ಕನ್ನಡ ಸುದ್ದಿ  /  Nation And-world  /  Business News Job Cut Apple Dell Ericsson Ibm Announced Layoffs In March Rmy

ಮಾರ್ಚ್‌ನಲ್ಲಿ ಉದ್ಯೋಗ ಕಡಿತ ಘೋಷಣೆ ಮಾಡಿದ ಆಪಲ್, ಡೆಲ್, ಎರಿಕ್ಸನ್, ಐಬಿಎಂ; ಇದೇ ಕಾರಣ

ಕೋವಿಡ್‌ಗೂ ಮುನ್ನ ಅಗತ್ಯವನ್ನು ಮೀರಿ ನೇಮಕಾತಿ ಮಾಡಿಕೊಂಡ ಅನೇಕ ಟೆಕ್ ಸಂಸ್ಥೆಗಳು 2022 ರಿಂದ ಉದ್ಯೋಗ ಕಡಿತ ಮಾಡುತ್ತಲೇ ಬರುತ್ತಿವೆ. ಇದೀಗ ಡೆಲ್, ಐಬಿಎಂ, ಆಪಲ್, ಜಿಇ ಹಾಗೂ ಇತರ ಕಂಪನಿಗಳು 2024ರ ಉದ್ಯೋಗ ಕಡಿತದ ಘೋಷಣೆ ಮಾಡಿವೆ.

ಎರಿಕ್ಸನ್, ಡೆಲ್, ಆಪಲ್ ಹಾಗೂ ಇತರೆ ಟೆಕ್ ಕಂಪನಿಗಳು ಹಲವು ಕಾರಣಗಳಿಂದ ಉದ್ಯೋಗ ಕಡಿತ ಮಾಡುವುದಾಗಿ ಮಾರ್ಚ್‌ನಲ್ಲಿ ಘೋಷಣೆ ಮಾಡಿವೆ.
ಎರಿಕ್ಸನ್, ಡೆಲ್, ಆಪಲ್ ಹಾಗೂ ಇತರೆ ಟೆಕ್ ಕಂಪನಿಗಳು ಹಲವು ಕಾರಣಗಳಿಂದ ಉದ್ಯೋಗ ಕಡಿತ ಮಾಡುವುದಾಗಿ ಮಾರ್ಚ್‌ನಲ್ಲಿ ಘೋಷಣೆ ಮಾಡಿವೆ.

ತಂತ್ರಜ್ಞಾನ ಉದ್ಯಮವು ಎದುರಿಸುತ್ತಿರುವ ಸವಾಲುಗಳ ನಡುವೆ ಪ್ರಮುಖ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಡಿಮೆ (Layoffs) ಮಾಡುವ ನಿರ್ಧಾರವನ್ನು ಕೈಗೊಂಡಿವೆ. 2024ರ ಮಾರ್ಚ್‌ ತಿಂಗಳಲ್ಲಿ ಪ್ರಮುಖ ಟೆಕ್ ಕಂಪನಿಗಳು ಕೆಲ ಉದ್ಯೋಗಿಗಳನ್ನು ಮನೆಗೆ ಕಳಿಸುವುದಾಗಿ ಘೋಷಣೆ ಮಾಡಿವೆ. ಎರಿಕ್ಸನ್, ಡೆಲ್ ಹಾಗೂ ಆಪಲ್ ಸಂಸ್ಥೆಗಳು ಮಾರ್ಚ್‌ನಲ್ಲಿ ವಿವಿಧ ಕಾರಣಗಳಿಂದಾಗಿ ಉದ್ಯೋಗ ಕಡಿತ ಮಾಡುತ್ತಿವೆ. 5 ಜಿ ಉಪಕರಣಗಳಿಗೆ ಬೇಡಿಕೆ ಕುಸಿಯುತ್ತಿರುವ ಮಧ್ಯೆ ಎರಿಕ್ಸನ್ ಸ್ವೀಡನ್‌ನಲ್ಲಿ 1,200 ಉದ್ಯೋಗಗಳನ್ನು ಕಡಿತಗೊಳಿಸಿದರೆ, ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಡೆಲ್ ತನ್ನ ಉದ್ಯೋಗಿಗಳನ್ನು ಕಡಿಮೆ ಮಾಡಲು ಮುಂದಾಗಿದೆ.

ಮಾರ್ಚ್ 2024 ರಲ್ಲಿ ಉದ್ಯೋಗ ಕಡಿತ ಮಾಡಿರುವ ಟೆಕ್ ಕಂಪನಿಗಳ ವಿವರ ಇಲ್ಲಿದೆ

ಎರಿಕ್ಸನ್ ಉದ್ಯೋಗ ಕಡಿತ: ಎರಿಕ್ಸನ್ 5 ಜಿ ನೆಟ್‌ವರ್ಕ್ ಉಪಕರಣಗಳ ಬೇಡಿಕೆ ನಿಧಾನಗೊಳ್ಳುತ್ತಿರುವ ಕಾರಣ ನೀಡಿ ಸ್ವೀಡನ್‌ನಲ್ಲಿ ಸುಮಾರು 1,200 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಈ ಕಡಿತವು ಸ್ವೀಡನ್ ಟೆಲಿಕಾಂ ದೈತ್ಯ ಕಂಪನಿಯ 2024 ರ ವೆಚ್ಚ ಉಳಿತಾಯ ಯೋಜನೆಯ ಒಂದು ಭಾಗವಾಗಿದೆ. ಎರಿಕ್ಸನ್ ಈ ವರ್ಷ "ಸವಾಲಿನ ಮೊಬೈಲ್ ನೆಟ್‌ವರ್ಕ್ ಮಾರುಕಟ್ಟೆ" ಯ ನಿರೀಕ್ಷೆಗಳನ್ನು ಉಲ್ಲೇಖಿಸಿದೆ, ಕಳೆದ ವರ್ಷವೂ 8,500 ಉದ್ಯೋಗಿಗಳು ಅಥವಾ ಶೇಕಡಾ 8 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿತ್ತು.

ಡೆಲ್ ಉದ್ಯೋಗ ಕಡಿತ: ವ್ಯಾಪಕ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಡೆಲ್ ತನ್ನ ಉದ್ಯೋಗಿಗಳನ್ನು ಕಡಿತಗೊಳಿಸಿದೆ ಎಂದು ಕಂಪನಿ ತಿಳಿಸಿದೆ. ಫೆಬ್ರವರಿಯಲ್ಲಿ, ಡೆಲ್‌ನ ಉದ್ಯೋಗಿಗಳ ಸಂಖ್ಯೆ ಸುಮಾರು 1,26,000 ರಷ್ಟಿತ್ತು, ಇದು 2023 ರಲ್ಲಿ ಸುಮಾರು 1,20,000 ಕ್ಕೆ ಕಡಿಮೆಯಾಗಿದೆ. ಡೆಲ್‌ನ ಪಿಸಿಗಳಿಗೆ ನಿಧಾನಗತಿಯ ಬೇಡಿಕೆ ಇರುವ ಕಾರಣ ಉದ್ಯೋಗಿಗಳನ್ನು ಕಡಿಮೆ ಮಾಡುತ್ತಿದೆ. ಇನ್ನ ನಾಲ್ಕನೇ ತ್ರೈಮಾಸಿಕದಲ್ಲಿ ಆದಾಯದಲ್ಲಿ ಶೇಕಡಾ 11 ಕುಸಿತ ಕಂಡಿರುವುದು ಕೂಡ ಲೇಆಫ್‌ಗೆ ಕಾರಣ ಎಂದು ಹೇಳಲಾಗಿದೆ.

ಆಪಲ್ ಉದ್ಯೋಗ ಕಡಿತ: ಭವಿಷ್ಯದ ಆಪಲ್ ವಾಚ್ ಮಾದರಿಗಾಗಿ ಮೈಕ್ರೋಎಲ್ಇಡಿ ಡಿಸ್‌ಪ್ಲೇಗಳನ್ನು ಅಭಿವೃದ್ಧಿಪಡಿಸುವ ಆಂತರಿಕ ಪ್ರಯತ್ನಗಳನ್ನು ಆಪಲ್‌ ನಿಲ್ಲಿಸಿದೆ. ಇದರಿಂದಾಗಿ ಅಮೆರಿಕ ಮತ್ತು ಏಷ್ಯಾದಲ್ಲಿ ಇಂಜಿನಿಯರಿಂಗ್ ಟೀಂಗಳು ಹಾಗೂ ಇತರೆ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ

ಐಬಿಎಂ ಉದ್ಯೋಗ ಕಡಿತ: ಇಂಟರ್‌ನ್ಯಾಷನ್ ಬಿಸಿನೆಸ್ ಮೆಷಿನ್ಸ್ ಕಾರ್ಪೊರೇಷನ್ (ಐಬಿಎಂ) ಕಂಪನಿಯ ಮಾರ್ಕೆಟಿಂಗ್ ಮತ್ತು ಸಂವಹನ ವಿಭಾಗದಲ್ಲಿ ನಿರ್ದಿಷ್ಟ ಸಂಖ್ಯೆಯ ಉದ್ಯೋಗ ಕಡಿತದ ಬಗ್ಗೆ ಮಾಹಿತಿ ನೀಡದೆ ವಜಾಗೊಳಿಸುವುದಾಗಿ ಘೋಷಿಸಿದೆ. ಐಬಿಎಂನ ಮುಖ್ಯ ಸಂವಹನ ಅಧಿಕಾರಿ ಜೊನಾಥನ್ ಅಡಾಶೆಕ್ ಅವರು ಏಳು ನಿಮಿಷಗಳ ಸಭೆಯಲ್ಲಿ ಈ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಬಿಸಿ ವರದಿ ಮಾಡಿದೆ.

ಟರ್ನಿಟಿನ್ ಉದ್ಯೋಗ ಕಡಿತ: ಕೃತಿಚೌರ್ಯ ಪತ್ತೆ ಸಂಸ್ಥೆ ಟರ್ನಿಟಿನ್ ಈ ವರ್ಷದ ಆರಂಭದಲ್ಲಿ ಸುಮಾರು 15 ಜನರನ್ನು ವಜಾಗೊಳಿಸಿದೆ ಎಂದು ಟೆಕ್‌ಕ್ರಂಚ್ ವರದಿ ಮಾಡಿದೆ. ಕೃತಕ ಬುದ್ಧಿಮತ್ತೆಯು ಟರ್ನಿಟಿನ್ ತನ್ನ ಎಂಜಿನಿಯರಿಂಗ್ ಉದ್ಯೋಗಿಗಳ ಸಂಖ್ಯೆಯನ್ನು 18 ತಿಂಗಳಲ್ಲಿ ಶೇಕಡಾ 20 ರಷ್ಟು ಕಡಿಮೆ ಪ್ರಯತ್ನಗಳನ್ನು ಮುಂದುವರಿಸಿದೆ ಎಂದು ಕಂಪನಿಯ ಸಿಇಒ ಕ್ರಿಸ್ ಕ್ಯಾರೆನ್ ಕಳೆದ ವರ್ಷ ಹೇಳಿದ ನಂತರ ಉದ್ಯೋಗ ಕಡಿತ ಮಾಡಲಾಗಿದೆ.

ಕೋವಿಡ್ ಬಂದ ನಂತರ ವೆಚ್ಚವನ್ನು ಸರಿದೂಗಿಸುವ ಕಾರಣವನ್ನು ನೀಡಿ ಹತ್ತಾರು ಪ್ರಮುಖ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳಿಸಿದ್ದರು. ಇದೀಗ ಮತ್ತೆ ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗಿರುವುದು ಟೆಕ್ಕಿಗಳ ಎದೆಯಲ್ಲಿ ಢವಢವ ಶುರುವಾಗಿದೆ.

IPL_Entry_Point

ವಿಭಾಗ