Brain Teaser: ಮೂರೇ 3 ಬೆಂಕಿಕಡ್ಡಿಗಳನ್ನು ಆಚೀಚೆ ಸರಿಸಿ ಗಣಿತದ ಸಮೀಕರಣವನ್ನು ಪೂರ್ಣಗೊಳಿಸಿ; ಬುದ್ಧಿ ಉಪಯೋಗಿಸಿ ಉತ್ತರ ಹುಡುಕಿ
ಮೆದುಳಿಗೆ ಎಕ್ಸ್‌ಸೈಜ್ ನೀಡುವುದರಲ್ಲಿ ಬ್ರೈನ್ ಟೀಸರ್‌ಗಳು ಎತ್ತಿದ ಕೈ. ಇವು ಒಂದಿಷ್ಟು ಸಮಯ ನಮ್ಮ ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತವೆ. ಮೆದುಳನ್ನು ಚುರುಕುಗೊಳಿಸುವ ಜೊತೆಗೆ ಮನಸ್ಸಿಗೆ ಖುಷಿ ನೀಡುತ್ತವೆ. ಇಲ್ಲೊಂದು ಬೆಂಕಿಕಡ್ಡಿ ಸರಿಸಿ ಉತ್ತರ ಹುಡುಕುವ ಬ್ರೈನ್ ಟೀಸರ್ ಇದೆ. ಇದಕ್ಕೆ ಉತ್ತರ ಹೇಳಿ, ಮೆದುಳು ಎಷ್ಟು ಚುರುಕಿದೆ ಸಾಬೀತು ಮಾಡಿ.
ಮೆದುಳಿಗೆ ಜಡ ಹಿಡಿದಂತಾಗಿ, ಬೇಸರ ಕಾಡುತ್ತಿದ್ಯಾ, ನಿಮ್ಮ ಮೆದುಳನ್ನ ಸಾಣೆ ಹಿಡಿಯುವ ಸಲುವಾಗಿಯೇ ಬ್ರೈನ್ ಟೀಸರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈ ಬ್ರೈನ್ ಟೀಸರ್‌ಗಳು ಮೆದುಳಿಗೆ ಸಾಕಷ್ಟು ಕೆಲಸ ನೀಡುತ್ತವೆ. ಬ್ರೈನ್ ಟೀಸರ್‌ಗಳಲ್ಲಿ ಇರುವ ಗಣಿತದ ಪಜಲ್‌ಗಳು ನಿಮ್ಮನ್ನು ಒಂದಿಷ್ಟು ಸಮಯ ಹಿಡಿದಿಡುವುದು ಸುಳ್ಳಲ್ಲ. ಇಲ್ಲೊಂದು ಬೆಂಕಿಕಡ್ಡಿಗಳಿಂದ ರಚಿತವಾದ ಗಣಿತದ ಚಿತ್ರವಿದೆ. ಇದರಲ್ಲಿ ಒಂದಿಷ್ಟು ಬೆಂಕಿಕಡ್ಡಿಗಳನ್ನು ಉದ್ದಕ್ಕೆ ಅಡ್ಡಕ್ಕೆ ಜೋಡಿಸಲಾಗಿದೆ. ಅವುಗಳನ್ನು ಬಳಸಿಕೊಂಡು ಸಮೀಕರಣವನ್ನು ರಚಿಸಬೇಕು. ಇದಕ್ಕೆ ನೀವು ಸೃಜನಾತ್ಮಕವಾಗಿ ಯೋಚಿಸುವುದು ಮುಖ್ಯವಾಗುತ್ತದೆ. ಹಾಗಾದರೆ ಈ ಚಿತ್ರದಿಂದ ಯಾವ ಸಮೀಕರಣವನ್ನು ರಚಿಸಬಹುದು, ಉತ್ತರ ಹೇಳಿ.
ರೆಡ್ಡಿಟ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ ಬ್ರೈನ್ ಟೀಸರ್ ಇದಾಗಿದೆ. ಇದರಲ್ಲಿರುವ ಪ್ರಶ್ನೆ ಹೀಗಿದೆ. ʼಮೂರು ಬೆಂಕಿಕಡ್ಡಿಗಳನ್ನು ಸರಿಸುವ ಮೂಲಕ ಈ ಗಣಿತ ಸೂತ್ರಕ್ಕೆ ಉತ್ತರ ಕಂಡುಹಿಡಿಯಿರಿ: 5-8=0ʼ ಎಂದು ಬರೆಯಲಾಗಿದೆ. ಇದಕ್ಕೆ ಉತ್ತರ ಹುಡುಕಲು ನಿಮ್ಮಿಂದ ಸಾಧ್ಯವಾಗುತ್ತದೆ ಎಂದು ಅನ್ನಿಸ್ತಾ ಇದ್ಯಾ, ಹಾಗಿದ್ರೆ ಟ್ರೈ ಮಾಡಿ. ನಿಮ್ಮ ಸಮಯ ಈಗ ಶುರು.
ಕಳೆದ ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಬ್ರೈನ್ ಟೀಸರ್‌ಗೆ ಹಲವು ರೆಡ್ಡಿಟ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈಗಾಗಲೇ 200ಕ್ಕೂ ಹೆಚ್ಚು ಮಂದಿ ಅಪ್‌ವೋಟ್ ಮಾಡಿದ್ದಾರೆ. ಕೆಲವರು ಕಾಮೆಂಟ್ ಮಾಡುವ ಮೂಲಕ ತಾವು ಕಂಡುಕೊಂಡ ಉತ್ತರವನ್ನು ತಿಳಿಸಿದ್ದಾರೆ.
ಕಾಮೆಂಟ್‌ಗಳು ಹೀಗಿವೆ
ʼಸಾಲಿನ ಎರಡು ಬದಿಯ ಬೆಂಕಿಕಡ್ಡಿಗಳನ್ನು ತೆಗೆದುಕೊಂಡು ಅವುಗಳನ್ನು 5ಕ್ಕೆ ಸೇರಿಸಿ. ಆಗ 8-8=0 ಆಗುತ್ತದೆʼ ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼಒಂದು ಬೆಂಕಿಕಡ್ಡಿಯನ್ನು ಸರಿಸುವುದಾದರೆ 6-6=0? ಆದರೆ 3 ಬೆಂಕಿಕಡ್ಡಿಗಳನ್ನು ಸರಿಸಬೇಕು ಎಂದರೆ ಯಾವುದೇ 2ನೇಯದ್ದನ್ನು ಮೂವ್ ಮಾಡಿ. ಅದನ್ನು 3ನೇ ಸ್ಥಾನಕ್ಕೆ ತನ್ನಿʼ ಎಂದು ಇನ್ನೊಬ್ಬರು ಬಳಕೆದಾರರು ತಿಳಿಸಿದ್ದಾರೆ.
ಸರಿ ಅವರೆಲ್ಲರ ಉತ್ತರ ಬಿಡಿ, ಈ ಬ್ರೈನ್ ಟೀಸರ್‌ಗೆ ನಿಮ್ಮ ಉತ್ತರವೇನು ತಿಳಿಸಿ.
ಈ ಬ್ರೈನ್ ಟೀಸರ್‌ಗಳನ್ನು ಓದಿ
Brain Teaser: ಈ ವೃತ್ತದಲ್ಲಿ ಮಿಸ್ ಆಗಿರುವ ನಂಬರ್ ಯಾವುದು? ನಿಮ್ಮ ಮೆದುಳು ಶಾರ್ಪ್ ಇದ್ರೆ 20 ಸೆಕೆಂಡ್‌ನಲ್ಲಿ ಉತ್ತರ ಹೇಳಿ
ಇನ್‌ಸ್ಟಾಗ್ರಾಂನ ಥ್ರೆಡ್‌ನಲ್ಲಿ ಹಂಚಿಕೊಳ್ಳಲಾದ ಬ್ರೈನ್ ಟೀಸರ್‌ವೊಂದು ನಿಮ್ಮ ಜಾಣ್ಮೆಯನ್ನು ಪರೀಕ್ಷಿಸುವುದು ಸುಳ್ಳಲ್ಲ. ಇಲ್ಲೊಂದು ವೃತ್ತವಿದ್ದು, ವೃತ್ತದಲ್ಲಿ ಒಂದಿಷ್ಟು ನಂಬರ್‌ಗಳಿವೆ. ಆದರೆ ಒಂದು ನಂಬರ್ ಮಾತ್ರ ಮಿಸ್ಸಿಂಗ್, ಆ ನಂಬರ್ ಯಾವುದು ಕಂಡುಹಿಡಿಯಬೇಕು, ಅದೂ ಕೇವಲ 20 ಸೆಕೆಂಡ್‌ನಲ್ಲಿ.
Brain Teaser: 6 ಎ, 6 ಬಿ ಕೂಡಿಸಿದ್ರೆ 1974, ಹಾಗಿದ್ರೆ ಎ ಹಾಗೂ ಬಿಯ ಮೌಲ್ಯವೆಷ್ಟು; ಗಣಿತದಲ್ಲಿ ಶಾರ್ಪ್ ಅನ್ನೋರು ಉತ್ತರ ಹೇಳಿ
ಇಲ್ಲೊಂದು ಭಿನ್ನವಾದ ಬ್ರೈನ್ ಟೀಸರ್ ಇದೆ. ಇದು ಗಣಿತದ ಪಜಲ್ ಆಗಿದ್ದು, ಇದಕ್ಕೆ ಉತ್ತರ ಹೇಳೋಕೆ ನೀವು ಸಾಕಷ್ಟು ಬುದ್ಧಿ ಖರ್ಚು ಮಾಡಬೇಕಾಗೋದು ಖಂಡಿತ. ಇಲ್ಲಿರುವ ಉತ್ತರವನ್ನು ನೋಡಿಕೊಂಡು ಎ ಹಾಗೂ ಬಿಯ ಮೌಲ್ಯವೆಷ್ಟು ಎಂಬುದನ್ನು ಕಂಡುಹಿಡಿಯಬೇಕು. ಇದೇನು ಮಹಾ ಅಂದ್ಕೋಬೇಡಿ, ಉತ್ತರ ಹುಡುಕೋದು ಸುಲಭವಿಲ್ಲ. ಇನ್ಯಾಕೆ ತಡ, ಟ್ರೈ ಮಾಡಿ.