ಒಂದರಿಂದ ಪಿಜಿ ತನಕ; HDFC ಬ್ಯಾಂಕ್ನಿಂದ 75,000 ವಿದ್ಯಾರ್ಥಿವೇತನ, ಈಗಲೇ ಅರ್ಜಿ ಸಲ್ಲಿಸಿ, ಹತ್ತಿರ ಬಂತು ಕೊನೆಯ ದಿನಾಂಕ
HDFC Bank Parivartans Educational Crisis Scholarship: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಡಿಎಫ್ಸಿ ಬ್ಯಾಂಕ್ ಪರಿವರ್ತನ್ ಶೈಕ್ಷಣಿಕ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ ಶೈಕ್ಷಣಿಕ ಬಿಕ್ಕಟ್ಟಿನ ವಿದ್ಯಾರ್ಥಿವೇತನ ಬೆಂಬಲ (ಇಸಿಎಸ್‌ಎಸ್) ಕಾರ್ಯಕ್ರಮದಡಿ 2024-25ನೇ ಶೈಕ್ಷಣಿಕ ಸಾಲಿನ 1ನೇ ತರಗತಿಯಿಂದ ವೃತ್ತಿಪರ ಸ್ನಾತಕೋತ್ತರ ಪದವಿನ ತನಕ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಇದು ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ಮತ್ತು ಅಗತ್ಯವಿರುವ ಎಲ್ಲಾ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ ವಿದ್ಯಾರ್ಥಿವೇತನಕ್ಕೆ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಈಗಾಗಲೇ ಅರ್ಜಿ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಸೆಪ್ಟೆಂಬರ್ 4 ಆಗಿದೆ. ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಮೂರು ರೀತಿಯ ಕಾರ್ಯಕ್ರಮಗಳು ಚಾಲನೆಯಲ್ಲಿವೆ. ಶಾಲಾ ವಿದ್ಯಾರ್ಥಿಗಳಿಗೆ, ಪದವಿ ಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿವೇತನ ಸಿಗಲಿದೆ.
ಯಾರಿಗೆಷ್ಟು ವಿದ್ಯಾರ್ಥಿವೇತನ?
- 1 ರಿಂದ 6ನೇ ತರಗತಿಗೆ - 15,000 ರೂಪಾಯಿ ವಿದ್ಯಾರ್ಥಿ ವೇತನ
- 7 ರಿಂದ 12 ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ - 18,000 ರೂಪಾಯಿ ವಿದ್ಯಾರ್ಥಿ ವೇತನ
- ಸಾಮಾನ್ಯ ಪದವಿಪೂರ್ವ ಕೋರ್ಸ್‌ಗಳಿಗೆ - 30,000 ರೂಪಾಯಿ ವಿದ್ಯಾರ್ಥಿ ವೇತನ
- ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳಿಗೆ - 50,000 ರೂಪಾಯಿ ವಿದ್ಯಾರ್ಥಿ ವೇತನ
- ಸಾಮಾನ್ಯ ಸ್ನಾತಕೋತ್ತರ ಕೋರ್ಸ್‌ಗಳಿಗೆ - 35,000 ರೂಪಾಯಿ ವಿದ್ಯಾರ್ಥಿ ವೇತನ
- ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ಗಳಿಗೆ - 75,000 ರೂಪಾಯಿ ವಿದ್ಯಾರ್ಥಿ ವೇತನ
ಯಾವೆಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು?
- ಪ್ರಸ್ತುತ 1 ರಿಂದ 12ನೇ ತರಗತಿ, ಡಿಪ್ಲೊಮಾ, ಐಟಿಐ, ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರು. ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುತ್ತಿರಬೇಕು.
- ಬಿಕಾಂ, ಬಿಎಸ್ಸಿ, ಬಿಎ, ಬಿಸಿಎ, ಬಿಟೆಕ್ (ಸಾಮಾನ್ಯ ಕೋರ್ಸ್‌ಗಳು) - ಎಂಬಿಬಿಎಸ್, ಎಲ್ಎಲ್ಬಿ, ಅರ್ಕಿಟೆಕ್ಟ್, ನರ್ಸಿಂಗ್ (ವೃತ್ತಿಪರ ಕೋರ್ಸ್‌ಗಳು). ವಿದ್ಯಾರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾನಿಲಯಗಳಲ್ಲಿ ಓದುತ್ತಿರಬೇಕು.
- ವಿದ್ಯಾರ್ಥಿಗಳು ಭಾರತದ ಮಾನ್ಯತೆ ಪಡೆದ ಕಾಲೇಜುಗಳು ಅಥವಾ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ಗಳನ್ನು (ಸಾಮಾನ್ಯ ಕೋರ್ಸ್‌ಗಳು - ಎಂಕಾಮ್, ಎಂಎ ಇತ್ಯಾದಿ ಮತ್ತು ವೃತ್ತಿಪರ ಕೋರ್ಸ್‌ಗಳು - ಎಂಟೆಕ್, ಎಂಬಿಎ ಇತ್ಯಾದಿ) ಓದುತ್ತಿರಬೇಕು.
ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ಭಾರತೀಯ ಶಾಲೆಗಳು ಅಥವಾ ಕಾಲೇಜುಗಳಲ್ಲಿ ಓದುತ್ತಿರಬೇಕು.
- ಕಳೆದ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಹೆಚ್ಚಿರಬಾರದು.
- ಕಳೆದ 3 ವರ್ಷಗಳಲ್ಲಿ ಸಂಭವಿಸಿದ ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಅರ್ಜಿದಾರರಿಗೆ ಆದ್ಯತೆಏನೆಲ್ಲಾ ದಾಖಲೆಗಳು ಬೇಕು?
- ಪಾಸ್ಪೋರ್ಟ್ ಸೈಜ್ ಫೋಟೋ
- ಕಳೆದ ವರ್ಷದ ಅಂಕಪಟ್ಟಿ (2023-24)
- ಅರ್ಜಿದಾರರ ವಿಳಾಸ-ಐಡೆಂಟಿಟಿ ಫ್ರೂಫ್ (ಆಧಾರ್ ಕಾರ್ಡ್/ವೋಟರ್ ಐಡಿ/ಚಾಲನಾ ಪರವಾನಗಿ)
- ಪ್ರಸಕ್ತ ವರ್ಷದ ಪ್ರವೇಶ ಪತ್ರ (ಶುಲ್ಕ ರಸೀದಿ/ಪ್ರವೇಶ ಪತ್ರ/ಸಂಸ್ಥೆಯ ಐಡಿ ಕಾರ್ಡ್) (2024-25)
- ಅರ್ಜಿದಾರರ ಬ್ಯಾಂಕ್ ಪಾಸ್‌ಬುಕ್
- ಆದಾಯ ಪ್ರಮಾಣ ಪತ್ರ (2.5 ಲಕ್ಷಕ್ಕಿಂತ ಕಡಿಮೆ ಆದಾಯ ಇರಬೇಕು)
- ಕುಟುಂಬ/ವೈಯಕ್ತಿಕ ಬಿಕ್ಕಟ್ಟು ಪ್ರಮಾಣ ಪತ್ರ (ಉದಾ: ಲೋನ್ ಪಡೆದಿದ್ದರೆ ಅದರ ಸ್ಕ್ಯಾನ್ ಪ್ರತಿ, ಆಸ್ಪತ್ರೆಗೆ ಅಡ್ಮಿಷನ್ ಆಗಿರುವ ದಾಖಲೆಗಳು)
ಇದನ್ನೂ ಓದಿ: BPL Card; ಅನರ್ಹ ಕಾರಣ 12 ಲಕ್ಷ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ, ಈ ಕುಟುಂಬದವರಿಗೆ ಅನ್ನಭಾಗ್ಯ ಸಿಗೋದು ಡೌಟ್
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದೇಗೆ?
- ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಹೆಚ್ಡಿಎಫ್ಸಿ ಬ್ಯಾಂಕ್‌ನ ಈ ಲಿಂಕ್ (https://www.hdfcbankecss.com/) ಕ್ಲಿಕ್ ಮಾಡಿ. ಅಥವಾ (https://www.buddy4study.com/page/hdfc-bank-parivartans-ecss-programme) ಈ ಲಿಂಕ್ ಓಪನ್ ಮಾಡಿ.
- ನೀವು ಹೊಸ ಪುಟವನ್ನು ತಲುಪಿದ ನಂತರ ಅಲ್ಲಿ ಅಪ್ಲಿಕೇಶನ್ ಐಡಿ ಮತ್ತು ಪಾಸ್‌ವರ್ಡ್ ರಚಿಸಬೇಕು. ಮತ್ತು ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಬೇಕು
- ರಿಜಿಸ್ಟರ್ ಆದ ಬಳಿಕ ನಿಮ್ಮನ್ನು 'ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್‌ನ ECSS ಸ್ಕಾಲರ್‌ಶಿಪ್ ಪ್ರೋಗ್ರಾಂ 2024-25' ಅರ್ಜಿ ಫಾರ್ಮ್ ಪುಟ ಓಪನ್ ಮಾಡಿ.
- ತದನಂತರ ಸ್ಟಾರ್ಟ್ ಅಪ್ಲಿಕೇಷನ್ (Start Application) ಮೇಲೆ ಕ್ಲಿಕ್ ಮಾಡಿ.
- ಈಗ ಅದಕ್ಕೆ ಅನುಗುಣವಾಗಿ ನಿಮ್ಮ ಶೈಕ್ಷಣಿಕ ಮಾಹಿತಿಯನ್ನು ಫಿಲ್ ಮಾಡಬೇಕು.
- ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ
- 'ನಿಯಮಗಳು ಮತ್ತು ಷರತ್ತುಗಳನ್ನು' ಒಪ್ಪಿಕೊಳ್ಳಿ ಮತ್ತು 'ಪೂರ್ವವೀಕ್ಷಣೆ' ಮೇಲೆ ಕ್ಲಿಕ್ ಮಾಡಿ.
- ಅಪ್ಲಿಕೇಶನ್ ಭರ್ತಿ ಮಾಡಿದ ಎಲ್ಲಾ ವಿವರಗಳನ್ನು ಮತ್ತೊಮ್ಮೆ ಸರಿಯಾಗಿದೆಯೇ ಎಂದು ಚೆಕ್ ಮಾಡಿ. ಅಪ್ಲಿಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಲು 'ಅಪ್ಲೈ' ಬಟನ್ ಕ್ಲಿಕ್ ಮಾಡಿ.
ಇದನ್ನೂ ಓದಿ: ಅತಿಯಾಗಿ ಕೂದಲು ಉದುರೋದು, ತಲೆಹೊಟ್ಟಿನ ಸಮಸ್ಯೆಯಿಂದ ಬೇಸರವಾಗಿದ್ಯಾ? ದಾಲ್ಚಿನ್ನಿ ಎಲೆಯಲ್ಲಿದೆ ಪರಿಹಾರ, ಬಳಸುವ ವಿಧಾನ ಇಲ್ಲಿದೆ