ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2023: ಕೇಂದ್ರ ಬಜೆಟ್‌ 2023 ದಿನಾಂಕ, ಸಮಯ, ನೇರ ಪ್ರಸಾರ ಎಲ್ಲಿ? ವಿವರ ಇಲ್ಲಿದೆ...

Union Budget 2023: ಕೇಂದ್ರ ಬಜೆಟ್‌ 2023 ದಿನಾಂಕ, ಸಮಯ, ನೇರ ಪ್ರಸಾರ ಎಲ್ಲಿ? ವಿವರ ಇಲ್ಲಿದೆ...

Union Budget 2023: ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಸತತ ಐದನೇ ಸಲ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಹಿಂದಿನ ಎರಡರಂತೆ, 2023-24 ರ ಕೇಂದ್ರ ಬಜೆಟ್ ಸಹ ಕಾಗದರಹಿತ ರೂಪದಲ್ಲಿ ಇರಲಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.

ಕೇಂದ್ರ ಬಜೆಟ್ 2023: ಇದು 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮೋದಿ ಸರ್ಕಾರ ಮಂಡಿಸುವ ಕೊನೆಯ ಪೂರ್ಣ ಬಜೆಟ್.
ಕೇಂದ್ರ ಬಜೆಟ್ 2023: ಇದು 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮೋದಿ ಸರ್ಕಾರ ಮಂಡಿಸುವ ಕೊನೆಯ ಪೂರ್ಣ ಬಜೆಟ್. (HT)

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಕೇಂದ್ರ ಮುಂಗಡಪತ್ರವನ್ನು ಫೆಬ್ರವರಿ 1 ರಂದು (ಬುಧವಾರ) ಬೆಳಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಇದು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷಕ್ಕೆ ಅನ್ವಯವಾಗುವ ಬಜೆಟ್‌. ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಸತತ ಐದನೇ ಸಲ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಹಿಂದಿನ ಎರಡರಂತೆ, 2023-24 ರ ಕೇಂದ್ರ ಬಜೆಟ್ ಸಹ ಕಾಗದರಹಿತ ರೂಪದಲ್ಲಿ ಇರಲಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಮೋದಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಮುಂದಿನ ಹಣಕಾಸು ವರ್ಷಕ್ಕೆ (2023-24) ವಾರ್ಷಿಕ ಬಜೆಟ್ ತಯಾರಿಸುವ ಔಪಚಾರಿಕ ಕಸರತ್ತು ಅಕ್ಟೋಬರ್ 10 ರಂದು ಪ್ರಾರಂಭವಾಯಿತು. ಜನವರಿ 31 ರಂದು ಅಂದರೆ ಇಂದು ಆರ್ಥಿಕ ಸಮೀಕ್ಷೆಯ ಮಂಡನೆಯೊಂದಿಗೆ ಬಜೆಟ್ ಮಂಡನೆಗೆ ವೇದಿಕೆ ಸಿದ್ಧವಾಗಲಿದೆ.

ಕೇಂದ್ರ ಬಜೆಟ್‌ ನೇರ ಪ್ರಸಾರ ಯಾವುದರಲ್ಲಿ?

ಮುಂದಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಅಂದರೆ, 2023-2024 ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತಹ ಮುಂಗಡಪತ್ರವನ್ನು ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಅವರ ಬಜೆಟ್‌ನ ನೇರ ಪ್ರಸ್ತುತಿಯನ್ನು ಸಂಸದ್ ಟಿವಿ ಮತ್ತು ದೂರದರ್ಶನದಲ್ಲಿ ವೀಕ್ಷಿಸಬಹುದು. ಲೈವ್ ಟೆಲಿಕಾಸ್ಟ್ ಅವರ ಯೂಟ್ಯೂಬ್ ಚಾನೆಲ್‌ಗಳಲ್ಲಿಯೂ ಲಭ್ಯವಿರುತ್ತದೆ. ಪ್ರೆಸ್‌ ಇನ್‌ಫಾರ್ಮೇಶನ್‌ ಬ್ಯೂರೋ (PIB) ಕೂಡ ತಮ್ಮ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಜೆಟ್ 2023 ಅನ್ನು ಸ್ಟ್ರೀಮ್ ಮಾಡುತ್ತದೆ. ಜನರು ಇತರ ಸುದ್ದಿ ಚಾನಲ್‌ಗಳು ಮತ್ತು ಯೂಟ್ಯೂಬ್‌ನಲ್ಲಿಯೂ ವೀಕ್ಷಿಸಬಹುದು.

ಯೂನಿಯನ್ ಬಜೆಟ್‌ನ ಲೈವ್ ಅಪ್‌ಡೇಟ್‌ಗಳು ಮತ್ತು ವಿವರವಾದ ವಿಶ್ಲೇಷಣೆಯನ್ನು ಓದಲು, ಒಬ್ಬರು ಲೈವ್‌ಮಿಂಟ್‌ನ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗೆ ಭೇಟಿ ನೀಡಬಹುದು.

ಯೂನಿಯನ್‌ ಬಜೆಟ್‌ ಮೊಬೈಲ್‌ ಆಪ್‌

ಸಂವಿಧಾನವು ಸೂಚಿಸಿದಂತೆ ವಾರ್ಷಿಕ ಹಣಕಾಸು ಹೇಳಿಕೆ (ಸಾಮಾನ್ಯವಾಗಿ ಬಜೆಟ್ ಎಂದು ಕರೆಯಲಾಗುತ್ತದೆ), ಅನುದಾನಕ್ಕಾಗಿ ಬೇಡಿಕೆ (ಡಿಜಿ), ಹಣಕಾಸು ಮಸೂದೆ ಇತ್ಯಾದಿ ಸೇರಿ ಎಲ್ಲ 14 ಕೇಂದ್ರ ಬಜೆಟ್ ದಾಖಲೆಗಳು "ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್" ನಲ್ಲಿ ಲಭ್ಯವಿರುತ್ತವೆ. ಸಂಸತ್‌ ಸದಸ್ಯರು ಮತ್ತು ಸಾರ್ವಜನಿಕರು ಬಜೆಟ್ ದಾಖಲೆಗಳನ್ನು ಉಚಿತವಾಗಿ ಇಲ್ಲಿ ಪಡೆಯಬಹುದು ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಅಪ್ಲಿಕೇಶನ್ ದ್ವಿಭಾಷಾ (ಇಂಗ್ಲಿಷ್ ಮತ್ತು ಹಿಂದಿ) ಮತ್ತು Android ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ. ಇದನ್ನು ಯೂನಿಯನ್ ಬಜೆಟ್ ವೆಬ್ ಪೋರ್ಟಲ್ www.indiabudget.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಸಚಿವಾಲಯ ಹೇಳಿದೆ.

ಸಂಸತ್ತಿನಲ್ಲಿ ಹಣಕಾಸು ಸಚಿವರು ಫೆಬ್ರವರಿ 1 ರಂದು ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದ ನಂತರ ಬಜೆಟ್ ದಾಖಲೆಗಳು ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಗಮನಿಸಬಹುದಾದ ಸುದ್ದಿ

ಕೇಂದ್ರ ಸರ್ಕಾರ ಇಂದು (ಮಂಗಳವಾರ) 2022-23ರ ಆರ್ಥಿಕ ಸಮೀಕ್ಷೆ (Economic Survey 2022-23) ಯನ್ನು ಮಂಡಿಸಲಿದೆ. ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಿದ ನಂತರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಬಜೆಟ್ ಪೂರ್ವ ದಾಖಲೆಯನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ವರದಿಯ ಪೂರ್ಣ ವಿವರ ಓದುವುದಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point