ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ಇವಿಎಂ ವಿವಿಪ್ಯಾಟ್ ಪ್ರಕರಣ; ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ, ಎಲ್ಲಾ ಅರ್ಜಿಗಳು ವಜಾ

ಶೇ.100ರಷ್ಟು ಇವಿಎಂ-ವಿವಿಪ್ಯಾಟ್ ಅಡ್ಡಪರಿಶೀಲನೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಇವಿಎಂಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸಿದೆ, ಚುನಾವಣಾ ಆಯೋಗದ ಸುರಕ್ಷತಾ ಕ್ರಮಗಳನ್ನು ಎತ್ತಿ ತೋರಿಸಿದೆ, ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳಲು ನಿರಾಕರಿಸಿದೆ.

ಇವಿಎಂ ವಿವಿಪ್ಯಾಟ್ ಪ್ರಕರಣದಲ್ಲಿ ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದ್ದು, ಎಲ್ಲಾ ಅರ್ಜಿಗಳನ್ನು ವಜಾ ಮಾಡಿದೆ.
ಇವಿಎಂ ವಿವಿಪ್ಯಾಟ್ ಪ್ರಕರಣದಲ್ಲಿ ಅಡ್ಡ ಪರಿಶೀಲನೆ ಮಾಡಿ ಎಂದವರ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದ್ದು, ಎಲ್ಲಾ ಅರ್ಜಿಗಳನ್ನು ವಜಾ ಮಾಡಿದೆ.

ದೆಹಲಿ: ವಿದ್ಯುನ್ಮಾನ ಮತದಾನ ಯಂತ್ರಗಳಲ್ಲಿ (EVM) ಚಲಾವಣೆಯಾದ ಮತಗಳನ್ನು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ಸ್ (VVPAT) ಗಳೊಂದಿಗೆ ಶೇಕಡಾ ನೂರರಷ್ಟು ಅಡ್ಡಪರಿಶೀಲನೆ ಮಾಡಬೇಕು ಅಥವಾ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು (Ballot Paper System) ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ (ಏಪ್ರಿಲ್ 26) ವಜಾಗೊಳಿಸಿದೆ, "ಇವಿಎಂಗಳು ಸರಳ, ಸುರಕ್ಷಿತ ಹಾಗೂ ಬಳಕೆದಾರ ಸ್ನೇಹಿಗಿವೆ ಎಂದು ಕೋರ್ಟ್ ಒತ್ತಿಹೇಳಿದೆ. ಲೋಕಸಭಾ ಚುನಾವಣೆಯ (Lok Sabha Election 2024 Phase 2) ಎರಡನೇ ಹಂತದ ಮತದಾನದ ದಿನವೇ ಈ ತೀರ್ಪು ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಅರ್ಜಿಗಳ ವಿಚಾರಣೆ ಪ್ರತ್ಯೇಕ ಪೀಠಗಳು ಸಹಮತದ ಅಭಿಪ್ರಾಯ ವ್ಯಕ್ತಪಡಿಸಿವೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರು ಇವಿಎಂಗಳ ವಿಶ್ವಾಸಾರ್ಹತೆ ಮತ್ತು ವಿವಿಪ್ಯಾಟ್‌ಗಳೊಂದಿಗೆ ಅವುಗಳ ಏಕೀಕರಣವನ್ನು ದೃಢಪಡಿಸಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಭಾರತದ ಚುನಾವಣಾ ಆಯೋಗ (ಇಸಿಐ) ಜಾರಿಗೆ ತಂದ ಕಠಿಣ ಸುರಕ್ಷತಾ ಕ್ರಮಗಳು ಮತ್ತು ಪ್ರೋಟೋಕಾಲ್‌ಗಳನ್ನು ಎತ್ತಿ ತೋರಿಸಿದ್ದಾರೆ.

ಪ್ರಜಾಪ್ರಭುತ್ವ ತತ್ವಗಳನ್ನು ರಕ್ಷಿಸುವಲ್ಲಿ ಪುರಾವೆ ಆಧಾರಿತ ನಿರ್ಧಾರ ತೆಗೆದುಕೊಳ್ಳುವ ಮಹತ್ವವನ್ನು ನ್ಯಾಯಮೂರ್ತಿಗಳು ಮತ್ತಷ್ಟು ಒತ್ತಿಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಶ್ನಿಸಲು ಮತ್ತು ಕೇವಲ ಆತಂಕ ಮತ್ತು ಊಹಾಪೋಹಗಳಿಗೆ ಉತ್ತರಿಸಲು ಸುಪ್ರೀಂ ಕೋರ್ಟ್ ಅನುಮತಿಸುವುದಿಲ್ಲ ಎಂದು ನ್ಯಾಯಾಧೀಶರು ಪ್ರತಿಪಾದಿಸಿದರು.

ಚುನಾವಣಾ ಆಯೋಗವನ್ನು ಶ್ಲಾಘಿಸಿದ ಸುಪ್ರೀಂ ಕೋರ್ಟ್

ಭಾರತದಲ್ಲಿ ಚುನಾವಣೆಗಳನ್ನು ನಡೆಸುವಲ್ಲಿ ಅಂತರ್ಗತವಾಗಿರುವ ಪ್ರಾಯೋಗಿಕ ಸವಾಲುಗಳ ಬಗ್ಗೆಯೂ ತೀರ್ಪುಗಳು ಕೇಂದ್ರೀಕರಿಸಿವೆ. ದೂರದ ಮತ್ತು ವೈವಿಧ್ಯಮಯ ಮತದಾನ ಸ್ಥಳಗಳಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ವ್ಯಾಪಕವಾದ ವ್ಯವಸ್ಥಾಪನಾ ಕಾರ್ಯಾಚರಣೆಗಳನ್ನು ಎತ್ತಿ ತೋರಿಸುತ್ತವೆ. ಮತಗಳ ತಪ್ಪು ಎಣಿಕೆಯ ಯಾವುದೇ ಸಾಧ್ಯತೆಯನ್ನು ತಡೆಗಟ್ಟಲು ತಪಾಸಣೆ ಮತ್ತು ಸಮತೋಲನದ ಕಠಿಣ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಕ್ಕಾಗಿ ಚುನಾವಣಾ ಆಯೋಗವನ್ನು ಶ್ಲಾಘಿಸಿದ್ದಾರೆ.

ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳುವ ಅರ್ಜಿದಾರರ ಮನವಿಯು "ದೋಷಪೂರಿತ ಮತ್ತು ಅಸಮಂಜಸ" ಮತ್ತು "ತಿರೋಗಾಮಿ" ಎಂದು ನ್ಯಾಯಾಧೀಶರು ಒಕ್ಕೊರಲಿನಿಂದ ಹೇಳಿದ್ದಾರೆ. ಇದು ಇಲ್ಲಿಯವರೆಗೆ ಕೈಗೊಂಡ ಚುನಾವಣಾ ಸುಧಾರಣೆಗಳನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಇವಿಎಂ ಮತ್ತು ವಿವಿಪ್ಯಾಟ್ ನಡುವೆ ಹೊಂದಾಣಿಕೆಯಾಗದ ಒಂದೇ ಒಂದು ನಿದರ್ಶನವನ್ನು ದಾಖಲಿಸದ ಕಾರಣ ಚುನಾವಣಾ ಪ್ರಕ್ರಿಯೆಯಲ್ಲಿ ತಿರುಚುವಿಕೆ ಅಥವಾ ಡೇಟಾ ಹೊಂದಾಣಿಕೆಯ ಬಗ್ಗೆ ಆತಂಕಗಳು ಆಧಾರರಹಿತವಾಗಿವೆ ಎಂದು ನ್ಯಾಯಾಧೀಶರು ಗಮನಸೆಳೆದಿದ್ದಾರೆ. ಈ ಪ್ರಕರಣಗಳಲ್ಲಿ ಅರ್ಜಿದಾರರು ಶೇಕಡಾ 100 ರಷ್ಟು ಅಡ್ಡ ಪರಿಶೀಲನೆಗೆ ಒತ್ತಾಯಿಸುವ ಎಲ್ಲಾ ತರ್ಕವನ್ನು ಉಲ್ಲಂಘಿಸಿದ್ದಾರೆ ಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ಆದೇಶ ಸ್ವಾಗತಿಸಿ ವಿಪಕ್ಷಗಳಿಗೆ ಪ್ರಧಾನಿ ಮೋದಿ ಕಿಡಿ

ಸುಪ್ರೀಂ ಕೋರ್ಟ್‌ನ ಈ ತೀರ್ಪನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಸ್ವಾಗತಿಸಿದೆ. ಇವಿಎಂಗಳು ಬಂದ ಹಿನ್ನೆಲೆಯನ್ನು ತಮ್ಮ ಹಳೆಯ ಆಟವನ್ನು ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರು ಇವಿಎಂಗಳ ಬಗ್ಗೆ ಅಪನಂಬಿಕೆ ಸೃಷ್ಟಿಸುವ ಪಾಪವನ್ನು ಮಾಡಿದ್ದಾರೆ. ಸುಪೀಂ ಕೋರ್ಟ್ ತೀರ್ಪು ಅವರಿಗೆ ಕಪಾಳಮೋಕ್ಷದಂತಿದೆ. ಅವರು ಕ್ಷಮೆ ಕೇಳಬೇಕೆಂದು ವಿರೋಧ ಪಕ್ಷಗಳು ವಿರುದ್ಧ ಪ್ರಧಾನಿ ಮೋದಿ ಗುಡುಗಿದ್ದಾರೆ.

ಇದು ನಡುವೆ ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸಲು ವಿವಿಪ್ಯಾಟ್‌ಗಳ ಹೆಚ್ಚಿನ ಬಳಕೆಯ ಬಗ್ಗೆ ತನ್ನ ರಾಜಕೀಯ ಅಭಿಯಾನವನ್ನು ಮುಂದುವರಿಸುವುದಾಗಿ ಪ್ರತಿಪಕ್ಷಗಳು ತಿಳಿಸಿವೆ. "ನಾವು ಇಬ್ಬರು ನ್ಯಾಯಾಧೀಶರ ಪೀಠದ ತೀರ್ಪನ್ನು ಗಮನಿಸಿದ್ದೇವೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕ ನಂಬಿಕೆಯನ್ನು ಹೆಚ್ಚಿಸಲು ವಿವಿಪ್ಯಾಟ್‌ಗಳ ಹೆಚ್ಚಿನ ಬಳಕೆಯ ಬಗ್ಗೆ ನಮ್ಮ ರಾಜಕೀಯ ಅಭಿಯಾನ ಮುಂದುವರಿಯುತ್ತದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

IPL_Entry_Point