ದಸರಾ ಆಫರ್: ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ 25 ಸಾವಿರ ರೂ ದರ ಕಡಿತ; 49,999 ರೂಗೆ ಸ್ಕೂಟರ್ ಮಾರಾಟ, ಆಫರ್ 3 ದಿನ ಮಾತ್ರ
ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಸ್1 ಎಕ್ಸ್ ಮತ್ತು ಎಸ್1 ಪ್ರೊ ಸ್ಕೂಟರ್‌ಗಳಿಗೆ ‘BOSS 72-hour Rush’ ಎಂಬ ಆಫರ್ ಮೂಲಕ ಭರ್ಜರಿ ದರ ಕಡಿತ ಮಾಡಿದೆ. ಅಕ್ಟೋಬರ್ 10-12ರವರೆಗೆ ಮಾತ್ರ ಈ ಆಫರ್ ಇರಲಿದೆ.
ಬೆಂಗಳೂರು: ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಎಸ್1 ಎಕ್ಸ್ ಮತ್ತು ಎಸ್1 ಪ್ರೊ ಸ್ಕೂಟರ್‌ಗಳಿಗೆ ‘BOSS 72-hour Rush’ ಎಂಬ ಆಫರ್ ಮೂಲಕ ಭರ್ಜರಿ ದರ ಕಡಿತ ಮಾಡಿದೆ. ಅಕ್ಟೋಬರ್ 10-12ರವರೆಗೆ ಮಾತ್ರ ಈ ಆಫರ್ ಇರಲಿದೆ. ಈ ಮೂರು ದಿನಗಳ ಕಾಲ ಸ್ಕೂಟರ್‌ಗಳ ದರ 25 ಸಾವಿರ ರೂಪಾಯಿಯಷ್ಟು ಕಡಿಮೆ ಇರಲಿದೆ. ಓಲಾ ಎಕದಸ್ 1 2 ಕಿಲೋವ್ಯಾಟ್ ಆವೃತ್ತಿಯನ್ನು 49,999 ಎಕ್ಸ್ ಶೋರೂಂ ದರದಲ್ಲಿ ಖರೀದಿಸಬಹುದು. ಇದೇ ಸಮಯದಲ್ಲಿ ಓಲಾ ಎಸ್1 ಪ್ರೊಗೆ 25 ಸಾವಿರ ರೂಪಾಯಿ ಡಿಸ್ಕೌಂಟ್ ಮತ್ತು 5 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಇರಲಿದೆ.
ಓಲಾ ಸ್ಕೂಟರ್‌ಗಳಿಗೆ ಹಬ್ಬದ ಆಫರ್
ಓಲಾ ಎಸ್1 ಎಕ್ಸ್ 2 ಕಿಲೋವ್ಯಾಟ್ ಆವೃತ್ತಿಯ ದರವು 20 ಸಾವಿರ ರೂಪಾಯಿಯಷ್ಟು ಕಡಿಮೆಯಾಗಿದೆ. ಅಂದರೆ, ಇದರ ದರ 49,999 ರೂಪಾಯಿಗೆ ತಲುಪಿದೆ. ಇದೇ ಸಮಯದಲ್ಲಿ 8 ವರ್ಷ/80 ಸಾವಿರ ಬ್ಯಾಟರಿ ವ್ಯಾರೆಂಟಿ ದೊರಕುತ್ತದೆ. ಅಂದರೆ, 25 ಸಾವಿರ ರೂಪಾಯಿ ಮೌಲ್ಯದ ಬ್ಯಾಟರಿ ವ್ಯಾರೆಂಟಿ ಇದೆ. ಇದೇ ಸಮಯದಲ್ಲಿ 5 ಸಾವಿರ ರೂಪಾಯಿ ಕ್ರೆಡಿಟ್ ಕಾರ್ಡ್ ಇಎಂಐ ವಾರೆಂಟಿ ದೊರಕುತ್ತದೆ. MoveOS+ ಉಚಿತ ಅಪ್‌ಗ್ರೇಡ್ ಕೂಡ ದೊರಕುತ್ತದೆ. ಇದರ ಮೌಲ್ಯ 6 ಸಾವಿರ ರೂಪಾಯಿ ಇದೆ. ಎಸ್1 ಪ್ರೊಗೆ 7 ಸಾವಿರ ರೂಪಾಯಿ ಉಚಿತ ಕ್ರೆಡಿಟ್ ದೊರಕುತ್ತದೆ.
ಓಲಾ ಎಲೆಕ್ಟ್ರಿಕ್ ಮಾರ್ಕೆಟ್ ಪಾಲು ಸೆಪ್ಟೆಂಬರ್‌ನ್ಲ್ಲಿ ಶೇಕಡ 30ಕ್ಕಿಂತ ಕಡಿಮೆಯಾಗಿದೆ. ಕಂಪನಿಯು ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಎಸ್1 ಎಕ್ಸ್, ಎಸ್1 ಎಕ್ಸ್+, ಎಸ್1 ಏರ್ ಮತ್ತು ಎಸ್1 ಪ್ರೊ ಸ್ಕೂಟರ್‌ಗಳ್ನನು ಮಾರಾಟ ಮಾಡುತ್ತಿದೆ. ಈ ಸ್ಕೂಟರ್‌ಗಳ ಎಕ್ಸ್ ಶೋರೂಂ ದರ 74,999 ರೂಪಾಯಿ ಇದೆ.
ಸದ್ಯ ಓಲಾ ಕಂಪನಿಯ ಸರ್ವೀಸ್ ಚೆನ್ನಾಗಿಲ್ಲ ಎಂದು ದೂರುಗಳು ಹೆಚ್ಚಾಗಿವೆ. ಇದೇ ಕಾರಣಕ್ಕೆ ತನ್ನ ಸರ್ವೀಸ್ ನೆಟ್‌ವರ್ಕ್ ಹೆಚ್ಚಿಸಲು ಆದ್ಯತೆ ನೀಡುತ್ತಿದೆ. ಈ ವರ್ಷದ ಡಿಸೆಂಬರ್ ತಿಂಗಳ ವೇಳೆಗೆ 1 ಸಾವಿರ ಸರ್ವೀಸ್ ಸೆಂಟರ್‌ಗಳನ್ನು ಹೊಂದುವ ಗುರಿ ಹಾಕಿಕೊಂಡಿದೆ. ಅಂದರೆ, ಈಗಿನ ಸರ್ವೀಸ್ ಸ್ಟೇಷನ್‌ಗಳ ಪ್ರಮಾಣವನ್ನು ಎರಡು ಪಟ್ಟು ಹೆಚ್ಚಿಸಲಿದೆ. 2025ರ ವೇಳೆಗೆ ತನ್ನ ಸರ್ವೀಸ್ ನೆಟ್‌ವರ್ಕ್‌ಗಳ ಸಂಖ್ಯೆಯನ್ನು 10 ಸಾವಿರಕ್ಕೆ ತಲುಪಿಸಲು ಯೋಜಿಸಿದೆ.
ಇಷ್ಟು ಮಾತ್ರವಲ್ಲ. ಶೀಘ್ರದಲ್ಲಿ ಎಲೆಕ್ಟ್ರಿಕ್ ಬೈಕ್ ಪರಿಚಯಿಸಲು ಕಂಪನಿ ಯೋಜಿಸಿದೆ. ಈಗಾಗಲೇ ಸ್ಕೂಟರ್ ಮಾರುಕಟ್ಟೆಯಲ್ಲಿ ಗಮನಾರ್ಹ ಪ್ರಮಾಣ ಹೊಂದಿರುವ ಕಂಪನಿಯು ಎಲೆಕ್ಟ್ರಿಕ್ ಬೈಕ್ ಮೂಲಕವೂ ಮಾರಾಟ ಹೆಚ್ಚಿಸಿಕೊಳ್ಳಲು ಉದ್ದೇಶೀಸಿದೆ. ಕಂಪನಿಯು ಈ ವರ್ಷದ ಆಗಸ್ಟ್ ತಿಂಗಳಲ್ಲಿ ಓಲಾ ರೋಡ್‌ಸ್ಟರ್ ಮಾದರಿಯನ್ನು ಪ್ರದರ್ಶೀಸಿತ್ತು. ಇದರ ಎಕ್ಸ್ ಶೋರೂಂ ದರ 74,999 ರೂಪಾಯಿ ಇರಲಿದೆ. ಜನವರಿ 2025ಕ್ಕೆ ಈ ಬೈಕ್ ಡೆಲಿವರಿ ಆರಂಭಿಸಲಾಗುವುದು ಎಂದು ಈ ಹಿಂದೆ ತಿಳಿಸಿತ್ತು.