Monsoon Rain: ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು; ಒಂದು ವಾರ ವಿಳಂಬವಾದರೂ ಈ ಬಾರಿ ಮಳೆ ನಿರೀಕ್ಷೆ ಹೇಗಿದೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Monsoon Rain: ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು; ಒಂದು ವಾರ ವಿಳಂಬವಾದರೂ ಈ ಬಾರಿ ಮಳೆ ನಿರೀಕ್ಷೆ ಹೇಗಿದೆ?

Monsoon Rain: ಕೇರಳ ಪ್ರವೇಶಿಸಿದ ನೈರುತ್ಯ ಮುಂಗಾರು; ಒಂದು ವಾರ ವಿಳಂಬವಾದರೂ ಈ ಬಾರಿ ಮಳೆ ನಿರೀಕ್ಷೆ ಹೇಗಿದೆ?

ದಕ್ಷಿಣ ಅರಬ್ಬಿ ಸಮುದ್ರ, ಕೇಂದ್ರ ಅರಬ್ಬಿ ಸಮುದ್ರದ ಕೆಲ ಭಾಗ, ಲಕ್ಷದ್ವೀಪ ಪ್ರದೇಶ, ಕೇರಳದ ಬಹುಭಾಗ, ದಕ್ಷಿಣ ತಮಿಳುನಾಡಿನ ಕೆಲವು ಭಾಗ, ಕೊಮೊರಿನ್‌ ಪ್ರದೇಶದ ಉಳಿದ ಭಾಗ, ಮನ್ನಾರ್‌ ಗಲ್ಫ್‌, ಬಂಗಾಳ ಕೊಲ್ಲಿಯ ನೈರುತ್ಯ, ಕೇಂದ್ರ ಹಾಗೂ ಈಶಾನ್ಯ ಭಾಗಗಳಲ್ಲೂ ಮುಂಗಾರು ಪ್ರವೇಶಿಸಿದೆ ಎಂದು ಇಲಾಖೆ ತಿಳಿಸಿದೆ.

ಈ ಬಾರಿಯ ನೈರುತ್ಯ ಮುಂಗಾರು ಎಂಟು ದಿನ ತಡವಾಗಿ ಕೇರಳವನ್ನು ಪ್ರವೇಶಿಸಿದೆ.
ಈ ಬಾರಿಯ ನೈರುತ್ಯ ಮುಂಗಾರು ಎಂಟು ದಿನ ತಡವಾಗಿ ಕೇರಳವನ್ನು ಪ್ರವೇಶಿಸಿದೆ.

ಹೊಸದಿಲ್ಲಿ: ರೈತರು, ಮಳೆ ಪ್ರಿಯರಿಗೆ ಸಂತಸದ ಸುದ್ದಿ. ನೈರುತ್ಯ ಮುಂಗಾರು ಎಂಟು ದಿನ ತಡವಾಗಿ ಗುರುವಾರ ಕೇರಳವನ್ನು ಪ್ರವೇಶಿಸಿದೆ.

ಜೂನ್‌ 8ರಂದು ನೈರುತ್ಯ ಮುಂಗಾರು ಕೇರಳದಲ್ಲಿ ಮುಂಗಾರು ಪ್ರವೇಶಿಸಿದೆ. ಬಿಪರ್‌ಜೋಯ್‌ ಸೈಕ್ಲೋನ್‌ನಿಂದಾಗಿ ಮುಂಗಾರಿನ ತೀವ್ರತೆ ಕಡಿಮೆ ಇದ್ದರೂ ಕೆಲವು ದಿನಗಳಲ್ಲಿ ಮುಂಗಾರು ವೇಗ ಪಡೆದುಕೊಳ್ಳಿದೆ ಎಂದು ಭಾರತೀಯ ಹವಾಮಾನ ಇಲಾಖೆ( ಐಎಂಡಿ) ಗುರುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ದಕ್ಷಿಣ ಅರಬ್ಬಿ ಸಮುದ್ರ, ಕೇಂದ್ರ ಅರಬ್ಬಿ ಸಮುದ್ರದ ಕೆಲ ಭಾಗ, ಲಕ್ಷದ್ವೀಪ ಪ್ರದೇಶ, ಕೇರಳದ ಬಹುಭಾಗ, ದಕ್ಷಿಣ ತಮಿಳುನಾಡಿನ ಕೆಲವು ಭಾಗ, ಕೊಮೊರಿನ್‌ ಪ್ರದೇಶದ ಉಳಿದ ಭಾಗ, ಮನ್ನಾರ್‌ ಗಲ್ಫ್‌, ಬಂಗಾಳ ಕೊಲ್ಲಿಯ ನೈರುತ್ಯ, ಕೇಂದ್ರ ಹಾಗೂ ಈಶಾನ್ಯ ಭಾಗಗಳಲ್ಲೂ ಮುಂಗಾರು ಪ್ರವೇಶಿಸಿದೆ ಎಂದು ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರು ಮಳೆಯು ಸಾಮಾನ್ಯವಾಗಿ ಜೂನ್‌ 1ರಂದು ಪ್ರವೇಶಿಸುವುದು ವಾಡಿಕೆ. ಆನಂತರ ಏಳು ದಿನಗಳಲ್ಲಿ ಮುಂಗಾರು ಚುರುಕುಗೊಳ್ಳಲಿದೆ. ಈ ಬಾರಿ ಜೂನ್‌ 4ರಂದು ಮುಂಗಾರು ಪ್ರವೇಶಿಸುವ ನಿರೀಕ್ಷೆಯನ್ನು ಹವಾಮಾನ ಇಲಾಖೆ ಮಾಡಿತ್ತು. ಸ್ಕೈಮೆಟ್‌ ಜೂನ್‌ 7ಕ್ಕೆ ಮುಂಗಾರು ಆರಂಭವಾಗುವ ಮುನ್ಸೂಚನೆ ನೀಡಿತ್ತು.

ಮುಂಗಾರು ಪ್ರವೇಶಕ್ಕೆ ಸಂಬಂಧಿಸಿದಂತೆ 150 ಗಳ ಸುದೀರ್ಘ ಇತಿಹಾಸ ಪುಟಗಳನ್ನು ತಿರುವು ಹಾಕಿದರೆ ಬಹಳಷ್ಟು ವ್ಯತ್ಯಾಸಗಳಾಗಿರುವುದು ಗೋಚರಿಸುತ್ತದೆ. 1918ರಲ್ಲಿ ಮುಂಗಾರು ಪ್ರವೇಶಿಸಿದ್ದು ಮೇ 11ಕ್ಕೆ. 1972ರಲ್ಲಿ ಅತಿ ವಿಳಂಬವಾಗಿ ಅಂದರೆ ಜೂನ್‌ 18ಕ್ಕೆ ಮುಂಗಾರು ಆರಂಭಗೊಂಡಿತ್ತು.

ನೈರುತ್ಯ ಮಾರುತವಂತೂ ದಕ್ಷಿಣ ರಾಜ್ಯಗಳಿಗೆ ಬೇಗನೇ ಪ್ರವೇಶಿಸುತ್ತದೆ. ಕಳೆದ ವರ್ಷ ಮೇ 29ಕ್ಕೆ ಪ್ರವೇಶ ಮಾಡಿತ್ತು. 2021ರಲ್ಲಿ ಜೂನ್‌ 3 , 2020ರಲ್ಲಿ ಜೂನ್‌ 1 , 2019 ರಲ್ಲಿ ಜೂನ್‌ 8 , 2018ರಲ್ಲಿ ಮೇ 29ಕ್ಕೆ ಮುಂಗಾರು ಶುರುವಾಗಿತ್ತು.

ಶೇ. 90ರಷ್ಟು ಮಳೆಯಾದರೆ ಅದನ್ನು ಕೊರತೆ ಎಂದು ಕರೆಯಲಾಗುತ್ತದೆ. ಶೇ.95ರಷ್ಟಿದ್ದರೆ ಸಾಮಾನ್ಯಕ್ಕಿಂತ ಕಡಿಮೆ, ಶೇ.105 ರಿಂದ 110ರಷ್ಟಿದ್ದರೆ ನಿರೀಕ್ಷಿಗಿಂತ ಹೆಚ್ಚು, ಶೇ. 100 ರಷ್ಟು ಮಳೆಯಾದರೆ ವಾಡಿಕೆ ಎನ್ನುವುದು ನಮ್ಮ ನಿರೀಕ್ಷೆ. ಈ ಬಾರಿಯೂ ಸಹಜವಾಗಿ ಮುಂಗಾರು ಮಳೆಯ ಪ್ರಮಾಣ ನಿರೀಕ್ಷೆಯಷ್ಟೇ ಆಗಲಿದೆ ಎನ್ನುವುದು ಇಲಾಖೆ ಅಭಿಪ್ರಾಯ.

ಮುಂಗಾರು ಮಳೆ ಮೇಲೆ ರೈತಾಪಿ ವರ್ಗ ನಿರೀಕ್ಷೆ ಇಟ್ಟುಕೊಂಡಿರುತ್ತದೆ. ಮುಂಗಾರು ಪ್ರವೇಶಿಸುತ್ತಿದ್ದಂತೆ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುತ್ತವೆ. ಖಾಲಿಯಾಗಿದ್ದ ಜಲಾಶಯಗಳಿಗೂ ಜೀವ ಕಳೆ ಬರುತ್ತದೆ. ಜಲಾಶಯಗಳು ತುಂಬಿ ವರ್ಷವಿಡೀ ಕುಡಿಯುವ ನೀರಿನ ಜತೆಗೆ ಕೃಷಿಗೂ ನೀರು ಒದಗಿಸಲಾಗುತ್ತದೆ. ವಿದ್ಯುತ್‌ ಉತ್ಪಾದನೆಗೂ ಮುಂಗಾರು ಮಳೆಯ ಅಗತ್ಯತೆ ಇದ್ದೇ ಇದೆ.


ಇದನ್ನೂ ಓದಿರಿ..

Karnataka Rains: ಶೀಘ್ರದಲ್ಲೇ ಆರಂಭವಾಗಲಿದೆ ಮುಂಗಾರು ಮಳೆ; ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.