Ratan Tata Death: ಭಾರತೀಯ ಉದ್ಯಮ ವಲಯದ ದಿಗ್ಗಜ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ನಿಧನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ratan Tata Death: ಭಾರತೀಯ ಉದ್ಯಮ ವಲಯದ ದಿಗ್ಗಜ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ನಿಧನ

Ratan Tata Death: ಭಾರತೀಯ ಉದ್ಯಮ ವಲಯದ ದಿಗ್ಗಜ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ನಿಧನ

Ratan Tata Death: ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಟಾಟಾ ಗ್ರೂಪ್ ಹೇಳಿಕೆ ಬಿಡುಗಡೆ ಮಾಡುವ ಮೂಲಕ ದೃಢಪಡಿಸಿದೆ.

ಭಾರತೀಯ ಉದ್ಯಮ ವಲಯದ ದಿಗ್ಗಜ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ನಿಧನ
ಭಾರತೀಯ ಉದ್ಯಮ ವಲಯದ ದಿಗ್ಗಜ, ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ನಿಧನ

ತೀವ್ರ ಅನಾರೋಗ್ಯದ ಕಾರಣ ಹಲವು ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಉದ್ಯಮಿ, ಹಿರಿಯ ಕೈಗಾರಿಕೋದ್ಯಮಿ ಹಾಗೂ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ರತನ್ ಟಾಟಾ ಅಕ್ಟೋಬರ್ 9ರ ಬುಧವಾರ ತಡರಾತ್ರಿ ತಮ್ಮ 86ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ರಕ್ತದೊತ್ತಡದ ಕಾರಣ ಹಠಾತ್ ಕುಸಿದಿದ್ದರಿಂದ ಈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆರೋಗ್ಯ ಮತ್ತಷ್ಟು ಹದಗೆಟ್ಟ ಕಾರಣ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಈ ಬಗ್ಗೆ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಹೇಳಿಕೆ ಬಿಡುಗಡೆ ಮಾಡುವ ಮೂಲಕ ನಿಧನದ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಪೋಸ್ಟ್ ಮಾಡಿದ್ದು, ನಾವು ತುಂಬಾ ನಷ್ಟವನ್ನು ಅನುಭವಿಸಿದ್ದೇವೆ. ರತನ್ ನೇವಲ್ ಟಾಟಾ ಅವರಿಗೆ ವಿದಾಯ ಹೇಳುವ ಸಮಯ ಇದು. ಅವರ ಅಪಾರ ಕೊಡುಗೆಗಳು ಟಾಟಾ ಗ್ರೂಪ್ ಅನ್ನು ಮಾತ್ರವಲ್ಲದೆ ನಮ್ಮ ರಾಷ್ಟ್ರದ ರಚನೆಯನ್ನು ರೂಪಿಸಿವೆ ಎಂದಿದ್ದಾರೆ. ಅವರ ಜೊತೆಗೆ  ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಅವರು ಕೂಡ ಈ ಟ್ವೀಟ್ ಮಾಡಿದ್ದು, ಗಡಿಯಾರ ಟಿಕ್ ಮಾಡುವುದನ್ನು ನಿಲ್ಲಿಸಿದೆ. ಟೈಟಾನ್ ನಮ್ಮನ್ನು ಬಿಟ್ಟು ಹೋಗಿದೆ. ರತನ್ ಟಾಟಾ ಅವರು ಸಮಗ್ರತೆ, ನೈತಿಕ ನಾಯಕತ್ವ ಮತ್ತು ಲೋಕೋಪಕಾರದ ದಾರಿದೀಪವಾಗಿದ್ದರು. ವ್ಯಾಪಾರ ಮತ್ತು ಅದರಾಚೆಗಿನ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರು ನಮ್ಮ ನೆನಪುಗಳಲ್ಲಿ ಶಾಶ್ವತವಾಗಿ ಮೇಲೇರುತ್ತಾರೆ. RIP ಎಂದು ಪೋಸ್ಟ್ ಮಾಡಿದ್ದಾರೆ.

ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಸಾವಿನ ಸುದ್ದಿ ನಂತರ, ಮುಂಬೈ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಭದ್ರತೆಯನ್ನು ದೃಷ್ಟಿಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಯಿತು. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಡರಾತ್ರಿ ಆಸ್ಪತ್ರೆಗೆ ತಲುಪಿದರು.  ವಾರದ ಆರಂಭದಲ್ಲಿ ಟಾಟಾ ಅವರು ಆಸ್ಪತ್ರೆಗೆ ದಾಖಲಾದ ಹಲವಾರು ವರದಿಗಳು ಹೊರಬಂದವು. ಆದರೆ ರತನ್ ಟಾಟಾ ಅವರು ತಮ್ಮ ವಯಸ್ಸು ಮತ್ತು ಸಂಬಂಧಿತ ಆರೋಗ್ಯದ ಕಾರಣ ವಾಡಿಕೆಯ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ಧೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದರು.

ಇತ್ತೀಚೆಗೆ ನನಗೇನು ಆಗಿಲ್ಲ ಎಂದು ಪೋಸ್ಟ್ ಹಾಕಿದ್ದ ಟಾಟಾ

ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ನಂತರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ವದಂತಿಗಳು ಹರಡಿದ ನಂತರ ರತನ್ ಟಾಟಾ ಪೋಸ್ಟ್​​ ಹಾಕಿ ಸ್ಪಷ್ಟನೆ ನೀಡಿದ್ದರು. ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದ ರತನ್ ಟಾಟಾ, ನನ್ನ ಆರೋಗ್ಯದ ಬಗ್ಗೆ ಇತ್ತೀಚೆಗೆ ಹರಡುತ್ತಿರುವ ವದಂತಿಗಳ ಬಗ್ಗೆ ನನಗೆ ತಿಳಿದಿದೆ. ಈ ವದಂತಿಗಳು ಆಧಾರರಹಿತವಾಗಿವೆ ಎಂದು ಎಲ್ಲರಿಗೂ ಭರವಸೆ ನೀಡಲು ಬಯಸುತ್ತೇನೆ ಎಂದು ಹೇಳಿದ್ದರು. ದೇಹ ತಪಾಸಣೆಗೆ ವೈದ್ಯರು ಶಿಫಾರಸು ಮಾಡಿದ ಕಾರಣ ನಾನು ತಪಾಸಣೆಗೆ ಒಳಗಾಗಿದ್ದೇನೆ. ಈ ಕಾರಣಕ್ಕೆ ನಾನು ಆಸ್ಪತ್ರೆಯಲ್ಲಿ ಇದ್ದೇನೆ. ಸಾರ್ವಜನಿಕರು ಮತ್ತು ಮಾಧ್ಯಮದ ಗೌರವದ ತಪ್ಪು ಮಾಹಿತಿಗಳನ್ನು ಹರಡುವುದನ್ನು ತಡೆಯಬೇಕು ಎಂದು ವಿನಂತಿಸುತ್ತೇನೆ ಎಂದು ರತನ್ ಟಾಟಾ ಹೇಳಿದ್ದೆರು. ಆದರೆ ನನಗೇನು ಆಗಿಲ್ಲ ಎಂದು ಹೇಳಿದ್ದವರು ಈಗ ಕೊನೆಯುಸಿರೆಳೆದಿದ್ದಾರೆ.

ರತನ್ ಟಾಟಾ ಜನನ, ಬೆಳೆದಿದ್ದು

ಸ್ವಾತಂತ್ರ್ಯಕ್ಕೂ ಮುನ್ನವೇ ಖ್ಯಾತ ಉದ್ಯಮಿಗಳಾಗಿದ್ದ ನವಲ್ ಟಾಟಾ ಮತ್ತು ಸೂನಿ ಟಾಟಾ ದಂಪತಿಗೆ 1937ರ ಡಿಸೆಂಬರ್​ 28ರಂದು ಜನಿಸಿದ ರತನ್ ಟಾಟಾ, ಔದ್ಯಮಿಕ ಕುಟುಂಬದ ಪ್ರಮುಖ ವ್ಯಕ್ತಿಯಾಗಿದ್ದಾರೆ. 1970ರಲ್ಲಿ ಟಾಟಾ ಸಂಸ್ಥೆಗಳ ಜವಾಬ್ದಾರಿ ಪಡೆದಿದ್ದರು. ದಿನಗಳು ಕಳೆದಂತೆ ಈ ಕಂಪನಿಯಲ್ಲಿ ಬೆಳೆದ ಅವರು 1991 ರಲ್ಲಿ ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಡಿಸೆಂಬರ್ 2012 ರಲ್ಲಿ ತಮ್ಮ ಹುದ್ದೆಗಳಿಂದ ನಿವೃತ್ತಿಯಾದರು. ಸರಳ ಜೀವನ ನಡೆಸುವ ಅವರು ಟಾಟಾ ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯನ್ನಾಗಿಸಿದರು. ಅಲ್ಲದೆ, ಟಾಟಾ ಕಂಪನಿಯು ಜಾಗ್ವಾರ್ ಸೇರಿ ಹಲವಾರು ವಿದೇಶಿ ಬ್ರಾಂಡ್ ಕಾರು ತಯಾರಿಕಾ ಕಂಪನಿಗಳನ್ನು ಖರೀದಿಸಿದ್ದು ಇವರ ದೊಡ್ಡ ಸಾಧನೆ ಎಂದರೆ ತಪ್ಪಾಗಲ್ಲ. ಅವರ ನಾಯಕತ್ವದಲ್ಲಿ ಟಾಟಾ ನಿಜವಾಗಿಯೂ 100 ಶತಕೋಟಿ ಡಾಲರ್​ ಮೌಲ್ಯದ ಜಾಗತಿಕ ವ್ಯಾಪಾರ ಸಾಮ್ರಾಜ್ಯವಾಗಿ ಬೆಳೆಯಿತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.