ಕನ್ನಡ ಸುದ್ದಿ  /  Nation And-world  /  Business News Gold Silver Price Today January 25th Gold Silver Rate In Karnataka Bengaluru Mysuru Rsm

Gold Rate: 2 ದಿನಗಳಿಂದ ಸತತವಾಗಿ ಏರುತ್ತಿರುವ ಚಿನ್ನ, ಬೆಳ್ಳಿ; ಇಂದು ವಿವಿಧ ನಗರಗಳು, ರಾಜ್ಯಗಳಲ್ಲಿ ಬಂಗಾರದ ಬೆಲೆ ಹೇಗಿದೆ?

Gold Rate: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಂದೂ ಹೆಚ್ಚಳವಾಗಿದೆ. ಕಳೆದ ತಿಂಗಳ ಅಂತ್ಯದಲ್ಲಿ ಇಳಿಕೆ ಕಂಡಿದ್ದ ಬಂಗಾರ ಹಾಗೂ ಬೆಳ್ಳಿ ಮಾರ್ಚ್‌ ತಿಂಗಳಲ್ಲಿ ಸತತ 3ನೇ ದಿನವೂ ಏರಿಕೆ ಕಂಡಿದೆ. ಇಂದು ಇತರ ರಾಜ್ಯಗಳಲ್ಲಿ 22 ಕ್ಯಾರೆಟ್‌ ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ ಹೇಗಿದೆ ನೋಡೋಣ.

ಮಾರ್ಚ್‌ 3ರ ಚಿನ್ನ, ಬೆಳ್ಳಿ ಬೆಲೆ
ಮಾರ್ಚ್‌ 3ರ ಚಿನ್ನ, ಬೆಳ್ಳಿ ಬೆಲೆ

ಬೆಂಗಳೂರು: ಫೆಬ್ರವರಿ ತಿಂಗಳಲ್ಲಿ ಇಳಿಕೆ ಕಂಡು, ಒಂದೆರಡು ದಿನ ತಟಸ್ಥವಾಗಿದ್ದ ಚಿನ್ನ ಇಂದು ಏರಿಕೆ ಆಗಿದೆ. ಶನಿವಾರ ಕೂಡಾ ಚಿನ್ನ ಏರಿಕೆ ಆಗಿತ್ತು. ಜೊತೆಗೆ ಬೆಳ್ಳಿ ಬೆಲೆ ಕೂಡಾ ಏರಿಕೆ ಕಂಡಿದೆ. ನಿನ್ನೆಗಿಂತ ಚಿನ್ನ ಇಂದು ಗ್ರಾಂಗೆ 85 ಪೈಸೆ ಹೆಚ್ಚಾಗಿದ್ದರೆ, ಬೆಳ್ಳಿ 1 ಗ್ರಾಂಗೆ 10 ಪೈಸೆ ಹೆಚ್ಚಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 22 ಕ್ಯಾರೆಟ್‌ ಚಿನ್ನದ ಬೆಲೆ ಗ್ರಾಂಗೆ 5,875 ರೂ ಆಗಿದೆ. ನಿನ್ನೆ 5,790 ಇತ್ತು. 8 ಗ್ರಾಂ ಚಿನ್ನದ ಬೆಲೆ 47,000 ರೂ ಇದೆ. ನಿನ್ನೆ ಇದರ ಬೆಲೆ 46,320 ರೂ ಇತ್ತು. ಹಾಗೇ 10 ಗ್ರಾಂಗೆ 58,750 ರೂ. 100 ಗ್ರಾಂಗೆ 5,87,500 ರೂ ಬೆಲೆ ನಿಗದಿಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ 93ರೂ. ಹೆಚ್ಚಾಗಿದೆ. 1 ಗ್ರಾಂ ಚಿನ್ನದ ಬೆಲೆ 6,409 ರೂ. ಇದೆ. ನಿನ್ನೆ ಇದರ ಬೆಲೆ 6,316 ರೂ ಇತ್ತು. 8 ಗ್ರಾಂ ಚಿನ್ನದ ಬೆಲೆ 51,272 ರೂ. 10 ಗ್ರಾಂ ಚಿನ್ನಕ್ಕೆ 64,090 ರೂ. 100 ಗ್ರಾಂಗೆ 6,40,900 ರೂ ಫಿಕ್ಸ್‌ ಆಗಿದೆ. ನಿನ್ನೆ ಇದರ ಬೆಲೆ 6,31,600 ರೂ ಇತ್ತು.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ (10 ಗ್ರಾಂ ಗೆ)

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂಗೆ 22 ಕ್ಯಾರೆಟ್‌ ಚಿನ್ನದ ಬೆಲೆಗೆ 58,750 ರೂ ನಿಗದಿ ಆಗಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 64,090 ರೂ. ಇದೆ. ಬೆಂಗಳೂರು ಹೊರತುಪಡಿಸಿ ಮೈಸೂರು, ದಾವಣಗೆರೆ, ಬಳ್ಳಾರಿ, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಇತರ ರಾಜ್ಯಗಳ ಚಿನ್ನದ ದರ (10 ಗ್ರಾಂ ಗೆ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 59,400 ರೂ. 24 ಕ್ಯಾರೆಟ್‌ ಚಿನ್ನದ ಬೆಲೆ 64,800 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ 58,750 ರೂ. ಹಾಗೂ 24 ಕ್ಯಾರೆಟ್‌ಗೆ 64,090 ರೂ. ಇದೆ. ನವದೆಹಲಿಯಲ್ಲಿ 58,900 ರೂ. 24 ಕ್ಯಾರೆಟ್‌ಗೆ 64,240 ರೂ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ 58,750 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 64,090 ರೂ. ಇದೆ. ಮುತ್ತಿನ ನಗರಿ ಹೈದರಾಬಾದ್‌ನಲ್ಲಿ 58,750 ರೂ. 24 ಕ್ಯಾರೆಟ್‌ ಚಿನ್ನಕ್ಕೆ 64,090 ರೂ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ 58,750 ರೂ. ಹಾಗೂ 24 ಕ್ಯಾರೆಟ್‌ ಚಿನ್ನಕ್ಕೆ 64,090 ಇದೆ. ಪುಣೆಯಲ್ಲಿ 22 ಕ್ಯಾರೆಟ್‌ಗೆ 58,750 ರೂ. 24 ಕ್ಯಾರೆಟ್‌ಗೆ 64,090 ರೂ. ಇದೆ. ಅಹಮದಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನಕ್ಕೆ 58,800 ರೂ. ಹಾಗೂ 24 ಕ್ಯಾರೆಟ್‌ ಚಿನ್ನಕ್ಕೆ 64,140 ರೂ. ಬೆಲೆ ನಿಗದಿಯಾಗಿದೆ.

ಇಂದಿನ ಬೆಳ್ಳಿ ಬೆಲೆ

ನಿನ್ನೆಗೆ ಹೋಲಿಸದರೆ ಇಂದು 1 ಗ್ರಾಂ ಬೆಳ್ಳಿ ಬೆಲೆ 72.10 ರೂ. 8 ಗ್ರಾಂಗೆ 576.80 10 ಗ್ರಾಂಗೆ 721 ರೂ. 100 ಗ್ರಾಂಗೆ 7,210 ರೂ ಹಾಗೂ 1 ಕಿಲೋಗೆ 72,100 ರೂ. ಬೆಲೆ ನಿಗದಿ ಆಗಿದೆ.

IPL_Entry_Point