ಮ್ಯಾಪ್ ಮೂಲಕ ತಿಳಿದುಕೊಂಡಿದ್ದರೆ, ನೀವು ಏನೇ ತಿಪ್ಪರಲಾಗ ಹಾಕಿದರೂ ಮ್ಯಾಪ್ ಹೇಳಿದ ಸತ್ಯಕ್ಕಿಂತ ಐದು ನಿಮಿಷ ಆಚೀಚೆ ವೇಗ ಸಾಧಿಸಲಾರಿರಿ ಎಂಬುದು ಅನುಭವಕ್ಕೆ ಬಂದಿದ್ದರೆ.... ಇದರ ಅರ್ಥ ಮತ್ತು ವ್ಯಾಪ್ತಿ ಸರಳವಾಗಿ ಗ್ರಹಿಕೆಗೆ ನಿಲುಕುತ್ತದೆ.

ಇಲ್ಲಿ ಗೂಗಲ್ ಮ್ಯಾಪ್ next token prediction ಬಳಸ್ತಿದೆ ಎಂದು ಹೇಳ್ತಿಲ್ಲ. ವಿಷಯ ಅರ್ಥೈಸಲು ರೂಪಕವಾಗಿ ಬಳಸ್ತಿದೇನೆ.

ಈ ಮ್ಯಾಪ್‌ಗೆ ಯಾವ ದೈವಿಕ ಶಕ್ತಿ ಹೇಳ್ತು,‌ ಮುಂದಿನ ಅರ್ಧ ಗಂಟೆಯಲ್ಲಿ ಐವತ್ತು ಕಿಲೋಮೀಟರ್ ದೂರದಲ್ಲಿ ಇಷ್ಟು ಪ್ರಮಾಣದ ಟ್ರಾಫಿಕ್‌ ಇರುತ್ತದದೆಂದು. ಅಫ್ ಕೋರ್ಸ್ ಅಂಕಿ-ಅಂಶ... ಸ್ಟಾಟಿಸ್ಟಿಕ್ಸ್. ವರುಷಾನಗುಟ್ಟಲೆಯ ಡೇಟಾ ಮತ್ತು ಈಗಿನ ಸುತ್ತಮುತ್ತಲಿನ‌ ಡೇಟಾ. ಹೌದೇ? ಇಷ್ಟು ಮಾತ್ರವೇ?

ಹಾಗಾದರೆ ಮನುಷ್ಯನ ಒಳಹೊರಗುಗಳೆಲ್ಲ ಕೇವಲ ಸ್ಟಾಟಿಸ್ಟಿಕ್ಸಿನ ಪರಿಣಾಮವೇ? ನಮಗೂ 'ಡೇಟಾ' ಸಿಕ್ಕಿದರೆ ನಾವೂ ಜ್ಯೋತಿಷಿ.... ಅಥವಾ ಮುಂಬರುವ ಕಷ್ಟಕ್ಕೆ 'ಪರಿಹಾರ' ಸೂಚಿಸುವ ದೇವರಾಗಬಹುದೇ?

Next token prediction ಈ ತಾತ್ವಿಕ ಪ್ರಶ್ನೆಯನ್ನು ನಮ್ಮೆದುರು ಇಡುತ್ತಿದೆ. ಇದು ಕೇವಲ ಸ್ಟಾಟಿಸ್ಟಿಕ್ಸ್ ಆಟವಲ್ಲಾ ಇದರಲ್ಲಿ ಬೇರೇನೊ ಮರ್ಮ ಅಡಗಿದೆ ಎಂದೇ ಸಂಶಯ ಮೂಡಿಸುವಷ್ಟು ಅಚ್ಚರಿ ಹುಟ್ಟಿಸುತ್ತಿದೆ. ಎಷ್ಟೆಂದರೆ... ಬರುಬರುತ್ತಾ ನಮ್ಮ ಹುಟ್ಟು ಸಾವು ಸಹ ಅಂತಹ ದೈವಿಕ, ಸೃಷ್ಟಿಕರ್ತನಿಗೆ ಸಲ್ಲಿಸುವ ವಿಸ್ಮಯವೇನಲ್ಲವೆಂದು ಸಾಬೀತು ಪಡಿಸುವಷ್ಟು (thinking left)-

ಅಥವಾ ಇದೂ ಸಹ ಸೃಷ್ಟಿಯ ಮತ್ತೊಂದು ಆಟ, ಮನುಷ್ಯನ ಕೈಗೆ ಸಿಗದ ಭೂತ (thinking right).. ಎಂದು ಯೋಚಿಸಬಹುದಾಗಿದೆ.

Next token prediction, ಕೇವಲ ನಮ್ಮ ಹಿಂದೆಲ್ಲದರ ನಡೆನುಡಿಗಳನ್ನು ಅವಲೋಕಿಸಿ ಮುಂದಿನ ನಡೆನುಡಿಯನ್ನು ಊಹಿಸುವ ಸರಳ stastistical ಅಲ್ಗೋರಿತಂ ಅಲ್ಲಾ, ಮನುಷ್ಯನ ಅಂತರಂಗವನ್ನೇ ಹಲಸಿನ ಹಣ್ಣು ಸುಲಿದಂತೆ ತೋಳೆ ಬಿಡಿಸಿದಂತೆ... ಆ‌ ಮೂಲಕ ಹೊಸ ಹಣ್ಣನ್ನೇ ಮರು ಸೃಷ್ಟಿಸುವಷ್ಟು... 'ಹೊಸ ಮನುಷ್ಯನನ್ನು' ಸೃಷ್ಟಿಸುವ ಮಾಯಾಶಕ್ತಿಯೂ ಆಗಬಹುದಾಗಿದೆ!

ಈ ದಾರಿ, ಈ ಮೇಜ್... !

ಮಧು ಅವರು ಜನವರಿ 17ರಂದು ಈ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈಗಾಗಲೇ ಇದಕ್ಕೆ ಹಲವರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ಇವರ ಪೋಸ್ಟ್‌ ಅನ್ನು ಶೇರ್‌ ಮಾಡಿದ್ದಾರೆ. ಕೆಲವರು ಕಾಮೆಂಟ್‌ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು ಹೀಗಿವೆ:

ʼಹಾಗಾದರೆ ಯಾವ ಲಿಮಿಟ್ಟಿಗೆ ಇದನ್ನು ಉಪಯೋಗಿಸಬೇಕು ಎನ್ನುವುದರ ಬಗ್ಗೆ ಯೋಚಿಸಿದ್ದರೆಯೇ? ಕಾನೂನು ಮಾಡಿದರೂ ಸಹ misuse ಹಾಗದ ಹಾಗೆ ತಡೆಯಲೂ ಸಹ AI ನೇ ಉಪಯೋಗಿಸ ಬೇಕಾಗಬಹುದು!? ರಜನಿಕಾಂತ್ ನ ರೋಬೋಟ್ ಮೂವಿ ನೆನಪಾಗುತ್ತಿದೆ. ಭಯಾನಕವಾಗುವ ಸಾಧ್ಯತೆ ಎಷ್ಟು ಅಂತ ಏನಾದರೂ ಅಂದಾಜು?ʼ ಎಂದು ಅಖಿಲಾ ವಿದ್ಯಾಸಂದ್ರ ಕಾಮೆಂಟ್‌ ಮಾಡಿದ್ದಾರೆ.

ಶುಶ್ರುತ ದೇಲಂಪಾಡಿ ಅವರ ಕಾಮೆಂಟ್‌ ʼಲಾಸ್ಟ್ ಪಾರಾ ತಲೆಮೇಲೆ ಹೋಗ್ತಿದೆ. ಎರಡರ ಮಧ್ಯದ ಡಿಫರೆನ್ಸ್ ಅಂದಾಜು ಮಾಡೋಕಾಗ್ತಿಲ್ಲ. ಮನುಷ್ಯರೇ/ಮನುಷ್ಯರ ಅಂತರಂಗವೇ ಡಾಟಾ ಆಗ್ತಿದೆ ಅಂತನಾ?ʼ.

ಈ ಹೀಗೆ ಹಲವರು E=mc2 ಬಗ್ಗೆಯೂ ಕಾಮೆಂಟ್‌ ಮಾಡಿದ್ದಾರೆ.