Brain Teaser: ಈ 5 ಮಂದಿಯಲ್ಲಿ ಕಳ್ಳ ಯಾರು? ಬುದ್ಧಿ ಉಪಯೋಗಿಸಿ ಉತ್ತರ ಹೇಳಿ, ನಿಮಗಿರೋದು ಕೇವಲ 15 ಸೆಕೆಂಡ್ ಸಮಯ
ಲೌ, ಲೋ, ಲಾ, ಲೀ, ಲ್ಯೂ ಈ ಐವರಲ್ಲಿ ಕಳ್ಳ ಯಾರು, ನಿಮ್ಮ ಮೆದುಳು ನಿಜಕ್ಕೂ ಚುರುಕಾಗಿದ್ರೆ 15 ಸೆಕೆಂಡ್‌ನಲ್ಲಿ ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಿ. ಶೇ 11 ರಷ್ಟು ಮಂದಿಗಷ್ಟೇ ಇದಕ್ಕೆ ಉತ್ತರ ಕಂಡುಹಿಡಿಯಲು ಸಾಧ್ಯವಾಗಿದೆ, ನೀವು ಆ ಸಾಲಿಗೆ ಸೇರುತ್ತೀರಾ ನೋಡಿ.
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾದ ಬ್ರೈನ್ ಟೀಸರ್‌ವೊಂದು ಜನರ ತಲೆಗೆ ಹುಳ ಬಿಟ್ಟಿರುವುದು ಸುಳ್ಳಲ್ಲ. ಇದಕ್ಕೆ ಉತ್ತರ ಹುಡುಕುವ ಸಲುವಾಗಿ ಜನರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ. ಈ ಬ್ರೈನ್ ಟೀಸರ್‌ಗೆ ಉತ್ತರ ಹೇಳಲು ಶೇ 89 ಮಂದಿ ಫೇಲ್ ಆಗಿದ್ದಾರೆ. ಚಿತ್ರದಲ್ಲಿ ಕಳ್ಳ ಯಾರು ಎಂಬುದನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೇ?
ʼಶೇ 11 ರಷ್ಟು ಜನರಿಗೆ ಮಾತ್ರ ಈ ಬ್ರೈನ್ ಟೀಸರ್‌ನಲ್ಲಿ ಕಳ್ಳನನ್ನು ಕಂಡುಹಿಡಿಯಲು ಸಾಧ್ಯವಾಗಿದೆʼ ಎಂದು ಶೀರ್ಷಿಕೆ ಬರೆದುಕೊಂಡು ಈ ಬ್ರೈನ್ ಟೀಸರ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದೆ.
ಚಿತ್ರದಲ್ಲಿ ಐದು ಮಂದಿ ಗೋಡಗೆ ಒರಗಿ ನಿಂತಿರುವುದು ಕಾಣುತ್ತದೆ. ಅವರ ಸಮೀಪದಲ್ಲೇ ಪೊಲೀಸ್ ಒಬ್ಬರು ಕುರ್ಚಿ ಮೇಲೆ ಕುಳಿತಿದ್ದಾರೆ. ಹಾಗಾದ್ರೆ ಈ ಐವರಲ್ಲಿ ಕಳ್ಳ ಯಾರಿರಬಹುದು ಎಂದು ನಿಮಗೆ ಅನ್ನಿಸುತ್ತದೆ?
ಇನ್‌ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಹಂಚಿಕೊಂಡಾಗಿನಿಂದ ಹಲವರು ಇದನ್ನು ವೀಕ್ಷಿಸಿದ್ದಾರೆ ಮತ್ತು ಲೈಕ್ ಮಾಡಿದ್ದಾರೆ. ಹಲವು ಪಜಲ್ ಪ್ರೇಮಿಗಳು ತಾವು ಕಂಡುಕೊಂಡ ಉತ್ತರವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.
ʼಇದರಲ್ಲಿ ಲಾ ಕಳ್ಳ, ಯಾಕಂದ್ರೆ ಅವನ ಜೇಬುಗಳು ತುಂಬಿವೆ. ನಾನು ನನ್ನ ಕೈಯಿಂದ ಜೇಬುಗಳನ್ನು ಮುಚ್ಚಿಕೊಂಡಿದ್ದಾನೆ. ನನಗೆ ಅವನೇ ಕಳ್ಳ ಅನ್ನಿಸುತ್ತಿದೆʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.
ʼನನಗೆ ಲೀ ಅನ್ನಿಸುತ್ತಿದೆ, ಯಾಕೆಂದರೆ ಅವನ ಕಣ್ಣುಗಳು ನಿದ್ದೆ ಬಿಟ್ಟವರಂತೆ ಕಾಣುತ್ತಿದೆʼ ಎಂದು ಇನ್ನೊಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ʼಲಾ ಅನ್ನಿಸುತ್ತಿದೆ, ಯಾಕೆಂದರೆ ಅವನೊಬ್ಬನೇ ಕೈ ಕಟ್ಟಿ ನಿಂತಿರುವುದುʼ ಎಂದು ಮೂರನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ʼಲೀ, ಯಾಕೆಂದರೆ ಅವನು ರಾತ್ರಿ ಕಳ್ಳತನ ಮಾಡಿದ್ದಾನೆ. ರಾತ್ರಿ ಏನೂ ಕಾಣಿಸದೇ ಅವನು ಕೈ ಗಾಯ ಮಾಡಿಕೊಂಡಿದ್ದಾನೆʼ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದೇ ರೀತಿ ಹಲವು ಇನ್‌ಸ್ಟಾಗ್ರಾಂ ಬಳಕೆದಾರರು ಹಲವು ರೀತಿ ಉತ್ತರ ಹೇಳಿದ್ದಾರೆ. ಹಾಗಾದ್ರೆ ಈ ಬ್ರೈನ್ ಟೀಸರ್‌ನಲ್ಲಿ ಕಳ್ಳ ಯಾರು ಎಂಬುದನ್ನು ಕಂಡುಹಿಡಿಯಲು ನೀವು ಪ್ರಯತ್ನಿಸಿ.
ಈ ಬ್ರೈನ್ ಟೀಸರ್ ಅನ್ನೂ ಓದಿ
Brain Teaser: ಗಣಿತ ಪ್ರಿಯರಿಗೊಂದು ಸವಾಲು; ಈ ಲೆಕ್ಕವನ್ನು ಕ್ಯಾಲ್ಕುಲೆಟರ್ ಬಳಸದೇ ಬಿಡಿಸಿ, ನಿಮ್ಮ ಉತ್ತರ ತಿಳಿಸಿ -ಬೇಗ ಶುರು ಮಾಡಿ
ನೀವು ಗಣಿತ ಎಕ್ಸ್‌ಪರ್ಟ್ ಆಗಿದ್ದು, ಗಣಿತದ ಸೂತ್ರವನ್ನು ಥಟ್ಟಂತ ಬಿಡಿಸ್ತೀರಾ? ಹಾಗಾದ್ರೆ ನಿಮಗಾಗಿ ಇಲ್ಲೊಂದು ಸವಾಲಿದೆ. ಈ ಪ್ರಶ್ನೆಗೆ ಕ್ಯಾಲ್ಕುಲೆಟರ್ ಬಳಸದೇ ಉತ್ತರ ಹೇಳಬೇಕು. ನಿಮ್ಮ ಸಮಯ ಈಗ ಶುರು... ಎಷ್ಟು ಸೆಕೆಂಡ್‌ಗಳಲ್ಲಿ ಉತ್ತರ ಹೇಳ್ತೀರಿ ನೋಡೋಣ.