ತೆಲಂಗಾಣ ಸಾರಿಗೆ ಸರ್ಕಾರದಲ್ಲಿ ವಿಲೀನ ಮಾಡಲು ಸಂಪುಟದಲ್ಲಿ ನಿರ್ಧಾರ; ಕೆಲವೇ ಗಂಟೆಗಳಲ್ಲಿ ಯು ಟರ್ನ್ ಹೊಡೆದ ಸಿಎಂ ಕೆಸಿಆರ್ ಸರ್ಕಾರ
ತೆಲಂಗಾಣ ಸಾರಿಗೆ ಸಂಸ್ಥೆಯನ್ನು ಸರ್ಕಾರದಲ್ಲಿ ವಿಲೀನ ಮಾಡಲು ನಿರ್ಧಾರ ಮಾಡಲಾಗಿದೆ ಎಂದ ಕೆಲವೇ ಗಂಟೆಗಳಲ್ಲಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಸರ್ಕಾರ ಯು ಟರ್ನ್ ಹೊಡೆದಿದೆ.
ಹೈದರಾಬಾದ್: ಹಲವು ಬೇಡಿಕೆಗಳ ಈಡೇರಿಕೆಗಾಗಿ ತೆಲಂಗಾಣ ಸಾರಿಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಸರ್ಕಾರ ನಡುವೆ ಕೆಲ ವರ್ಷಗಳಿಂದ ಮುಸುಕಿನ ಗುದ್ದಾಟ ಹಾಗೂ ಪ್ರತಿಭಟನೆಗಳು ನಡೆಯುತ್ತಲೇ.
ನಿನ್ನೆಯಷ್ಟೇ (ಜುಲೈ 31, ಸೋಮವಾರ) ತೆಲಂಗಾಣದ ಸಚಿವರೊಬ್ಬರ ಹೇಳಿಕೆ ಹಾಗೂ ಅವರ ಪಕ್ಷದ ಟ್ಟಿಟರ್ ಪೋಸ್ಟ್ ಅಲ್ಲಿನ ಸಾರಿಗೆ ನೌಕರರಿಗೆ ಸಂತಸಕ್ಕೆ ಕಾರಣವಾಗಿತ್ತು. ಆದರೆ ಆ ಸಂತಸ ಕೆಲವೇ ಗಂಟೆಗಳಿಗೆ ಮಾತ್ರ ಸಮೀತವಾಗಿತ್ತು.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (TSRTC)ಯನ್ನು ಸರ್ಕಾರದೊಂದಿಗೆ ವಿಲೀನಗೊಳಿಸಲು ರಾಜ್ಯ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ ಎಂದು ಬಿಆರ್‌ಎಸ್ ಪಕ್ಷದ ಟ್ವೀಟ್ ಮಾಡಿತ್ತು.
ಸಚಿವ ಸಂಪುಟ ಸಭೆಯ ನಿರ್ಧಾರಗಳ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಐಟಿ ಸಚಿವ ಕೆಟಿ ರಾಮರಾವ್, ಟಿಎಸ್‌ಆರ್‌ಟಿಸಿ ನೌಕರರನ್ನು ರಾಜ್ಯ ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂಬ ಬಹುದಿನಗಳ ಕನಸನ್ನು ಸಿಎಂ ಕೆಸಿಆರ್ ನನಸಾಗಿದ್ದಾರೆ ಎಂದು ಹೇಳಿದ್ದರು.
ಸರ್ಕಾರದಲ್ಲಿ ಟಿಎಸ್‌ಆರ್‌ಟಿಸಿ ವಿಲೀನದ ನಂತರ 43,372 ಸಾರಿಗೆ ನೌಕರರು ರಾಜ್ಯ ಸರ್ಕಾರಿ ಸಿಬ್ಬಂದಿಯ ಎಲ್ಲಾ ಪ್ರಯೋಜಗಳನ್ನು ಪಡೆಯುತ್ತಾರೆ. ಆಗಸ್ಟ್ 3 ರಿಂದ ಆರಂಭವಾಗುವ ವಿಧಾನಸಭೆಯ ಮುಂಗಾರ ಅಧಿವೇಶನದಲ್ಲಿ ಸರ್ಕಾರ ಈ ಕುರಿತು ಮಸೂದೆಯನ್ನೂ ಮಂಡಿಸಲಿದೆ ಎಂದು ಹೇಳಲಾಗಿತ್ತು.
ಸಾರಿಗೆ ನಿಗಮವನ್ನ ಸರ್ಕಾರದಲ್ಲಿ ವಿಲೀನ ಮಾಡಬೇಕೆಂಬುದು ಟಿಎಸ್‌ಆರ್‌ಟಿಸಿ ನೌಕರರ ಬಹುದಿನಗಳ ಬೇಡಿಕೆಯಾಗಿತ್ತು. 2019ರಲ್ಲಿ ತಮ್ಮ 52 ದಿನಗಳ ಮುಷ್ಕರದ ಸಮಯದಲ್ಲಿ ಇಟ್ಟಿದ್ದ ಪ್ರಮುಖ ಬೇಡಿಕೆಗಳಲ್ಲಿ ಇದು ಕೂಡ ಒಂದಾಗಿದೆ. ಆದರೆ ಸಿಎಂ ಕೆಸಿಆರ್ ಆಗ ವಿಲೀನ ಅಸಾಧ್ಯತೆ ಎಂದು ಹೇಳಿದ್ದರು. 57 ಇತರೆ ನಿಗಮಗಳ ಸಿಬ್ಬಂದಿ ಕೂಡ ವಿಲೀನಕ್ಕೆ ಒತ್ತಾಯಿಸುತ್ತಾರೆ ಎಂಬ ಕಾರಣವನ್ನು ನೀಡಿ ಸಿಎಂ ಈ ಬೇಡಿಕೆಗೆ ಒಪ್ಪಿಗೆ ನೀಡಿರಲಿಲ್ಲ.
ಸದ್ಯ ನಿನ್ನೆ (ಆಗಸ್ಟ್ 1, ಸೋಮವಾರ) ಸಾರಿಗೆ ಸಂಸ್ಥೆಯನ್ನು ಸರ್ಕಾರದಲ್ಲಿ ವಿಲೀನ ಮಾಡಲು ಸಚಿವ ಸಂಪುಟದಲ್ಲಿ ಅನುಮೋದ ನೀಡಲಾಗಿದೆ ಎಂಬ ಹೇಳಿಕೆಗಳು, ಪೋಸ್ಟ್‌ಗಳು ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಸಿಎಂ ಕೆ ಚಂದ್ರಶೇಖರ್ ರಾವ್ ತಮ್ಮ ನಿಲುವನ್ನುಬದಲಾಯಿಸಿಕೊಂಡಿದ್ದಾರೆ. ವಿಧಾನಸಬೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಇಂತಹ ನಿರ್ಧಾರಗಳು ಬಿಆರ್‌ಎಸ್ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ತೆಲಂಗಾಣ ವಿಧಾನಸಭೆ ಚುನಾವಣೆಗೆ ಇನ್ನ ಮೂರ್ನಾಲ್ಕು ತಿಂಗಳು ಮಾತ್ರ ಬಾಕಿ ಇದ್ದು, ಪ್ರಮುಖ ಆಡಳಿತ ಪಕ್ಷ ಭಾರತ್ ರಾಷ್ಟ್ರ ಸಮಿತಿ-ಬಿಆರ್‌ಎಸ್ ಹ್ಯಾಟ್ರಿಕ್ ಗೆಲುವಿಗಾಗಿ ಭಾರಿ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಕೂಡ ಬಿಆರ್‌ಎಸ್‌ಗೆ ಪ್ರಬಲ ಪೈಪೋಟಿ ನೀಡುತ್ತಿವೆ.
ಪ್ರಮುಖ ಮೂರೂ ಪಕ್ಷಗಳು ತೆಲಂಗಾಣ ವಿಧಾನಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಆಡಳಿತಾರೂಢ ಬಿಆರ್‌ಎಸ್ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ತಾನು ಮಾಡಿರುವ ಯೋಜನೆಗಳು ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದು, ಈಗಾಗಲೇ ಸಭೆ, ಸಮಾರಂಭಗಳನ್ನು ಆರಂಭಿಸಿದೆ.
-----------------------------------------------------------------------------------
ಸಂಬಂಧಿತ ಲೇಖನ
ವಿಭಾಗ