Brain Tumor Day: ಪ್ರಪಂಚದ ನಾಲ್ಕನೇ ಅತ್ಯಂತ ಗಂಭೀರ ಕಾಯಿಲೆ ಬ್ರೈನ್ ಟ್ಯೂಮರ್; ನಿರ್ಲಕ್ಷ್ಯ ಬೇಡ, ಆರಂಭಿಕ ಹಂತದಲ್ಲೇ ಚಿಕಿತ್ಸೆ ಅವಶ್ಯ
World fourth most Serious Disease: ಇಂದು ಮಾನವರನ್ನು ಕಾಡುತ್ತಿರುವ ಪ್ರಮುಖ ಗಂಭೀರ ಸಮಸ್ಯೆಗಳಲ್ಲಿ ಬ್ರೈನ್ ಟ್ಯೂಮರ್ ಕೂಡ ಒಂದು. ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 8 ರಂದು ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಕುರಿತ ಇನ್ನಷ್ಟು ವಿವರ ಇಲ್ಲಿದೆ.
ವಿಶ್ವ ಬ್ರೈನ್ ಟ್ಯೂಮರ್ ದಿನವು ಮೆದುಳಿನ ಗಡ್ಡೆ ಅಥವಾ ಬ್ರೈನ್ ಟ್ಯೂಮರ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಈ ಸ್ಥಿತಿಯಲ್ಲಿರುವ ಜನರನ್ನು ಬೆಂಬಲಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. ಮೆದುಳಿನ ಗಡ್ಡೆ ಸಮಸ್ಯೆಯು ರೋಗಿಗಳು, ಅವರ ಕುಟುಂಬ ಹಾಗೂ ಆರೈಕೆ ಮಾಡುವವರಿಗೆ ಸಂಕೀರ್ಣ ಅನುಭವವನ್ನು ನೀಡಬಹುದು.
ಈ ವಿಶೇಷ ದಿನವು ಬ್ರೈನ್ ಟ್ಯೂಮರ್ ಸಮಸ್ಯೆಯ ಪ್ರಭಾವ, ಈ ಕಾಯಿಲೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ತಿಳಿಸುವುದು, ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಇರುವ ಚಿಕಿತ್ಸಾ ವಿಧಾನಗಳು ಸೇರಿದಂತೆ ಇನ್ನೂ ಹಲವು ವಿಷಯಗಳನ್ನು ಪ್ರೇರೇಪಿಸುವ ವೇದಿಕೆಯಾಗಿ ಕೆಲಸ ಮಾಡುತ್ತದೆ. ವಿಶ್ವ ಬ್ರೈನ್ ಟ್ಯೂಮರ್ ದಿನದ ಇತಿಹಾಸ, ಮಹತ್ವ ಹಾಗೂ ಆಚರಣೆಯ ಕುರಿತು ಮಾಹಿತಿ ಇಲ್ಲಿದೆ.
ಬ್ರೈನ್ ಟ್ಯೂಮರ್ ದಿನ
ಮೆದುಳು ಗಡ್ಡೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಈ ಸಮಸ್ಯೆಯ ಬಗ್ಗೆ ತಿಳುವಳಿಕೆ ಹೆಚ್ಚಿಸುವ ಸಲುವಾಗಿ ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಜೂನ್ 8 ರಂದು ಬ್ರೈನ್ ಟ್ಯೂಮರ್ ದಿನವನ್ನು ಆಚರಿಸಲಾಗುತ್ತದೆ. ಇದು ಪ್ರಪಂಚದ ನಾಲ್ಕನೇ ಅತ್ಯಂತ ಗಂಭೀರ ಮತ್ತು ವ್ಯಾಪಕ ಕಾಯಿಲೆಯಾಗಿದೆ. ಇದು ಮೆದುಳಿನ ಕಾನ್ಸರ್ ಹಾಗೂ ಚರ್ಮದ ಕ್ಯಾನ್ಸರ್ ಅನ್ನು ಮೀರಿಸುತ್ತದೆ. 2030ರ ವೇಳೆಗೆ ಕ್ಯಾನ್ಸರ್‌ನ ನಂತರದ ಎರಡನೇ ಸ್ಥಾನವನ್ನು ಬ್ರೈನ್ ಟ್ಯೂಮರ್ ಪಡೆಯುತ್ತದೆ ಎನ್ನಲಾಗುತ್ತಿದೆ.
ವಿಶ್ವ ಬ್ರೈನ್ ಟ್ಯೂಮರ್ ದಿನದ ಇತಿಹಾಸ
2000ನೇ ಇಸವಿಯ ಆರಂಭದಲ್ಲಿ ಜರ್ಮನಿಯ ಬ್ರೈನ್ ಟ್ಯೂಮರ್ ಅಸೋಸಿಯೇಷನ್ (ಡಾಯ್ಚ ಹಿರ್ನ್ಟುಮೊರ್ಹಿಲ್ಫ್ ಇ.ವಿ.) ಮೆದುಳು ಗಡ್ಡೆ ಅಥವಾ ಬ್ರೈನ್ ಟ್ಯೂಮರ್ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನವನ್ನು ಆರಂಭಿಸಿತ್ತು. 2000ರಲ್ಲಿ ಈ ಅಸೋಸಿಯೇಷನ್ ಮೇ 8 ಅನ್ನು ಬ್ರೈನ್ ಟ್ಯೂಮರ್ ಡೇ ಎಂದು ಘೋಷಿಸಿತ್ತು. ರೋಗಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಗುರಿಯನ್ನು ಇದು ಹೊಂದಿತ್ತು.
ಕಾಲಾನಂತರದಲ್ಲಿ ಈ ಆಚರಣೆಯು ಅಂತರರಾಷ್ಟ್ರೀಯ ಮನ್ನಣೆಯನ್ನು ಗಳಿಸಿತು. ಬ್ರೈನ್ ಟ್ಯೂಮರ್ ಬಗ್ಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಒಂದು ದಿನ ಬೇಕು, ಆ ದಿನ ಪ್ರಪಂಚಾದ್ಯಂತ ಆಚರಣೆಯಾಗಬೇಕು ಎಂಬುದನ್ನು ಪ್ರಯತ್ನಿಸಲಾಯಿತು. 2010ರಲ್ಲಿ ಇಂಟರ್‌ನ್ಯಾಷನಲ್ ಬ್ರೈನ್ ಟ್ಯೂಮರ್ ಅಲೈಯನ್ಸ್ ಜೂನ್ 8 ಅನ್ನು ವಿಶ್ವ ಬ್ರೈನ್ ಟ್ಯೂಮರ್ ದಿನವೆಂದು ಗೊತ್ತು ಪಡಿಸಿತು. ಅಂದಿನಿಂದ ಈ ಆಚರಣೆ ಜೂನ್ 8ರಂದು ನಡೆದುಕೊಂಡು ಬಂದಿದೆ.
ವಿಶ್ವ ಬ್ರೈನ್ ಟ್ಯೂಮರ್ ದಿನದ ಮಹತ್ವ
ವಿಶ್ವ ಬ್ರೈನ್ ಟ್ಯೂಮರ್ ದಿನವು ಮೆದುಳಿನ ಗೆಡ್ಡೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಮೀಸಲಾಗಿರುವ ಜಾಗತಿಕ ವೇದಿಕೆಯಾಗಿ ಅಪಾರ ಮಹತ್ವವನ್ನು ಹೊಂದಿದೆ. ಈ ಆಚರಣೆಯು ರೋಗಿಗಳು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ.
ಈ ಸಮಸ್ಯೆಯ ಆರಂಭಿಕ ಪತ್ತೆಯನ್ನು ಉತ್ತೇಜಿಸುವುದು, ಸಂಶೋಧನೆಯ ಪ್ರಯತ್ನಗಳನ್ನು ಬೆಂಬಲಿಸುವುದು ಮತ್ತು ಸುಧಾರಿತ ಚಿಕಿತ್ಸಾ ಆಯ್ಕೆಗಳನ್ನು ಪ್ರತಿಪಾದಿಸುವುದು ಈ ದಿನದ ಮಹತ್ವವಾಗಿದೆ.
ವಿಶ್ವದಾದ್ಯಂತ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಮುದಾಯಗಳನ್ನು ಒಂದುಗೂಡಿಸುವ ಮೂಲಕ, ವಿಶ್ವ ಬ್ರೈನ್ ಟ್ಯೂಮರ್ ದಿನವು ಮೆದುಳಿನ ಗೆಡ್ಡೆಗಳ ಪ್ರಭಾವದ ಬಗ್ಗೆ ಸಾರ್ವಜನಿಕ ಪ್ರಜ್ಞೆ ಹಾಗೂ ಅರಿವನ್ನು ಮೂಡಿಸುತ್ತದೆ. ಶಿಕ್ಷಣ, ವಕಾಲತ್ತು ಮತ್ತು ಬೆಂಬಲದ ಮೂಲಕ, ಈ ದಿನವು ಭರವಸೆಯನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಂತಿಮವಾಗಿ ಮೆದುಳಿನ ಗೆಡ್ಡೆಗಳೊಂದಿಗೆ ಹೋರಾಡುವ ವ್ಯಕ್ತಿಗಳ ಜೀವನವನ್ನು ಸುಧಾರಿಸುತ್ತದೆ.
ವಿಭಾಗ