ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ, ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಬಿಜೆಪಿ ನಾಯಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ, ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಬಿಜೆಪಿ ನಾಯಕ

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ, ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಬಿಜೆಪಿ ನಾಯಕ

Maharashtra Election Results: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಅತ್ಯಧಿಕ ಸ್ಥಾನಗಳ ಮುನ್ನಡೆಯೊಂದಿಗೆ ಮಹಾಯುತಿ ಮೈತ್ರಿಯನ್ನು ಮುನ್ನಡೆಸಿದೆ. ಸಹಜವಾಗಿಯೆ ಮಹಾರಾಷ್ಟ್ರದಲ್ಲಿ ಬಿಜೆಪಿಯ ಮುಖವಾಗಿರುವ ಮಾಜಿ ಮುಖ್ಯಮಂತ್ರಿ, ಹಾಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ ಹರಿದಿದೆ.

ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರು ಶನಿವಾರ ಮುಂಬೈನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದರು. ಸಹಜವಾಗಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ ಹರಿದಿದೆ.
ಮಹಾರಾಷ್ಟ್ರ ಚುನಾವಣಾ ಫಲಿತಾಂಶ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬವಾಂಕುಲೆ ಅವರು ಶನಿವಾರ ಮುಂಬೈನಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದರು. ಸಹಜವಾಗಿ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ ಹರಿದಿದೆ. (ANI)

Maharashtra Election Results: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಬಿಜೆಪಿ ಈ ಬಾರಿ ಅದರ ಅತ್ಯುತ್ತಮ ಪ್ರದರ್ಶನ ನೀಡಿದ್ದು 2014ರಲ್ಲಿ ಗೆದ್ದ ಸ್ಥಾನಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವ ಸುಳಿವು ನೀಡಿದೆ. ಸಹಜವಾಗಿಯೇ ಮಾಜಿ ಮುಖ್ಯಮಂತ್ರಿ, ಹಾಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ ಹರಿದಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲುವು ನಿಚ್ಚಳವಾಗುತ್ತಿರುವಂತೆ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್‌ ಬವಾಂಕುಲೆ ಅವರು ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ್ದು ಗಮನಸೆಳೆದಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಗೆಲುವಿನ ಹಿಂದಿನ ನಾಯಕತ್ವದ ಪಾಲುದಾರಿಕೆ ಇವರಿಬ್ಬರದ್ದು. ಪಕ್ಷ ಸಂಘಟನೆ ವಿಚಾರದಲ್ಲಿ ಚಂದ್ರಶೇಖರ್ ಅವರು ನೈಪುಣ್ಯ ತೋರಿದರೆ, ರಾಜಕೀಯ ತಂತ್ರಗಾರಿಕೆ ಮತ್ತು ಉಳಿದ ವಿಚಾರದಲ್ಲಿ ದೇವೇಂದ್ರ ಫಡ್ನವಿಸ್ ಗಮನಸೆಳೆದಿದ್ದಾರೆ. ಬಿಜೆಪಿ ಉತ್ತಮ ಸಾಧನೆ ಬಳಿಕ ಮುಖ್ಯಮಂತ್ರಿ ಸ್ಥಾನಕ್ಕೆ ಸಹಜವಾಗಿಯೆ ದೇವೇಂದ್ರ ಫಡ್ನವಿಸ್ ಹೆಸರು ಪ್ರಸ್ತಾಪವಾಗಿದೆ. ಈ ಹಂತದಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ.

ದೇವೇಂದ್ರ ಫಡ್ನವಿಸ್ ಕಡೆಗೆ ಎಲ್ಲರ ನೋಟ, ಸಿಎಂ ಆಗಿ ದಾಖಲೆ ಬರೆದಿದ್ದ ಬಿಜೆಪಿ ನಾಯಕ, ಏನದು

ಮಹಾರಾಷ್ಟ್ರ ರಾಜ್ಯ ರಚನೆಯಾದ ಬಳಿಕ ಅಂದರೆ 1960ರಿಂದ 2024ರ ತನಕ ಸರ್ಕಾರಗಳನ್ನು ಗಮನಿಸಿದರೆ, ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಿದ ಇಬ್ಬರು ಮುಖ್ಯಮಂತ್ರಿಗಳ ಪೈಕಿ ದೇವೇಂದ್ರ ಫಡ್ನವಿಸ್ ಒಬ್ಬರು. ಅವರು 2014 ರಿಂದ 2019ರ ತನಕ ಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ವಿಶೇಷ ಎಂದರೆ ದೇವೇಂದ್ರ ಫಡ್ನವಿಸ್ ಅವರು ಬಿಜೆಪಿ- ಶಿವ ಸೇನಾ ಮೈತ್ರಿಯ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. 34 ವರ್ಷಗಳ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೇವೇಂದ್ರ ಫಡ್ನವಿಸ್ ಹೊರತು ಪಡಿಸಿ ಬೇರಾರೂ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸಿರಲಿಲ್ಲ. ಈಗ ಮತ್ತೆ ಅಧಿಕ ಸ್ಥಾನಗಳನ್ನು ಗೆದ್ದ ಕಾರಣ ಸಹಜವಾಗಿಯೇ ದೇವೇಂದ್ರ ಫಡ್ನವಿಸ್ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪವಾಗುತ್ತಿದೆ.

ಇನ್ನು ಕನಿಷ್ಠ ಅವಧಿಗೆ ಮುಖ್ಯಮಂತ್ರಿಯಾಗಿದ್ದ ದಾಖಲೆ ಕೂಡ ದೇವೇಂದ್ರ ಫಡ್ನವಿಸ್ ಹೆಸರಲ್ಲೇ ದಾಖಲಾಗಿದೆ. ಫಡ್ನವಿಸ್ ಅವರು 2019ರ ನವೆಂಬರ್ 23ರ ಬೆಳಗ್ಗೆ 8 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದರು. ಆದರೆ, ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನಾ ಮೈತ್ರಿ ಕಡಿದುಕೊಂಡು ಹೊರ ಹೋದ ಕಾರಣ 2019ರ ನವೆಂಬರ್ 26ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕನಿಷ್ಠ ಅವಧಿಗೆ ಮುಖ್ಯಮಂತ್ರಿಯಾದವರ ಪಟ್ಟಿ ಗಮನಿಸಿದರೆ, ಮಹಾರಾಷ್ಟ್ರದಲ್ಲಿ ಪಿಕೆ ಸಾವಂತ್‌ 1963ರ ನವೆಂಬರ್ 25 ರಿಂದ ಡಿಸೆಂಬರ್ 4ರ ತನಕ ಕಿರು ಅವಧಿಗೆ ಮುಖ್ಯಮಂತ್ರಿಯಾಗಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದವರು ವಸಂತರಾವ್ ನಾಯಕ್‌

ಇನ್ನೊಬ್ಬರು ಕಾಂಗ್ರೆಸ್‌ ನಾಯಕ ವಸಂತರಾವ್ ನಾಯಕ್. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ವಸಂತರಾವ್ ನಾಯಕ್ ಅವರು ಕಾಂಗ್ರೆಸ್ ಪಕ್ಷ ಬಹುಮತ ಹೊಂದಿದಾಗ 1960ರ ದಶಕದಲ್ಲಿ 11 ವರ್ಷ 78 ದಿನ ಮುಖ್ಯಮಂತ್ರಿಯಾಗಿದ್ದರು. ಎರಡು ಪೂರ್ಣ ಅವಧಿ ಮತ್ತು ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದರು.

ಸಂಯುಕ್ತ ಮಹಾರಾಷ್ಟ್ರ ಚಳುವಳಿ ಮತ್ತು ಮಹಾ ಗುಜರಾತ್ ಚಳವಳಿಯ ಕಾರಣ 1960 ರಲ್ಲಿ ಮಹಾರಾಷ್ಟ್ರ ರಾಜ್ಯ ರಚನೆಯಾಯಿತು, ಭಾಷಾವಾರು ಪ್ರಾಂತ್ಯ ರಚನೆ ಆಧಾರದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ಪ್ರತ್ಯೇಕ ರಾಜ್ಯಗಳಾದವು. ಯಶವಂತರಾವ್‌ ಚವಾಣ್‌ ಅವರು ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿಯಾದರು. 1962ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಭಾರತ- ಚೀನಾ ಯುದ್ಧದ ವೇಳೆ ಚವಾಣ್ ಅವರನ್ನು ರಕ್ಷಣಾ ಸಚಿವರನ್ನಾಗಿ ನಿಯೋಜಿಸಿದರು. ಆಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾದವರು ಮರೋತ್ರಾವ್ ಕನ್ನಮ್‌ವಾರ್‌. 1963ರಲ್ಲಿ ಅವರು ಅಕಾಲಿಕವಾಗಿ ನಿಧನರಾದ ಕಾರಣ ಅವರ ಉತ್ತರಾಧಿಕಾರಿಯಾಗಿ ವಸಂತರಾವ್ ನಾಯಕ್ ಮುಖ್ಯಮಂತ್ರಿಯಾದರು. ಮುಂದೆ 1967 ರಲ್ಲಿ, ವಸಂತರಾವ್ ನಾಯಕ್ ಚುನಾವಣೆ ಎದುರಿಸಿ ಮರು ಆಯ್ಕೆಯಾದರು. ಅವರು 1972 ರವರೆಗೆ ಪೂರ್ಣ ಅವಧಿಯನ್ನು ಪೂರ್ಣಗೊಳಿಸಿದರು. ಅವರು ಮೂರನೇ ಬಾರಿಗೆ ಆಯ್ಕೆಯಾದರು. ಅವರು 1975 ರವರೆಗೆ ಸಿಎಂ ಆಗಿದ್ದರು, ತುರ್ತು ಪರಿಸ್ಥಿತಿಯ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ನಿಷ್ಠಾವಂತ ಶಂಕರರಾವ್ (ಎಸ್‌ಬಿ) ಚವಾಣ್ ಅವರನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.