ಕನ್ನಡ ಸುದ್ದಿ  /  Nation And-world  /  Chali Areca Price Hiked Fear Of Falling Prices Due To Increase In Production

Arecanut Price: ಕೆಂಪಡಿಕೆ ಬಳಿಕ ಚಾಲಿ ಅಡಿಕೆ ದರ ಏರಿಕೆ; ಉತ್ಪಾದನೆ ಹೆಚ್ಚಳದಿಂದ ದರ ಕುಸಿಯುವ ಆತಂಕ!

ಮಾರುಕಟ್ಟೆಯಲ್ಲಿ ಅಡಿಕೆ ದರದಲ್ಲಿ ಅಲ್ಪ ಏರಿಕೆಯಾಗುತ್ತಿದೆ. ಅದರಲ್ಲೂ ಚಾಲಿ ಅಡಿಕೆ ಕೆಜಿಗೆ 35 ರಿಂದ 36 ಸಾವಿರ ರೂಪಾಯಿ ಇದೆ. ಉತ್ಪಾದನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಕುಸಿತದ ಆತಂಕ ರೈತರದ್ದು.

ಕೆಂಪಡಿಕೆ ಬಳಿಕ ಇದೀಗ ಚಾಲಿ ಅಡಿಕೆ ಬೆಲೆಯೂ ಏರಿಕೆಯಾಗುತ್ತಿದ್ದು, 50 ಸಾವಿರ ರೂಪಾಯಿಗಳ  ಗಡಿ ದಾಟುವ ಸಾಧ್ಯತೆ ಇದೆ.
ಕೆಂಪಡಿಕೆ ಬಳಿಕ ಇದೀಗ ಚಾಲಿ ಅಡಿಕೆ ಬೆಲೆಯೂ ಏರಿಕೆಯಾಗುತ್ತಿದ್ದು, 50 ಸಾವಿರ ರೂಪಾಯಿಗಳ ಗಡಿ ದಾಟುವ ಸಾಧ್ಯತೆ ಇದೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಧಾರಣೆ (Areca nut Price) ನಾಗಲೋಟ ಮುಂದುವರಿದಿದ್ದು, ಕೆಂಪಡಿಕೆ (ರಾಶಿ ಹಿಡಿ) (Red Areca nut) ಕ್ವಿಂಟಾಲ್ ಗೆ 45,000 ಸಾವಿರ ರೂಪಾಯಿಂದ 46,000ರಕ್ಕೆ ಜಿಗಿತ ಕಂಡಿದ್ದರೆ, ಚಾಲಿ ಅಡಿಕೆ (ವೈಟ್ ಅಡಿಕೆ) (Chali Areca nut) 35 ಸಾವಿರದಿಂದ 36 ಸಾವಿರ ಅಸುಪಾಸಿನಲ್ಲಿ ಇದೆ.

ಉತ್ತರ ಭಾರತ (North India) ದಲ್ಲಿ ಅಡಿಕೆಗೆ ಬೇಡಿಕೆ ಇರುವ ಕಾರಣ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಅಂತ ಹೇಳಲಾಗುತ್ತಿದೆ. ಮಾರ್ಚ್, ಏಪ್ರಿಲ್ ತಿಂಗಳು ಗಳಲ್ಲಿ ಸಾಧಾರಣ ಅಡಿಕೆ ಮಾರುಕಟ್ಟೆ ಗೆ ಬರುವ ಸಮಯ. ಆದರೆ ಏಪ್ರಿಲ್ ಅಂತ್ಯದ ವೇಳೆ ಕಡಿಮೆ ಪ್ರಮಾಣದ ಅಡಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಬೆಲೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ನಿನ್ನೆ (ಏ.14, ಶುಕ್ರವಾರ)ಯ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಬೆಲೆ ಕನಿಷ್ಠ 45,599 ರೂಪಾಯಿ ಇದ್ದರೆ 46,421 ರೂಪಾಯಿ ಸರಾಸರಿ ಬೆಲೆಯಾಗಿದೆ. ಗರಿಷ್ಠ 46,821 ರೂಪಾಯಿ ಇತ್ತು.

ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಪೂರೈಕೆ ಇಲ್ಲ. ಬೆಳೆಗಾರರು ಇನ್ನೂ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಅಡಕೆ ಬಿಡುತ್ತಿಲ್ಲ. ಹೀಗಾಗಿ ಧಾರಣೆ ಏರುತ್ತಿದೆ. ಹೊಸ ಅಡಕೆ ಇನ್ನೊಂದು ತಿಂಗಳಲ್ಲಿ 50 ರೂಪಾಯಿ ಏರಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗಿದೆ.

ಆದರೆ ಶಿವಮೊಗ್ಗ ಜಿಲ್ಲೆ ಸಾಗರದ ಅಡಿಕೆ ವ್ಯಾಪಾರಿಗಳ ಮಾಹಿತಿ ಪ್ರಕಾರ, ಅಡಿಕೆ ಬೆಲೆಯಲ್ಲಿ ಅಂತಹ ದೊಡ್ಡ ವ್ಯತ್ಯಾಸವೇನೂ ಆಗಿಲ್ಲ. ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು 19,459 ರೂಪಾಯಿ ಇದೆ. ಕಳೆದೊಂದು ವಾರದಿಂದ ಕೆಂಪು ಅಡಿಕೆಯಲ್ಲಿ 1 ಸಾವಿರ ರೂಪಾಯಿ ಏರಿಳಿತವಾಗುತ್ತಿದೆ. ಚಾಲಿ ಅಡಿಕೆಯಲ್ಲೂ ಹೆಚ್ಚು ಕಡಿಮೆ ಇದೇ ರೀತಿ ಇದೆ ಅಂತ ವಿವರಿಸಿದ್ದಾರೆ.

ಬದುಕೋಕೆ ಅಲ್ಲ ಚಟಕ್ಕೆ ತಿನ್ನುವ ಪ್ರಾಡೆಕ್ಟ್

ಅಡಿಕೆ ಬಗ್ಗೆ ಮಾಹಿತಿ ನೀಡಿರುವ ಸಾಗರದ ಅಡಿಕೆ ಬೆಳೆಗಾರ ಹಾಗೂ ವ್ಯಾಪಾರಿಯೂ ಆಗಿರುವ ಅನಿಲ್ ಗೌಡ, ಅಡಿಕೆ ಬದುಕೋಕೆ ತಿನ್ನುವಂತದ್ದಲ್ಲ. ಇದು ಚಟಕ್ಕೆ ತಿನ್ನುವಂತಹ ಉತ್ಪನ್ನ. ಹೀಗಾಗಿ ಯಾವತ್ತು ಏನಾಗುತ್ತೋ ಅನ್ನೋ ಖಾತ್ರಿ ಇಲ್ಲ. ಆದರೂ ನಮ್ಮ ರಾಜ್ಯ ಮಾತ್ರವಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲೂ ಅಡಿಕೆ ಬೆಳೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಇರುವ ಬೆಲೆಯೇ ಕುಸಿಯುವ ಆತಂಕ

ಅಡಿಕೆ ಬೆಳೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಲಕ್ಷ ಅಲ್ಲ ಕೋಟಿ ಲೆಕ್ಕದಲ್ಲಿ ಅಡಿಕೆ ಸಸಿಗಳು ಬೆಳೆಸಲಾಗುತ್ತಿದೆ. ಇಡೀ ದೇಶದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ ಹಾಗೂ ಅಸ್ಸಾಂನಲ್ಲಿ ಮಾತ್ರ ಅಡಿಕೆ ಬೆಳೆಯಲಾಗುತ್ತಿತ್ತು. ಇದೀಗ ಮಹಾರಾಷ್ಟ್ರದಲ್ಲೂ ಈ ಬೆಳೆಯನ್ನು ಬೆಳೆಯಲು ರೈತರು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಅಸ್ಸಾಂನಲ್ಲಿ ಇದು ಕೇವಲ ಫಾರೆಸ್ಟ್ ಕ್ರಾಪ್. ಆದರೆ ನಮ್ಮಲ್ಲಿ ಇದನ್ನು ಬೆಳೆಯನ್ನಾಗಿ ಮಾಡಿಕೊಂಡಿದ್ದೇವೆ. ಕೆಲ ತಿಂಗಳುಗಳ ಹಿಂದೆ ವಿದೇಶದಿಂದ ಅಡಿಕೆ ಆಮದು ಮಾಡಿಕೊಳ್ಳಲಾಗಿತ್ತು ಎಂಬ ಪ್ರಶ್ನೆಗೂ ಉತ್ತರಿಸಿರುವ ಅನಿಲ್ ಗೌಡರು, ಸಣ್ಣ ಪ್ರಮಾಣದಲ್ಲಿ ಬೇರೆ ದೇಶದಿಂದ ಬಂದಿರೋದು ನಿಜ. ಬೇರೆ ಬೇರೆ ಹೆಸರಲ್ಲಿ ಬಂದಿದೆ. ಕಚ್ಚಾ ಅಡಿಕೆ ಬಂದಿರೋದು. ಹಸಿ ಅಡಿಕೆಗೆ ಸರ್ಕಾರದಿಂದ ನಿರ್ಬಂಧ ಇಲ್ಲ, ಎಲ್ಲಿಂದ ಎಲ್ಲಿಗೆ ಯಾರು ಬೇಕಾದರೂ ಇದನ್ನು ಸಾಗಿಸಬಹುದು. ಭೂತಾನ್ ನಿಂದ ಹಸಿ ಅಡಿಕೆ ಬಂದಿದೆ. ಬೇರೆ ದೇಶಗಳಿಂದ ಬರುವ ಕಚ್ಚಾ ಅಡಿಕೆಯನ್ನು ಇಲ್ಲಿ ಸಿದ್ದಪಡಿಸಿ ಬೇರೆ ಬೇರೆ ದೇಶದಲ್ಲಿ ರಫ್ತು ಮಾಡಲಾಗುತ್ತದೆ ಅಂತ ಹೇಳಿದ್ದಾರೆ.

ವಿಭಾಗ