ಕನ್ನಡ ಸುದ್ದಿ  /  Nation And-world  /  Explained Uttarkashi Tunnel Collapse How Did Banned Rat Miners End Ordeal Of 41 Workers What Is Rat Mining Uks

Rat Mining: ಉತ್ತರಕಾಶಿ ಕಾರ್ಮಿಕರ ರಕ್ಷಣೆಗೆ ನಿಷೇಧಿತ ಇಲಿ ಬಿಲ ಗಣಿಗಾರಿಕೆ ಮತ್ತು ಇತರೆ ವಿಧಾನಗಳ ಬಳಕೆ, ಏನಿದು ಇಲಿ ಗಣಿಗಾರಿಕೆ

ಉತ್ತರಕಾಶಿ ಸುರಂಗ ಕುಸಿತಕ್ಕೆ ಸಿಲುಕಿ ಹದಿನೇಳು ದಿನಗಳಿಂದ ಸುರಂಗದೊಳಗೆ ಇದ್ದ ಕಾರ್ಮಿಕರನ್ನು ಮಂಗಳವಾರ (ನ.28) ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಕೊನೆಯ ಹಂತದಲ್ಲಿ ನೆರವಿಗೆ ಬಂದ ಇಲಿ ಬಿಲ ಗಣಿಗಾರಿಕೆ ವಿಧಾನದ ಕುರಿತು ಮಾಹಿತಿ ಇಲ್ಲಿದೆ.

ಉತ್ತರಕಾಶಿ ಸುರಂಗ ಕುಸಿತದ ಕಾರಣ ಸಿಲುಕಿದ್ದ ಕಾರ್ಮಿಕರ ರಕ್ಷಣೆ ಮಾಡುವಲ್ಲಿ ಕೊನೆಯ ಹಂತದಲ್ಲಿ ನೆರವಾಗಿದ್ದು ಇಲಿ ಬಿಲ ಗಣಿಗಾರಿಕೆ ವಿಧಾನ.
ಉತ್ತರಕಾಶಿ ಸುರಂಗ ಕುಸಿತದ ಕಾರಣ ಸಿಲುಕಿದ್ದ ಕಾರ್ಮಿಕರ ರಕ್ಷಣೆ ಮಾಡುವಲ್ಲಿ ಕೊನೆಯ ಹಂತದಲ್ಲಿ ನೆರವಾಗಿದ್ದು ಇಲಿ ಬಿಲ ಗಣಿಗಾರಿಕೆ ವಿಧಾನ. (ANI)

ಹದಿನೇಳು ದಿನಗಳ ನಿರಂತರ ಕಾರ್ಯಾಚರಣೆ ಬಳಿಕ ಉತ್ತರಕಾಶಿ ಸುರಂಗ ಕುಸಿತ ಪ್ರಕರಣದಲ್ಲಿ ಸಿಲ್ಕ್‌ಯಾರಾ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ ಇಂದು (ನ.28) ಸಾಧ್ಯವಾಗಿದೆ. ಭೂಕುಸಿತಕ್ಕೆ ಒಳಗಾದ ಸಿಲ್ಕ್‌ಯಾರಾ ಸುರಂಗದೊಳಗೆ 60 ಮೀಟರ್ ವ್ಯಾಸದ ಸುರಂಗ ಕೊರೆದು ಅವರನ್ನು ರಕ್ಷಿಸಲಾಯಿತು.

ಬಹಳಷ್ಟು ಕಡೆ ಅಮೆರಿಕದ ಆಗರ್ ಯಂತ್ರದ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯಿತಾದರೂ, ಕೊನೆಯ ಹಂತದಲ್ಲಿ ನೆರವಿಗೆ ಬಂದದ್ದು ನಿಷೇಧಿತ ಇಲಿ ಬಿಲ ಗಣಿಗಾರಿಕೆ ( Rat Mining) ವಿಧಾನ. ಈ ಗಣಿಗಾರಿಕೆಯಲ್ಲಿ ಪರಿಣತರಾದವರು ಕೊನೆಯ ಹಂತದ ಕಾರ್ಯಾಚರಣೆಯಲ್ಲಿ ಎಲ್ಲರ ಮನಗೆದ್ದರು.

ಏನಿದು ಇಲಿ ಬಿಲ ಗಣಿಗಾರಿಕೆ

ಇಲಿ ಬಿಲ ಗಣಿಗಾರಿಕೆ (Rat-hole mining) ಅಥವಾ ಇಲಿ ಗಣಿಗಾರಿಕೆ ( Rat Mining) ಎಂಬುದು ಕೈಯಿಂದಲೇ ಬಿಲ ಕೊರೆಯುವ ವಿಧಾನ. ಮೇಘಾಲಯ ಭಾಗದಲ್ಲಿ ಈ ಕೆಲಸ ಮಾಡುವ ಕುಶಲ ಕರ್ಮಿಗಳಿದ್ದಾರೆ. ಬಹಳ ಸಪೂರ ಬಿಲ ಕೊರೆಯುತ್ತಾರೆ. ಈ ಬಿಲದ ಮೂಲಕ ಒಬ್ಬ ಮನುಷ್ಯ ತೂರಿಕೊಂಡು ಹೋಗುವುದು ಸಾಧ್ಯವಿದೆ.

ಸಪೂರ ರಂಧ್ರವಾದ ಕಾರಣ ಇದಕ್ಕೆ ಇಲಿ ಬಿಲ ಎಂಬ ಪದ ಬಳಕೆಯಾಗಿದೆ. ಬಿಲ ಪೂರ್ಣವಾದ ಬಳಿಕ ಗಣಿಗಾರಿಕೆ ಮಾಡುವವರು ಹಗ್ಗ ಮತ್ತು ಬಿದುರಿನ ಏಣಿ ಇಳಿಬಿಟ್ಟು ಕೆಳಕ್ಕೆ ಇಳಿಯುತ್ತಾರೆ. ಸಾಮಾನ್ಯವಾಗಿ ಕಲ್ಲಿದ್ದಲು ಗಣಿಗಾರಿಕೆಗೆ ಇಂತಹ ಬಿಲಗಳ ಬಳಕೆಯಾಗುತ್ತದೆ. ಗಾಳಿಯ ಕೊರತೆಯಿಂದ ಗಣಿಗಾರಿಕೆಗೆ ಹೋಗುವವರು ಮೃತರಾಗುವುದು ಸಾಮಾನ್ಯ. ಹೀಗಾಗಿ ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.

ಈ ವಿಧಾನದಲ್ಲಿ ಇನ್ನೂ ಒಂದು ವಿಧಾನ ಇದೆ. ಅದು ವೃತ್ತಾಕಾರದ ಬದಲು ಆಯತಾಕಾರದಲ್ಲಿರುತ್ತದೆ. ಅದು 10 ಚದರ ಮೀಟರ್‌ನಿಂದ 100 ಚದರ ಮೀಟರ್ ವ್ಯಾಪ್ತಿಯಲ್ಲಿದ್ದು, ಲಂಬವಾಗಿ 100ರಿಂದ 400 ಅಡಿ ತನಕ ಅಗೆಯಲಾಗುತ್ತದೆ. ಒಮ್ಮೆ ಕಲ್ಲಿದ್ದಲು ನಿಕ್ಷೇಪ ಸಿಕ್ಕರೆ ಇಲಿ ಬಿಲದ ಮಾದರಿಯ ರಂಧ್ರ ಕೊರೆಯಲಾಗುತ್ತದೆ.

ಇಲಿ ಗಣಿಗಾರಿಕೆ ನಿಷೇಧ ಯಾಕೆ

ಈ ಇಲಿ-ಗಣಿಗಾರಿಕೆ ವಿಧಾನವು ಅದರ ಅಪಾಯಕಾರಿ ಕೆಲಸದ ವಾತಾವರಣ, ಪರಿಸರ ಹಾನಿ, ಕಾರ್ಮಿಕರ ಗಾಯ ಮತ್ತು ಸಾವುಗಳಿಗೆ ಕಾರಣವಾಗುವ ಹಲವಾರು ಅಪಘಾತಗಳಿಂದಾಗಿ ತೀವ್ರ ಟೀಕೆಗಳನ್ನು ಎದುರಿಸಿದೆ.

ಗಣಿಗಳು ಸಾಮಾನ್ಯವಾಗಿ ಅನಿಯಂತ್ರಿತ. ಅಲ್ಲಿ ಸರಿಯಾದ ಗಾಳಿ, ರಚನಾತ್ಮಕ ಕೆಲಸದ ವಾತಾವರಣ ಅಥವಾ ಕಾರ್ಮಿಕರಿಗೆ ಸುರಕ್ಷತಾ ವ್ಯವಸ್ಥೆ ಇರುವುದಿಲ್ಲ. ಇನ್ನು ಇಲಿ ಬಿಲ ಗಣಿಗಾರಿಕೆ ನಡೆಸುವವರಿಗೆ ಆ ವ್ಯವಸ್ಥೆ, ಪರಿಸರ ಅತ್ಯಂತ ಅಪಾಯಕಾರಿ ಎಂಬುದು ತಜ್ಞರ ಅಭಿಪ್ರಾಯ. ಇದಲ್ಲದೆ, ಗಣಿಗಾರಿಕೆಯು ಭೂ ಸವಕಳಿ, ಅರಣ್ಯ ನಾಶ ಮತ್ತು ಜಲ ಮಾಲಿನ್ಯವನ್ನು ಉಂಟುಮಾಡುತ್ತದೆ.

ಇದೇ ಕಾರಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಇಲಿ ಬಿಲ ಗಣಿಗಾರಿಕೆಯನ್ನು 2014ರಲ್ಲಿ ನಿಷೇಧಿಸಿತು. 2015ರಲ್ಲಿ ಆ ನಿಷೇಧವನ್ನು ಮುಂದುವರಿಸಿತು.

ಸಿಲ್ಕ್‌ಯಾರಾ ಸುರಂಗ ಕುಸಿತದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಬಳಕೆಯಾದ ಇತರೆ ವಿಧಾನಗಳು

ಲಂಬ ಕೊರೆಯುವಿಕೆ: ಬೋರ್ ಕೊರೆಯುವ ಯಂತ್ರ ಬಳಸಿಕೊಂಡು ಲಂಬ ಕೊರೆಯುವಿಕೆಯನ್ನು ಮಾಡಲಾಗುತ್ತದೆ. ವಿದ್ಯುತ್ ಉಪಕರಣಗಳು ಮತ್ತು ಉಪಕರಣಗಳನ್ನು ಬಳಸಿ ನೆಲದಿಂದ ನೇರವಾಗಿ ಅಗೆಯಲಾಗುತ್ತದೆ. ಉತ್ತರಾಖಂಡದ ಸುರಂಗದ ಕುಸಿತದ ಸಂದರ್ಭದಲ್ಲಿ, ಲಂಬವಾಗಿ ಸುರಂಗ ಕೊರೆದು ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರತರಲು 800-ಎಂಎಂ ಪೈಪ್ ಅನ್ನು ಅಳವಡಿಸಲಾಗಿದೆ.

ಆಗರ್ ಮೈನಿಂಗ್ (ಸಮತಲ ಕೊರೆಯುವಿಕೆ): ಅಮೇರಿಕ ನಿರ್ಮಿತ ಆಗರ್ ಯಂತ್ರ ಬಳಸಿಕೊಂಡು ಸಮತಲವಾಗಿ ನೆಲ ಕೊರೆಯಲಾಗುತ್ತದೆ. ಈ ಯಂತ್ರವನ್ನು ಸುರಂಗ ರಚನೆಗೆ ಬೇಕಾದಂತೆ ವಿನ್ಯಾಸಗೊಳಿಸಲಾಗಿದೆ. ನೀರಿನ ಕೊಳವೆ, ಅನಿಲ ಕೊಳವೆ ಹಾಕಲು, ಸುರಂಗ ನಿರ್ಮಿಸಲು ಈ ಯಂತ್ರವನ್ನು ಬಳಸಲಾಗುತ್ತದೆ.