2023 Ducati Streetfighter: 200 ಅಶ್ವಶಕ್ತಿಯ ಡುಕಾಟಿ ಬೈಕ್ ನೋಡಿದಿರಾ? ಶಕ್ತಿ ಮತ್ತು ಸೌಂದರ್ಯದ ಯುಗಳಗೀತೆ, ಇಲ್ಲಿದೆ ಚಿತ್ರ ಮಾಹಿತಿ
- ಡುಕಾಟಿ ಕಂಪನಿಯು ತನ್ನ ಸ್ಟ್ರೀಟ್‌ಫೈಟರ್ ವಿ4 ಅನ್ನು ತಾಂತ್ರಿಕವಾಗಿ ಅಪ್‌ಡೇಟ್ ಮಾಡಿದೆ. ಜತೆಗೆ ಇದರ ವಿನ್ಯಾಸ, ಲುಕ್‌ನಲ್ಲಿಯೂ ಕೊಂಚ ಮಾರ್ಪಾಡು ಮಾಡಿದೆ. ಹೊಸ ಡುಕಾಟಿ ಸ್ಟ್ರೀಟ್ ಫೈಟರ್ ಹೇಗಿದೆ ಎಂದು ನೋಡೋಣ.
- ಡುಕಾಟಿ ಕಂಪನಿಯು ತನ್ನ ಸ್ಟ್ರೀಟ್‌ಫೈಟರ್ ವಿ4 ಅನ್ನು ತಾಂತ್ರಿಕವಾಗಿ ಅಪ್‌ಡೇಟ್ ಮಾಡಿದೆ. ಜತೆಗೆ ಇದರ ವಿನ್ಯಾಸ, ಲುಕ್‌ನಲ್ಲಿಯೂ ಕೊಂಚ ಮಾರ್ಪಾಡು ಮಾಡಿದೆ. ಹೊಸ ಡುಕಾಟಿ ಸ್ಟ್ರೀಟ್ ಫೈಟರ್ ಹೇಗಿದೆ ಎಂದು ನೋಡೋಣ.
(1 / 9)
Ducati Streetfighter V4: ಡುಕಾಟಿಯೆಂದರೆ ರಾಕ್ಷಸಿ ಬೈಕ್. ಇದು ಪೆನಿಗೆಲ್ ವಿ4 ಎಂಬ ಇನ್ನೊಂದು ಭರ್ಜರಿ ಬೈಕ್‌ನ ಕಡಿಮೆ ಸಾಮರ್ಥ್ಯದ ವರ್ಷನ್. ಅತ್ಯುತ್ತಮ ಪವರ್‌ನ ಬೈಕ್ ಬಯಸುವವರಿಗೆ ಸೂಕ್ತವಾಗಿದೆ.
(2 / 9)
ಈ ಬೈಕನಲ್ಲಿ 1,103 cc ಸಾಮರ್ಥ್ಯದ ಎಂಜಿನ್ ಇದೆ. ಇಷ್ಟು ಪವರ್‌ನ ಎಂಜಿನ್‌ಗಳು ಸಾಮಾನ್ಯವಾಗಿ ಸಣ್ಣಕಾರುಗಳಲ್ಲಿ ಇರುತ್ತವೆ.
(3 / 9)
ಈ ಎಂಜಿನ್ 208 hp ಮತ್ತು 123 Nm ನೀಡುತ್ತದೆ. ಹೀಗಾಗಿ, ಈ ಬೈಕ್ ಸಾಹಸಿ ಸವಾರರಿಗೆ ಸೂಕ್ತವಾಗಿದ್ದು, ಅತ್ಯುತ್ತಮ ಪವರ್ ಮತ್ತು ಕಾರ್ಯಕ್ಷಮತೆಯೊಂದಿಗೆ ರೈಡಿಂಗ್ ಮಾಡಬಹುದು.
(4 / 9)
ನೂತನ ಡುಕಾಟಿ ಬೈಕ್ ನಾಲ್ಕು ಪವರ್ ಆಯ್ಕೆಗಳಲ್ಲಿ ಲಭ್ಯವಿದೆ. ಅಂದರೆ, ಪೂರ್ಣ (ಫುಲ್), ಅತ್ಯಧಿಕ (ಹೈ), ಮಧ್ಯಮ (ಮೀಡಿಯಂ) ಮತ್ತು ಕಡಿಮೆ (ಲೋ) ಎಂಬ ಆಯ್ಕೆಗಳಲ್ಲಿ ದೊರಕಲಿದೆ. ಸವಾರರು ರಸ್ತೆ ಪರಿಸ್ಥಿತಿಗೆ ತಕ್ಕಂತೆ ಪವರ್ ಮೋಡ್ ಬದಲಾಯಿಸಿ ಚಲಾಯಿಸಬಹುದು.
(5 / 9)
ಈ ಬೈಕ್‌ನಲ್ಲಿ ವೆಟ್ ರೈಡಿಂಗ್ ಮೋಡ್ ಕೂಡ ಇದೆ. ರಸ್ತೆಯಲ್ಲಿ ಗ್ರಿಪ್ ಕಡಿಮೆ ಇರುವಲ್ಲಿ ಈ ಫೀಚರ್ ಬಳಸಬಹುದು.
ಇತರ ಗ್ಯಾಲರಿಗಳು