Aadhaar Updates; ಆಧಾರ್ ಅಪ್ಡೇಟ್ ಮಾಡಿಸಿಲ್ವಾ ಇನ್ನೂ, ಸೆ 14ರೊಳಗೆ ಉಚಿತವಾಗಿ ಮಾಡಿಸಿ ಬಿಡಿ, ಹೇಗೆ ಎಂಬ ಸ್ಟೆಪ್ ಬೈ ಸ್ಟೆಪ್ ಗೈಡ್
Free Aadhaar Detail Updates; ಉಚಿತವಾಗಿ ಆಧಾರ್ ವಿವರ ಅಪ್ಡೇಟ್ ಮಾಡುವುದಕ್ಕೆ ಇನ್ನು 10 ದಿನ ಕಾಲಾವಕಾಶವಿದೆ. ಆಧಾರ್ ಅಪ್ಡೇಟ್ ಮಾಡಿಸಿಲ್ವಾ ಇನ್ನೂ, ಸೆ 14ರೊಳಗೆ ಉಚಿತವಾಗಿ ಮಾಡಿಸಿ ಬಿಡಿ. ಹೇಗೆ ಎಂಬ ಚಿಂತೆ ಬೇಡ. ಸ್ಟೆಪ್ ಬೈ ಸ್ಟೆಪ್ ಗೈಡ್ ಇಲ್ಲಿದೆ.
ನವದೆಹಲಿ: ಆಧಾರ್ ಕಾರ್ಡ್ ಮಾಡಿಸಿ 10 ವರ್ಷದ ಮೇಲಾಯಿತಾ, ಅದಾಗಿ ನೀವು ಇನ್ನೂ ಕೂಡ ಅದನ್ನು ಅಪ್ಡೇಟ್ ಮಾಡಿಸಿಲ್ವಾ, ಹಾಗಾದ್ರೆ ಬೇಗ ಮಾಡಿಸಿ. ಇನ್ನು 10 ದಿನ ಸಮಯಾವಕಾಶ ಇದೆ. ಅಂದ್ರೆ ಈ ಅವಧಿಯಲ್ಲಿ ಆಧಾರ್ ಅಪ್ಡೇಟ್ ಮಾಡುವಾಗ ಶುಲ್ಕ ಭರಿಸಬೇಕಾಗಿಲ್ಲ. ಈ 10 ದಿನಗಳ ನಂತರ ಕೂಡ ಆಧಾರ್ ಅಪ್ಡೇಟ್ ಮಾಡೋದಕ್ಕೆ ಅವಕಾಶ ಇದೆ. ಆದರೆ ಶುಲ್ಕ ಭರಿಸಬೇಕು ಅಷ್ಟೆ.
ಹೌದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಉಚಿತವಾಗಿ ಆಧಾರ್ ವಿವರಗಳನ್ನು ನವೀಕರಿಸಲು ಸೆಪ್ಟೆಂಬರ್ 14 ರ ತನಕ ಕಾಲಾವಕಾಶ ನೀಡಿದೆ. ಇದು ಅಂತಿಮ ಗಡುವು ಎಂದು ಅದು ಹೇಳಿದೆ. ಈ ಗಡುವನ್ನು ಹಲವು ಸಲ ವಿಸ್ತರಿಸಲಾಗಿದೆ. ಕೊನೆಯದಾಗಿ ಈ ವರ್ಷ ಜೂನ್ 14ಕ್ಕೆ ಇದ್ದ ಗಡುವನ್ನು ಈಗ ಈ ತಿಂಗಳ ಅಂದರೆ ಸೆಪ್ಟೆಂಬರ್ 14ಕ್ಕೆ ವಿಸ್ತರಿಸಲಾಗಿತ್ತು. ಇನ್ನು ವಿಸ್ತರಣೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡುವ ಗಡುವು ಮುಗಿದ ನಂತರ, ಯುಐಡಿಎಐ ಯಾವುದೇ ಅಪ್‌ಡೇಟ್ ಮಾಡಿದರೂ ಅದಕ್ಕೆ 50 ರೂಪಾಯಿ ಶುಲ್ಕ ವಿಧಿಸಲಿದೆ. ಅಂದ ಹಾಗೆ ಈ ಉಚಿತವಾಗಿ ಅಪ್ಡೇಟ್ ಮಾಡುವ ಸೇವೆ ಮೈಆಧಾರ್ ಪೋರ್ಟಲ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿದೆ ಎಂಬುದನ್ನು ನೆನಪಿಡಿ.
ಆನ್‌ಲೈನ್‌ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ- ಇಲ್ಲಿದೆ ಸ್ಟೆಪ್ ಬೈ ಸ್ಟೆಪ್ ಗೈಡ್
1) ಯುಐಡಿಎಐನ ಅಧಿಕೃತ ವೆಬ್‌ಸೈಟ್ myaadhaar.uidai.gov.in ಗೆ ಹೋಗಿ.
2) ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ಲಾಗಿನ್ ಆಗಿ.
3) ಅದು ನಿಮ್ಮ ನೋಂದಾಯಿತ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸುತ್ತದೆ.
4) ಅದನ್ನು ಅಲ್ಲಿ ನಮೂದಿಸಿ, ನಿಮ್ಮ ಖಾತೆ ಓಪನ್ ಆಗುತ್ತದೆ.
5) ಅದರಲ್ಲಿ ನಿಮ್ಮ ಗುರುತು ಮತ್ತು ವಿಳಾಸದ ಮಾಹಿತಿಗಳು ಕಾಣುತ್ತವೆ. ಅವುಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿ.
ಎ ) ಎಲ್ಲವೂ ಸರಿಯಾಗಿದ್ದರೆ ಆಗ, ಅಲ್ಲಿ ಕಾಣುವ ‘I verify that the above details are correct.’ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ ಆಧಾರ್ ಅಪ್ಡೇಟ್ ಕೆಲಸ ಮುಗಿಯಿತು.
ಬಿ) ಒಂದೊಮ್ಮೆ ನಿಮ್ಮ ಗುರುತು ಮತ್ತು ವಿಳಾಸದ ಮಾಹಿತಿಗಳು ಸರಿಯಾಗಿಲ್ಲವಾದರೆ ಮುಂದಿನ ಹಂತ ಹೀಗಿದೆ
6) ಡಿಜಿಟಲ್ ರೂಪದಲ್ಲಿ ಸೇವ್ ಮಾಡಿಕೊಂಡಿರುವ ನಿಮ್ಮ ಗುರುತು ಮತ್ತು ವಿಳಾದ ದಾಖಲೆ ಯಾವುದು ಎಂಬುದನ್ನು ಡ್ರಾಪ್ ಡೌನ್ ಮೆನುವಿನಲ್ಲಿ ಆಯ್ಕೆ ಮಾಡಿ.
7) ಆ ದಾಖಲೆಯನ್ನು ಅಪ್ಲೋಡ್ ಮಾಡಿ. ಹೀಗೆ ಅಪ್ಲೋಡ್ ಮಾಡುವಾಗ ಅದರ ಗಾತ್ರ ಮತ್ತು ಮಾದರಿಯ ಬಗ್ಗೆ ಎಚ್ಚರವಹಿಸಿ. ಗಾತ್ರ 2 MB ಗಿಂತ ಕಡಿಮೆ ಇರಬೇಕು. JPEG, PNG ಅಥವಾ PDF ಫಾರ್ಮ್ಯಾಟ್‌ನಲ್ಲಿ ಅಪ್ಲೋಡ್ ಮಾಡಬೇಕು
8) ನೀವು ಸಲ್ಲಿಸಿದ ದಾಖಲೆ, ನಮೂದಿಸಿದ ವಿವರ ಸರಿಯಾಗಿದೆಯಾ ಎಂದು ಪರಿಶೀಲಿಸಿ
9) ನಿಮ್ಮ ಒಪ್ಪಿಗೆ ಸೂಚಿಸಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ. ಅಲ್ಲಿಗೆ ನಿಮ್ಮ ಆಧಾರ್ ವಿವರ ಅಪ್ಡೇಟ್ ಮಾಡುವ ಕೆಲಸ ಮುಗಿಯಿತು.
ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದರೆ ಅಥವಾ ನೆನಪೇ ಆಗದಿದ್ದರೆ ಏನು ಮಾಡಬೇಕು
ಆಧಾರ್ ಸಂಪರ್ಕ ಕೇಂದ್ರದ ಏಜೆಂಟ್ ನಿಮ್ಮ ಇಐಡಿ ಪಡೆಯುವಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ಮೈಆಧಾರ್ ಪೋರ್ಟಲ್ (https://myaadhaar.uidai.gov.in/) ನಿಂದ ನಿಮ್ಮ ಆಧಾರ್ ಡೌನ್‌ಲೋಡ್ ಮಾಡಲು ಅದನ್ನು ಬಳಸಬಹುದು. ಆಧಾರ್ ಸಂಖ್ಯೆ ಹೊಂದಿದ್ದು, ಮರೆತು ಹೋಗಿದ್ದರೆ 1947 ಗೆ ಕರೆ ಮಾಡುವ ಮೂಲಕ ಐವಿಆರ್‌ಎಸ್ ಸಿಸ್ಟಮ್‌ನಲ್ಲಿನ ಇಐಡಿ ಸಂಖ್ಯೆಯಿಂದ ಆಧಾರ್ ಸಂಖ್ಯೆಯನ್ನು ಪಡೆಯಬಹುದು ಎಂದು ಯುಐಎಡಿಐ ಹೇಳಿದೆ.