ಕನ್ನಡ ಸುದ್ದಿ  /  ಜೀವನಶೈಲಿ  /  ಉತ್ತರಪತ್ರಿಕೆಯಲ್ಲಿ ಹೃದಯದ ಚಿತ್ರ ಬಿಡಿಸಿ ಕ್ರಶ್‌ಗಳ ಹೆಸರು ಬರೆದ ಹುಡುಗ, ವೈರಲ್‌ ವಿಡಿಯೊ ನೋಡಿದ್ರೆ ನಿಮ್ಗೂ ನಗದೇ ಇರೋಕೆ ಸಾಧ್ಯವಿಲ್ಲ

ಉತ್ತರಪತ್ರಿಕೆಯಲ್ಲಿ ಹೃದಯದ ಚಿತ್ರ ಬಿಡಿಸಿ ಕ್ರಶ್‌ಗಳ ಹೆಸರು ಬರೆದ ಹುಡುಗ, ವೈರಲ್‌ ವಿಡಿಯೊ ನೋಡಿದ್ರೆ ನಿಮ್ಗೂ ನಗದೇ ಇರೋಕೆ ಸಾಧ್ಯವಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೊವೊಂದನ್ನು ನೋಡಿದ್ರೆ ನೀವು ಬಿದ್ದು ಬಿದ್ದು ನಗೋದು ಖಂಡಿತ. ಪರೀಕ್ಷೆಯ ಉತ್ತರಪತ್ರಿಕೆಯಲ್ಲಿ ಹೃದಯದ ರೇಖಾಚಿತ್ರದ ಕಾರ್ಯಗಳ ಬಗ್ಗೆ ಆ ಹುಡುಗ ಏನು ಬರೆದ್ದಿದ್ದಾನೆ ನೋಡಿದ್ರೆ ನಗದೇ ಇರಲು ಸಾಧ್ಯವೇ ಇಲ್ಲ. ಹಾಗಾದ್ರೆ ಏನಿದು ಸುದ್ದಿ ನೋಡಿ.

ಉತ್ತರಪತ್ರಿಕೆಯಲ್ಲಿ ಹೃದಯದ ಚಿತ್ರ ಬಿಡಿಸಿ ಕ್ರಶ್‌ಗಳ ಹೆಸರು ಬರೆದ ಹುಡುಗ; ಏನಿದು ಕಥೆ?
ಉತ್ತರಪತ್ರಿಕೆಯಲ್ಲಿ ಹೃದಯದ ಚಿತ್ರ ಬಿಡಿಸಿ ಕ್ರಶ್‌ಗಳ ಹೆಸರು ಬರೆದ ಹುಡುಗ; ಏನಿದು ಕಥೆ?

ಶಾಲೆಯಲ್ಲಿ ಓದುವಾಗ ಪರೀಕ್ಷೆಯಲ್ಲಿ ಹೃದಯದ ಚಿತ್ರ ಬಿಡಿಸಿ, ಕಾರ್ಯಗಳ ಬಗ್ಗೆ ವಿವರಿಸಿ ಎಂದು ಪ್ರಶ್ನೆ ಕೇಳಿರುವುದನ್ನು ನೋಡಿರುತ್ತೇವೆ. ಕಷ್ಟಪಟ್ಟು ಹೃದಯದ ರೇಖಾಚಿತ್ರ ಬಿಡಿಸಿ, ಹೃದಯ ಬಗ್ಗೆ ವಿವರಿಸಿ ಬರೆದಿರುತ್ತೇವೆ. ಈಗಲೂ ಶಾಲೆಯಲ್ಲಿ ರೇಖಾಚಿತ್ರ ಬಿಡಿಸುವ ಪ್ರಶ್ನೆ ಇರುತ್ತೆ, ಆದರೆ ಉತ್ತರಗಳು ಮಾತ್ರ ಮಜಾ ಇರುತ್ತೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಉತ್ತರಪತ್ರಿಕೆಯಲ್ಲಿ ಮಕ್ಕಳು ಬರೆದಿರುವ ಮೋಜಿನ ಉತ್ತರಗಳು ವೈರಲ್‌ ಆಗುತ್ತಿರುತ್ತವೆ. ಕೆಲವು ಮಕ್ಕಳು ಪಾಸ್‌ ಮಾಡಿ ಹಣ ಇಟ್ಟಿರುವ ಉದಾಹರಣೆಯೂ ಇದೆ. ಕೆಲವು ಮಕ್ಕಳ ಉತ್ತರಪತ್ರಿಕೆಯಲ್ಲಿ ಗುಲಾಬಿ ಹೂ ಇಟ್ಟಿರುವ ಚಿತ್ರಗಳು ವೈರಲ್‌ ಆಗಿದ್ದನ್ನ ನೋಡಿದ್ದೇವೆ. ಆದರೆ ಇಲ್ಲಿರುವ ಹುಡುಗ ಪೇಪರ್‌ನಲ್ಲಿ ಹೃದಯಾಕಾರದ ರೇಖಾಚಿತ್ರ ವೈರಲ್‌ ಆಗಿದೆ. ಅದಕ್ಕೆ ಕಾರಣ ಚೆನ್ನಾಗಿ ಚಿತ್ರ ಬರೆದಿದ್ದಾನೆ ಎಂಬುದಲ್ಲ. ಬದಲಾಗಿ ಹಾರ್ಟ್‌ ಸುತ್ತಲೂ ಅವನ ಬರೆದಿರುವ ಹುಡುಗಿಯರ ಹೆಸರಿನಿಂದಾಗಿ. ಈ ಹುಡುಗನ ಉತ್ತರಪತ್ರಿಕೆಯ ಸ್ಕ್ರೀನ್‌ಶಾಟ್‌ ಈಗ ಎಲ್ಲಾ ಕಡೆ ವೈರಲ್‌ ಆಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅವರ ನಿಷ್ಠೆಯ ನೆಟ್ಟಿಗರು ಸಲಾಂ ಎಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವೈರಲ್‌ ವಿಡಿಯೊದಲ್ಲಿ ಏನಿದೆ?

ವೈರಲ್‌ ಆದ ವಿಡಿಯೊದಲ್ಲಿ ಹೃದಯದ ಭಾಗಗಳಿಗೆ ಅಪಧಮನಿ-ಅಭಿಧಮನಿ ಎಂದು ಬರೆಯುವ ಬದಲು ಹರಿತಾ, ಪ್ರಿಯಾ, ಪೂಜಾ, ನಮಿತಾ ರೂಪ ಎಂದು ಹಾಸ್ಯಮಯವಾಗಿ ಬರೆದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆ ಹುಡುಗ ಹೃದಯದಲ್ಲಿ ಈ ಹುಡುಗಿಯ ಕಾರ್ಯ ಏನು ಎಂಬುದನ್ನೂ ವಿವರಿಸಿದ್ದಾನೆ.

ಪ್ರಿಯಾಗೆ ಎಡ ಹೃತ್ಕರ್ಣದಲ್ಲಿ ಜಾಗ ಕೊಟ್ಟ ಆ ಹುಡುಗ ʼಅವಳು ಯಾವಾಗಲೂ ನನ್ನೊಂದಿಗೆ ಚಾಟ್‌ ಮಾಡುತ್ತಿದ್ದಳು, ನಾನು ಅವಳನ್ನ ಇಷ್ಟಪಡುತ್ತಿದ್ದೆʼ ಎಂದು ಬರೆದಿದ್ದಾನೆ.

ರೂಪಳಿಗೆ ಎಡಹೃತ್ಕುಷಿಯಲ್ಲಿ ಜಾಗ ಕೊಟ್ಟಿರುವ ಆ ಹುಡುಗ ಅವಳಿಗೆ ಮುದ್ದಾದ ಸುಂದರ ಹುಡುಗಿ ಎಂದು ಬಣ್ಣಿಸಿದ್ದಾನೆ. ಅವಳು ಸ್ನ್ಯಾಪ್‌ಚಾಟ್‌ನಲ್ಲಿ ತನಗೆ ಟೆಕ್ಸ್ಟ್‌ ಮೆಸೇಜ್‌ ಮಾಡುತ್ತಿದ್ದಳು ಎಂದು ಬರೆದಿದ್ದಾನೆ.

ಉದ್ದ ಕೂದಲು, ಅಗಲವಾದ ಕಣ್ಣು ಹೊಂದಿರುವ ಹುಡುಗಿ ನಮಿತಾಗೂ ಅವನ ಹೃದಯದಲ್ಲಿ ಜಾಗವಿದೆ.

ಹರಿತ ಅವನ ಸಹಪಾಠಿಯಾಗಿದ್ದು ಅವನ ಬಲ ಹೃತ್ಕರ್ಣವನ್ನು ಆಕ್ರಮಿಸಿಕೊಂಡಿದ್ದಾಳೆ. ಪೂಜಾ ಅವನ ಮಾಜಿ ಪ್ರೇಮಿ, ಅವಳನ್ನು ಅವನು ಮರೆಯಲು ಸಾಧ್ಯವಿಲ್ಲ. ಅವಳು ಅವನ ಬಲ ಎಡಹೃತ್ಕುಷಿಯಲ್ಲಿದ್ದಾಳೆ.

ಮೇ 13 ರಂದು ಹಾರ್ಟ್‌ ಡಯಾಗ್ರಮ್‌ನ ಈ ರೇಖಾಚಿತ್ರ ಇನ್‌ಸ್ಟಾಗ್ರಾಂನಲ್ಲಿ ವೈರಲ್‌ ಆಗಿದ್ದು ಈಗಾಗಲೇ 64.3 ಮಿಲಿಯನ್‌ಗೂ ಅಧಿಕ ಮಂದಿ ಈ ಪೋಸ್ಟ್‌ ವೀಕ್ಷಿಸಿದ್ದಾರೆ. ಹಲವರು ಈ ವೈರಲ್‌ ವಿಡಿಯೊ ಕಾಮೆಂಟ್‌ ಮಾಡಿದೆ ಹುಡುಗ ನಿಷ್ಠೆಯನ್ನು ಮೆಚ್ಚಿಕೊಂಡಿದ್ದಾರೆ.

ʼಪುಣ್ಯ ಹೃದಯಕ್ಕೆ ನಾಲ್ಕು ಕವಾಟಗಳಿರುತ್ತವೆ ಎಂದಾದ್ರೂ ಅವನಿಗೆ ಗೊತ್ತಿದೆʼ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಬ್ರೋ ಅವನ ಎಕ್ಸ್‌ ಅನ್ನು ಮರೆಯಲು ಪ್ರಯತ್ನ ಮಾಡ್ತಾ ಇದಾನೆʼ ಎಂದು ವ್ಯಕ್ತಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ. ʼಸ್ಟೂಡೆಂಟ್‌ ರಾಕ್ಸ್‌, ಟೀಚರ್‌ ಶಾಕ್ಸ್‌ʼ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ʼಬ್ರೋ ನೀನು ನಿಜಕ್ಕೂ ನಿಷ್ಠಾವಂತʼ ಎಂದು ಕೂಡ ಕಾಮೆಂಟ್‌ ಮಾಡಿದ್ದಾರೆ.