Kerala News: ಮಕ್ಕಳ ಜನುಮ ದಿನಾಂಕದ ನೆನಪಲ್ಲಿ ಪಡೆದ ಲಾಟರಿ ಟಿಕೆಟ್‌ಗೆ ಬಂತು 33 ಕೋಟಿ ರೂ.: ಕೇರಳ ವ್ಯಕ್ತಿಗೆ ಬಂಪರ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Kerala News: ಮಕ್ಕಳ ಜನುಮ ದಿನಾಂಕದ ನೆನಪಲ್ಲಿ ಪಡೆದ ಲಾಟರಿ ಟಿಕೆಟ್‌ಗೆ ಬಂತು 33 ಕೋಟಿ ರೂ.: ಕೇರಳ ವ್ಯಕ್ತಿಗೆ ಬಂಪರ್‌

Kerala News: ಮಕ್ಕಳ ಜನುಮ ದಿನಾಂಕದ ನೆನಪಲ್ಲಿ ಪಡೆದ ಲಾಟರಿ ಟಿಕೆಟ್‌ಗೆ ಬಂತು 33 ಕೋಟಿ ರೂ.: ಕೇರಳ ವ್ಯಕ್ತಿಗೆ ಬಂಪರ್‌

Bumper Lottery ಕೇರಳ ಮೂಲದ, ಸದ್ಯ ಯುಎಇಯಲ್ಲಿ ನೆಲೆಸಿರುವ ರಾಜೀವ್‌ ಅವರು ಮಕ್ಕಳ ಜನುಮ ದಿನದ ಹೆಸರಿಲ್ಲಿ ವಿಶೇಷ ಲಾಟರಿ ಖರೀದಿಸಿದ್ದರು. ಅದಕ್ಕೆ ಭಾರೀ ಮೊತ್ತವೇ ಲಭಿಸಿದೆ.

ಕೇರಳದ ರಾಜೀವ್‌ ಅವರಿಗೆ ಬಂಪರ್‌ ಲಾಟರಿ ಒಲಿದಿದೆ.
ಕೇರಳದ ರಾಜೀವ್‌ ಅವರಿಗೆ ಬಂಪರ್‌ ಲಾಟರಿ ಒಲಿದಿದೆ. (Big Ticket ae)

ಸಣ್ಣ ಉದ್ಯೋಗದಲ್ಲಿರುವ ಈ ವ್ಯಕ್ತಿಗೆ ಲಾಟರಿ ಪಡೆಯುವ ಹವ್ಯಾಸ. ಹಲವಾರು ವರ್ಷದಿಂದ ಲಾಟರಿ ಖರೀದಿಸುತ್ತಿದ್ದರೂ ಒಮ್ಮೆಯೂ ಬಹುಮಾನ ಬಂದಿರಲಿಲ್ಲ. ಈ ಬಾರಿ ಪತ್ನಿಯ ಸಲಹೆಯಂತೆ ತಮ್ಮಿಬ್ಬರು ಮಕ್ಕಳ ಜನುಮ ದಿನದ ನೆನಪಿಗಾಗಿ ಲಾಟರಿಗಳನ್ನು ಖರೀದಿಸಿದರು. ಒಂದು ಲಾಟರಿ ಬಹುಮಾನ ತಂದೇ ಬಿಟ್ಟಿತು. ಅದು ಬರೋಬ್ಬರಿ 33 ಕೋಟಿ ರೂ. ಎರಡು ಲಾಟರಿ ಪಡೆದಿದ್ದರಿಂದ ಉಚಿತವಾಗಿ ಸಿಕ್ಕಿದ್ದ ಒಂದು ಲಾಟರಿಯಲ್ಲಿ ಬಹುಮಾನ ಲಭಿಸಿದ ಖುಷಿ. ಇನ್ನೂ ಮೂರು ಲಾಟರಿಗೆ ಬಹುಮಾನ ಸಿಗಬಹುದು ಎನ್ನುವ ಕಾತರ.

ಇದು ಕೇರಳ ಮೂಲದ ರಾಜೀವ್‌ ಎಂಬುವವರಿಗೆ ತಮ್ಮ ಮಕ್ಕಳ ಜನುಮ ದಿನ ತಂದುಕೊಟ್ಟ ಅದೃಷ್ಟ. ಸದ್ಯ ಯುಎಇನಲ್ಲಿ ನೆಲೆಸಿರುವ ರಾಜೀವ್‌ ತಮಗೆ ದೊರೆತ ಬಹುಮಾನದಿಂದ ಭಾರೀ ಖುಷಿಯಾಗಿದ್ದಾರೆ ಎಂದು ಕೇರಳದ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ.

40 ವರ್ಷದ ರಾಜೀವ್‌ ಅರಿಕ್ಕಟ್‌ ಅವರು ಶಿಕ್ಷಣ ಪಡೆದು ಕೇರಳದಲ್ಲಿಯೇ ಕೆಲಸ ಮಾಡಿಕೊಂಡಿದ್ದರು. ಹತ್ತು ವರ್ಷದ ಹಿಂದೆ ಕೆಲಸ ಅರಸಿ ಯುಎಐಗೆ ಆಗಮಿಸಿದ್ದರು. ಇಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಡ್ರಾಫ್ಟ್‌ಮ್ಯಾನ್‌ ಆಗಿದ್ದರು. ಬರುವ ಸಂಬಳ ಸ್ವಲ್ಪ. ಅದರಲ್ಲಿಯೇ ಕುಟುಂಬ ಸಾಗಬೇಕು. ಮೂರು ವರ್ಷದಿಂದ ರಾಜೀವ್‌ ಲಾಟರಿ ಟಿಕೆಟ್‌ ಖರೀದಿಸಲು ಆರಂಭಿಸಿದ್ದರು. ಒಮ್ಮೆಯೂ ಬಹುಮಾನ ಬಂದಿರಲಿಲ್ಲ.

ಈ ಬಾರಿ ಲಾಟರಿ ತರಲು ಹೋದಾಗ ಪತ್ನಿಯೂ ಜತೆಗಿದ್ದರು. ಮಕ್ಕಳ ಜನುಮ ದಿನವಾದ 7 ಮತ್ತು 13 ಸಂಖ್ಯೆಯನ್ನು ಪತ್ನಿ ಸಲಹೆಯಂತೆ ಆಯ್ಕೆ ಮಾಡಿಕೊಂಡಿದ್ದರು. ಎರಡು ವಿಶೇಷ ಲಾಟರಿ ಖರೀದಿಸಿದ್ದಕ್ಕೆ ನಾಲ್ಕು ಉಚಿತ ಲಾಟರಿ ಅವರಿಗೆ ಲಭಿಸಿತ್ತು. ಅದರಲ್ಲಿ ಈ ಎರಡು ಸಂಖ್ಯೆಯೂ ಸೇರಿ ಒಟ್ಟು ನಾಲ್ಕು ಲಾಟರಿ ಆಯ್ಕೆ ಮಾಡಿಕೊಂಡಿದ್ದರು. ಒಟ್ಟು ಆರು ಲಾಟರಿಗಳು ರಾಜೀವ್‌ ಬಳಿ ಇದ್ದವು. ಒಂದರಲ್ಲಾದರೂ ಲಾಟರಿ ಬರಲಿ. ಮಕ್ಕಳ ಹೆಸರಿನ ಸಂಖ್ಯೆಗೆ ಲಾಟರಿ ಬಂದರೆ ಖುಷಿ ಎಂದು ಪ್ರಾರ್ಥಿಸಿಕೊಂಡಿದ್ದರು. ಅವರ ಪ್ರಾರ್ಥನೆ ಫಲ ನೀಡಿತ್ತು. ಏಕೆಂದರೆ ಅವರಿಗೆ ಬಹುಮಾನ ಬಂದಿತ್ತು. ಬಿಗ್‌ ಟಿಕೆಟ್‌ನಲ್ಲಿ ಬಹುಮಾನ ಪ್ರಕಟಿಸಿದಾಗ ಇವರ ಸಂಖ್ಯೆಯೂ ಇತ್ತು. ಇದರಲ್ಲಿ 33 ಕೋಟಿ ರೂ. ಬಹುಮಾನ ಲಭಿಸಿರುವುದಾಗಿ ಘೋಷಿಸಲಾಯಿತು. ಬಿಗ್‌ ಬಹುಮಾನದಲ್ಲಿ ಒಟ್ಟು 19 ಮಂದಿಗೆ ಬಹುಮಾನ ಹಂಚಿಕೆಯಾಗಲಿದೆ. ಇದರಲ್ಲಿ ರಾಜೀವ್‌ಗೆ 33 ಕೋಟಿ ರೂ. ಸಿಗಲಿದೆ.

ಎರಡು ತಿಂಗಳ ಹಿಂದೆ ಹೀಗೆಯೇ ವಿಶೇಷ ಟಿಕೆಟ್‌ ಖರೀಸಿದ್ದೆ. ಒಂದೇ ಅಂಕಿಯಲ್ಲಿ ಬಹುಮಾನ ತಪ್ಪಿಸಿಕೊಂಡು ನಿರಾಶೆಯಾಗಿತ್ತು. ಆದರೂ ಪ್ರಯತ್ನ ಮುಂದುವರೆಸಿದ್ದೆ. ಈ ಬಾರಿ ಮಕ್ಕಳ ಜನುಮ ದಿನ ಆಯ್ಕೆ ಮಾಡಿಕೊಂಡು ಪಡೆದ ಲಾಟರಿ ಭಾರೀ ಬಹುಮಾನವನ್ನೇ ತಂದಿದೆ. ಇದು ನನ್ನ ಜೀವನ ಕ್ಷಣವನ್ನೇ ಬದಲಿಸಿದ ಸನ್ನಿವೇಶ ಎಂದು ರಾಜೀವ್‌ ಖುಷಿಯಾದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.