ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate: ಶುಕ್ರವಾರ ಆಭರಣ ಪ್ರಿಯರಿಗೆ ಶುಭಸುದ್ದಿ; ಇಳಿಕೆಯಾಗಿದೆ ಚಿನ್ನ-ಬೆಳ್ಳಿ ದರ, ಕರ್ನಾಟಕದ ಬೆಲೆ ಗಮನಿಸಿ

Gold Rate: ಶುಕ್ರವಾರ ಆಭರಣ ಪ್ರಿಯರಿಗೆ ಶುಭಸುದ್ದಿ; ಇಳಿಕೆಯಾಗಿದೆ ಚಿನ್ನ-ಬೆಳ್ಳಿ ದರ, ಕರ್ನಾಟಕದ ಬೆಲೆ ಗಮನಿಸಿ

ಆಭರಣ ಪ್ರಿಯರಿಗೆ ಶುಕ್ರವಾರ ಶುಭದಿನವಾಗುವುದರಲ್ಲಿ ಅನುಮಾನವಿಲ್ಲ. ಇಂದು (ಫೆ. 23) ಚಿನ್ನ ಹಾಗೂ ಬೆಳ್ಳಿ ದರ ಇಳಿಕೆಯಾಗಿದೆ. ನೀವೇನಾದ್ರೂ ಚಿನ್ನದ ಖರೀದಿ ಮಾಡಬೇಕು ಎಂದು ಬಯಸಿದ್ದರೆ ಇಂದಿನ ದರ ಗಮನಿಸಿ.

ಶುಕ್ರವಾರ ಆಭರಣ ಪ್ರಿಯರಿಗೆ ಶುಭಸುದ್ದಿ; ಇಳಿಕೆಯಾಗಿದೆ ಚಿನ್ನ-ಬೆಳ್ಳಿ ದರ, ಕರ್ನಾಟಕದ ಬೆಲೆ ಗಮನಿಸಿ
ಶುಕ್ರವಾರ ಆಭರಣ ಪ್ರಿಯರಿಗೆ ಶುಭಸುದ್ದಿ; ಇಳಿಕೆಯಾಗಿದೆ ಚಿನ್ನ-ಬೆಳ್ಳಿ ದರ, ಕರ್ನಾಟಕದ ಬೆಲೆ ಗಮನಿಸಿ (MINT_PRINT)

ಬೆಂಗಳೂರು: ಫೆಬ್ರುವರಿ ತಿಂಗಳಲ್ಲಿ ಚಿನ್ನದ ದರದಲ್ಲಿ ನಿರಂತರ ವ್ಯತ್ಯಾಸವಾಗುತ್ತಿದೆ. ಒಂದು ದಿನ ಏರಿಕೆಯಾದರೆ, ಇನ್ನೊಂದು ದಿನ ಇಳಿಕೆಯಾಗುತ್ತಿದೆ. ಬಹುತೇಕ ದಿನ ಇಳಿಮುಖವಾಗಿದ್ದರೂ ದುಪ್ಪಟ್ಟು ಏರಿಕೆಯ ಕಾರಣ ಚಿನ್ನದ ದರದಲ್ಲಿ ಸಾಕಷ್ಟು ಕಡಿಮೆಯಾಗಿದೆ ಎಂದು ಅನ್ನಿಸುತ್ತಿಲ್ಲ. ಇದರೊಂದಿಗೆ ಇಂದು ಬೆಳ್ಳಿ ದರವೂ ಕಡಿಮೆಯಾಗಿದೆ. ನಿನ್ನೆ (ಫೆ.22) ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ದರ ಇಂದು ಕೊಂಚ ಇಳಿಕೆಯಾಗಿದೆ. ದೇಶದ ವಿವಿಧೆಡೆ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ಬೆಲೆ

ಇಂದು 1 ಗ್ರಾಂ ಚಿನ್ನಕ್ಕೆ 5,750 ರೂ. ಆಗಿದೆ. ನಿನ್ನೆ 5,760 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 10 ರೂ ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 46,000 ರೂ. ನೀಡಬೇಕು. ನಿನ್ನೆ 46,080 ರೂ ಇದ್ದು ಈ ದರಕ್ಕೆ ಹೋಲಿಸಿದರೆ 80 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನಕ್ಕೆ 57,500 ರೂ ಆಗಿದ್ದು, ನಿನ್ನೆ 57,600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 100 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 5,75,000 ರೂ. ನೀಡಬೇಕು. ನಿನ್ನೆ 5,76,000 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 1,000 ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ಬೆಲೆ

24 ಕ್ಯಾರೆಟ್‌ ಚಿನ್ನಕ್ಕೆ 1 ಗ್ರಾಂಗೆ 6,273 ರೂ. ಆಗಿದೆ. ನಿನ್ನೆ 6,284 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 11 ರೂ. ಕಡಿಮೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 50,184 ರೂ. ನೀಡಬೇಕು. ನಿನ್ನೆ 50,272 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 88 ರೂ ಇಳಿಕೆಯಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 62,730 ನೀಡಬೇಕು. ನಿನ್ನೆ 62,840 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 110 ರೂ ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 6,27,300 ರೂ. ಇದೆ. ನಿನ್ನೆ 6,28,400 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 1,100 ರೂ. ಇಳಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ)

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 57,500 ರೂ. ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆ 62,730 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.

ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ)

ಚೆನ್ನೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 58,000 ರೂ. 24 ಕ್ಯಾರೆಟ್‌ಗೆ 63,230 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,500 ರೂ. 24 ಕ್ಯಾರೆಟ್‌ಗೆ 62,730 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,650 ರೂ. 24 ಕ್ಯಾರೆಟ್‌ಗೆ 62,880 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,500 ರೂ. 24 ಕ್ಯಾರೆಟ್‌ಗೆ 62,730 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,500 ರೂ. ಇದ್ದರೆ, 24 ಕ್ಯಾರೆಟ್‌ಗೆ 62,730 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 57,500 ರೂ. 24 ಕ್ಯಾರೆಟ್‌ಗೆ 62,730 ರೂ. ಇದೆ.

ಬೆಳ್ಳಿ ದರ

ಇಂದು ಬೆಳ್ಳಿ ಬೆಲೆ ಕಡಿಮೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 72.40 ರೂ. ಇದೆ. 8 ಗ್ರಾಂಗೆ 579.50 ರೂ ಇದ್ದರೆ, 10 ಗ್ರಾಂಗೆ 724 ರೂ. ಇದೆ. 100 ಗ್ರಾಂಗೆ 7,240 ರೂ. ಹಾಗೂ 1 ಕಿಲೋಗೆ 72,400 ರೂ. ಬೆಲೆ ನಿಗದಿ ಆಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.