Rolls-Royce Spectre: ಚೊಚ್ಚಲ ಇಲೆಕ್ಟ್ರಿಕ್ ವಾಹನ ಸ್ಪೆಕ್ಟರ್ ಅನ್ನು ಅನಾವರಣಗೊಳಿಸಿದ ರೋಲ್ಸ್ ರಾಯ್ಸ್; ನಿಮ್ಮ ಅರಿವಿನಲ್ಲಿರಲಿ ಈ ಅಂಶಗಳು
Rolls-Royce Spectre: ರೋಲ್ಸ್ ರಾಯ್ಸ್ ಇಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. ತನ್ನ ಚೊಚ್ಚಲ ಇಲೆಕ್ಟ್ರಿಕ್ ವಾಹನ ಸ್ಪೆಕ್ಟರ್ ಅನ್ನು ಅದು ಅನಾವರಣ ಮಾಡಿದೆ. ಇದು 2023ರ ಕೊನೆಯ ತ್ರೈಮಾಸಿಕದಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆ ಇದೆ ಎನ್ನುತ್ತಿವೆ ವರದಿಗಳು.
ಬ್ರಿಟಿಷ್ ಕಾರು ತಯಾರಕ ರೋಲ್ಸ್ ರಾಯ್ಸ್ ತನ್ನ ಮೊದಲ ಇಲೆಕ್ಟ್ರಿಕ್ ವೆಹಿಕಲ್ (ಇವಿ) 'ಸ್ಪೆಕ್ಟರ್' ಹೆಸರಿನ ಕಾರನ್ನು ಅನಾವರಣಗೊಳಿಸಿದೆ. ಕಂಪನಿಯು 2023 ರ ನಾಲ್ಕನೇ ತ್ರೈಮಾಸಿಕದಲ್ಲಿ ಈ ಇಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಸೋದರ ವೆಬ್‌ಸೈಟ್ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ರೋಲ್ಸ್ ರಾಯ್ಸ್ ಸ್ಪೆಕ್ಟರ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಅಂಶಗಳು ಹೀಗಿವೆ :
(1.) ಆಟೋಮೊಬೈಲ್ ದೈತ್ಯ ಕಂಪನಿಯ ಫ್ಯಾಂಟಮ್ ಕೂಪೆ ಮಾದರಿಯನ್ನು ಆಧರಿಸಿ, ರೋಲ್ಸ್ ರಾಯ್ಸ್ ಕಾರು ವಿಶಾಲವಾದ ಗ್ರಿಲ್‌ನೊಂದಿಗೆ ಬರುತ್ತದೆ. ಈ EVಯಲ್ಲಿ ಕೇವಲ 2 ಬಾಗಿಲುಗಳು ಮಾತ್ರ ಇರಲಿವೆ.
(2.) ಇದು ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸ, ಹೆಡ್‌ಲ್ಯಾಂಪ್ ಕ್ಲಸ್ಟರ್, ಹೈ-ಮೌಂಟೆಡ್ ಅಲ್ಟ್ರಾ-ಸ್ಲಿಮ್ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು (DRLs), ಹಾಗೆಯೇ 23-ಇಂಚಿನ ಅಲ್ಲೋಯ್‌ವ್ಹೀಲ್‌ಗಳನ್ನು ಹೊಂದಿದೆ.
(3.) ಸಂಪೂರ್ಣ ಚಾರ್ಜ್ ಮಾಡಿದಾಗ, ಸ್ಪೆಕ್ಟರ್ 520kms ವರೆಗೆ ಪ್ರಯಾಣಿಸಬಲ್ಲದು ಎಂದು ಕಂಪನಿಯು ಹೇಳುತ್ತದೆ. ಅಲ್ಲದೆ, ಇದು ಕೇವಲ 4.5 ಸೆಕೆಂಡುಗಳಲ್ಲಿ 0 ರಿಂದ 100kmph ವರೆಗೆ ವೇಗ ವರ್ಧನೆ ಹೊಂದಿದೆ.
(4.) ಪ್ರಸ್ತುತ, ಅಂತಿಮ ಹಂತದ ಪರೀಕ್ಷೆಯಲ್ಲಿರುವ ಈ ಕಾರು, 585bhp ಗರಿಷ್ಠ ಶಕ್ತಿಯನ್ನು ಮತ್ತು 900Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಎಂಜಿನ್ ಅನ್ನು ಹೊಂದಿದೆ.
(5.) ಸ್ಪಿರಿಟ್ ಎಂಬ ಡಿಜಿಟಲ್ ಸಾಫ್ಟ್‌ವೇರ್ ಅನ್ನು ಹೊಂದಿದ್ದು, ಡಯಲ್‌ನ ಬಣ್ಣ ಮತ್ತು ಕ್ಯಾಬಿನ್‌ನ ಒಳಭಾಗವನ್ನು ಪುನರಾವರ್ತಿಸಲು ಸ್ಪೆಕ್ಟರ್ ತನ್ನ ಅತ್ಯಂತ ಕನೆಕ್ಟೆಡ್ ಕಾರು ಎಂದು ರೋಲ್ಸ್ ರಾಯ್ಸ್ ಹೇಳುತ್ತದೆ.
(6.) ಈ ಮಾದರಿಯು $350,000 ರಿಂದ $465,000 (1 USD=ಅಂದಾಜು ರೂ. 83) ವ್ಯಾಪ್ತಿಯಲ್ಲಿ ಆರಂಭಿಕ ಬೆಲೆಯೊಂದಿಗೆ ಮಾರುಕಟ್ಟೆಗೆ ಬರಬಹುದು.
ಐಷಾರಾಮಿ ಮತ್ತು ಅಫೋರ್ಡಬಲ್ ಕಾರುಗಳ ಕುರಿತ ಇತರ ಸುದ್ದಿಗಳು
ಲಂಬೋರ್ಗಿನಿ ಉರಸ್ ಎಸ್ (New Lamborghini Urus S)
ಲಂಬೋರ್ಗಿನಿ ಅಂದ್ರೇನೇ ಆಕರ್ಷಣೆ. ಈಗ ಹೊಸ ಲಂಬೋರ್ಗಿನಿ ಉರಸ್ ಎಸ್ ಮೇಲಿನ ಆ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಕಾರು 666 ಎಚ್‌ಪಿ ಮತ್ತು 850 ಎನ್‌ಎಂ ಟಾರ್ಕ್‌ನ ಪವರ್ ಔಟ್‌ಪುಟ್ ಅನ್ನು ನೀಡುತ್ತದೆ. ವಿವರಕ್ಕೆ - New Lamborghini Urus S : ಆಕರ್ಷಣೀಯ ಲುಕ್‌ನೊಂದಿಗೆ ಗಮನಸೆಳೆಯುತ್ತಿದೆ ಹೊಸ ಲಂಬೋರ್ಗಿನಿ ಉರಸ್ ಎಸ್
ಫೆರಾರಿ ಪುರೊಸಾಂಗ್ಯು (Ferrari Purosangue)
Ferrari Purosangue: ಫೆರಾರಿ ಪುರೊಸಾಂಗ್ಯು ತಯಾರಕರು ಈಗ ಕಡಿಮೆ-ಸ್ಲಂಗ್ ರೇಸಿಂಗ್ ಯಂತ್ರಗಳಿಗೆ ವಿರಾಮ ನೀಡಿ ಬಹುರೀತಿಯ ವಾಹನ ಉತ್ಪಾದಿಸುವ ಅನುಮಾನಗಳನ್ನು ಹುಟ್ಟುಹಾಕಿದೆ. ಇದಕ್ಕೆ ಕಾರಣ ಇಷ್ಟೆ - ಫೆರಾರಿ ಪುರೊಸಾಂಗ್ಯೂ, ಬ್ರ್ಯಾಂಡ್‌ನ ಚೊಚ್ಚಲ 4-ಡೋರ್, 4 ಸೀಟರ್ ಕಾರು. ವಿವರಕ್ಕೆ Ferrari Purosangue: ಬ್ರ್ಯಾಂಡ್‌ನ ಮೊಟ್ಟ ಮೊದಲ 4 ಡೋರ್, 4 ಸೀಟರ್ ಕಾರ್!
ಟಾಟಾ ಟಿಯಾಗೊ EV (Tata Tiago EV)
Tata Tiago EV: ಬ್ಯಾಟರಿ ಗಾತ್ರಗಳನ್ನು ಆಧರಿಸಿ ಎರಡು ವೇರಿಯೆಂಟ್ ಟಾಟಾ ಟಿಯಾಗೊ EV ಮಾರುಕಟ್ಟೆಯಲ್ಲಿದೆ. ಚಿಕ್ಕ ಬ್ಯಾಟರಿ ಪ್ಯಾಕ್‌ಗೆ ಕ್ಲೈಮ್ ಮಾಡಲಾದ ವ್ಯಾಪ್ತಿಯು 250 ಕಿಮೀ ಮತ್ತು ದೊಡ್ಡ ಬ್ಯಾಟರಿ ಪ್ಯಾಕ್‌ಗೆ 315 ಕಿಮೀ ಸಂಚಾರ ಮಾಡಬಹುದು. ಸದ್ಯದ ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯಂತ ಅಫೋರ್ಡಬಲ್ ಕಾರು ಟಾಟಾ ಟಿಯಾಗೊ ಇವಿ ಅಂತಾರೆ ಪರಿಣತರು. ವಿವರಕ್ಕೆ - Tata Tiago EV In pics: ನೀವು ಖರೀದಿಸಬಹುದಾದ ಅತ್ಯಂತ ಅಫೋರ್ಡಬಲ್ ಕಾರು ಟಾಟಾ ಟಿಯಾಗೊ ಇವಿ; ಇಲ್ಲಿವೆ ಕೆಲವು ಫೋಟೋಸ್