UttarPradesh News: ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಕಾನೂನು, ಜೀವಾವಧಿ ಶಿಕ್ಷೆಯಿಂದ 1 ಕೋಟಿ ರೂ. ದಂಡ ವಿಧಿಸಲು ಯೋಗಿ ಸರ್ಕಾರ ಚಿಂತನೆ
Yogi Adityanath ಉತ್ತರಪ್ರದೇಶದಲ್ಲಿ ಪ್ರಶ್ನೆ ಪತ್ರಿಕೆ ಪ್ರಕರಣಗಳಿಗೆ ಮಟ್ಟ ಹಾಕಲು ಕಾನೂನು ಬಿಗಿಗೊಳಿಸುವ ಜತೆಗೆ ಭಾರೀ ದಂಡ ವಿಧಿಸುವುದಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಮುಂದಾಗಿದ್ದಾರೆ.
ಲಕ್ನೋ: ಉತ್ತರ ಪ್ರದೇಶದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ನಡೆಸುವವರ ವಿರುದ್ದ ಬರೋಬ್ಬರಿ 1 ಕೋಟಿ ರೂ .ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸುವ ಹೊಸ ಕಾನೂನು ತರಲು ಇಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸಿದ್ದತೆಗಳನ್ನು ನಡೆಸುವಂತೆ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದು, ಕಾನೂನು ತರುವ ನಿಟ್ಟಿನಲ್ಲಿ ಕೆಲಸಗಳು ನಡೆದಿವೆ. ಉತ್ತರ ಪ್ರದೇಶದಲ್ಲಿ ಎರಡು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸಹಿತ ಹಲವು ಅಕ್ರಮಗಳು ನಡೆದು ಪರೀಕ್ಷೆಗಳನ್ನೇ ರದ್ದುಪಡಿಸಲಾಗಿತ್ತು. ಇದು ಸರ್ಕಾರಕ್ಕೆ ಭಾರೀ ಮುಜುಗರ ತಂದಿತ್ತು. ಈ ಕಾರಣದಿಂದಲೇ ಬಿಗಿ ಕಾನೂನುಗಳನ್ನು ತರಲು ಯೋಗಿ ಆದಿತ್ಯನಾಥ್ ಪ್ರಯತ್ನಿಸಿದ್ದು, ಸುಗ್ರಿವಾಜ್ಞೆ ಮೂಲಕವೇ ಇದು ಜಾರಿಯಾಗಬಹುದು ಎನ್ನಲಾಗುತ್ತಿದೆ.
ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ನಡೆದಿದ್ದ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಮತ್ತು ಆರ್ ಒ-ಎಆರ್ ಒ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶ ಸಾರ್ವಜನಿಕ ಪರೀಕ್ಷೆಗಳ ಸುಗ್ರೀವಾಜ್ಞೆ 2024 ಅನ್ನು ಪರಿಚಯಿಸಲು ಸಜ್ಜಾಗಿದೆ.
ಪರೀಕ್ಷಾ ಅಕ್ರಮದಲ್ಲಿ ತಪ್ಪಿತಸ್ಥರೆಂದು ಸಾಬೀತಾದವರಿಗೆ ಜೀವಾವಧಿ ಶಿಕ್ಷೆ ಮತ್ತು 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ನಿಬಂಧನೆಗಳನ್ನು ಒಳಗೊಂಡಿರುವ ಪ್ರಸ್ತಾಪಕ್ಕೆ ಈಗಾಗಲೇ ಉತ್ತರ ಪ್ರದೇಶ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕ್ರಿಮಿನಲ್ ಚಟುವಟಿಕೆಗಳಿಗೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಅವಕಾಶ ನೀಡುತ್ತದೆ ಮತ್ತು ಎಲ್ಲಾ ಅಪರಾಧಗಳನ್ನು ಗುರುತಿಸಬಹುದಾದ, ಜಾಮೀನು ರಹಿತ ಮತ್ತು ಸೆಷನ್ಸ್ ನ್ಯಾಯಾಲಯದಿಂದ ವಿಚಾರಣೆಗೆ ಅರ್ಹವೆಂದು ಗೊತ್ತುಪಡಿಸಲಾಗುತ್ತದೆ.
60,244 ಕಾನ್ಸ್ ಟೇಬಲ್ ಹುದ್ದೆಗಳಿಗೆ ಯುಪಿ ಪೊಲೀಸರ ಅತಿದೊಡ್ಡ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಫೆಬ್ರವರಿಯಲ್ಲಿ ಸೋರಿಕೆಯಾಗಿದ್ದವು.ಇದಾದ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯ ವರದಿಗಳಿಂದಾಗಿ ಪರಿಶೀಲನಾ ಅಧಿಕಾರಿಗಳು ಮತ್ತು ಸಹಾಯಕ ಪರಿಶೀಲನಾ ಅಧಿಕಾರಿಗಳ (ಆರ್ಒಗಳು / ಎಆರ್ಒಗಳು) ಯುಪಿಪಿಎಸ್ಸಿ ಪ್ರಾಥಮಿಕ ನೇಮಕಾತಿ ಪರೀಕ್ಷೆಯನ್ನು ಮಾರ್ಚ್‌ನಲ್ಲಿ ರದ್ದುಗೊಳಿಸಲಾಯಿತು. ಈ ಕಾರಣದಿಂದಲೇ ಉತ್ತರ ಪ್ರದೇಶ ಸರ್ಕಾರವು ಇಂತಹ ಜಾಲಗಳನ್ನು ನಿಯಂತ್ರಿಸಲೆಂದೇ ಕಠಿಣ ಕಾನೂನಿಗೆ ಮುಂದಾಗಿದೆ.
ಸುಗ್ರೀವಾಜ್ಞೆಯ ಪ್ರಮುಖ ನಿಬಂಧನೆಗಳು ಏನಿರಲಿವೆ
- ಈ ಸುಗ್ರೀವಾಜ್ಞೆಯು ಸಾರ್ವಜನಿಕ ಸೇವಾ ನೇಮಕಾತಿ ಪರೀಕ್ಷೆಗಳು, ಬಡ್ತಿ ಪರೀಕ್ಷೆಗಳು ಮತ್ತು ಪದವಿಗಳು, ಡಿಪ್ಲೊಮಾಗಳು ಮತ್ತು ಪ್ರಮಾಣಪತ್ರಗಳಿಗೆ ಪ್ರವೇಶ ಪರೀಕ್ಷೆಗಳನ್ನು ಒಳಗೊಂಡಿದೆ.
- ನಕಲಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವುದು ಮತ್ತು ನಕಲಿ ಉದ್ಯೋಗ ವೆಬ್ ಸೈಟ್ ಗಳನ್ನು ರಚಿಸುವುದು ಮುಂತಾದ ಅಪರಾಧಗಳು ಶಿಕ್ಷಾರ್ಹವಾಗುತ್ತವೆ. ಇದನ್ನು ಉಲ್ಲಂಘಿಸುವವರಿಗೆ ಎರಡು ವರ್ಷದಿಂದ ಜೀವಾವಧಿ ಶಿಕ್ಷೆ ಮತ್ತು 1 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದು ಎಂದು ಸರ್ಕಾರ ತಿಳಿಸಿದೆ.
- ಪರೀಕ್ಷಾ ವ್ಯತ್ಯಯಗಳಾದ ಸಂದರ್ಭದಲ್ಲಿ, ಸುಗ್ರೀವಾಜ್ಞೆಯು ಗೊಂದಲ ಸೃಷ್ಟಿಸುವ ಗ್ಯಾಂಗ್ ಳಿಂದ ಆರ್ಥಿಕ ನಷ್ಟವನ್ನು ವಸೂಲಿ ಮಾಡಲು ಮತ್ತು ಸಂಬಂಧಿತ ಕಂಪನಿಗಳು ಮತ್ತು ಸೇವಾ ಪೂರೈಕೆದಾರರನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಲು ಅನುವು ಮಾಡಿಕೊಡಲಿದೆ.
ಇದನ್ನೂ ಓದಿರಿ: Bangalore Metro: ಬೆಂಗಳೂರು ಮೆಟ್ರೋ ವಿಸ್ತರಣೆ, ಹೆಬ್ಬಾಳ- ಸರ್ಜಾಪುರ ಮಾರ್ಗ ನಿರ್ಮಾಣ ಯೋಜನಾ ವರದಿ ಸಲ್ಲಿಸಿದ ಬಿಎಂಆರ್‌ಸಿಎಲ್
- ಕ್ರಿಮಿನಲ್ ಚಟುವಟಿಕೆಗಳಿಗಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕಾನೂನು ಅನುಮತಿಸುತ್ತದೆ ಮತ್ತು ಎಲ್ಲಾ ಅಪರಾಧಗಳನ್ನು ಗುರುತಿಸಬಹುದಾದ, ಜಾಮೀನು ರಹಿತ ಮತ್ತು ಸೆಷನ್ಸ್ ನ್ಯಾಯಾಲಯದಿಂದ ವಿಚಾರಣೆಗೆ ಅರ್ಹವೆಂದು ಗೊತ್ತುಪಡಿಸುತ್ತದೆ. ಜಾಮೀನಿಗೆ ಸಂಬಂಧಿಸಿದ ಕಠಿಣ ನಿಬಂಧನೆಗಳನ್ನು ಸಹ ವಿವರಿಸಲಾಗಿದೆ.
- ಯುಪಿ ವಿಧಾನಸಭೆ ಅಧಿವೇಶನದಲ್ಲಿಲ್ಲದ ಕಾರಣ, ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸರ್ಕಾರ ಸುಗ್ರೀವಾಜ್ಞೆ ಮಾರ್ಗವನ್ನು ಆರಿಸಿಕೊಂಡಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.