Valentines day memes: ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಮಿಗಳ ದಿನದ ಮೀಮ್ಸ್ ವೈರಲ್; ಇಲ್ಲಿವೆ ಹಾಸ್ಯ ಚಟಾಕಿ ವಿಡಿಯೊಗಳು
Valentines day memes: ಪ್ರೇಮಿಗಳ ದಿನ ಪ್ರೇಮಿಗಳೇನೋ ಎಂಜಾಯ್ ಮಾಡ್ತಾರೆ. ಆದರೆ ಇನ್ನೂ ಪ್ರೀತಿಯಲ್ಲಿ ಬೀಳದ ಸಿಂಗಲ್ಸ್ ಏನು ಮಾಡಬೇಕು? ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ಮೀಮ್ಸ್ಗಳು ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಸ್ ನೋಡಿ.
ವ್ಯಾಲೆಂಟೈನ್ಸ್ ಡೇಗೆ (Valentines day) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಪ್ರೇಮಿಗಳ ದಿನಕ್ಕೂ ಮುನ್ನ ಪ್ರೇಮಿಗಳ ವಾರವನ್ನು ಆಚರಿಸಲಾಗುತ್ತದೆ. ಟೆಡ್ಡಿ ಡೇ, ಪ್ರಪೋಸ್ ಡೇ, ಕಿಸ್ ಡೇ, ಹಗ್ ಡೇ, ರೋಸ್ ಡೇ ಹೀಗೆ ಒಂದೊಂದು ದಿನ ಒಂದೊಂದು ರೀತಿಯ ವಿಶೇಷವಾದ ದಿನವಾಗಿದೆ.
ಅನೇಕರಿಗೆ ಈ ವಾರವು ಪ್ರೀತಿಯ ವಾರವಾಗಿದ್ದರೆ ಇನ್ನೂ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ತರಹೇವಾರಿ ಜೋಕುಗಳನ್ನು ಕಂಡು ಹೊಟ್ಟೆ ಹುಣ್ಣಾಗುವಂತೆ ನಗುವ ವಾರವಾಗಿ ಬದಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಲೆಂಟೈನ್ಸ್ ಡೇಗೆ ಸಂಬಂಧಿಸಿದಂತೆ ರಾಶಿ ರಾಶಿ ಜೋಕುಗಳು ಹರಿದಾಡುತ್ತಿದ್ದು ಒಂದಕ್ಕಿಂತ ಒಂದು ನಗು ತರಿಸುವಂತಿವೆ .
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ವಿವಿಧ ಸಿನಿಮಾ ಕ್ಲಿಪ್ಗಳನ್ನು ಮೀಮ್ಸ್ಗಳ ರೀತಿ ಮಾಡಿ ಹರಿಬಿಡಲಾಗುತ್ತಿದೆ. ಇನ್ನೂ ಪ್ರೇಮದ ಬಲೆಯಲ್ಲಿ ಬೀಳದೇ ಸಿಂಗಲ್ ಎನಿಸಿಕೊಂಡಿರುವವರು ಈ ಟ್ರೋಲ್ಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ವ್ಯಾಲೆಂಟೈನ್ಸ್ ವಾರವನ್ನು ತಮ್ಮದೇ ಆದ ರೀತಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಇವುಗಳಲ್ಲಿ #ProposeDay ಹ್ಯಾಶ್ಟ್ಯಾಗ್ನ ಅಡಿಯಲ್ಲಿ ಶೇರ್ ಮಾಡಲಾಗುತ್ತಿರುವ ವಿವಿಧ ಮೀಮ್ಸ್ಸಖತ್ ವೈರಲ್ ಆಗುತ್ತಿವೆ . ಎಲ್ಲರ ಹುಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಿರುವ ಆ ಮೀಮ್ಸ್ಗಳು ಯಾವುದು ಎಂದು ನಾವು ನೋಡೋಣ.
ಪ್ರೇಮಿಗಳಿಗೆಂದೇ ಮೀಸಲಾಗಿರುವ ಈ ವಾರದಲ್ಲಿ ಇನ್ನೂ ಪ್ರೇಮ ಪ್ರಣಯವೆಂದರೆ ಏನು ಎಂದೇ ತಿಳಿದಿರದ ನಾವು ಹೇಗೆ ಈ ದಿನವನ್ನು ಎಂಜಾಯ್ ಮಾಡೋದು ಎಂದುಕೊಂಡಿದ್ದರೆ ಖಂಡಿತ ಇಂಥಾ ಮೀಮ್ಗಳು ನಿಮಗೆ ಸಹಾಯಕ್ಕೆ ಬರಲಿವೆ.
ಇದು ನಿಮಗೆ ಪ್ರೇಮಿಗಳ ದಿನದ ಒಂಟಿತನವನ್ನು ಹೋಗಲಾಡಿಸಲು ನೆರವಾಗುಬಹುದು. ಅಂದಹಾಗೆ ಇನ್ಯಾಕೆ ತಡ ಈ ಮೀಮ್ಸ್ನ್ನು ನೋಡಿ ನೀವೊಬ್ಬರೆ ಹೊಟ್ಟೆ ಹುಣ್ಣಾಗುವಂತೆ ನಗುತ್ತಿರೋ ಅಥವಾ ನಿಮ್ಮಂತೆ ಸಿಂಗಲ್ ಆಗಿರುವ ನಿಮ್ಮ ಇತರೆ ಸ್ನೇಹಿತರಿಗೂ ಶೇರ್ ಮಾಡ್ತಿರೋ ನೀವೇ ಯೋಚಿಸಿ.
ಇಂತಹ ಹತ್ತಾರು ಮೀಮ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. (This copy first appeared in Hindustan Times Kannada website. To read more like this please logon to kannada.hindustantime.com).
ವಿಭಾಗ