ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಶುಕ್ರವಾರವೂ ಆಭರಣ ಪ್ರಿಯರಿಗೆ ನಿರಾಸೆ; ಮತ್ತೆ ಏರಿಕೆಯಾಗಿದೆ ಚಿನ್ನ, ಬೆಳ್ಳಿ ದರ; ಇಂದಿನ ಆಭರಣ ದರ ಗಮನಿಸಿ

Gold Rate: ಶುಕ್ರವಾರವೂ ಆಭರಣ ಪ್ರಿಯರಿಗೆ ನಿರಾಸೆ; ಮತ್ತೆ ಏರಿಕೆಯಾಗಿದೆ ಚಿನ್ನ, ಬೆಳ್ಳಿ ದರ; ಇಂದಿನ ಆಭರಣ ದರ ಗಮನಿಸಿ

ಯುಗಾದಿ ಹಬ್ಬ ಹತ್ತಿರ ಬರುತ್ತಿದೆ, ಚಿನ್ನದ ದರ ಇಳಿಕೆಯಾಗಬಹುದು ಎಂದು ಆಸೆ ಪಡುತ್ತಿರುವವರಿಗೆ ನಿರಾಸೆ ಕಾಡುವುದು ಖಚಿತ. ಯಾಕೆಂದರೆ ದಿನೇ ದಿನೇ ಚಿನ್ನದ ದರದಲ್ಲಿ ಏರಿಕೆಯಾಗುತ್ತಲೇ ಇದೆ. ಇತ್ತ ಏಪ್ರಿಲ್‌ ಆರಂಭದಿಂದ ಬೆಳ್ಳಿ ದರವೂ ಹೆಚ್ಚುತ್ತಿದೆ. ಇಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

ಏಪ್ರಿಲ್‌ 5ರ ಚಿನ್ನ ಬೆಳ್ಳಿ ದರ
ಏಪ್ರಿಲ್‌ 5ರ ಚಿನ್ನ ಬೆಳ್ಳಿ ದರ

ಬೆಂಗಳೂರು: ಏಪ್ರಿಲ್‌ ತಿಂಗಳು ಆಭರಣ ಪ್ರಿಯರಿಗೆ ನಿಜಕ್ಕೂ ಶುಭವಲ್ಲ. ಏಕೆಂದರೆ ಈ ತಿಂಗಳ ಆರಂಭದಿಂದಲೂ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗುತ್ತಿದೆ. ಒಂದು ಚಿನ್ನ ಕೊಂಚ ಕಡಿಮೆಯಾದರೆ ಮರುದಿನ ದುಪ್ಪಟ್ಟ ಏರಿಕೆ ಕಾಣುತ್ತಿದೆ. ಏಪ್ರಿಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳಿದ್ದು ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ನಿರಾಸೆ ಕಾಡುವುದು ಖಚಿತ. ಇಂದು (ಏಪ್ರಿಲ್‌ 5) ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆಯಾಗಿದೆ. ಜೊತೆಗೆ ಬೆಳ್ಳಿ ಬೆಲೆಯೂ ಹೆಚ್ಚಾಗಿದೆ. ಹಾಗಾದರೆ ದೇಶದಲ್ಲಿಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 6,460 ರೂ. ಇದೆ. ನಿನ್ನೆ 6,410 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 50 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 51,680 ರೂ. ನೀಡಬೇಕು. ನಿನ್ನೆ 50,280 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 400 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 64,600 ರೂ ಇದೆ. ನಿನ್ನೆ 63,100 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 500 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,46,000 ರೂ. ನೀಡಬೇಕು. ನಿನ್ನೆ 6,41,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 5,000 ರೂ. ಹೆಚ್ಚಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 7,047 ರೂ. ಇದೆ. ನಿನ್ನೆ 6,987 ರೂ. ಇದು ಈ ದರಕ್ಕೆ ಹೋಲಿಸಿದರೆ 60 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 56,376 ರೂ. ನೀಡಬೇಕು. ನಿನ್ನೆ 55,896 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 480 ರೂ. ಏರಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 70,470 ನೀಡಬೇಕು. ನಿನ್ನೆ 69,870 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 600 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,04,700 ರೂ. ಇದೆ. ನಿನ್ನೆ 6,98,700 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 6,000 ರೂ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 64,600 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 70,470 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 65,450 ರೂ. 24 ಕ್ಯಾರೆಟ್‌ಗೆ 71,400 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,600 ರೂ. 24 ಕ್ಯಾರೆಟ್‌ಗೆ 70,470 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,750 ರೂ. 24 ಕ್ಯಾರೆಟ್‌ಗೆ 70,620 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,600 ರೂ. 24 ಕ್ಯಾರೆಟ್‌ಗೆ 70,470 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,600 ರೂ. ಇದ್ದರೆ, 24 ಕ್ಯಾರೆಟ್‌ಗೆ 70,470 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 64,600 ರೂ. 24 ಕ್ಯಾರೆಟ್‌ಗೆ 70,470 ರೂ. ಆಗಿದೆ.

ಬೆಳ್ಳಿ ದರ

ಇಂದು ಬೆಳ್ಳಿ ದರ ಕೂಡ ಹೆಚ್ಚಾಗಿದೆ. ಒಂದು ಗ್ರಾಂ ಬೆಳ್ಳಿಗೆ 79.75 ರೂ. ಇದೆ. 8 ಗ್ರಾಂಗೆ 638 ರೂ ಇದ್ದರೆ, 10 ಗ್ರಾಂಗೆ 797.50 ರೂ. ಇದೆ. 100 ಗ್ರಾಂಗೆ 7,975 ರೂ. ಹಾಗೂ 1 ಕಿಲೋಗೆ 79,750 ರೂ. ಬೆಲೆ ನಿಗದಿ ಆಗಿದೆ.

IPL_Entry_Point