Personality Test: ಸಮಸ್ಯೆಗಳು ಎದುರಾದಾಗ ನೀವು ಹೇಗೆ ಪರಿಹರಿಸುತ್ತೀರಿ? ತಿಳಿಯಬೇಕು ಅಂದ್ರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ-viral news personality test what you see first reveals your problem solving ability optical illusion social media rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Personality Test: ಸಮಸ್ಯೆಗಳು ಎದುರಾದಾಗ ನೀವು ಹೇಗೆ ಪರಿಹರಿಸುತ್ತೀರಿ? ತಿಳಿಯಬೇಕು ಅಂದ್ರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Personality Test: ಸಮಸ್ಯೆಗಳು ಎದುರಾದಾಗ ನೀವು ಹೇಗೆ ಪರಿಹರಿಸುತ್ತೀರಿ? ತಿಳಿಯಬೇಕು ಅಂದ್ರೆ ಚಿತ್ರದಲ್ಲಿ ಮೊದಲು ಕಂಡಿದ್ದೇನು ಹೇಳಿ

Personality Test: ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮಲ್ಲಿ ಅಡಗಿರುವ ನಮಗೆ ಗೊತ್ತಿರದ ನಮ್ಮ ವ್ಯಕ್ತಿತ್ವ, ಸಾಮರ್ಥ್ಯವನ್ನು ಬಹಿರಂಗ ಪಡಿಸುತ್ತವೆ. ಚಿತ್ರವನ್ನು ನೋಡಿದಾಕ್ಷಣ ನಿಮ್ಮ ಕಣ್ಣು ಏನನ್ನು ಗ್ರಹಿಸುತ್ತದೆ ಅದು ನಿಮ್ಮ ವ್ಯಕ್ತಿತ್ವವಾಗಿರುತ್ತದೆ. ಇಂದಿನ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನಿಮ್ಮ ಮೊದಲು ಗ್ರಹಿಸಿದ್ದೇನು ಹೇಳಿ.

ಪರ್ಸನಾಲಿಟಿ ಟೆಸ್ಟ್‌
ಪರ್ಸನಾಲಿಟಿ ಟೆಸ್ಟ್‌ (PC: Genial Guru)

Optical illusion Personality Test: ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಕಷ್ಟು ವೈರಲ್ ಆಗುತ್ತವೆ. ನಮ್ಮ ಮನಸ್ಸು, ವ್ಯಕ್ತಿತ್ವವನ್ನು ಓದುವ ಚಿತ್ರಗಳು ಇವಾಗಿವೆ, ಅಂದರೆ ನಮ್ಮ ಕಣ್ಣು ಮೊದಲು ಯಾವುದನ್ನು ಗ್ರಹಿಸುತ್ತದೆ ಅದರ ಆಧಾರದ ಮೇಲೆ ನಮ್ಮ ವ್ಯಕ್ತಿತ್ವವನ್ನು ತಿಳಿಯಬಹುದು.

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಒಂದು ರೀತಿಯ ಮೋಜಿನ ಚಿತ್ರಗಳಾಗಿದ್ದು ಇದು ನಿಮ್ಮ ಕಣ್ಣಿಗೆ ಸವಾಲು ಹಾಕುವಂತಿರುವುದು ಸುಳ್ಳಲ್ಲ. ಇದು ಒಬ್ಬೊಬ್ಬರ ಕಣ್ಣಿಗೆ ಒಂದೊಂದು ರೀತಿ ಕಾಣಿಸುತ್ತದೆ. ಯಾರ ಕಣ್ಣಿಗೆ ಯಾವ ಅಂಶ ಮೊದಲು ಕಾಣುವುದೋ ಅದು ಅವರ ವ್ಯಕ್ತಿತ್ವವಾಗಿರುತ್ತದೆ. ಮನೋವಿಜ್ಞಾನದ ಪ್ರಕಾರ, ವಿಭಿನ್ನ ಜನರು ಸಾಮಾನ್ಯವಾಗಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಜಗತ್ತನ್ನು ಗ್ರಹಿಸುತ್ತಾರೆ.

ಇಂದಿನ ಆಪ್ಟಿಕಲ್ ಚಿತ್ರದಲ್ಲಿ ಪರ್ವತ ಶ್ರೇಣಿಗಳು ಹಾಗೂ ಕರಡಿಗಳು ಈ ಎರಡೂ ಅಂಶಗಳಿವೆ. ಇದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಂಡಿದ್ದೇನು ಎಂಬುದನ್ನು ಪ್ರಮಾಣಿಕವಾಗಿ ಒಪ್ಪಿಕೊಳ್ಳಿ, ಅದರಂತೆ ನಿಮ್ಮ ವ್ಯಕ್ತಿತ್ವವನ್ನು ಈ ಚಿತ್ರ ಪರಿಚಯ ಮಾಡಿಕೊಡುತ್ತದೆ.

ಕರಡಿ

ಚಿತ್ರದಲ್ಲಿ ನೀವು ಮೊದಲು ಕರಡಿ ಕಂಡರೆ ನೀವು ಸ್ವಭಾವತಃ ಸಾಕಷ್ಟು ವಿಶ್ಲೇಷಣಾತ್ಮಕರಾಗಿದ್ದೀರಿ ಎಂದರ್ಥ. ನೀವು ಸಮಸ್ಯೆಯನ್ನು ಸಣ್ಣ ಮತ್ತು ಸರಳವಾದ ಭಾಗಗಳಾಗಿ ವಿಭಜಿಸಲು ಬಯಸುತ್ತೀರಿ, ಮತ್ತು ಸಮಸ್ಯೆಯ ಮೂಲ ಕಾರಣವನ್ನು ಕಂಡುಹಿಡಿಯುವವರೆಗೆ ಅವುಗಳನ್ನು ಪ್ರತ್ಯೇಕವಾಗಿ ವಿಶ್ಲೇಷಿಸುತ್ತೀರಿ. ಒಮ್ಮೆ ನೀವು ಅದನ್ನು ಕಂಡುಕೊಂಡರೆ, ನೀವು ಸಮಸ್ಯೆಗೆ ಪರಿಹಾರವನ್ನು ಹುಡುಕುವತ್ತ ಗಮನ ಹರಿಸುತ್ತೀರಿ. ಒಟ್ಟಾರೆ ಹೇಳಬೇಕು ಅಂದರೆ ಸಮಸ್ಯೆಯನ್ನು ಆಳದಿಂದಲೇ ಅಧ್ಯಯನ ಮಾಡಿ, ಅದನ್ನು ಪರಿಹರಿಸುತ್ತೀರಿ.

ಪರ್ವತ ಶ್ರೇಣಿ

ಚಿತ್ರದಲ್ಲಿ ನಿಮಗೆ ಪರ್ವತ ಶ್ರೇಣಿ ಮೊದಲು ಕಂಡರೆ ನೀವು ಸ್ವಭಾವತಃ ಹೆಚ್ಚು ಅರ್ಥಗರ್ಭಿತರಾಗಿದ್ದೀರಿ. ನಿಮ್ಮ ಹಿಂದಿನ ಅನುಭವಗಳ ಆಧಾರದ ಮೇಲೆ ನೀವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೀರಿ ಎಂದರ್ಥ. ನೀವು ವಿವಿಧ ಸಮಸ್ಯೆಗಳಿಗೆ ಮಾದರಿಯನ್ನು ಹುಡುಕಲು ಪ್ರಯತ್ನಿಸುತ್ತೀರಿ ಮತ್ತು ಆದ್ದರಿಂದ ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಿ. ಅನುಭವಗಳಿಂದ ಪಾಠ ಕಲಿಯುವ ನೀವು ಪದೇ ಪದೇ ಅದೇ ತಪ್ಪನ್ನು ಮಾಡುವುದಿಲ್ಲ. ಪ್ರತಿಯೊಂದಕ್ಕೂ ನಿಮಗೆ ಅನುಭವವೇ ಪಾಠವಾಗುತ್ತದೆ. ‌

ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ನಮ್ಮ ವ್ಯಕ್ತಿತ್ವವನ್ನು ಬಹಿರಂಗ ಪಡಿಸುವುದು ನಿಜವೇ ಆದರೂ ಇವು ಎಷ್ಟರಮಟ್ಟಿಗೆ ಸತ್ಯ ಎಂಬುದು ಇನ್ನೂ ಸಾಬೀತಾಗಿಲ್ಲ, ಆದರೆ ಮನೋಶಾಸ್ತ್ರದಲ್ಲೂ ವ್ಯಕ್ತಿತ್ವ ಪರೀಕ್ಷೆಗೆ ಇಂತಹ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳನ್ನೇ ಬಳಸಲಾಗುತ್ತದೆ ಎಂಬುದು ಸುಳ್ಳಲ್ಲ.

mysore-dasara_Entry_Point