ಅಕ್ಟೋಬರ್ 1 ರಿಂದ ಆಧಾರ್ ಸೇರಿ ಈ ಆರು ಆದಾಯ ತೆರಿಗೆ ನಿಯಮ ಬದಲಾವಣೆ ಆಗುತ್ತೆ, ಮಾಹಿತಿಗಾಗಿ ಈಗಲೇ ಒಮ್ಮೆ ಚೆಕ್ ಮಾಡ್ಕೊಳ್ಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಕ್ಟೋಬರ್ 1 ರಿಂದ ಆಧಾರ್ ಸೇರಿ ಈ ಆರು ಆದಾಯ ತೆರಿಗೆ ನಿಯಮ ಬದಲಾವಣೆ ಆಗುತ್ತೆ, ಮಾಹಿತಿಗಾಗಿ ಈಗಲೇ ಒಮ್ಮೆ ಚೆಕ್ ಮಾಡ್ಕೊಳ್ಳಿ

ಅಕ್ಟೋಬರ್ 1 ರಿಂದ ಆಧಾರ್ ಸೇರಿ ಈ ಆರು ಆದಾಯ ತೆರಿಗೆ ನಿಯಮ ಬದಲಾವಣೆ ಆಗುತ್ತೆ, ಮಾಹಿತಿಗಾಗಿ ಈಗಲೇ ಒಮ್ಮೆ ಚೆಕ್ ಮಾಡ್ಕೊಳ್ಳಿ

ಕಾಲಚಕ್ರ ಉರುಳಿ ಕ್ಯಾಲೆಂಡರ್ ಹಾಳೆ ಬದಲಾಗುತ್ತಿರುವಂತೆ ಪ್ರತಿ ತಿಂಗಳೂ ಮೊದಲ ದಿನ ಒಂದಷ್ಟು ಹೊಸ ನಿಯಮಗಳು, ಹಳೆಯ ನಿಯಮಗಳ ಪರಿಷ್ಕರಣೆ ಜಾರಿಗೆ ಬಡುವುದು ವಾಡಿಕೆ. ಅದರಂತೆ, ಅಕ್ಟೋಬರ್ 1 ರಿಂದ ಆಧಾರ್ ಸೇರಿ ಈ ಆರು ಆದಾಯ ತೆರಿಗೆ ನಿಯಮ ಬದಲಾವಣೆ ಆಗುತ್ತೆ, ಮಾಹಿತಿಗಾಗಿ ಈಗಲೇ ಒಮ್ಮೆ ಚೆಕ್ ಮಾಡಿಬಿಡಿ.

ಅಕ್ಟೋಬರ್ 1 ರಿಂದ ಆಧಾರ್ ಸೇರಿ ಈ ಆರು ಆದಾಯ ತೆರಿಗೆ ನಿಯಮ ಬದಲಾವಣೆ ಆಗುತ್ತೆ. (ಸಾಂಕೇತಿಕ ಚಿತ್ರ)
ಅಕ್ಟೋಬರ್ 1 ರಿಂದ ಆಧಾರ್ ಸೇರಿ ಈ ಆರು ಆದಾಯ ತೆರಿಗೆ ನಿಯಮ ಬದಲಾವಣೆ ಆಗುತ್ತೆ. (ಸಾಂಕೇತಿಕ ಚಿತ್ರ)

ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಆದಾಯ ತೆರಿಗೆ ನಿಯಮ ಪರಿಷ್ಕರಣೆ ಘೋ‍ಷಿಲಾಗಿತ್ತು. ಈ ಪೈಕಿ ಕೆಲವು ನಿಯಮಗಳು ಇದೇ ಅಕ್ಟೋಬರ್ 1 ರಿಂದ ಚಾಲ್ತಿಗೆ ಬರಲಿದೆ. ಇದರಲ್ಲಿ ಸೆಕ್ಯುರಿಟೀಸ್ ವಹಿವಾಟು ತೆರಿಗೆ (ಎಸ್‌ಟಿಟಿ), ಮೂಲದಲ್ಲಿ ತೆರಿಗೆ ಕಡಿತ ಅಥವಾ ಟಿಡಿಎಸ್‌ ದರಗಳು ಮತ್ತು ಆಧಾರ್ ಕಾರ್ಡ್ ಬಳಕೆಯ ಸುತ್ತಲಿನ ಹೊಸ ನಿಯಮಗಳು ಸೇರಿವೆ. ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ 2024 ಕೂಡ ಜಾರಿಗೊಳ್ಳುತ್ತಿದ್ದು, ಇದು ಆದಾಯ ತೆರಿಗೆ ವಿವಾದಗಳ ಪರಿಹಾರವನ್ನು ಸರಳೀಕರಿಸುವ ಗುರಿಯನ್ನು ಹೊಂದಿದೆ. ಪ್ರತಿ ತಿಂಗಳು ಮೊದಲ ದಿನದಿಂದ ಹೊಸ ಹೊಸ ನಿಯಮಗಳು, ತೆರಿಗೆ ಪರಿಷ್ಕರಣೆ ಸೇರಿ ಹಲವು ಆಡಳಿತ ಸುಧಾರಣೆ ಕ್ರಮಗಳು ಜಾರಿಗೊಳ್ಳುವುದು ವಾಡಿಕೆ. ಅದರಂತೆ ಅಕ್ಟೋಬರ್ 1 ರಿಂದ ಆದಾಯ ತೆರಿಗೆ ಸಂಬಂಧಿಸಿ 6 ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ.

ಆದಾಯ ತೆರಿಗೆ ಸಂಬಂಧ ಅಕ್ಟೋಬರ್ 1ರಿಂದ 6 ಮುಖ್ಯ ಬದಲಾವಣೆ

1) 2024 ರ ಬಜೆಟ್ ಪ್ರಕಾರ, ಸೆಕ್ಯುರಿಟೀಸ್‌ಗಳ ಫ್ಯೂಚರ್ ಆಂಡ್ ಆಪ್ಶನ್ಸ್ (F&O) ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆಯನ್ನು (ಎಸ್‌ಟಿಟಿ) ಅನ್ವಯಿಸಲಾಗುತ್ತಿದ್ದು, ಇದು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಎಸ್‌ಟಿಟಿ ದರಗಳು ಫ್ಯೂಚರ್ಸ್‌ಗೆ 0.02 ಶೇಕಡಾ ಮತ್ತು ಆಪ್ಶನ್ಸ್‌ಗೆ 0.1 ಶೇಕಡಾಕ್ಕೆ ಏರುಲಿದೆ. ಇದು ಹೂಡಿಕೆದಾರರಿಗೆ ವ್ಯಾಪಾರ ವೆಚ್ಚಗಳ ಮೇಲೆ ಪರಿಣಾಮ ಬೀರುತ್ತದೆ.

2) ಅಕ್ಟೋಬರ್ 1 ರಿಂದ ಪ್ಯಾನ್ (PAN) ದುರುಪಯೋಗ ಮತ್ತು ನಕಲು ತಡೆಯಲು, ಆಧಾರ್ ಸಂಖ್ಯೆಗೆ ಬದಲಾಗಿ ಆಧಾರ್ ದಾಖಲಾತಿ ID ಅನ್ನು ಉಲ್ಲೇಖಿಸಲು ಅನುಮತಿಸುವ ನಿಬಂಧನೆಗಳು ಜಾರಿಗೆ ಬರುತ್ತಿವೆ. ಹೀಗಾಗಿ ಐಟಿಆರ್‌ಗಳಲ್ಲಿ ಮತ್ತು ಪ್ಯಾನ್‌ ಅಪ್ಲಿಕೇಶನ್‌ಗಳಿಗೆ ಇನ್ನು ಮುಂದೆ ಆಧಾರ್ ಅನ್ವಯಿಸುವುದಿಲ್ಲ.

3) ಷೇರುಗಳ ಮರುಖರೀದಿಯು ಲಾಭಾಂಶಗಳಂತೆ ಷೇರುದಾರರ ಮಟ್ಟದ ತೆರಿಗೆಗಳಿಗೆ ಒಳಪಟ್ಟಿರುತ್ತದೆ. ಇದರಿಂದ ಹೂಡಿಕೆದಾರರಿಗೆ ಹೆಚ್ಚಿನ ತೆರಿಗೆ ಹೊರೆ ಬೀಳಲಿದೆ. ಇದು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಹೆಚ್ಚುವರಿಯಾಗಿ, ಯಾವುದೇ ಬಂಡವಾಳ ಲಾಭಗಳು ಅಥವಾ ನಷ್ಟಗಳನ್ನು ಲೆಕ್ಕಾಚಾರ ಮಾಡುವಾಗ ಈ ಷೇರುಗಳ ಷೇರುದಾರರ ಸ್ವಾಧೀನ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

4) ಮೂಲದಲ್ಲಿ ಕಡಿತಗೊಳಿಸಿದ ಫ್ಲೋಟಿಂಗ್ ರೇಟ್ ಬಾಂಡ್‌ಗಳ ಮೇಲಿನ 10 ಪ್ರತಿಶತ ಟಿಡಿಎಸ್ ನಿಗದಿತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಾಂಡ್‌ಗಳ ಮೇಲೆ, ಫ್ಲೋಟಿಂಗ್ ರೇಟ್ ಬಾಂಡ್‌ಗಳು ಸೇರಿದಂತೆ, 10,000 ರೂಪಾಯಿ ಮಿತಿಯೊಂದಿಗೆ 10 ಪ್ರತಿಶತದಷ್ಟು ವಿಧಿಸಲಾಗುತ್ತದೆ.

5) ಕಮಿಷನ್ ಮತ್ತು ಬಾಡಿಗೆ ಸೇರಿದಂತೆ ನಿರ್ದಿಷ್ಟ ಪಾವತಿಗಳಿಗೆ ಟಿಡಿಎಸ್ ದರಗಳು 5 ಪ್ರತಿಶತದಿಂದ 2 ಪ್ರತಿಶತಕ್ಕೆ ಇಳಿಯುತ್ತವೆ. ಇ-ಕಾಮರ್ಸ್ ಆಪರೇಟರ್‌ಗಳು ಶೇಕಡಾ 1 ರಿಂದ ಶೇಕಡಾ 0.1 ಕ್ಕೆ ಇಳಿಕೆ ಕಾಣಲಿದೆ.

6) ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ 2024 ಎಂಬ ಹೊಸ ಯೋಜನೆಯು ಬಾಕಿ ಉಳಿದಿರುವ ಆದಾಯ ತೆರಿಗೆ ವಿವಾದಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ., ಹೊಸ ಮೇಲ್ಮನವಿದಾರರಿಗೆ ಕಡಿಮೆ ಇತ್ಯರ್ಥ ಮೊತ್ತವನ್ನು ನೀಡುತ್ತದೆ. ಡಿಸೆಂಬರ್ 31 ರೊಳಗೆ ವಿವಾದ್ ಸೇ ವಿಶ್ವಾಸ್ ಯೋಜನೆಯಡಿ ಘೋಷಣೆಗಳನ್ನು ಸಲ್ಲಿಸುವ ತೆರಿಗೆದಾರರು ಕಡಿಮೆ ಮೊತ್ತದ ಸೆಟಲ್ಮೆಂಟ್ ಮೊತ್ತದಿಂದ ಪ್ರಯೋಜನ ಪಡೆಯುತ್ತಾರೆ.

ಇನ್ನೇನು ಬದಲಾವಣೆ ಆಗಲಿದೆ

ಮ್ಯೂಚುಯಲ್ ಫಂಡ್ ಮರುಖರೀದಿಗಳಿಗೆ ಸಂಬಂಧಿಸಿದ ನಿಬಂಧನೆಯನ್ನು (ವಿಭಾಗ 194F) ತೆಗೆದುಹಾಕಲಾಗುತ್ತದೆ. ಇದು TDS ಲ್ಯಾಂಡ್‌ಸ್ಕೇಪ್ ಅನ್ನು ಸರಳಗೊಳಿಸುತ್ತದೆ. ಅದೇ ರೀತಿ, ಒಟ್ಟಾರೆ ತೆರಿಗೆ ಹೊಣೆಗಾರಿಕೆಯ ಮೇಲೆ ಪರಿಣಾಮ ಬೀರುವ ಷೇರು ಮರುಖರೀದಿಗಳ ಮೇಲಿನ ಬಂಡವಾಳ ಲಾಭಗಳು ಅಥವಾ ನಷ್ಟಗಳನ್ನು ಲೆಕ್ಕಾಚಾರ ಮಾಡುವಾಗ ಷೇರುದಾರರ ಸ್ವಾಧೀನ ವೆಚ್ಚಗಳನ್ನು ಈಗ ಕಡಿಮೆ ಮಾಡಲಾಗುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.