Bank holidays in december 2022 in karnataka: ವರ್ಷದ ಕೊನೇ ತಿಂಗಳು ಶುರು; ರಾಜ್ಯದಲ್ಲಿ ಬ್ಯಾಂಕುಗಳಿಗೆ ಎಷ್ಟು ದಿನ ರಜೆ?
- Bank Holidays in December 2022 in karnataka : ಇಂದು ಡಿಸೆಂಬರ್ ಒಂದು. ದೇಶದಲ್ಲಿ ಬ್ಯಾಂಕುಗಳ ಕೆಲಸದ ದಿನಗಳನ್ನು ಪರಿಗಣಿಸಿದರೆ ಒಟ್ಟಾರೆ 17 ದಿನಗಳಷ್ಟೆ ಕೆಲಸದ ದಿನಗಳು. ಆದರೆ ಇದು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ಕ್ರಿಸ್ಮಸ್ ಸಮಯದಲ್ಲಿ ಬ್ಯಾಂಕುಗಳು ಯಾವಾಗ ಮತ್ತು ಎಲ್ಲಿ ಮುಚ್ಚಲ್ಪಡುತ್ತವೆ? ಕರ್ನಾಟಕದಲ್ಲಿ ಎಷ್ಟು ದಿನ ರಜೆ ಇಲ್ಲಿದೆ ವಿವರ

(1 / 4)
ಕರ್ನಾಟಕದಲ್ಲಿ ಡಿಸೆಂಬರ್ 10ರಂದು ಬ್ಯಾಂಕುಗಳಿಗೆ ರಜೆ ಇದೆ. ಇದು ಸೆಕೆಂಡ್ ಸ್ಯಾಟರ್‌ಡೇ ಅಥವಾ ಎರಡನೇ ಶನಿವಾರ ಎಂಬ ಕಾರಣಕ್ಕೆ ನಿಶ್ಚಿತವಾದ ರಜೆ. ಈ ದಿನ ಯಾವುದೇ ಬ್ಯಾಂಕಿಂಗ್ ಕಾರ್ಯಗಳು ನಡೆಯುವುದಿಲ್ಲ. ಡಿಸೆಂಬರ್ 11 ಭಾನುವಾರ. ವಾರಾಂತ್ಯದ ಎರಡು ದಿನ ಬ್ಯಾಂಕು ರಜೆ ಇರಲಿದೆ. (ಸಾಂಕೇತಿಕ ಚಿತ್ರ)
(2 / 4)
ಇದಾಗಿ ಡಿಸೆಂಬರ್ 24ರಂದು ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ. ಲೆಕ್ಕ ಪ್ರಕಾರ ಇದು ನಾಲ್ಕನೇ ಶನಿವಾರ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಅದು ಇಲ್ಲಿ ಅನ್ವಯ. ಕ್ರಿಸ್ಮಸ್ ಈವ್ ಕೂಡ ಇದೇ ದಿನ ಇದೆ. (ಸಾಂಕೇತಿಕ ಚಿತ್ರ)
(3 / 4)
ಇನ್ನು ಡಿಸೆಂಬರ್ 25 ಕ್ರಿಸ್ಮಸ್ ಆಚರಣೆ. ಈ ಸಲ ಇದು ಭಾನುವಾರ ಬಂದಿದೆ. ಹಾಗಾಗಿ ಪ್ರತ್ಯೇಕ ರಜೆ ಇರಲ್ಲ. ಭಾನುವಾರದ ಜತೆಗೆ ಈ ಸಲ ಕ್ರಿಸ್ಮಸ್ ರಜೆಯೂ ಸೇರಿಕೊಂಡಿದೆ. ಒಂದು ಸಮಾಧಾನದ ವಿಚಾರ ಎಂದರೆ ನಾಲ್ಕನೇ ಶನಿವಾರ ಮತ್ತು ಕ್ರಿಸ್ಮಸ್ ಭಾನುವಾರ ಒಟ್ಟಿಗೆ ಬಂದಿರುವುದು ಒಟ್ಟಿಗೆ ಎರಡು ರಜೆ ಸಿಕ್ಕಂತಾಗಿದೆ.
ಇತರ ಗ್ಯಾಲರಿಗಳು