Exit polls 2023: ಎಕ್ಸಿಟ್‌ ಪೂಲ್ ಸಮೀಕ್ಷೆ, ನಾಗಲ್ಯಾಂಡ್‌ನಲ್ಲಿ ಬಿಜೆಪಿಗೆ ಗೆಲುವು ಗ್ಯಾರಂಟಿ, ಮೇಘಾಲಯದಲ್ಲಿ ಕಷ್ಟವಂತೆ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Exit Polls 2023: ಎಕ್ಸಿಟ್‌ ಪೂಲ್ ಸಮೀಕ್ಷೆ, ನಾಗಲ್ಯಾಂಡ್‌ನಲ್ಲಿ ಬಿಜೆಪಿಗೆ ಗೆಲುವು ಗ್ಯಾರಂಟಿ, ಮೇಘಾಲಯದಲ್ಲಿ ಕಷ್ಟವಂತೆ!

Exit polls 2023: ಎಕ್ಸಿಟ್‌ ಪೂಲ್ ಸಮೀಕ್ಷೆ, ನಾಗಲ್ಯಾಂಡ್‌ನಲ್ಲಿ ಬಿಜೆಪಿಗೆ ಗೆಲುವು ಗ್ಯಾರಂಟಿ, ಮೇಘಾಲಯದಲ್ಲಿ ಕಷ್ಟವಂತೆ!

2023 Assembly elections: ಮೇಘಾಲಯ ಮತ್ತು ನಾಗಲ್ಯಾಂಡ್‌ನಲ್ಲಿ ಚುನಾವಣೆ ಮುಗಿದಿದ್ದು, ಇದೀಗ ಚುನಾವಣಾ ಫಲಿತಾಂಶದ ಸಮೀಕ್ಷೆಗಳು ಹೊರಬೀಳುತ್ತಿವೆ. ಮುಂದೆ ಕರ್ನಾಟಕ, ರಾಜಸ್ಥಾನದ ಚುನಾವಣೆಗಳು ನಡೆಯಲಿರುವುದರಿಂದ ಮೇಘಾಲಯ, ನಾಗಲ್ಯಾಂಡ್‌ ಫಲಿತಾಂಶ ಬಿಜೆಪಿಗೆ ಪ್ರಮುಖವಾಗಿದೆ.

Exit polls 2023: ಎಕ್ಸಿಟ್‌ ಪೂಲ್ ಸಮೀಕ್ಷೆ, ನಾಗಲ್ಯಾಂಡ್‌ನಲ್ಲಿ ಬಿಜೆಪಿಗೆ ಗೆಲುವು ಗ್ಯಾರಂಟಿ, ಮೇಘಾಲಯದಲ್ಲಿ ಕಷ್ಟವಂತೆ!
Exit polls 2023: ಎಕ್ಸಿಟ್‌ ಪೂಲ್ ಸಮೀಕ್ಷೆ, ನಾಗಲ್ಯಾಂಡ್‌ನಲ್ಲಿ ಬಿಜೆಪಿಗೆ ಗೆಲುವು ಗ್ಯಾರಂಟಿ, ಮೇಘಾಲಯದಲ್ಲಿ ಕಷ್ಟವಂತೆ! (Nitin Kanotra / Hindustan Times)

ನವದೆಹಲಿ: ತ್ರಿಪುರದಲ್ಲಿ ಇಂಡಿಜಿನೊಸ್‌ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರದ ನೆರವಿನಿಂದ ಭಾರತೀಯ ಜನತಾ ಪಕ್ಷ ಅಧಿಕಾರವನ್ನು ಉಳಿಸಿಕೊಳ್ಳಲಿದೆ. ನಾಗಲ್ಯಾಂಡ್‌ನಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ ನೆರವಿನಿಂದ ಸರಕಾರ ರಚಿಸಲಿದೆ. ಆದರೆ, ಮೇಘಾಲಯದಲ್ಲಿ ಸರಕಾರ ರಚಿಸಲು ಬಿಜೆಪಿಗೆ ಕಷ್ಟವಾಗಬಹುದು ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಇಂದು ಮತದಾನ ನಡೆದಿದೆ. ತ್ರಿಪುರದಲ್ಲಿ ಫೆಬ್ರವರಿ 16ರಂದು ಚುನಾವಣೆ ನಡೆದಿದೆ. ಪ್ರತಿರಾಜ್ಯಗಳು 60 ಸೀಟುಗಳ ಅಸೆಂಬ್ಲಿ ಹೊಂದಿವೆ.

ತ್ರಿಪುರಾ ಎಕ್ಸಿಟ್‌ ಪೋಲ್ಸ್‌ (Tripura exit polls)

ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ ಬಿಜೆಪಿ ಮತ್ತು ಐಪಿಎಫ್‌ಟಿಗೆ 36 ರಿಂದ 45 ಸ್ಥಾನಗಳು ದೊರಕಬಹುದು. ಇದರಿಂದ ಸುಲಭ ಗೆಲುವು ದೊರಕಲಿದೆ. ಎಡ ಮೈತ್ರಿಕೂಟವು ಆರರಿಂದ 11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. 2019 ರಲ್ಲಿ ರಾಜಮನೆತನದ ಮುಖ್ಯಸ್ಥ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮಾ ಸ್ಥಾಪಿಸಿದ ತಿಪ್ರಾ ಮೋತ್ರವು ಒಂಬತ್ತರಿಂದ 16 ಸ್ಥಾನಗಳನ್ನು ಗೆಲ್ಲಬಹುದು. ಸತತ ಎರಡನೇ ಬಾರಿಗೆ ಕಾಂಗ್ರೆಸ್ ಸೋಲನುಭವಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.

ಟೈಮ್ಸ್ ನೌ-ಇಟಿಜಿ ರಿಸರ್ಚ್ ಮತ್ತು ಝೀ ನ್ಯೂಸ್-ಮ್ಯಾಟ್ರಿಜ್‌ ಪ್ರಕಾರ ಬಿಜೆಪಿಗೆ ಬಹುಮತದ ಕೊರತೆಯಾಗಬಹುದು. ಎಡಪಕ್ಷಗಳಿಗೆ 18-24 ಮತ್ತು 13-21ರ ನಿರ್ಣಾಯಕ ಪಾಲನ್ನುನೀಡುವ ಮೂಲಕ ತ್ರಿಪುರಾದಲ್ಲಿ ಕೇಸರಿ ಪಕ್ಷಕ್ಕೆ ಗೆಲುವು ಸರಳವಲ್ಲ ಎಂದಿವೆ.

ಟೈಮ್ಸ್ ನೌ ಸಮೀಕ್ಷೆಯಲ್ಲಿ ಬಿಜೆಪಿಗೆ 21-27 ಸ್ಥಾನಗಳು ದೊರಕಿವೆ. ಝೀ ನ್ಯೂಸ್ 29-36 ಸ್ಥಾನಗಳನ್ನು ನೀಡಿದೆ. ಈ ಎರಡೂ ಸಮೀಕ್ಷೆಗಳು ಕಾಂಗ್ರೆಸ್‌ಗೆ ಗೆಲ್ಲಲು ಸಾಧ್ಯವಿಲ್ಲ ಎಂದಿವೆ.

ನಾಗಾಲ್ಯಾಂಡ್

ಇಂಡಿಯಾ ಟುಡೇ, ಟೈಮ್ಸ್ ನೌ ಮತ್ತು ಝೀ ನ್ಯೂಸ್‌ಗಳು ಬಿಜೆಪಿಗೆ ಬಹುಮತದ ಭಾರೀ ಗೆಲುವಿನ ಸೂಚನೆ ನೀಡಿವೆ. ಹೀಗಾಗಿ, ಈ ರಾಜ್ಯದಲ್ಲಿ ಬಿಜೆಪಿ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳಬೇಕಾಗಬಹುದು.

ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಬಿಜೆಪಿ 39-49 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್‌ಗೆ ಶೂನ್ಯ, ನಾಗಾ ಪೀಪಲ್ಸ್ ಫ್ರಂಟ್ ನಾಲ್ಕರಿಂದ ಎಂಟು ಸ್ಥಾನಗಳನ್ನು ಮಾತ್ರ ಪಡೆಯುವ ನಿರೀಕ್ಷೆಯಿದೆ. ಅದೇ ರೀತಿ, ಝೀ ನ್ಯೂಸ್ ಬಿಜೆಪಿಗೆ 35-43 ಸ್ಥಾನಗಳನ್ನು ಮತ್ತು ಎನ್‌ಪಿಎಫ್‌ಗೆ ಎರಡು-ಐದು ಸ್ಥಾನಗಳನ್ನು ನೀಡಿದೆ. ಆದರೆ ಇಂಡಿಯಾ ಟುಡೇ ಬಿಜೆಪಿಗೆ 38-48 ಮತ್ತು ಎನ್‌ಪಿಎಫ್‌ಗೆ ಮೂರು-ಎಂಟು ಸೀಟುಗಳು ಗೆಲುವ ಸೂಚನೆ ನೀಡಿದೆ. ಝೀ ಮತ್ತು ಇಂಡಿಯಾ ಟುಡೇ ಎರಡೂ ಕಾಂಗ್ರೆಸ್‌ ಒಂದರಿಂದ ಎರಡು ಸ್ಥಾನಗಳನ್ನು ಗೆಲ್ಲಬಹುದು ಎಂದಿವೆ.

ಮೇಘಾಲಯ

ಆರಂಭಿಕ ಟ್ರೆಂಡ್‌ಗಳು ಮೇಘಾಲಯದಲ್ಲಿ ಹಂಗ್ ಅಸೆಂಬ್ಲಿಯನ್ನು ಸೂಚಿಸುತ್ತವೆ. ಅಂದ್ರೆ, ಯಾವುದೇ ಪಕ್ಷವು (ಅಥವಾ ಮೈತ್ರಿ) ಬಹುಮತಕ್ಕೆ ಹತ್ತಿರವಾಗುವ ಸೂಚನೆ ಇಲ್ಲ. ಬಿಜೆಪಿ ಸ್ವಂತವಾಗಿ 11 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿಲ್ಲ. ಝೀ ನ್ಯೂಸ್ ಆರರಿಂದ 11 ಸ್ಥಾನಗಳನ್ನು ಮತ್ತು ಟೈಮ್ಸ್ ನೌ ಮೂರರಿಂದ ಆರು ಸ್ಥಾನಗಳನ್ನು ಬಿಜೆಪಿ ಗೆಲ್ಲುವ ಸೂಚನೆ ನೀಡಿವೆ. ಕಾಂಗ್ರೆಸ್ ಆರಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿಲ್ಲ. ಜೀ ನ್ಯೂಸ್ ಮೂರರಿಂದ ಆರು ಮತ್ತು ಟೈಮ್ಸ್ ಎರಡು ಮತ್ತು ಐದು ನಡುವೆ ಕಾಂಗ್ರೆಸ್‌ ಸ್ಥಾನಗಳನ್ನು ಗೆಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದೆ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಎನ್‌ಡಿಪಿಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಈ ಪಕ್ಷಕ್ಕೆ ಟೈಮ್ಸ್ ನೌ 18-26 ಸ್ಥಾನಗಳನ್ನು ಮತ್ತು ಝೀ ನ್ಯೂಸ್ 21-26 ಸ್ಥಾನಗಳನ್ನು ನೀಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.