Padma awards: ಸುಧಾಮೂರ್ತಿ, ಎಸ್‌ಎಂ ಕೃಷ್ಣ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Padma Awards: ಸುಧಾಮೂರ್ತಿ, ಎಸ್‌ಎಂ ಕೃಷ್ಣ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

Padma awards: ಸುಧಾಮೂರ್ತಿ, ಎಸ್‌ಎಂ ಕೃಷ್ಣ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ

ಇನ್ಫೋಸಿಸ್‌ ಫೌಂಡೇಶನ್‌ನ ಮಾಜಿ ಮುಖ್ಯಸ್ಥೆ ಸುಧಾಮುರ್ತಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Padma awards: ಸುಧಾಮೂರ್ತಿ, ಎಸ್‌ಎಂ ಕೃಷ್ಣ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ (PTI Photo/Vijay Verma)(PTI03_22_2023_000269B)
Padma awards: ಸುಧಾಮೂರ್ತಿ, ಎಸ್‌ಎಂ ಕೃಷ್ಣ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ (PTI Photo/Vijay Verma)(PTI03_22_2023_000269B) (PTI)

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಸುಂದರ ಕಾರ್ಯಕ್ರಮದಲ್ಲಿ ಇಂದು ಸಂಜೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇನ್ಫೋಸಿಸ್‌ ಫೌಂಡೇಶನ್‌ನ ಮಾಜಿ ಮುಖ್ಯಸ್ಥೆ ಸುಧಾಮುರ್ತಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ಎಂ ಕೃಷ್ಣ ಸೇರಿದಂತೆ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಷೇರು ಗುರು ದಿವಂಗತ ರಾಕೇಶ್‌ ಜುಂಜುನ್‌ವಾಲಾ, ದಿವಂಗತ ಮುಲಾಯಂ ಸಿಂಗ್‌ ಯಾದವ್‌ ಅವರ ಪರವಾಗಿ ಅವರ ಕುಟುಂಬದ ಸದಸ್ಯರು ಮರಣೋತ್ತರವಾಗಿ ಪದ್ಮಶ್ರೀ ಸ್ವೀಕರಿಸಿದ್ದಾರೆ.

ಇಂದು ಪದ್ಮ ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ ಬಿಡುಗಡೆಯಾಗಿದೆ. ಆರು ಸಾಧಕರಿಗೆ ಪದ್ಮ ವಿಭೂಷಣ ನೀಡಲಾಗಿದೆ. 9 ಸಾಧಕರಿಗೆ ಪದ್ಮ ಭೂಷಣ್‌ ನೀಡಲಾಗಿದೆ. 91 ಸಾಧಕರಿಗೆ ಪದ್ಮಶ್ರೀ ನೀಡಲಾಗಿದೆ.

ಬಾಲಕೃಷ್ಣ ದೋಷಿ (ಮರಣೋತ್ತರ), ಜಾಕಿರ್ ಹುಸೇನ್, ಎಸ್ ಎಂ ಕೃಷ್ಣ, ದಿಲೀಪ್ ಮಹಲನಾಬಿಸ್ (ಮರಣೋತ್ತರ), ಶ್ರೀನಿವಾಸ್ ವರಧನ್ ಮತ್ತು ಮುಲಾಯಂ ಸಿಂಗ್ ಯಾದವ್ (ಮರಣೋತ್ತರ) ಸೇರಿದಂತೆ ಹಲವಾರು ಸಾಧಕರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತದ ವಾರೆನ್‌ ಬಫೆಟ್‌ ಎಂದೇ ಖ್ಯಾತಿ ಪಡೆದ ಮತ್ತು ಆಕಾಶ್‌ ಏರ್‌ ಸ್ಥಾಪಕ ದಿವಂಗತ ರಾಕೇಶ್‌ ಜುಂಜನ್‌ವಾಲ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪ್ರಶಸ್ತಿ ಪ್ರಶಾನ ಮಾಡಲಾಗಿದೆ. ರಾಕೇಶ್‌ ಪತ್ನಿ ರೇಖಾ ಜುಂಜನ್‌ವಾಲ್‌ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.

ಯಾರಿಗೆಲ್ಲ ಪದ್ಮವಿಭೂಷಣ ಪ್ರಶಸ್ತಿ

ಗುಜರಾತ್‌ನ ಶ್ರೀ ಬಾಲಕೃಷ್ಣ ದೋಷಿ ಅವರಿಗೆ ಮರಣೋತ್ತರವಾಗಿ, ಮಹಾರಾಷ್ಟ್ರದ ಝಾಕಿರ್‌ ಹುಸೈನ್‌ (ಕಲೆ), ಕರ್ನಾಟಕದ ಎಸ್‌ಎಂ ಕೃಷ್ಣ (ಸಾರ್ವಜನಿಕ ವ್ಯವಹಾರ), ಪಶ್ಚಿಮ ಬಂಗಾಳದ ಶ್ರೀ ದಿಲೀಪ್‌ ಮಹಾಲಾನಬಿಸ್‌ (ಮರಣೋತ್ತರ)(ವೈದ್ಯಕೀಯ) ಮತ್ತು ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಯಾದವ್‌ (ಮರಣೋತ್ತರ) ಅವರಿಗೆ ಪದ್ಮವಿಭೂಷಣ ನೀಡಲಾಗಿದೆ. ಒಟ್ಟು ಆರು ಸಾಧಕರಿಗೆ ಪದ್ಮವಿಭೂಷಣ ದೊರಕಿದೆ.

ಪದ್ಮ ಭೂಷಣ ಯಾರಿಗೆ?

ಕರ್ನಾಟಕದ ಎಸ್‌ಎಲ್‌ ಭೈರಪ್ಪ, ಸುಧಾಮೂರ್ತಿ ಸೇರಿದಂತೆ ಒಟ್ಟು ಒಂಬತ್ತು ಜನರಿಗೆ ಪ್ರದ್ಮಭೂಷಣ ಪ್ರಶಸ್ತಿ ಒಲಿದಿದೆ.

91 ಸಾಧಕರಿಗೆ ಪದ್ಮಶ್ರೀ

ಒಆರ್‌ಎಸ್‌ ಪ್ರವರ್ತಕ ದಿಲೀಪ್ ಮಹಲನಾಬಿಸ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ಪದ್ಮವಿಭೂಷಣ (ಮರಣೋತ್ತರ), ತೆಲಂಗಾಣದ ಭಾಷಾಶಾಸ್ತ್ರ ಪ್ರಾಧ್ಯಾಪಕರಾಗಿರುವ 80 ವರ್ಷದ ರಾಮಕೃಷ್ಣ ರೆಡ್ಡಿ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಗೊಂಡ ಬುಡಕಟ್ಟು ಮರದ ಕೆತ್ತನೆಗಾರ ಅಜಯ್ ಕುಮಾರ್ ಮಾಂಡವಿ ಅವರು,ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೊಡಗಿನ ಉಮ್ಮತತ್ ಜಾನಪದ ನೃತ್ಯಗಾರ್ತಿ, ರಾಣಿ ಮಂಚಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.

ಐಜ್ವಾಲ್‌ನ ಮಿಜೋ ಜಾನಪದ ಗಾಯಕಿ ಕೆ.ಸಿ. ರನ್ರೇಮ್‌ಸಂಗಿ ಅವರಿಗೆ, ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬುಡಕಟ್ಟು ದುಯಿತಾರಾ ವಾದ್ಯ ತಯಾರಕ ಮತ್ತು ಪೂರ್ವ ಖಾಸಿ ಹಿಲ್ಸ್‌ನ ಸಂಗೀತಗಾರ, ರೈಸಿಂಗ್ಬೋರ್ ಕುರ್ಕಲಾಂಗ್‌ ಅವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ 102 ವರ್ಷದ ಸರಿಂದಾ ವಾದಕ, ಮಂಗಳಾ ಕಾಂತಿ ರಾಯ್ ಅವರು ಕಲಾ ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಪಶ್ಚಿಮ ಬಂಗಾಳದ ಅತ್ಯಂತ ಹಳೆಯ ಜಾನಪದ ಸಂಗೀತಗಾರರಲ್ಲಿ ಒಬ್ಬರಾಗಿ ಜನಪ್ರಿಯರಾಗಿದ್ದಾರೆ.

ಪ್ರಖ್ಯಾತ ನಾಗಾ ಸಂಗೀತಗಾರ ಮತ್ತು ‘ಬಮ್ಹುಮ್’ ವಾದ್ಯ ಅಭಿವೃದ್ಧಿಪಡಿಸಿದ ಮೊವಾ ಸುಬಾಂಗ್ ಅವರಿಗೆ, ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹಾಗೆಯೇ ಕರ್ನಾಟಕದ ಚಿಕ್ಕಬಳ್ಳಾಪುರದ ಹಿರಿಯ ತಮಟೆ ವಾದಕ ಮುನಿವೆಂಕಟಪ್ಪ ಅವರಿಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಛತ್ತೀಸ್‌ಗಢಿಯ ನಾಟ್ಯ ನಾಚಾ ಕಲಾವಿದ ದೋಮರ್ ಸಿಂಗ್ ಕುನ್ವರ್ ಅವರಿಗೂ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದೆ.

ಗಡ್ಚಿರೋಲಿಯ ಜಡಿಪಟ್ಟಿ ರಂಗಭೂಮಿ ಕಲಾವಿದ ಪರಶುರಾಮ ಕೊಮಾಜಿ ಖುಣೆ ಅವರು ಕಲಾ (ರಂಗಭೂಮಿ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. 8ನೇ ತಲೆಮಾರಿನ ಸಂತೂರ್ ಕುಶಲಕರ್ಮಿಯಾಗಿರುವ ಕಾಶ್ಮೀರದ ಗುಲಾಮ್ ಮುಹಮ್ಮದ್ ಝಾಝ್ ಅವರಿಗೆ, ಕಲಾ (ಕರಕುಶಲ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಚುನಾರಾ ಸಮುದಾಯದ 7 ನೇ ತಲೆಮಾರಿನ ಕಲಾಂಕಾರಿ ಕಲಾವಿದ, ಭಾನುಭಾಯಿ ಚಿತಾರಾ ಅವರಿಗೆ ಕಲೆ (ಚಿತ್ರಕಲೆ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆಯಲು ನೀಡಿ ಗೌರವಿಸಲಾಗಿದೆ. 400 ವರ್ಷಗಳ ಹಳೆಯ ಸಾಂಪ್ರದಾಯಿಕ ಕರಕುಶಲತೆಯ ಪರಂಪರೆಯನ್ನು ಇವರು ಜೀವಂತವಾಗಿರಿಸಿದ್ದಾರೆ. ಛೋಟಾ ಉದೇಪುರದ ಪಿಥೋರಾ ಕಲಾವಿದ, ಪರೇಶ್ ರಥ್ವಾ ಅವರಿಗೆ ಕಲೆ (ಚಿತ್ರಕಲೆ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹಾಗೆಯೇ ನಳಂದದ ಬವನ್ ಬುಟಿ ಕೈಮಗ್ಗ ನೇಕಾರರಾಗಿರುವ ಕಪಿಲ್ ದೇವ್ ಪ್ರಸಾದ್ ಅವರಿಗೆ, ಕಲಾ (ಜವಳಿ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಇನ್ನುಳಿದಂತೆ ರಾಕೇಶ್ ರಾಧೇಶ್ಯಾಮ್ ಜುಂಜುನ್‌ವಾಲಾ (ಮರಣೋತ್ತರ), ಆರ್‌ಆರ್‌ಆರ್ ಚಲನಚಿತ್ರ ಸಂಯೋಜಕ ಎಂಎಂ ಕೀರವಾಣಿ, ನಟಿ ರವೀನಾ ರವಿ ಟಂಡನ್ ಸೇರಿದಂತೆ ಒಟ್ಟು 91 ಸಾಧಕರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪಡೆದವರ ಸಂಪೂರ್ಣ ಲಿಸ್ಟ್‌ ಕೆಳಗೆ ನೀಡಲಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.