Viral Video: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿಪೇರಿಯ 90,000 ರೂ. ಬಿಲ್‌ ಕಂಡು ಶಾಕ್‌ ಆದ ಗ್ರಾಹಕ ಮಾಡಿದ್ದೇನು: ಈ ವಿಡಿಯೋ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral Video: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿಪೇರಿಯ 90,000 ರೂ. ಬಿಲ್‌ ಕಂಡು ಶಾಕ್‌ ಆದ ಗ್ರಾಹಕ ಮಾಡಿದ್ದೇನು: ಈ ವಿಡಿಯೋ ನೋಡಿ

Viral Video: ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿಪೇರಿಯ 90,000 ರೂ. ಬಿಲ್‌ ಕಂಡು ಶಾಕ್‌ ಆದ ಗ್ರಾಹಕ ಮಾಡಿದ್ದೇನು: ಈ ವಿಡಿಯೋ ನೋಡಿ

Viral Video of Ola Electric Vehicle : ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ರಿಪೇರಿ ಬಿಲ್‌ ನೋಡಿ ಗ್ರಾಹಕರೊಬ್ಬರು ವಾಹನವನ್ನೇ ಸುತ್ತಿಗೆಯಿಂದ ಹೊಡೆದು ಧ್ವಂಸ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ಓಲಾ ಎಲೆಕ್ಟ್ರಿಕ್‌ ವಾಹನದ ರಿಪೇರಿ ಬಿಲ್‌ ನೋಡಿ ಸಿಟ್ಟುಕೊಂಡ ಗ್ರಾಹಕ ಸ್ಕೂಟರ್‌ ಧ್ವಂಸ ಮಾಡಿದ ವಿಡಿಯೋ ವೈರಲ್‌ ಆಗಿದೆ.
ಓಲಾ ಎಲೆಕ್ಟ್ರಿಕ್‌ ವಾಹನದ ರಿಪೇರಿ ಬಿಲ್‌ ನೋಡಿ ಸಿಟ್ಟುಕೊಂಡ ಗ್ರಾಹಕ ಸ್ಕೂಟರ್‌ ಧ್ವಂಸ ಮಾಡಿದ ವಿಡಿಯೋ ವೈರಲ್‌ ಆಗಿದೆ.

ನೀವು ಎಲೆಕ್ಟ್ರಿಕ್‌ ಸ್ಕೂಟರ್‌ ಓಡಿಸುತ್ತಿದ್ದೀರಾ, ಅದೂ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ನಿಮ್ಮ ಬಳಿ ಇದೆಯಾ. ರಿಪೇರಿಗೆ ಬಿಟ್ಟಾಗ ಎಷ್ಟು ಬಿಲ್‌ ಬರಬಹುದು. ಹೆಚ್ಚು ಬಿಲ್‌ ಬಂದಾಗ ಪಾವತಿಸಿದ್ದೀರಾ. ಬೇಗನೇ ನಿಮಗೆ ಸರ್ವೀಸ್‌ ನಿಮ್ಮ ಊರುಗಳಲ್ಲಿ ಸಿಗುತ್ತಿದೆಯೇ. ಈ ಕುರಿತು ಅಲ್ಲಲ್ಲಿ ದೂರುಗಳು ಬರುತ್ತವೆ ಇವೆ. ಆದರೆ ಗೊಣಗಿಕೊಂಡು ಬಿಲ್‌ ಪಾವತಿಸಿ ವಾಹನ ತೆಗೆದುಕೊಂಡು ಹೋದವರು ಇಲ್ಲವೇ ನಿಧಾನವಾಗಿಯಾದರೂ ಸರ್ವೀಸ್‌ ಪಡೆದವರೇ ಅಧಿಕ, ಇಲ್ಲೊಬ್ಬ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಗ್ರಾಹಕ ವಾಹನ ರಿಪೇರಿಗೆ ಬಿಟ್ಟಿದ್ದ. ರಿಪೇರಿ ಮುಗಿದು ಸ್ಕೂಟರ್‌ ಪಡೆಯಲು ಹೋದಾದ ಬಂದ ಬಿಲ್‌ ಮೊತ್ತ ಬರೋಬ್ಬರಿ 90,000 ರೂ. ಇದನ್ನು ಕಂಡು ಕನಲಿದ ಗ್ರಾಹಕ ಶೋರೂಂನವರನ್ನು ವಿಚಾರಿಸಿದ. ಇಷ್ಟು ಪಾವತಿಸಲೇಬೇಕ ಎಂದರು. ಒಂದೇ ನಿಮಿಷ ಬರುವೆ ಎಂದು ಹೇಳಿ ಹೊರಟ ಆತ ಸ್ಕೂಟರ್‌ ಅನ್ನು ದೊಡ್ಡ ಸುತ್ತಿಗೆಯಿಂದ ಒಡೆದು ಧ್ವಂಸ ಮಾಡಿಯೇ ಬಿಟ್ಟ.

ಗ್ರಾಹಕನ ಈ ಆಕ್ರೋಶದ ವಿಡಿಯೋ ಭಾರೀ ವೈರಲ್‌ ಆಗಿದೆ. ಅಷ್ಟೇ ಅಲ್ಲದೇ ಕೂಡಲೇ ಓಲಾ ಇಂತಹ ಅವ್ಯವಸ್ಥೆ ಸರಿಪಡಿಸಿ ಮಧ್ಯಮ ವರ್ಗದವರ ಮೇಲೆ ಆಗುವ ಹೊರೆ ತಗ್ಗಿಸಬೇಕು ಎನ್ನುವ ಒತ್ತಾಯ ಸಾಮಾಜಿಕ ಮಾಧ್ಯಮದ ಮೂಲಕ ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರವೂ ಕೂಡಲೇ ಮಧ್ಯಪ್ರವೇಶಿಸಿ ಜನರ ಸಮಸ್ಯೆಗೆ ಪರಿಹಾರ ತ್ವರಿತವಾಗಿ ನೀಡಲು ಗಮನಹರಿಸಬೇಕು ಎಂಬ ಆಗ್ರಹವನ್ನೂ ಮಾಡಲಾಗಿದೆ.

ಆಗಿದ್ದೇನು

ಉತ್ತರ ಭಾರತದ ನಗರವೊಂದರಲ್ಲಿ ನಡೆದ ಘಟನೆಯಿದು. ಕೆಲವು ತಿಂಗಳಿನಿಂದ ಗ್ರಾಹಕರೊಬ್ಬರು ಓಲಾ ಎಲೆಕ್ಟ್ರಿಕ್‌ ಬಳಸುತ್ತಿದ್ದರು. ಸಮಸ್ಯೆಯಾದ ಕಾರಣಕ್ಕೆ ಸರ್ವೀಸ್‌ಗೆ ಬಿಟ್ಟಿದ್ದರು. ಸರ್ವೀಸ್‌ ಮುಗಿದು ಪಡೆಯಲು ಹೋದರೆ 90,000 ಬಿಲ್‌ ಪಾವತಿಸುವಂತೆ ಸೂಚಿಸಿದರು. ಕಾರಣ ಕೇಳಿದರೆ ವಿವರಣೆಯನ್ನು ಶೋರೂಂನವರು ನೀಡಿದ್ದರು. ಬಿಲ್‌ ದರ ನೋಡಿ ಮೊದಲೇ ಪದೇ ಪದೇ ಕೈಕೊಡುತ್ತಿದ್ದ ಓಲಾ ಸ್ಕೂಟರ್‌ ಅನ್ನು ದೊಡ್ಡ ಸುತ್ತಿಗೆಯಿಂದ ಹೊಡೆಯಲು ಶುರು ಮಾಡಿದರು. ಅಲ್ಲಿದ್ದವರಿಗೂ ಅಚ್ಚರಿ. ಕೊನೆಗೆ ಇನ್ನೊಬ್ಬರು ಅವರೊಂದಿಗೆ ಸೇರಿ ಇಡೀ ಸ್ಕೂಟರ್‌ ಅನ್ನು ಧ್ವಂಸ ಮಾಡಿಯೇ ಬಿಟ್ಟರು. ಇದನ್ನು ವಿಡಿಯೋ ಮಾಡಿದವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ವೀಡಿಯೊದಲ್ಲಿ, ಬಿಳಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ ವ್ಯಕ್ತಿಯೊಬ್ಬ ಓಲಾ ಶೋರೂಮ್ ಮುಂದೆ ಹಾಕಲಾದ ಸ್ಕೂಟರ್ ಮೇಲೆ ದಾಳಿ ಮಾಡುವುದನ್ನು ಕಾಣಬಹುದು. ಗ್ರಾಹಕ ಸುತ್ತಿಗೆಯಿಂದ ವಾಹನವನ್ನು ಹೊಡೆಯುತ್ತಿದ್ದಂತೆ, ಅವನ ಹತಾಶೆ ಎದ್ದುಕಾಣುತ್ತದೆ. ಸ್ವಲ್ಪ ಸಮಯದ ನಂತರ, ಇತರ ವ್ಯಕ್ತಿಗಳು ಸೇರಿ, ಸರದಿಯಲ್ಲಿ ಸ್ಕೂಟರ್ ಅನ್ನು ಒಡೆದುಹಾಕಲು, ವ್ಯಾಪಕ ಹಾನಿಯನ್ನುಂಟುಮಾಡುತ್ತಾರೆ.

ಈ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹ ಗಮನ ಸೆಳೆದಿದೆ, ಅನೇಕರು ಕಂಪನಿಯ ಗ್ರಾಹಕ ಸೇವೆ ಮತ್ತು ಬಿಲ್ಲಿಂಗ್ ಅನ್ನು ಪ್ರಶ್ನಿಸಿದ್ದಾರೆ.

ಇದನ್ನೂ ವೀಕ್ಷಿಸಿದ ಹಲವರು ಮಹಾರಾಷ್ಟ್ರದ ಸೊಲ್ಲಾಪುರ ಸಹಿತ ಹಲವೆಡೆ ರಿಪೇರಿಯಾಗದೇ ನಿಂತಿರುವ ಎಲೆಕ್ಟ್ರಿಕ್‌ ವಾಹನದ ವಿಡಿಯೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

ನಟ ಕುನಾಲ್ ಕಮ್ರಾ ಟೀಕೆ

ಈ ವಿಡಿಯೋ ಗಮನಿಸಿದ ನಟ ಕುನಾಲ್ ಕಮ್ರಾ ಅವರು ಓಲಾದ ಸಂಸ್ಥಾಪಕ ಹಾಗೂ ಸಿಇಒ ಭವಿಶ್ ಅಗರ್ವಾಲ್ ಅವರನ್ನು ಟ್ಯಾಗ್‌ ಮಾಡಿ ವಿಡಿಯೋ ಶೇರ್‌ ಮಾಡಿದ್ದರು. ಇದು ಇನ್ನೂ ವೈರಲ್‌ ಆಯಿತು. ಕಳಪೆ ಮಾರಾಟ ಹಾಗೂ ದುಬಾರಿ ಸರ್ವೀಸ್‌ ಮಧ್ಯಮ ವರ್ಗದವರಿಗೆ ಭಾರೀ ಹೊರೆಯನ್ನುಂಟು ಮಾಡುತ್ತಿದೆ ಎಂದು ಕಮ್ರಾ ಪ್ರತಿಕ್ರಿಯಿಸಿದ್ದರು.

ತಮ್ಮ ಪೋಸ್ಟ್‌ನಲ್ಲಿ, ಕಮ್ರಾ ಭಾರತೀಯ ಗ್ರಾಹಕರನ್ನು, ವಿಶೇಷವಾಗಿ ತಮ್ಮ ಜೀವನೋಪಾಯಕ್ಕಾಗಿ ದ್ವಿಚಕ್ರ ವಾಹನಗಳನ್ನು ಅವಲಂಬಿಸಿರುವ ದೈನಂದಿನ ಕೂಲಿ ಕಾರ್ಮಿಕರನ್ನು ನಡೆಸಿಕೊಳ್ಳುವುದನ್ನು ಪ್ರಶ್ನಿಸಿದ್ದಾರೆ. "ಭಾರತೀಯ ಗ್ರಾಹಕರು ಧ್ವನಿ ಹೊಂದಿದ್ದಾರೆಯೇ? ಅವರು ಇದಕ್ಕೆ ಅರ್ಹರೇ?" ಓಲಾ ಗ್ರಾಹಕರು ಎದುರಿಸುತ್ತಿರುವ ಸವಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ ಎಂದು ಕಮ್ರಾ ಕೇಳಿದ್ದರು.

ಭವೇಶ್‌ ಉತ್ತರ

ಆದಾಗ್ಯೂ , ಕಮ್ರಾ ಅವರ ಟೀಕೆಯನ್ನು ಭವಿಶ್ ಅಗರ್ವಾಲ್ ಲಘುವಾಗಿ ತೆಗೆದುಕೊಳ್ಳಲಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ ಅವರು, ಕಮ್ರಾ ಅವರ ಟ್ವೀಟ್ ಪಾವತಿಸಿದ ಪ್ರಚಾರವಾಗಿದೆ ಎಂದು ಕಾಲೆಳೆದಿದ್ದರು. ನೀವು ಈ ವಿಚಾರದಲ್ಲಿ ಸುಮ್ಮನೇ ಕುಳಿತುಕೊಳ್ಳಿ ಮತ್ತು ಕಂಪನಿಯು ನಿಜವಾದ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಲಿದೆ. ಓಲಾ ತನ್ನ ಸೇವಾ ಜಾಲವನ್ನು ವೇಗವಾಗಿ ವಿಸ್ತರಿಸುತ್ತಿದೆ ಮತ್ತು ಯಾವುದೇ ರಿಪೇರಿ ವಾಹನಗಳಿದ್ದರೆ ಶೀಘ್ರದಲ್ಲೇ ತೆರವುಗೊಳಿಸುವುದಾಗಿ ಅವರು ಭರವಸೆ ನೀಡಿದರು.

ಕೇಂದ್ರಕ್ಕೂ ಮನವಿ

ಅಷ್ಟೇ ಅಲ್ಲದೇ ಕಮ್ರಾ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿದ್ದು, ಓಲಾ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಮ್ರಾ ಅವರು ಗ್ರಾಹಕರ ಆರ್ಥಿಕ ಸಂಕಷ್ಟಗಳನ್ನು ಇದರಲ್ಲಿ ಒತ್ತಿ ಹೇಳಿದ್ದಾರೆ, ಅವರಲ್ಲಿ ಕೆಲವರು ಓಲಾ ಎಲೆಕ್ಟ್ರಿಕ್‌ನಿಂದ ಉಂಟಾದ ಸಮಸ್ಯೆಗಳನ್ನು ನಿಭಾಯಿಸಲು ಸಾಲವನ್ನು ತೆಗೆದುಕೊಳ್ಳುತ್ತಿದ್ದಾರೆ. ಕೂಡಲೇ ಇದರೆಡೆ ಗಮನ ನೀಡಿ ಎಂದು ಕೋರಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.