ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ? ಅ.15ಕ್ಕೆ ಓಪನ್ ಆಗ್ತಿದೆ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ? ಅ.15ಕ್ಕೆ ಓಪನ್ ಆಗ್ತಿದೆ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ

ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ? ಅ.15ಕ್ಕೆ ಓಪನ್ ಆಗ್ತಿದೆ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ

ಭಾರತದ ಐಪಿಒ ಮಾರುಕಟ್ಟೆಯ ಅತಿದೊಡ್ಡ ಐಪಿಒ ಸ್ಥಾನಕ್ಕೆ ಲಗ್ಗೆ ಇಡುತ್ತಿದೆ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ. ಅಕ್ಟೋಬರ್ 15ರಂದು ಐಪಿಒ ಚಂದಾದಾರಿಕೆ ಶುರುವಾಗಲಿದ್ದು, 17ರ ತನಕ ಕಾಲಾವಕಾಶವಿದೆ. ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ?, ಹಾಗಾದ್ರೆ, ಅದರ ಕುರಿತಾದ ಕುತೂಹಲ ತಣಿಸುವ ವಿಚಾರ ಇಲ್ಲಿದೆ.

ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ? ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಅ.15ಕ್ಕೆ ಓಪನ್ ಆಗ್ತಿದೆ. (ಸಾಂಕೇತಿಕ ಚಿತ್ರ)
ಭಾರತದ ಅತಿದೊಡ್ಡ ಐಪಿಒ ಖರೀದಿಸೋಕೆ ರೆಡಿಯಾ? ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಅ.15ಕ್ಕೆ ಓಪನ್ ಆಗ್ತಿದೆ. (ಸಾಂಕೇತಿಕ ಚಿತ್ರ)

ಮುಂಬಯಿ: ಭಾರತದ ಅತಿದೊಡ್ಡ ಐಪಿಒ ಸ್ಥಾನವನ್ನು ತುಂಬಿಕೊಳ್ಳುತ್ತಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಐಪಿಒ ಅಕ್ಟೋಬರ್ 15 ರಂದು ಓಪನ್ ಆಗಲಿದೆ. ಸರಳವಾಗಿ ಹೇಳಬೇಕು ಎಂದರೆ ಐಪಿಒ ಹಂಚಿಕೆ ಶುರುವಾಗಲಿದ್ದು, ಅದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಷೇರುಪೇಟೆ ಪ್ರವೇಶಿಸುತ್ತಿರುವ ಹ್ಯುಂಡೈ ಮೋಟಾರ್ ಇಂಡಿಯಾ, ತನ್ನ ಐಪಿಒ ದರವನ್ನು 1,865 ರೂನಿಂದ 1960 ರೂಪಾಯಿ ರೇಂಜ್‌ನಲ್ಲಿ ಇಟ್ಟುಕೊಂಡಿದೆ. ಈ ಈಕ್ವಿಟಿ ಷೇರಿನ ಮುಖಬೆಲೆ 10 ರೂಪಾಯಿ. ಐಪಿಒ ಸಬ್‌ಸ್ಕ್ರಿಪ್ಶನ್‌ಗೆ ಅಕ್ಟೋಬರ್‌ 17 ಕೊನೇ ದಿನ ಅಂದರೆ ಇದು ಐಪಿಒಗೆ ಅರ್ಜಿ ಸಲ್ಲಿಸಲು ಕೊನೇ ದಿನ. ಈ ಈಕ್ವಿಟಿ ಷೇರು ಅದರ ಮುಖ ಬೆಲೆ ( 10 ರೂ) ಗಿಂತ 186.50 ಪಟ್ಟು ಹೆಚ್ಚು ಇದ್ದು, ಗರಿಷ್ಠ ಬೆಲೆ 196 ಪಟ್ಟು ಹೆಚ್ಚಿದೆ. ಬಹುತೇಕ ಹೂಡಿಕೆದಾರರು ಐಪಿಒ ಮೇಲೆ ಹೂಡಿಕೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಕಾರಣ ಇಷ್ಟೆ- ಲಿಸ್ಟಿಂಗ್ ದಿನದ ಲಾಭದ ಮೇಲೆ ಈ ಹೂಡಿಕೆದಾರರ ಗಮನವಿರುತ್ತದೆ. ಲಿಸ್ಟಿಂಗ್ ಆದ ಕೂಡಲೇ ಷೇರು ಮೌಲ್ಯ ಹೂಡಿಕೆ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸುತ್ತದೆ. ಅಲ್ಪಾವಧಿಯಲ್ಲಿ ದೊಡ್ಡ ಮೊತ್ತ ಒಗ್ಗೂಡಿಸುವುದಕ್ಕೆ ಇದೊಂದು ದಾರಿ ಎಂಬುದನ್ನು ಹೂಡಿಕೆದಾರರು ಕಂಡುಕೊಂಡಿದ್ದಾರೆ.

ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ವಿಶೇಷ

ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ಲಾಟ್‌ನಲ್ಲಿ ಕನಿಷ್ಠ 7 ಷೇರುಗಳನ್ನು ಖರೀದಿಸಬೇಕಾಗಿದ್ದು, ನಂತರ ಹೆಚ್ಚುವರಿಯಾಗಿ ಕೂಡ 7 ಸಂಖ್ಯೆಯಲ್ಲೇ ಖರೀದಿಸಬೇಕು. ಈಗ ಬಿಡುಗಡೆ ಮಾಡುತ್ತಿರುವ ಐಪಿಒದಲ್ಲಿ ಶೇಕಡ 50 ಪಾಲು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಮತ್ತು ಶೇಕಡ 15ಕ್ಕೆ ಕಡಿಮೆ ಇಲ್ಲದಂತೆ ನಾನ್‌ ಇನ್‌ಸ್ಟಿಟ್ಯೂಷನಲ್‌ ಇನ್‌ವೆಸ್ಟರ್‌ಗಳಿಗೆ ಮತ್ತು ಶೇಕಡ 35ಕ್ಕೆ ಕಡಿಮೆ ಇಲ್ಲದಂತೆ ಚಿಲ್ಲರೆ ಹೂಡಿಕೆದಾರರಿಗೆ ಮೀಸಲಾಗಿದೆ. ಉದ್ಯೋಗಿಗಳಿಗೆ ಮೀಸಲಾಗಿರುವ ಷೇರುಗಳ ಸಂಖ್ಯೆ 7,78,400. ಅರ್ಹ ಉದ್ಯೋಗಿಗಳಿಗೆ 186 ರೂ ವಿನಾಯಿತಿ ಕೂಡ ಸಿಗಲಿದೆ.

ತಾತ್ಕಾಲಿಕ ಮಾಹಿತಿ ಪ್ರಕಾರ, ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಹಂಚಿಕೆ ಶುಕ್ರವಾರ (ಅಕ್ಟೋಬರ್ 18) ಅಂತಿಮಗೊಳ್ಳಲಿದೆ. ಅಕ್ಟೋಬರ್ 21 ರಂದು ಐಪಿಒ ಸಿಗದವರಿಗೆ ಅವರು ಪಾವತಿಸಿದ ಹಣ ರೀಫಂಡ್ ಶುರುವಾಗಲಿದೆ. ಅಕ್ಟೋಬರ್ 22 ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇಗಳಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಷೇರುಗಳು ಲಿಸ್ಟ್ ಆಗಿ ವಹಿವಾಟು ಶುರುಮಾಡಲಿವೆ.

ಗ್ರೇಮಾರ್ಕೆಟ್‌ನಲ್ಲಿ ಐಪಿಒ ಬೆಲೆ ಇಂದು (ಅಕ್ಟೋಬರ್ 9) 147 ರೂಪಾಯಿ ಹೆಚ್ಚಾಗಿದೆ. ಇದರೊಂದಿಗೆ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ದರ 2107 ರೂಪಾಯಿ ಆಗಿದೆ.

ಐಪಿಒ ಮೂಲಕ ಹ್ಯುಂಡೈ ಮೋಟಾರ್ ಇಂಡಿಯಾ ಸಂಗ್ರಹಿಸುವ ಮೊತ್ತ

ಅಕ್ಟೋಬರ್ 15 ರಂದು ಚಂದಾದಾರಿಕೆಗೆ ತೆರೆದುಕೊಳ್ಳುವ ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒ ಮೂಲಕ ಕಂಪನಿಯು 27,870 ಕೋಟಿ ರೂಪಾಯಿ ಸಂಗ್ರಹಿಸಲು ಮುಂದಾಗಿದೆ. ಇದು ಭಾರತದ ಅತಿದೊಡ್ಡ ಐಪಿಒ ಆಗಲಿದೆ. ಇದು ಎಲ್‌ಐಸಿಯ ಐಪಿಒವನ್ನು ಮೀರಿಸಲಿದೆ. ಎಲ್‌ಐಸಿಐಪಿಒ ದೇಶದ ಇದುವರೆಗಿನ ಅತಿದೊಡ್ಡ ಐಪಿಒ ಆಗಿತ್ತು.

ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿ ಪ್ರಮೋಟರ್‌ಗಳು ಒಟ್ಟು 14.2 ಕೋಟಿ ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲಿದ್ದಾರೆ. ಈ ಕಂಪನಿಯ ಮರ್ಚೆಂಟ್ ಬ್ಯಾಂಕ್‌ಗಳಾದ ಕೊಟಾಕ್ ಮಹಿಂದ್ರಾ ಕ್ಯಾಪಿಟಲ್ ಕಂಪನಿ, ಸಿಟಿ ಗ್ರೂಪ್ ಗ್ಲೋಬಲ್ ಮಾರ್ಕೆಟ್ಸ್ ಇಂಡಿಯಾ, ಎಚ್‌ಎಸ್‌ಬಿಸಿ ಸೆಕ್ಯುರಿಟೀಸ್ ಆಂಡ್ ಕ್ಯಾಪಿಟಲ್ ಮಾರ್ಕೆಟ್ಸ್‌ ಇಂಡಿಯಾ, ಜೆಪಿ ಮೋರ್ಗಾನ್‌ ಇಂಡಿಯಾ ಮತ್ತು ಮೋರ್ಗಾನ್ ಸ್ಟ್ಯಾನ್ಲಿ ಇಂಡಿಯಾ ಕಂಪನಿ ಐಪಿಒಗಳನ್ನು ನಿರ್ವಹಿಸಲಿವೆ. ಕೆಫಿನ್‌ ಟೆಕ್ನಾಲಜೀಸ್‌ ರಿಜಿಸ್ಟ್ರಾರ್‌ ಆಗಿ ಕೆಲಸ ನಿರ್ವಹಿಸುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.