Bank of Baroda:'ಬರೋಡಾ ತಿರಂಗಾ' ಸ್ಥಿರ ಠೇವಣಿಯ ಹೆಚ್ಚು ಬಡ್ಡಿಯ ಯೋಜನೆಗಳಿವು
Bank of baroda tiranga deposit: ಬ್ಯಾಂಕ್ ಆಫ್ ಬರೋಡಾ 'ಬರೋಡಾ ತಿರಂಗ' ಠೇವಣಿಗಳ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ.
ನವದೆಹಲಿ: ಬ್ಯಾಂಕ್ ಆಫ್ ಬರೋಡಾ 'ಬರೋಡಾ ತಿರಂಗ' ಠೇವಣಿಗಳ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ.
ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಇಂದು ಬರೋಡಾ ತಿರಂಗಾ ಠೇವಣಿ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ವಿಶೇಷ ಅವಧಿಯ ಠೇವಣಿ ಯೋಜನೆಯಾಗಿದೆ. ಬರೋಡಾ ತಿರಂಗ ಠೇವಣಿಗಳು ಎರಡು ಅವಧಿಗಳಲ್ಲಿ ಲಭ್ಯವಿದೆ.
444 ದಿನಗಳ ನಿಶ್ಚಿತ ಠೇವಣಿ ಯೋಜನೆಯಲ್ಲಿ ವಾರ್ಷಿಕ ಶೇ. 5.75 ಬಡ್ಡಿ ದರಗಳು ಅನ್ವಯಿಸುತ್ತವೆ. ಬರೋಡಾ ತಿರಂಗ ಠೇವಣಿಯ ಮತ್ತೊಂದು ಯೋಜನೆಯಲ್ಲಿ 555 ದಿನಗಳವರೆಗೆ ವಾರ್ಷಿಕ ಶೇ.6 ರಷ್ಟು ಬಡ್ಡಿಯನ್ನು ನೀಡುತ್ತದೆ. ಬರೋಡಾ ತಿರಂಗಾ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಇಂದಿನಿಂದ(16ನೇ ಆಗಸ್ಟ್ 2022) ಆರಂಭವಾಗುತ್ತಿದೆ. 31ನೇ ಡಿಸೆಂಬರ್ 2022 ರವರೆಗೆ ಯೋಜನೆಯಲ್ಲಿ ಸ್ಥಿರ ಠೇವಣಿಗಳನ್ನು ಮಾಡಬಹುದಾಗಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಚಿಲ್ಲರೆ ಠೇವಣಿಗಳಿಗೆ ಇದು ಅನ್ವಯಿಸುತ್ತದೆ.
ಹಿರಿಯ ನಾಗರಿಕರು ಶೇ.0.50ರಷ್ಟು ಹೆಚ್ಚುವರಿ ಬಡ್ಡಿದರವನ್ನು ನೀಡಲಾಗುತ್ತದೆ. ಆದಾಗ್ಯೂ ನಿಗದಿತ ದಿನಾಂಕದೊಳಗೆ ಹಿಂತೆಗೆದುಕೊಳ್ಳದ ಠೇವಣಿಗಳಿಗೆ ಹೆಚ್ಚುವರಿಯಾಗಿ ಶೇ. 0.15 ರಷ್ಟು ಬಡ್ಡಿಯನ್ನು ನೀಡುವ ಮೂಲಕ ಸ್ಥಿರ ಠೇವಣಿದಾರರನ್ನು ಆಕರ್ಷಿಸುತ್ತಿದೆ.
ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಲು ನಾವು ಗ್ರಾಹಕರಿಗೆ ಈ ಸುವರ್ಣ ಅವಕಾಶವನ್ನು ನೀಡುತ್ತಿದ್ದೇವೆ. ಬರೋಡಾ ತಿರಂಗ ಠೇವಣಿ ಯೋಜನೆಯು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ ಎಂದು ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ. ಖುರಾನಾ ತಿಳಿಸಿದ್ದಾರೆ.
ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾದ ಬರೋಡಾ ಈ ಮೂಲಕ ಎರಡು ಅವಧಿಗಳ ಸ್ಥಿರ ಠೇವಣಿ ಸೌಲಭ್ಯವನ್ನು ನೀಡುತ್ತಿದೆ. ದೇಶವು ತನ್ನ 76 ನೇ ಸ್ವಾತಂತ್ರ್ಯ ದಿನವನ್ನು ಆಜಾದಿ ಕಾ ಅಮೃತ್ ಮಹೋತ್ಸವ ಎಂದು ಆಚರಿಸುತ್ತಿರುವ ಕಾರಣ ಎಸ್‌ಬಿಐ 'ಉತ್ಸವ್ ಠೇವಣಿ' ಎಂಬ ವಿಶೇಷ ಅವಧಿ ಠೇವಣಿಯನ್ನೂ ಪರಿಚಯಿಸಿದೆ. ಈ ನಿಶ್ಚಿತ ಠೇವಣಿ ಯೋಜನೆಯು ಹೆಚ್ಚಿನ ಬಡ್ಡಿದರಗಳನ್ನು ಹೊಂದಿರುತ್ತದೆ. ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.
ಉತ್ಸವ್ ಫಿಕ್ಸೆಡ್ ಡೆಪಾಸಿಟ್ ಯೋಜನೆಯ ಭಾಗವಾಗಿ ಎಸ್‌ಬಿಐ 1000 ದಿನಗಳ ಕಾಲಾವಧಿಯೊಂದಿಗೆ ಸ್ಥಿರ ಠೇವಣಿಗಳ ಮೇಲೆ ವಾರ್ಷಿಕ ಶೇ. 6.10ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಹಿರಿಯ ನಾಗರಿಕರು ಸಾಮಾನ್ಯ ದರಕ್ಕಿಂತ ಶೇ. 0.50ರಷ್ಟು ಹೆಚ್ಚುವರಿ ಬಡ್ಡಿ ದರಕ್ಕೆ ಅರ್ಹರಾಗಿರುತ್ತಾರೆ. ಈ ದರಗಳು ನಿನ್ನೆಯಿಂದ(15 ಆಗಸ್ಟ್ 2022) ಜಾರಿಗೆ ಬರುತ್ತವೆ. ಯೋಜನೆಯು 75 ದಿನಗಳವರೆಗೆ ಮಾನ್ಯವಾಗಿರುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ರೆಪೊ ದರವನ್ನು ಹೆಚ್ಚಿಸಿದ ಬೆನ್ನಲ್ಲೇ ವಿವಿಧ ಬ್ಯಾಂಕ್‌ಗಳು ತಮ್ಮ ಸಾಂಸ್ಥಿಕ ಬಡ್ಡಿದರ ಅಥವಾ ಎಂಸಿಎಲ್‌ಆರ್ ಅನ್ನು ಹೊಂದಾಣಿಕೆ ಮಾಡಿ ಇಎಂಐ ಬಡ್ಡಿದರ ಹೆಚ್ಚಿಸುತ್ತಿವೆ.
ಆರ್‌ಬಿಐಯು ಹಣದುಬ್ಬರ ನಿಯಂತ್ರಣಕ್ಕಾಗಿ ಇತ್ತೀಚೆಗೆ ರೆಪೊ ದರವನ್ನು ಶೇಕಡ 50 ಮೂಲಾಂಶದಷ್ಟು ಹೆಚ್ಚಿಸಿತ್ತು. ಇದರಿಂದ ಎಸ್‌ಬಿಐಯು ಸಾಲದ ಮೇಲಿನ ಬಡ್ಡಿದರಗಳ ಮಾನದಂಡವನ್ನು ಶೇಕಡ 50 ಮೂಲ ಅಂಕದಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ಬಡ್ಡಿದರ ನಿನ್ನೆಯಿಂದಲೇ ಅನ್ವಯವಾಗಲಿದೆ.
ರೆಪೊ ದರಕ್ಕೆ ಇಬಿಎಲ್‌ಆರ್ ಮತ್ತು ಆರ್‌ಎಲ್‌ಎಲ್‌ಆರ್) ಜೋಡಣೆಯಾದ ಸಾಲಗಳಿಗೆ ಶೇ.0.50 ಬಡ್ಡಿದರ ಹೆಚ್ಚಳ ವಾಗಿದ್ದರೆ, ಸಾಂಸ್ಥಿಕ ಬಡ್ಡಿದರದಲ್ಲಿ ನೀಡುವ ಸಾಲದ ಮೇಲೆ ಬಡ್ಡಿದರವು ಶೇಕಡ 0.20ರಷ್ಟು ಏರಿಕೆ ಕಂಡಿದೆ. ಎಲ್ಲಾ ಬಗೆಯ ಸಾಲಗಾರರಿಗೆ ಬಡ್ಡಿದರ ಹೆಚ್ಚಳದ ಬಿಸಿ ತಾಗಲಿವೆ. ವಿಶೇಷವಾಗಿ ಗೃಹಸಾಲ ಇತ್ಯಾದಿ ದೊಡ್ಡಮೊತ್ತದ ಸಾಲಗಾರರಿಗೆ ಹೆಚ್ಚಿನ ತೊಂದರೆಯಾಗಲಿದೆ.
ವಿಭಾಗ