ರಾತ್ರಿ ಮಲಗುವ ಮುನ್ನ ಮರೆಯದೆ ಸ್ಮಾರ್ಟ್‌ಫೋನ್‌ನ ವೈಫೈ, ಬ್ಲೂಟೂತ್‌ ಆಫ್‌ ಮಾಡಿ; ಗುಣಮಟ್ಟದ ನಿದ್ದೆ ಸೇರಿದಂತೆ 5 ಕಾರಣಗಳಿವು
ಕನ್ನಡ ಸುದ್ದಿ  /  ಜೀವನಶೈಲಿ  /  ರಾತ್ರಿ ಮಲಗುವ ಮುನ್ನ ಮರೆಯದೆ ಸ್ಮಾರ್ಟ್‌ಫೋನ್‌ನ ವೈಫೈ, ಬ್ಲೂಟೂತ್‌ ಆಫ್‌ ಮಾಡಿ; ಗುಣಮಟ್ಟದ ನಿದ್ದೆ ಸೇರಿದಂತೆ 5 ಕಾರಣಗಳಿವು

ರಾತ್ರಿ ಮಲಗುವ ಮುನ್ನ ಮರೆಯದೆ ಸ್ಮಾರ್ಟ್‌ಫೋನ್‌ನ ವೈಫೈ, ಬ್ಲೂಟೂತ್‌ ಆಫ್‌ ಮಾಡಿ; ಗುಣಮಟ್ಟದ ನಿದ್ದೆ ಸೇರಿದಂತೆ 5 ಕಾರಣಗಳಿವು

ರಾತ್ರಿ ಮಲಗುವ ಮುನ್ನ ಮರೆಯದೆ ಸ್ಮಾರ್ಟ್‌ಫೋನ್‌ನ ವೈಫೈ, ಬ್ಲೂಟೂಥ್‌ ಆಫ್‌ ಮಾಡುವುದರಿಂದ ಪ್ರಯೋಜನಗಳೇನು? ಗುಣಮಟ್ಟದ ನಿದ್ದೆ ಮೇಲೆ ವೈಫೈ ಬ್ಲೂಟೂಥ್‌ ಪರಿಣಾಮ ಬೀರುತ್ತದೆ. ಇದರೊಂದಿಗೆ ಮೊಬೈಲ್‌ ಬ್ಯಾಟರಿ ಉಳಿತಾಯ ಮಾಡುವುದು, ವಿಕಿರಣ ಅಪಾಯಗಳಿಂದ ಪಾರಾಗುವುದು , ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ.

ರಾತ್ರಿ ಮಲಗುವ ಮುನ್ನ ಮರೆಯದೆ ಸ್ಮಾರ್ಟ್‌ಫೋನ್‌ನ ವೈಫೈ, ಬ್ಲೂಟೂತ್‌ ಆಫ್‌  ಏಕೆ ಮಾಡಬೇಕೆಂಬ ವಿವರ ಪಡೆಯೋಣ
ರಾತ್ರಿ ಮಲಗುವ ಮುನ್ನ ಮರೆಯದೆ ಸ್ಮಾರ್ಟ್‌ಫೋನ್‌ನ ವೈಫೈ, ಬ್ಲೂಟೂತ್‌ ಆಫ್‌ ಏಕೆ ಮಾಡಬೇಕೆಂಬ ವಿವರ ಪಡೆಯೋಣ

ಸುಖವಾದ ನಿದ್ದೆ ಎಲ್ಲರ ಬಯಕೆ. ರಾತ್ರಿ ಮಲಗಿ ಕಣ್ಣು ಮುಚ್ಚಿದ ಬಳಿಕ ಏನೇನೋ ಯೋಚನೆ ಆರಂಭವಾಗಿ ಹನ್ನೆರಡು, ಒಂದು, ಎರಡು ಗಂಟೆಯಾದರೂ ನಿದ್ದೆ ಬಾರದೆ ಸಾಕಷ್ಟು ಜನರು ಪರದಾಡುತ್ತಾರೆ. ಮೊಬೈಲ್‌, ಕಂಪ್ಯೂಟರ್‌, ಟಿವಿ ಪರದೆ ಹೆಚ್ಚು ನೋಡುವುದು ಕೂಡ ನಮ್ಮ ನಿದ್ದೆಯ ಗುಣಮಟ್ಟ ಹಾಳಾಗಲು ಕಾರಣ. ಗುಣಮಟ್ಟದ ನಿದ್ದೆ ಎಂದರೆ ಏನೆಂದು ಎಲ್ಲರಿಗೂ ಗೊತ್ತಿರಬಹುದು. ಒಮ್ಮೊಮ್ಮೆ ಮಲಗಿದರೆ ಅರೆ ನಿದ್ರೆಯ ಭಾಸವಾಗುತ್ತದೆ. ಆದರೆ, ಒಂದು ರಾತ್ರಿ ಒಂದೆರಡು ಗಂಟೆ ಗುಣಮಟ್ಟದ ನಿದ್ದೆ ಬೇಕೇಬೇಕು. ಸ್ಮಾರ್ಟ್‌ವಾಚ್‌ ಕಟ್ಟಿಕೊಂಡು ಮಲಗಿದರೆ ಹಿಂದಿನ ರಾತ್ರಿ ಎಷ್ಟು ಹೊತ್ತು ಗುಣಮಟ್ಟದ ನಿದ್ದೆ ದೊರಕಿತು ಎಂದು ತಿಳಿದುಕೊಳ್ಳಬಹುದು. ರಾತ್ರಿ ಮಲಗುವ ಮುನ್ನ ಮೊಬೈಲ್‌ ದೂರ ಇಡಿ ಎಂದು ಹೇಳಿ ಪ್ರಯೋಜನವಿಲ್ಲ ಕೆಲವರು ರಾತ್ರಿ ಕೈಗೆಟುಕುವಂತೆ ಸ್ಮಾರ್ಟ್‌ಫೋನ್‌ ಇಡುತ್ತಾರೆ. ಮಧ್ಯರಾತ್ರಿ ಎಚ್ಚರವಾಗಿ ಟಾಯ್ಲೆಟ್‌ಗೆ ಹೋಗಬೇಕೆಂದರೆ ಇದೇ ಸ್ಮಾರ್ಟ್‌ಫೋನ್‌ ಟಾರ್ಚ್‌ ಆಗುತ್ತದೆ. ಬೆಳಗ್ಗದ್ದು ವಾಟ್ಸಪ್‌, ಇನ್‌ಸ್ಟಾಗ್ರಾಂ ಕೆದಕುವುದೂ ಸುಲಭವಾಗುತ್ತದೆ. ರಾತ್ರಿ ಮಲಗುವ ಮೊದಲು ಬಹುತೇಕರು ಇಂಟರ್‌ನೆಟ್‌ ಆಫ್‌ ಮಾಡುತ್ತಾರೆ. ಈಗಿನ ಅನ್‌ಲಿಮಿಟೆಡ್‌ ಇಂಟರ್‌ನೆಟ್‌ ಕಾಲದಲ್ಲಿ ಇಂಟರ್‌ನೆಟ್‌ ಆಫ್‌ ಮಾಡದೆ ಮಲಗುವವರೂ ಸಾಕಷ್ಟು ಜನರು ಇದ್ದಾರೆ. ಆದರೆ, ನೆಟ್‌ ಆಫ್‌ ಮಾಡದೆ ಇದ್ದರೆ ನೋಟಿಫಿಕೇಷನ್‌ ಸದ್ದು, ಬೆಳಕಿಗೆ ನಿದ್ದೆ ಬರೋದು ಡೌಟ್‌. ನೋಟಿಫಿಕೇಷನ್‌ ಸೌಂಡ್‌ಗೂ ನಿದ್ದೆ ಬರುತ್ತದೆ ಎಂದರ ನೀವು ಪುಣ್ಯವಂತರು. ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಗಾದೆ ಮಾತು ನಿಮಗೆ ಸೂಕ್ತವಾಗಬಹುದು. ಆದರೆ, ರಾತ್ರಿ ಮಲಗುವ ಮುನ್ನ ಮೊಬೈಲ್‌ ಇಂಟರ್‌ನೆಟ್‌ ಮಾತ್ರ ಆಫ್‌ ಮಾಡಿದರೆ ಸಾಕೇ? ಬ್ಲೂಟೂಥ್‌, ವೈಫೈ ಆಫ್‌ ಮಾಡಿಡುವ ಅಗತ್ಯವಿದೆಯೇ? ಖಂಡಿತಾ? ಇವುಗಳನ್ನು ಆಫ್‌ ಮಾಡಿದರೆ ಆರೋಗ್ಯಕ್ಕೂ, ಸ್ಮಾರ್ಟ್‌ಫೋನ್‌ಗೂ ಸಾಕಷ್ಟು ಪ್ರಯೋಜನಗಳು ಇವೆ.

ಮಲಗುವ ಮುನ್ನ ವೈಫೈ, ಬ್ಲೂಟೂಥ್‌ ಏಕೆ ಆಫ್‌ ಮಾಡಿಡಬೇಕು?

ಈಗ ಬಹುತೇಕರು ವೈಫೈ ಮಲಕ ಇಂಟರ್‌ನೆಟ್‌ ಬಳಸಬಹುದು. ಕೆಲವೊಮ್ಮೆ ಬ್ಲೂಟೂಥ್‌ ಕೂಡ ಆನ್‌ ಮಾಡಿಡಬಹುದು. ಇವೆರಡನ್ನೂ ಮಲಗುವ ಮುನ್ನ ಆಫ್‌ ಮಾಡಲು ಮರೆಯಬೇಡಿ. ಏಕೆಂದರೆ,

1. ಮೊಬೈಲ್‌ ಬ್ಯಾಟರಿ ಮೇಲೆ ಪರಿಣಾಮ

ವೈಫೈ ಮತ್ತು ಬ್ಲೂಟೂಥ್‌ ಆನ್‌ ಮಾಡಿಟ್ಟು ನೀವು ಮಲಗಿ ನಿದ್ದೆ ಮಾಡಬಹುದು. ಆದರೆ, ಸ್ಮಾರ್ಟ್‌ಫೋನ್‌ ಎಚ್ಚರವಾಗಿರುತ್ತದೆ. ಇದರಿಂದ ಸ್ಮಾರ್ಟ್‌ಫೋನ್‌ ಬ್ಯಾಟರಿ ಮುಗಿಯುತ್ತಾ ಇರುತ್ತದೆ. ನೀವು ಬಳಸದೆ ಇರುವಾಗ ಅದು ಸಿಗ್ನಲ್‌ಗೆ ಹುಡುಕಾಟ ನಡೆಸುತ್ತ ಇರುತ್ತದೆ. ನೀವು ವೈಫೈ ಸ್ವಿಚ್‌ ಆಫ್‌ ಮಾಡಿಟ್ಟು, ಮೊಬೈಲ್‌ನಲ್ಲಿ ವೈಫೈ ಬಟನ್‌ ಆನ್‌ ಮಾಡಿಟ್ಟರೆ ವೈಫೈ ಇದೆಯೇ ಎಂದು ಸರ್ಚ್‌ ಮಾಡುತ್ತ ಇರುತ್ತದೆ. ಇದೇ ರೀತಿ ಬ್ಲೂಟೂಥ್‌ ಡಿವೈಸ್‌ಗಾಗಿಯೂ ಸ್ಮಾರ್ಟ್‌ ಫೋನ್‌ ಹುಡುಕುತ್ತಾ ಇರುತ್ತದೆ. ಪರಿಣಾಮವಾಗಿ, ನಿಮ್ಮ ಮೊಬೈಲ್‌ನ ಬ್ಯಾಟರಿ ಬಾಳ್ವಿಕೆ ಕಡಿಮೆಯಾಗುತ್ತದೆ. ಬ್ಯಾಟರಿ ಚಾರ್ಜ್‌ ಕೂಡ ತ್ವರಿತವಾಗಿ ಖಾಲಿಯಾಗುತ್ತದೆ.

2. ಇಎಂಎಫ್‌ ವಿಕಿರಣಕ್ಕೆ ಒಡ್ಡುವುದು ಕಡಿಮೆಯಾಗುತ್ತದೆ

ರಾತ್ರಿ ಮಲಗುವ ಮುನ್ನ ವೈಫೈ, ಬ್ಲೂಟೂಥ್‌ ಆಫ್‌ ಮಾಡಿಟ್ಟರೆ ಇಎಂಎಫ್‌ ವಿಕಿರಣಕ್ಕೆ ಒಡ್ಡುವ ಪ್ರಮಾಣ ಕಡಿಮೆಯಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಸ್ಮಾರ್ಟ್‌ಫೋನ್‌ನ ಇಂತಹ ಸಿಗ್ನಲ್‌ಗಳು ತುಸು ಪ್ರಮಾಣದ ಇಎಂಎಫ್‌ ವಿಕಿರಣಗಳನ್ನು ಬಿಡುಗಡೆ ಮಾಡುತ್ತ ಇರುತ್ತವೆ. ಈ ಕುರಿತು ಅಧ್ಯಯನಗಳು ನಡೆಯುತ್ತಿವೆ.

3. ಗುಣಮಟ್ಟದ ನಿದ್ದೆ

ವೈಫೈ, ಬ್ಲೂಟೂಥ್‌ ಆಫ್‌ ಮಾಡಿಡುವ ಅಭ್ಯಾಸವು ನಿಮ್ಮ ನಿದ್ದೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಎಲ್ಲರೂ ರಾತ್ರಿ ಮಲಗುತ್ತಾರೆ, ಬೆಳಗ್ಗೆ ಎದ್ದೇಳುತ್ತಾರೆ. ಆದರೆ, ಕೆಲವರು ಮಾತ್ರ ಗುಣಮಟ್ಟದ ನಿದ್ದೆ ಮಾಡಿರುತ್ತಾರೆ. ಗುಣಮಟ್ಟದ ನಿದ್ದೆಯಿಂದ ಬೆಳಗ್ಗೆ ಎದ್ದಾಗ ಮನಸ್ಸು ಉಲ್ಲಾಸದಿಂದ ಇರುತ್ತದೆ. ಒತ್ತಡ ಕಡಿಮೆಯಾಗುತ್ತದೆ. ಮೂಡ್‌ ಉತ್ತಮವಾಗಿರುತ್ತದೆ. ದೈನಂದಿನ ಕೆಲಸದಲ್ಲಿ ಹೊಸ ಉತ್ಸಾಹ ದೊರಕುತ್ತದೆ.

4. ಸ್ಕ್ರೀನ್‌ ಟೈಮ್‌ ಮೇಲೆ ನಿಯಂತ್ರಣ

ಈ ರೀತಿ ವೈಫೈ ಬ್ಲೂಟಟೂಥ್‌ ಆಫ್‌ ಮಾಡಿದರೆ ನೋಟಿಫಿಕೇಷನ್‌ ನೋಡುವುದು ಕಡಿಮೆಯಾಗುತ್ತದೆ. ಈ ಮೂಲಕ ಸ್ಕ್ರೀನ್‌ ಟೈಮ್‌ ಕಡಿಮೆಯಾಗುತ್ತದೆ. ಸ್ಕ್ರೀನ್‌ ಟೈಮ್‌ ಎಂದರೆ ದಿನವೊಂದಕ್ಕೆ ಎಷ್ಟು ಹೊತ್ತು ಮೊಬೈಲ್‌ ಬಳಸುವಿರಿ ಎಂದು ದಾಖಲಾಗುವ ಮಾಹಿತಿ.

5. ಖಾಸಗಿತನದ ರಕ್ಷಣೆ

ಆನ್‌ಲೈನ್‌ ಜಗತ್ತಿನಲ್ಲಿ ಪ್ರೈವೇಸಿ ಬಗ್ಗೆ ಹೆಚ್ಚು ಯೋಚನೆ ಮಾಡಬೇಕು. ನಿರಂತರವಾಗಿ ವೈಫೈ ಮತ್ತು ಬ್ಲೂಟೂಥ್‌ಗೆ ಕನೆಕ್ಟ್‌ ಆಗುವುದು ನಿಮ್ಮ ಖಾಸಗಿತನಕ್ಕೂ ಅಪಾಯ. ಇದು ಹ್ಯಾಕರ್‌ಗಳಿಗೆ ವರದಾನವಾಗಬಹುದು. ನಿಮಗೆ ಗೊತ್ತಿಲ್ಲದೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಡೆಯುವ ಹ್ಯಾಕಿಂಗ್‌ ಚಟುವಟಿಕೆಗೆ ಕಡಿವಾಣ ಹಾಕಲು ವೈಫೈ ಮತ್ತು ಬ್ಲೂಟೂಥ್‌ ಆಫ್‌ ಮಾಡಿಡುವುದು ನೆರವಾಗುತ್ತದೆ.

ರಾತ್ರಿ ನಿದ್ದೆ ಮಾಡುವ ಮೊದಲು ವೈಫೈ ಮತ್ತು ಬ್ಲೂಟೂಥ್‌ ಆನ್‌ ಇದ್ದರೆ ಆರೋಗ್ಯದ ಮೇಲೆ ಉಂಟಾಗುವ ಹಲವು ಪರಿಣಾಮಗಳ ಕುರಿತು ಅಧ್ಯಯನಗಳು ನಡೆಯುತ್ತಿವೆ. ಇನ್ಮುಂದೆ ರಾತ್ರಿ ಸುಖವಾದ ನಿದ್ದೆ ಬಯಸುವವರು ತಪ್ಪದೇ ವೈಫೈ, ಬ್ಲೂಟೂಥ್‌ ಆಫ್‌ ಮಾಡಿಡಿ.

Whats_app_banner