ಕನ್ನಡ ಸುದ್ದಿ  /  Nation And-world  /  Indian-american Woman Judge Named First Justice Of A District Court In Us

Indian-American woman judge: ಅಮೆರಿಕದ ನ್ಯಾಯಾಲಯಕ್ಕೆ ಭಾರತೀಯ ಮೂಲದ ಅಮೆರಿಕದ ನ್ಯಾಯಾಧೀಶೆ ತೇಜಲ್‌ ಮೆಹ್ತಾ ನೇಮಕ

ಅಮೆರಿಕದ ಮೆಸಾಚುಸೆಟ್ಸ್‌ ಜಿಲ್ಲಾ ನ್ಯಾಯಾಲಯಕ್ಕೆ ಮೊದಲ ನ್ಯಾಯಾಧೀಶೆಯಾಗಿ (ಫಸ್ಟ್‌ ಜಸ್ಟೀಸ್‌) ಭಾರತ ಮೂಲದ ಅಮೆರಿಕನ್‌ ತೇಜಲ್‌ ಮೆಹ್ತಾ ನೇಮಕಗೊಂಡಿದ್ದಾರೆ.

Indian-American woman judge: ಅಮೆರಿಕದ ನ್ಯಾಯಾಲಯಕ್ಕೆ ಭಾರತೀಯ ಮೂಲದ ಅಮೆರಿಕದ ನ್ಯಾಯಾಧೀಶೆ ತೇಜಲ್‌ ಮೆಹ್ತಾ ನೇಮಕ
Indian-American woman judge: ಅಮೆರಿಕದ ನ್ಯಾಯಾಲಯಕ್ಕೆ ಭಾರತೀಯ ಮೂಲದ ಅಮೆರಿಕದ ನ್ಯಾಯಾಧೀಶೆ ತೇಜಲ್‌ ಮೆಹ್ತಾ ನೇಮಕ (Photo: lowellsun)

ವಾಷಿಂಗ್ಟನ್‌: ಅಮೆರಿಕದ ಮೆಸಾಚುಸೆಟ್ಸ್‌ ಜಿಲ್ಲಾ ನ್ಯಾಯಾಲಯಕ್ಕೆ ಮೊದಲ ನ್ಯಾಯಾಧೀಶೆಯಾಗಿ (ಫಸ್ಟ್‌ ಜಸ್ಟೀಸ್‌) ಭಾರತ ಮೂಲದ ಅಮೆರಿಕನ್‌ ತೇಜಲ್‌ ಮೆಹ್ತಾ ನೇಮಕಗೊಂಡಿದ್ದಾರೆ. ತೇಜಲ್‌ ಮೆಹ್ತಾ ಅಲ್ಲಿನ ಜಿಲ್ಲಾ ನ್ಯಾಯಾಲಯದ ಜಡ್ಜ್‌ ಆಗಿ ನೇಮಕಗೊಂಡಿದ್ದು, ಜನರಿಗೆ ಉತ್ತಮ ನ್ಯಾಯ ನೀಡುವ ಭರವಸೆ ನೀಡಿದ್ದಾರೆ. ಜತೆಗೆ, ಜನರನ್ನು ಸಹಾನುಭೂತಿಯಿಂದ ನಡೆಸಿಕೊಳ್ಳುವ ಭರವಸೆ ನೀಡಿದ್ದಾರೆ.

ಇವು ಅಯೆರ್‌ ಡಿಸ್ಟ್ರಿಕ್ಟ್‌ ಕೋರ್ಟ್‌ನ ಮೊದಲ ನ್ಯಾಯಾಧೀಶೆಯಾಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಇದೇ ನ್ಯಾಯಲಯದಲ್ಲಿ ಇವರು ಸಹಾಯಕ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ಇವರನ್ನು ಮಾರ್ಚ್ 2 ರಂದು ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾಯಾಧೀಶ ಸ್ಟೇಸಿ ಫೋರ್ಟೆಸ್ ಅವರು ಅವಿರೋಧವಾಗಿ ಆಯ್ಕೆ ಮಾಡಿದರು ಎಂದು ಲೋವೆಲ್ ಸನ್ ಪತ್ರಿಕೆ ವರದಿ ಮಾಡಿದೆ.

"ತೇಜಲ್‌ ಮೆಹ್ತಾ ನಾಯಕತ್ವದಲ್ಲಿ.... ಆಯರ್‌ ಜಿಲ್ಲಾ ನ್ಯಾಯಾಲಯಕ್ಕೆ ಇನ್ನೂ ಉತ್ತಮವಾಗಲಿದೆ ಎಂಬ ವಿಶ್ವಾಸ ನನಿಗದಿದೆ" ಎಂದು ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಫೋರ್ಟೆಸ್ ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ತೇಜಸ್‌ ಅವರಿಗೆ ಇವರು ಪ್ರಮಾಣವಚನ ಬೋಧಿಸಿದರು.

"ವಕೀಲರಾಗಿ, ನೀವು ಜನರಿಗೆ ಸಹಾಯ ಮಾಡಬಹುದು, ಆದರೆ ನೀವು ಅವರಿಗೆ ಒಂದು ಹಂತಕ್ಕೆ ಮಾತ್ರ ಸಹಾಯ ಮಾಡಬಹುದು" ಎಂದು ಮೆಹ್ತಾ ಹೇಳಿದರು. "ನ್ಯಾಯಾಧೀಶರಾಗಿ, ನೀವು ಇನ್ನೂ ಹೆಚ್ಚಿನದನ್ನು ಮಾಡಬಹುದು ಮತ್ತು ಸಮಸ್ಯೆಗಳ ಮೂಲವನ್ನು ತಿಳಿಯಬಹುದು. ಅಂತಹ ಜನರೊಂದಿಗೆ ಮಾತನಾಡಬಹುದು. ಅವರಿಗೆ ನಿಜವಾಗಿಯೂ ಹೆಚ್ಚಿನ ಸಹಾಯ ಮಾಡಬಹುದು" ಎಂದು ತೇಜಸ್‌ ಮೆಹ್ತಾ ಹೇಳಿದರು.

ಸಿವಿಲ್ ನ್ಯಾಯಾಲಯದಲ್ಲಿ ತನ್ನ ವೃತ್ತಿಜೀವನವನ್ನು ಮೆಹ್ತಾ ಆರಂಭಿಸಿದ್ದರು. "ನಾನು ಪ್ರಯಾಣಿಕ ನ್ಯಾಯಾಧೀಶನಾಗಿ ಕುಳಿತಿರುವ ಪ್ರತಿಯೊಂದು ನ್ಯಾಯಾಲಯದಲ್ಲಿ ಅದೇ ಭರವಸೆ ಮತ್ತು ಹತಾಶೆಯನ್ನು ನೋಡಿದ್ದೇನೆ" ಎಂದು ಹೇಳಿದರು. "ಆದರೆ ನೀವು ನ್ಯಾಯಾಧೀಶರಾದಾಗ, ನಿಜವಾಗಿಯೂ ಸಮುದಾಯವನ್ನು ತಿಳಿದುಕೊಳ್ಳಬಹುದು ಮತ್ತು ನಿಜವಾದ ಪ್ರಭಾವವನ್ನು ಉಂಟು ಮಾಡಬಹುದು" ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿಗಳು

ನೀತಿ ಆಯೋಗದ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯನ್‌ ನೇಮಕ

ಭಾರತದ ನೀತಿ ಆಯೋಗದ (Niti Aayog) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ನಿವೃತ್ತ ಐಎಎಸ್‌ ಅಧಿಕಾರಿ ಬಿವಿಆರ್‌ ಸುಬ್ರಹ್ಮಣ್ಯನ್‌ ಇತ್ತೀಚೆಗೆ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಪರಮೇಶ್ವರನ್‌ ಅಯ್ಯರ್‌ ಅವರು ಸಿಇಒ ಆಗಿದ್ದರು. ವಿಶ್ವಬ್ಯಾಂಕ್‌ನ ಎಕ್ಸಿಕ್ಯುಟಿವ್‌ ನಿರ್ದೇಶಕರಾಗಿ ಅಯ್ಯರ್‌ ಅವರು ನೇಮಕಗೊಂಡಿರುವುದರಿಂದ ತೆರವಾದ ಅವರ ಸ್ಥಾನಕ್ಕೆ ಬಿವಿಆರ್‌ ಸುಬ್ರಹ್ಮಣ್ಯನ್‌ ಅವರನ್ನು ನೇಮಕ ಮಾಡಲಾಗಿದೆ.

ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಗೆ ಕ್ರಾಂತಿಕಾರಕ ಬದಲಾವಣೆ ತಂದ ಸುಪ್ರೀಂಕೋರ್ಟ್‌

ಚುನಾವಣೆಗಳ ಪರಿಶುದ್ಧತೆಯನ್ನು ಕಾಪಾಡುವ ಮಹತ್ವದ ತೀರ್ಪಿನಲ್ಲಿ, ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು, ಚುನಾವಣಾ ಆಯುಕ್ತರನ್ನು ನೇಮಿಸುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ದೇಶಾದ್ಯಂತ ಚುನಾವಣಾ ಉಸ್ತುವಾರಿ ವಹಿಸುವ ಇಬ್ಬರು ಚುನಾವಣಾ ಆಯುಕ್ತರನ್ನು, ಸಮಿತಿಯ ಸಲಹೆಯ ಮೇರೆಗೆ ನೇಮಕ ಮಾಡಲಾಗುವುದು. ಅದು ಪ್ರತಿಪಕ್ಷಗಳು ಮತ್ತು ನ್ಯಾಯಾಂಗವನ್ನೂ ಒಳಗೊಂಡಿರುತ್ತದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

IPL_Entry_Point