ಕಮಿನ್ಸ್, ಸ್ಟಾರ್ಕ್‌ಗೆ ಕೋಟಿ ಕೋಟಿ ಸುರಿದ ಫ್ರಾಂಚೈಸಿ; ಅಸಮಾಧಾನ ವ್ಯಕ್ತಪಡಿಸಿದ ಅನಿಲ್ ಕುಂಬ್ಳೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಮಿನ್ಸ್, ಸ್ಟಾರ್ಕ್‌ಗೆ ಕೋಟಿ ಕೋಟಿ ಸುರಿದ ಫ್ರಾಂಚೈಸಿ; ಅಸಮಾಧಾನ ವ್ಯಕ್ತಪಡಿಸಿದ ಅನಿಲ್ ಕುಂಬ್ಳೆ

ಕಮಿನ್ಸ್, ಸ್ಟಾರ್ಕ್‌ಗೆ ಕೋಟಿ ಕೋಟಿ ಸುರಿದ ಫ್ರಾಂಚೈಸಿ; ಅಸಮಾಧಾನ ವ್ಯಕ್ತಪಡಿಸಿದ ಅನಿಲ್ ಕುಂಬ್ಳೆ

  • Anil Kumble: ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್‌ಗೆ ಐಪಿಎಲ್‌ ಹರಾಜಿನಲ್ಲಿ ಫ್ರಾಂಚೈಸಿಗಳು ದುಬಾರಿ ಮೊತ್ತ ಸುರಿದವು. ಈ ಬಗ್ಗೆ ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತದ ಮಾಜಿ ವೇಗಿ ಜಹೀರ್ ಖಾನ್ ಕೂಡ ದುಬಾರಿ ಖರೀದಿಗೆ ತೃಪ್ತರಾಗಿಲ್ಲ.

ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ. ಮತ್ತು ಮಿಚೆಲ್ ಸ್ಟಾರ್ಕ್ 20.5 ಕೋಟಿ ರೂಗೆ ಸೇಲಾದರು. ಆದರೆ, ಭಾರತದ ಮಾಜಿ ನಾಯಕ ಮತ್ತು ಭಾರತ ತಂಡದ ಮಾಜಿ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಈ ಇಬ್ಬರು ವಿದೇಶಿ ವೇಗಿಗಳಿಗೆ ಇಷ್ಟು ಹಣ ಖರ್ಚು ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.(ಫೋಟೋ ಕೃಪೆ ರಾಯಿಟರ್ಸ್, ಪಿಟಿಐ ಮತ್ತು ಹಿಂದೂಸ್ತಾನ್ ಟೈಮ್ಸ್)
icon

(1 / 5)

ಐಪಿಎಲ್‌ನ ಅಧಿಕೃತ ಪ್ರಸಾರಕ ಜಿಯೋ ಸಿನಿಮಾಸ್ ಜೊತೆಗೆ ಮಾತನಾಡಿದ ಕುಂಬ್ಳೆ, ವಿದೇಶಿ ಆಟಗಾರರಿಗೆ ತಂಡಗಳು ಎಷ್ಟು ಹಣವನ್ನು ಖರ್ಚು ಮಾಡಬಹುದು ಎಂಬುದರ ಮೇಲೆ ಬಿಸಿಸಿಐ ಮಿತಿ ಹಾಕಬೇಕು ಎಂದು ಪ್ರತಿಪಾದಿಸಿದ್ದಾರೆ. ಆ ಮಿತಿಯನ್ನೂ ಕುಂಬ್ಳೆ ನಿರ್ಧರಿಸಿದ್ದಾರೆ. ಅವರ ಪ್ರಕಾರ, ಒಟ್ಟು ಹಣದಲ್ಲಿ ವಿದೇಶಿಯರಿಗೆ 40 ಪ್ರತಿಶತಕ್ಕಿಂತ ಹೆಚ್ಚು ಖರ್ಚು ಮಾಡಬಾರದು ಎಂದು ಸಲಹೆ ನೀಡಿದ್ದಾರೆ. (ಫೋಟೋ ಕೃಪೆ ವಿಜಯ್ ಬೇಟ್/ಹಿಂದೂಸ್ತಾನ್ ಟೈಮ್ಸ್)
icon

(2 / 5)

ಕುಂಬ್ಳೆ ಪ್ರಕಾರ, ಐಪಿಎಲ್ ಫ್ರಾಂಚೈಸಿಗಳು ನಿರ್ದಿಷ್ಟ ಆಟಗಾರನಿಗೆ ಎಷ್ಟು ಶೇಕಡಾ ಹಣವನ್ನು ಖರ್ಚು ಮಾಡಬಹುದು ಎಂಬ ಮಿತಿಯನ್ನು ನಿರ್ಧರಿಸಬೇಕಂತೆ. ಇಲ್ಲವಾದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಭಾರತದ ಇತರ ಸ್ಟಾರ್‌ ಆಟಗಾರರಿಗೆ ಅನ್ಯಾಯವಾಗುತ್ತದೆ. (ಫೋಟೋ ಕೃಪೆ ವಿಜಯ್ ಬೇಟ್/ಹಿಂದೂಸ್ತಾನ್ ಟೈಮ್ಸ್)
icon

(3 / 5)

ಐಪಿಎಲ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್, ಬುಮ್ರಾ ಸೇರಿದಂತೆ ಬಲಿಷ್ಠ ಆಟಗಾರರು 20 ಕೋಟಿ ರೂಪಾಯಿ ಪಡೆಯುತ್ತಿಲ್ಲ. ಆದರೆ, ಈ ವಿದೇಶಿ ಆಟಗಾರರು ಅವರಿಗಿಂತ ಹೆಚ್ಚು ಮೊತ್ತ ಪಡೆಯುತ್ತಿರುವುದಕ್ಕೆ ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ಚಿತ್ರ ಕೃಪೆ ANI)
icon

(4 / 5)

"ಇದು ನಿಜವಾಗಿಯೂ ದುಬಾರಿ ಬೆಲೆ. 20 ಕೋಟಿ ರೂಪಾಯಿ ನಾನು ನಿರೀಕ್ಷಿಸಿರಲಿಲ್ಲ. ಅವರು ಹೆಚ್ಚಿನ ಬೆಲೆಗೆ ಹೋಗುತ್ತಾರೆ ಎಂದು ನಮಗೆ ತಿಳಿದಿತ್ತು ಆದರೆ 20 ಕೋಟಿ ತುಂಬಾ ಹೆಚ್ಚಾಯ್ತು," ಎಂದು ಭಾರತದ ಮಾಜಿ ಕೋಚ್ ಜಿಯೋಸಿನಿಮಾಗೆ ತಿಳಿಸಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು